ವಾರಕ್ಕೆರಡು ದಿನ ರಜೆ ಸಿಕ್ಕಿದ್ರೂ ಜನರಿಗೆ ಸಾಕಾಗ್ತಿಲ್ಲ. ವೀಕ್ ಡೇಸ್ ನಲ್ಲೂ ಒಂದಿಷ್ಟು ಸಮಯ ಕೆಲಸದಿಂದ ಮಾಯವಾಗಿರ್ತಾರೆ. ಆನ್ಲೈನ್ ನಲ್ಲಿ ಟೆಸ್ಟ್ ಮಾಡೋ ಬಾಸ್ ಗೆ ಇವರು ಕೆಲಸ ಮಾಡಿದಂತೆ ಅನ್ನಿಸಿದ್ರೂ ಉದ್ಯೋಗಿ ಮಾತ್ರ ರೆಸ್ಟ್ ನಲ್ಲಿರ್ತಾನೆ. ಈಗ ಟ್ರೆಂಡ್ ಆಗ್ತಿರೋ ಈ ರಜೆ ಯಾವುದು ಗೊತ್ತಾ?
ಕೆಲಸ ಯಾವುದೇ ಇರಲಿ ಕೆಲಸಕ್ಕೆ ರಜೆ ಬೇಕು ಎಂದಾಗ ನಮ್ಮ ಮೇಲಿನ ಅಧಿಕಾರಿಗಳ ಅನುಮತಿ ಪಡೆಯಬೇಕು. ಒಂದೆರಡು ದಿನ ಮೊದಲೇ ರಜೆಗೆ ಒಪ್ಪಿಗೆ ಪಡೆಯುವ ನಿಯಮ ಅನೇಕ ಕಂಪನಿಯಲ್ಲಿದೆ. ಅನಾರೋಗ್ಯದ ಸಂದರ್ಭದಲ್ಲಿ ಮಾತ್ರ ಉದ್ಯೋಗಿಗಳು ಅದೇ ದಿನ ರಜೆಗೆ ಅನುಮತಿ ಕೇಳ್ತಾರೆ. ರಜೆ ಮುಗಿಸಿ ರಿಪ್ರೆಶ್ ಆಗಿ ಕೆಲಸಕ್ಕೆ ಮರಳುತ್ತಾರೆ. ಒಬ್ಬ ಉದ್ಯೋಗಿ ಇಂದು ಕೆಲಸಕ್ಕೆ ಬರೋದಿಲ್ಲ ಎಂಬುದು ಮ್ಯಾನೇಜರ್ ಅಥವಾ ಮೇಲಿನ ಅಧಿಕಾರಿಗೆ ಮೊದಲೇ ತಿಳಿದಿರುವ ಕಾರಣ, ನಿತ್ಯದ ಕೆಲಸಕ್ಕೆ ತೊಂದರೆ ಆಗದಂತೆ ಅವರು ವ್ಯವಸ್ಥೆ ಮಾಡಿಕೊಂಡಿರ್ತಾರೆ. ದಿಢೀರ್ ಉದ್ಯೋಗಿ ಕೆಲಸಕ್ಕೆ ಗೈರಾದ್ರೆ ನಿತ್ಯದ ಕೆಲಸದಲ್ಲಿ ಏರುಪೇರಾಗುತ್ತದೆ. ಆದ್ರೆ ಈಗಿನ ಯುವಕರ ಆಲೋಚನೆ ಭಿನ್ನವಾಗಿದೆ. ಕೆಲಸದ ಆಯ್ಕೆಯಿಂದ ಹಿಡಿದು ರಜೆ ತೆಗೆದುಕೊಳ್ಳುವ ಅವರ ಶೈಲಿಯಲ್ಲಿ ನೀವು ಭಿನ್ನತೆಯನ್ನು ಕಾಣ್ಬಹುದು.
ಕೆಲಸ ಕಡಿಮೆ ಇರುವ, ಹೆಚ್ಚು ಸಂಬಳ (Salary) ಬರುವಂತಹ ಉದ್ಯೋಗ (Employment) ವನ್ನೇ ಈಗಿನ ಯುವಜನತೆ ಆಯ್ಕೆ ಮಾಡಿಕೊಳ್ತಾರೆ. ಹೆಚ್ಚು ಒತ್ತಡವಿಲ್ಲದ ಕೆಲಸಕ್ಕೆ ಆದ್ಯತೆ ನೀಡ್ತಾರೆ. ಆದ್ರೆ ಎಲ್ಲ ಉದ್ಯೋಗದಲ್ಲಿ, ಕಂಪನಿಯಲ್ಲಿ ಇದು ಸಾಧ್ಯವಿಲ್ಲ. ಕೆಲಸದ ಒತ್ತಡ ಸ್ವಲ್ಪವಾದ್ರೂ ಜನರನ್ನು ಕಾಡುತ್ತದೆ. ಈ ಒತ್ತಡದಿಂದ ಸ್ವಲ್ಪ ಸಮಯ ರಿಲ್ಯಾಕ್ಸ್ (Relax ) ಆಗಲು ಇಲ್ಲವೆ ಬೇರೆ ಯಾವುದೇ ಕಾರಣಕ್ಕೆ ಉದ್ಯೋಗಿಗಳು ರಜೆ ತೆಗೆದುಕೊಳ್ಳಲು ಬಯಸ್ತಾರೆ. ಅವರಂದುಕೊಂಡಂತೆ ಎಲ್ಲ ಸಮಯದಲ್ಲಿ ರಜೆ ಸಿಗೋದು ಅಸಾಧ್ಯ. ರಜೆ ಸಿಕ್ಕಿಲ್ಲ ಎಂದಾಗ ಕಿರಿಕಿರಿಯಾಗುತ್ತೆ. ಕೆಲಸ ಮಾಡೋಕೆ ಮೂಡ್ ಇರೋದಿಲ್ಲ. ಬೇಸರದಲ್ಲಿಯೇ ಜನರು ಕೆಲಸಕ್ಕೆ ಬರ್ತಾರೆ. ಇದು ಉತ್ಪಾದನೆ ಮೇಲೆ ಪರಿಣಾಮ ಬೀರುತ್ತದೆ. ಇಡೀ ದಿನ ರಜೆ ತೆಗೆದುಕೊಳ್ಳುವ ಅಗತ್ಯ ಕೆಲವರಿಗಿರೋದಿಲ್ಲ. ಒಂದೆರಡು ಗಂಟೆ ಬಿಡುವು ಬೇಕಾಗಿರುತ್ತದೆ. ಆ ಸಮಯದಲ್ಲಿ ಬಾಸ್ ಅನುಮತಿ ಪಡೆಯೋದು ಕಿರಿಕಿರಿ ಕೆಲಸ ಎಂದು ಭಾವಿಸುವ ಉದ್ಯೋಗಿಗಳು ಹೊಸ ಟ್ರೆಂಡ್ ಶುರುಮಾಡಿದ್ದಾರೆ. ಅದನ್ನು ಶಾಂತ ರಜೆ (Quiet Vacationing) ಎಂದು ಕರೆಯಲಾಗುತ್ತದೆ. ಖಾಸಗಿ ಕಂಪನಿಯಲ್ಲಿ ವರ್ಕ್ ಫ್ರಂ ಹೋಮ್ ಮಾಡೋರಲ್ಲಿ ಈ ರಜೆ ಪ್ರವೃತ್ತಿ ಹೆಚ್ಚಾಗಿದೆ.
undefined
ಹಲ್ಲು ನೋವೆಂದು ಆಸ್ಪತ್ರೆಗೆ ಹೋದ ವ್ಯಕ್ತಿಗೀಗ ಕಣ್ಣಿನ ದೃಷ್ಟಿ ಕಳೆದುಕೊಳ್ಳುವ ಭೀತಿ!
ಶಾಂತ ರಜೆ ಎಂದ್ರೇನು? : ಈ ರಜೆಯಲ್ಲಿ ಉದ್ಯೋಗಿಗಳು ಬಾಸ್ ಅನುಮತಿ ಪಡೆಯೋದಿಲ್ಲ. ಬಾಸ್ ತನ್ನನ್ನು ಆಲಸಿ ಎಂದು ಭಾವಿಸದಿರಲಿ ಎನ್ನುವ ಕಾರಣಕ್ಕಲ್ಲದೆ ರಜೆ ಮುಗಿಸಿ ಬಂದ್ಮೇಲೆ ಸಿಗುವ ಹೆಚ್ಚಿನ ಒತ್ತಡದಿಂದ ತಪ್ಪಿಸಿಕೊಳ್ಳಲು ಅವರು ಶಾಂತ ರಜೆ ತೆಗೆದುಕೊಳ್ತಾರೆ. ಅಮೇರಿಕನ್ ಮಾರ್ಕೆಟಿಂಗ್ ಮತ್ತು ಸಂಶೋಧನಾ ಕಂಪನಿ ಹ್ಯಾರಿಸ್ ಪೋಲ್ ನಡೆಸಿದ ಸಮೀಕ್ಷೆಯ ಪ್ರಕಾರ ಶೇಕಡಾ 40 ಮಿಲೇನಿಯಲ್ ಇದನ್ನು ಒಪ್ಪಿಕೊಂಡಿದ್ದಾರೆ. ಈ ರಜೆಯನ್ನು ಮಿಲೇನಿಯಲ್ ಮತ್ತು ಝೆನ್ ಝೆಡ್ ಹೆಚ್ಚಾಗಿ ತೆಗೆದುಕೊಳ್ತಿದ್ದಾರೆ.
ಮದುವೆ ಆಗ್ತಿದೆ ಇಬ್ಬರು ಮಾಜಿ ಗೆಳೆಯರನ್ನು ಹೇಗೆ ಮರೆಯಲಿ ಎಂದು ಕೇಳಿದ ಯುವತಿಗೆ ನೆಟ್ಟಿಗರು ಕೊಟ್ರು ಟಿಪ್ಸ್
ಶಾಂತ ರಜೆ ಅಂದ್ರೆ ಕೆಲಸದಲ್ಲಿ ಇದ್ದಂತೆ ನಟಿಸುವುದಾಗಿದೆ. ಆದ್ರೆ ಉದ್ಯೋಗಿಗಳು ವಾಸ್ತವದಲ್ಲಿ ಕೆಲಸ ಮಾಡ್ತಿರೋದಿಲ್ಲ. ತಾವು ಕೆಲಸ ಮಾಡ್ತಿದ್ದೇವೆ ಎಂಬ ಭ್ರಮೆಯನ್ನು ಅವರು ಸೃಷ್ಟಿಸುತ್ತಾರೆ. ಅವರು ಇಮೇಲ್ ಕಳಿಸಲು ಶೆಡ್ಯುಲ್ ಮಾಡಿರ್ತಾರೆ. ಇಲ್ಲವೆ ಕಂಪ್ಯೂಟರ್ ಎಂಟರ್ ಮೇಲೆ ವಸ್ತುವನ್ನಿಡುತ್ತಾರೆ. ಅದು ಉದ್ಯೋಗಿ ಆನ್ಲೈನ್ ನಲ್ಲಿದ್ದಾನೆ ಎಂಬುದನ್ನು ತೋರಿಸುತ್ತಿರುತ್ತದೆ. ಉದ್ಯೋಗಿ ಈ ಸಮಯದಲ್ಲಿ ತನ್ನ ಬೇರೆ ಕೆಲಸ ಮಾಡ್ತಿರುತ್ತಾನೆ. ಕೆಲಸದ ಸಮಯ ಮುಗಿದ್ಮೇಲೂ ಅವರು ಕೆಲಸ ಮಾಡ್ತಿರೋದಾಗಿ ತೋರಿಸ್ತಾರೆ. ಬಾಸ್ ಗೆ ಅವರು ಓವರ್ ಟೈಂ ಕೆಲಸ ಮಾಡಿದಂತೆ ಭ್ರಮೆ ಹುಟ್ಟಿಸ್ತಾರೆ. ಸಮೀಕ್ಷೆಯಲ್ಲಿ ಜನರು ಮೇಲಧಿಕಾರಿ ಅನುಮತಿ ಇಲ್ಲದೆ ತಾವು ಶಾಂತ ರಜೆ ಮೊರೆ ಹೋಗಿರೋದಾಗಿ ಒಪ್ಪಿಕೊಂಡಿದ್ದಾರೆ.