2022ರಲ್ಲಿ ಜಪಾನ್‌ನಲ್ಲಿ ಹುಟ್ಟಿದವರಿಗಿಂತ ಮರಣ ಹೊಂದಿದವರ ಸಂಖ್ಯೆ ದುಪ್ಪಟ್ಟಾಗಿದೆ. ಜನನ ಪ್ರಮಾಣ ಭಾರಿ ಪ್ರಮಾಣದಲ್ಲಿ ಕುಸಿತ ಕಾಣುತ್ತಿದೆ. ಹೀಗಾಗಿ ಚೀನಾದಲ್ಲಿ ದುಬಾರಿ ಮದುವೆಗಳ ಮೇಲೆ ನಿಷೇಧ ಹೇರಲಾಗಿದೆ. ಮದುವೆಯಿಲ್ಲದೆ ಮಕ್ಕಳ ಜನನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ.
ಮಕ್ಕಳಿರಲವ್ವ ಮನೆ ತುಂಬಾ ಅನ್ನೋ ಮಾತೇ ಇದೆ. ಅದೆಲ್ಲಾ ಹಿಂದಿನ ಕಾಲಕ್ಕಾಯ್ತು, ಈಗೇನಿದ್ರೂ ಮನೆಗೊಂದೇ ಮಗು ಅನ್ನೋ ನಿಲುವಿನಲ್ಲಿದ್ದಾರೆ ಪೋಷಕರು. ಹೀಗಾಗಿಯೇ ಹಲವು ದೇಶಗಳಲ್ಲಿ ಜನಸಂಖ್ಯೆ ಇಳಿಮುಖವಾಗುತ್ತಿದೆ. ಜನಸಂಖ್ಯೆ ಕಡಿಮೆಯಾದರೆ ಅಭಿವೃದ್ಧಿಯೂ ಕುಂಠಿತವಾಗುತ್ತೆ. ಹೀಗಾಗಿ ಚೀನಾ ಸರ್ಕಾರ ಜನಸಂಖ್ಯೆ ಕುಸಿತವನ್ನು ತಡೆಯಲು ನಾನಾ ರೀತಿಯ ಕ್ರಮ ತೆಗೆದುಕೊಳ್ಳುತ್ತಿದೆ. ಈ ಹಿಂದೆಯೂ ಚೀನಾ ಸರ್ಕಾರ ಜನಸಂಖ್ಯೆ ಹೆಚ್ಚಿಸಿಕೊಳ್ಳಲು ತನ್ನ ಜನತೆಗೆ ನಾನಾ ರೀತಿಯ ಆಫರ್ ನೀಡಿತ್ತು. ಸದ್ಯ ಚೀನಾದಲ್ಲಿ ದುಬಾರಿ ಮದುವೆಗಳಿಗೆ ನಿಷೇಧ, ಮದುವೆಯಿಲ್ಲದೆ ಮಕ್ಕಳ ಜನನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ.
ಕಳೆದ ಕೆಲವು ದಶಕಗಳಲ್ಲಿ ಚೀನಾದಲ್ಲಿ ಜನನ ಪ್ರಮಾಣ (Birth rate) ಕಡಿಮೆಯಾಗಿದೆ. ಬದಲಿಗೆ ವೃದ್ಧರ ಜನಸಂಖ್ಯೆ (Population) ಹೆಚ್ಚಾಗಿದೆ. ಅಂದರೆ ಯುವಕರು ಮತ್ತು ದುಡಿಯುವ ಜನರು ಕಡಿಮೆಯಾಗಿದ್ದಾರೆ. ಇದರಿಂದ ತೊಂದರೆಗೀಡಾದ ಚೀನಾ ಕಳೆದ ಕೆಲವು ವರ್ಷಗಳಲ್ಲಿ ಜನಸಂಖ್ಯೆಯನ್ನು ಹೆಚ್ಚಿಸಲು ಅನೇಕ ಯೋಜನೆಗಳನ್ನು ಪ್ರಾರಂಭಿಸಿದೆ. ಸುಲಭವಾಗಿ ಮದುವೆ (Marriage) ಮಾಡಿಕೊಳ್ಳಲು, ಮಕ್ಕಳನ್ನು ಮಾಡಿಕೊಳ್ಳಲು ಜನರಿಗೆ ಅನುವು ಮಾಡಿಕೊಡುತ್ತಿದೆ.
ರಾತ್ರಿ 8 ಗಂಟೆಗೆ ಮಾರುಕಟ್ಟೆ ಮುಚ್ಚೋ ದೇಶದಲ್ಲಿ ಮಕ್ಕಳ ಜನನ ಕಡಿಮೆಯಂತೆ!
ಚೀನಾದಲ್ಲಿ ಅದ್ಧೂರಿ ಮದುವೆಗೆ ತಡೆ, ವರದಕ್ಷಿಣೆ ಮೇಲೆ ನಿಷೇಧ
ಹೆಚ್ಚಿನ ಮದುವೆಗಳನ್ನು ಪ್ರೋತ್ಸಾಹಿಸಲು, ಜನನ ದರವನ್ನು ಹೆಚ್ಚಿಸಲು ಚೀನಾ ದುಬಾರಿ ವಧುವಿನ ವರದಕ್ಷಿಣೆಯನ್ನು (Dowry) ಸಹ ನಿಗ್ರಹಿಸುತ್ತಿದೆ. ಮಾತ್ರವಲ್ಲ ಮದುವೆಯನ್ನು ಹೆಚ್ಚು ಪ್ರೋತ್ಸಾಹಿಸಲು ನಿಶ್ಚಿತಾರ್ಥದ ಉಡುಗೊರೆಯನ್ನು ನೀಡುವ ಕೈಲಿ ಎಂಬ ಸಂಪ್ರದಾಯವನ್ನು (Tradition) ಸಹ ನಿಷೇಧಿಸಲಾಗಿದೆ. ಈ ಪದ್ಧತಿಯಲ್ಲಿ ವರನು ತನ್ನ ಸಂಪತ್ತನ್ನು ಪ್ರದರ್ಶಿಸಿ ಮಹಿಳೆಯ ಕುಟುಂಬ ನಿರ್ಧಿಷ್ಟ ಮೊತ್ತ ಪಾವತಿಸಲು ಸೂಚಿಸುತ್ತಾನೆ. ಎಲ್ಲಾ ಚೀನೀ ವಿವಾಹಗಳು ಮೂರನೇ ಎರಡರಷ್ಟು ಕೈಲಿ ಪದ್ಧತಿಯನ್ನು ಒಳಗೊಂಡಿರುತ್ತದೆ. ಕುಟುಂಬಗಳು ದೊಡ್ಡ ಮೊತ್ತದ ಹಣವನ್ನು ವರನ (Groom) ಕಡೆಯವರಿಗೆ ಪಾವತಿಸಬೇಕಾಗುತ್ತದೆ. ಇದು ಒಂದು ರೀತಿಯಲ್ಲಿ ವರದಕ್ಷಿಣೆ ತೆಗೆದುಕೊಳ್ಳುವ ಪದ್ಧತಿಯಾಗಿದೆ. ಸದ್ಯ ಈ ಪದ್ಧತಿಯನ್ನು ನಿಷೇಧ ಮಾಡಲಾಗಿದೆ.
'ಬ್ರೈಡ್ ಪ್ರೈಸ್' ಎಂಬ ಸಂಪ್ರದಾಯ ರದ್ದುಗೊಂಡಿರುವ ಕಾರಣ ಜನರು ಸುಲಭವಾಗಿ ಮದುವೆಯಾಗಬಹುದು. ಮತ್ತು ಹೆಚ್ಚು ಹೆಚ್ಚು ಮಕ್ಕಳನ್ನು ಹೊಂದಬಹುದು. ಚೀನಾದ ಸಿಚುವಾನ್ ಪ್ರಾಂತ್ಯವು ನಿಯಮಗಳನ್ನು ಬದಲಾಯಿಸಿದ್ದು, ಈಗ ಮದುವೆಯಾಗದ ಪೋಷಕರಿಗೆ ಹೆರಿಗೆ ರಜೆ ಮತ್ತು ವೈದ್ಯಕೀಯ ವೆಚ್ಚಗಳನ್ನು ಒದಗಿಸಲು ಪ್ರಾರಂಭಿಸಿದೆ.
ಸಿಚುವಾನ್‌ನಲ್ಲಿ, ಅವಿವಾಹಿತ ತಾಯಂದಿರು ಸಹ ಸರ್ಕಾರಿ ಸೌಲಭ್ಯಗಳ ಪ್ರಯೋಜನವನ್ನು ಪಡೆಯುತ್ತಾರೆ, ಇಲ್ಲಿಯವರೆಗೆ ವಿವಾಹಿತ ದಂಪತಿಗಳು ಮಾತ್ರ ಪಡೆಯುತ್ತಿದ್ದರು. ಸಿಚುವಾನ್ ಚೀನಾದ 5 ನೇ ಅತಿದೊಡ್ಡ ಪ್ರಾಂತ್ಯವಾಗಿದೆ. ಅದರ ಜನಸಂಖ್ಯೆ ಸುಮಾರು ಎಂಟೂವರೆ ಕೋಟಿ, ಇದು ಕಡಿಮೆಯಾಗುತ್ತಿದೆ. ಈ ಕಾರಣಕ್ಕಾಗಿ, ಸಿಚುವಾನ್ ಪ್ರಾಂತ್ಯವು ದೇಶದ ಉಳಿದ ಭಾಗಗಳಿಗಿಂತ ಒಂದು ಹೆಜ್ಜೆ ಮುಂದೆ ಯೋಚಿಸಿದೆ. ದೇಶದ ಮೂರು ಮಕ್ಕಳ ನೀತಿಯ ಬದಲು, ಸಿಚುವಾನ್ ಮಕ್ಕಳ ಸಂಖ್ಯೆಯ ಮೇಲಿನ ಎಲ್ಲಾ ನಿರ್ಬಂಧಗಳನ್ನು ತೆಗೆದುಹಾಕಿದೆ.
ಮಕ್ಕಳನ್ನು ಮಾಡ್ಕೊಂಡ್ರೆ ಸರ್ಕಾರದಿಂದ್ಲೇ ದುಡ್ಡು, ಪೋಷಕರಿಗೆ ಜಪಾನ್ ಆಫರ್ !
ಮಕ್ಕಳ ಜನನ ಪ್ರಮಾಣ ಹೆಚ್ಚಿಸಲು ಚೀನಾ ಸರ್ಕಾರದಿಂದ ಕ್ರಮ
ಚೀನಾದ ಒಂದು ಮಗುವಿನ ನೀತಿಯು ಪುರುಷರ ಸಂಖ್ಯೆಯಲ್ಲಿ ಹೆಚ್ಚಳಕ್ಕೆ ಕಾರಣವಾಯಿತು ಏಕೆಂದರೆ ಚೀನಾ ಒಂದು ರಾಷ್ಟ್ರವಾಗಿ, ಹಲವಾರು ಇತರ ಏಷ್ಯಾದ ರಾಷ್ಟ್ರಗಳಂತೆ, ಹೆಣ್ಣು ಮಕ್ಕಳಿಗಿಂತ ಗಂಡು ಮಕ್ಕಳ ಪರವಾಗಿರುದೆ. ಲಿಂಗ ಅನುಪಾತದ (Gender ratio) ಅಸಾಮರಸ್ಯವು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಗೋಚರಿಸುತ್ತದೆ ಮತ್ತು ಒಂದು ಮಗುವಿನ ನೀತಿಯು ಕೈಲಿಗೆ ಸಂಬಂಧಿಸಿದೆ ಎಂದು ತಜ್ಞರು ಪ್ರತಿಪಾದಿಸುತ್ತಾರೆ. 60 ವರ್ಷಗಳಲ್ಲಿ ಮೊದಲ ಜನಸಂಖ್ಯೆಯ ಇಳಿಕೆಯನ್ನು ರಾಷ್ಟ್ರವು ವರದಿ ಮಾಡಿದ ನಂತರ ಈಗ ಚೀನಾದಲ್ಲಿ ಜನನ ದರವನ್ನು ಹೆಚ್ಚಿಸುವ ಒತ್ತಡ (Pressure) ಹೆಚ್ಚಾಗಿದೆ
ನವಜಾತ ಶಿಶುಗಳಿಗೆ ಸಬ್ಸಿಡಿಗಳ ಮೂಲಕ ಯುವ ದಂಪತಿಗಳನ್ನು ಉತ್ತೇಜಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ, ಕಾರ್ಮಿಕರಿಗೆ ಮದುವೆ ರಜೆಯನ್ನು ಉತ್ತೇಜಿಸಲು ಮತ್ತು ಅವಿವಾಹಿತ ದಂಪತಿಗಳು (Unmarried couple) ತಮ್ಮ ಮಕ್ಕಳನ್ನು ನೋಂದಾಯಿಸಲು ಅನುಮತಿಸುವ ನಿಯಮಗಳನ್ನು ಸಡಿಲಿಸುತ್ತಿದ್ದಾರೆ.