ಎಲ್ಲೆಡೆ ಟ್ರೆಂಡ್ ಆಗುತ್ತಿದೆ ನಗ್ನ ರಾಜೀನಾಮೆ, ಏನಿದು ನಿದ್ದೆಗೆಡಿಸಿದ ನೇಕೆಡ್ ರಿಸಿಗ್ನೇಶನ್?

By Chethan Kumar  |  First Published Jul 9, 2024, 4:50 PM IST

ಭಾರತ ಸೇರಿದಂತೆ ಹಲೆವೆಡೆ ನೇಕೆಡ್ ರೆಸಿಗ್ನೇಶನ್ ಭಾರಿ ಟ್ರೆಂಡ್ ಆಗುತ್ತಿದೆ. ಏನಿದು ನಗ್ನ ರಾಜೀನಾಮೆ? ದಿಢೀರ್ ಈಗಿ ನಗ್ನ ರಾಜೀನಾಮೆ ಟ್ರೆಂಡ್ ಆಗಲು ಕಾರಣವೇನು? 
 


ನೇಕೆಡ್ ರಿಸಿಗ್ನೇಶನ್. ಈ ಪದ ಹಲವವರಿಗೆ ಹೊಸತು. ಆದರೆ ಈ ವಿಧಾನ ಹೊಸದಲ್ಲ. ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಈ ನಗ್ನ ರಾಜೀನಾಮೆ ಭಾರಿ ಟ್ರೆಂಡ್ ಆಗುತ್ತಿದೆ. ಸರಳವಾಗಿ ಹೇಳಬೆಕೆಂದರೆ ಮತ್ತೊಂದು ಉದ್ಯೋಗ ಸಿಗುವ ಮುನ್ನ ಅಥವಾ ಬೇರೆ ನೌಕರಿ ಸಿಗದೆ ಇರುವ ಕೆಲಸಕ್ಕೆ ರಾಜೀನಾಮೆ ನೀಡಿ ಹೊರಬರುವುದು ಈ ನಗ್ನ ರಾಜೀನಾಮೆ ಅಥವಾ ನೇಕೆಡ್ ರೆಸಿಗ್ನೇಶನ್. ಖಾಸಗಿ ಕಂಪನಿ, ಇಥವಾ ಇನ್ಯಾವುದೇ ಉದ್ಯೋಗದಲ್ಲಿರುವ ಭಾರತೀಯರಿಗೆ ಈ ವಿಧಾನ ಹೊಸತಲ್ಲ ಬಿಡಿ. ಆದರೆ ಈಗ ಟ್ರೆಂಡ್ ಆಗಲು ಕಾರಣವೂ ಇದೆ, ಜೊತೆಗೆ ಆತಂಕವೂ ಇದೆ.

ಕೊರೋನಾ ಬಳಿಕ ಎಲ್ಲರೂ ಇರುವ ಕೆಲಸ ಉಳಿಸಿಕೊಳ್ಳಲು, ಮುಂದುವರಿಸುವತ್ತಾ ನಿಗಾವಹಿಸಿದ್ದರು. ಹಲವರು ಕೆಲಸ ಕಳೆದುಕೊಂಡರು, ಮತ್ತೆ ಹಲವರು ವೇತನ ಕಡಿತಗೊಂಡು ಸಂಕಷ್ಟ ಅನುಭವಿಸಿದ್ದರು. ಇದೀಗ ಟ್ರೆಂಡ್ ಬದಲಾಗಿದೆ. ಇದ್ದಕ್ಕಿದ್ದಂತೆ ಕೆಲಸಕ್ಕೆ ರಾಜೀನಾಮೆ ನೀಡಿ ಹೊರಬರುವುದು(ನೇಕೆಡ್ ರೆಸಿಗ್ನೇಶನ್) ಟ್ರೆಂಡ್ ಆಗುತ್ತಿದೆ.

Latest Videos

undefined

ಮಹಿಳೆಯರನ್ನು ಗರ್ಭಿಣಿಯನ್ನಾಗಿಸಿ ಲಕ್ಷಾಂತರ ರೂಪಾಯಿ ನಿಮ್ಮದಾಗಿಸಿಕೊಳ್ಳಿ; ಜಾಹೀರಾತು ವೈರಲ್

ಪ್ರಮುಖವಾಗಿ ತೀವ್ರ ಒತ್ತಡದ ಕೆಲಸ, ಯಾಂತ್ರಿಕ ಬದುಕು, ವೇತನ ಸಮಸ್ಯೆ ಸೇರಿದಂತೆ ಹಲವು ಕಾರಣಗಳಿಗೆ ಉದ್ಯೋಗಿಗಳು ನಗ್ನ ರಾಜೀನಾಮೆ ದಾರಿ ಅನುಸರಿಸುತ್ತಿದ್ದಾರೆ. ಈ ನಡೆಯಿಂದ ತಕ್ಷಣಕ್ಕೆ ರಿಲೀಫ್ ಸಿಗಲಿದೆ. ಒತ್ತಡದ ಬದುಕಿನಿಂದ ಹೊರಬರಲು ಸಾಧ್ಯವಾಗುತ್ತದೆ. ಬದುಕನ್ನು ಕಂಡುಕೊಳ್ಳಲು, ಸವಿಯಲು ಸಾಧ್ಯವಾಗುತ್ತದೆ. ಕೆಲಸದ ಕಿರಿಕಿರಿ, ಒತ್ತಡವಿಲ್ಲದೆ ಮನಸ್ಸು ಹಗುರವಾಗುತ್ತದೆ. 

ನೇಕೆಡ್ ರೆಸಿಗ್ನೇಶನ್‌ನಿಂದ ಲಾಭ, ಸಂತೋಷ ಎಲ್ಲವೂ ಕ್ಷಣಿಕ. ಇಷ್ಟೇ ಅಲ್ಲ ನಗ್ನ ರಾಜೀನಾಮೆಯಿಂದ ಅಪತ್ತು, ಸಂಕಷ್ಟಗಳೇ ಹೆಚ್ಚು. ಕಾರಣ ಮೊದಲನೆಯದಾಗಿ ಆರ್ಥಿಕ ಸಂಕಷ್ಟ ಎದುರಾಗಲಿದೆ. ಕೆಲಸಕ್ಕೆ ರಾಜೀನಾಮೆ ನೀಡಿ ಕೆಲ ತಿಂಗಳಲ್ಲೇ ಆರ್ಥಿಕ ಸ್ಥಿತಿಗತಿ ಹದಗೆಡಲಿದೆ. ಸುದೀರ್ಘ ದಿನಗಳ ಕಾಲ ಕೆಲಸವಿಲ್ಲದೆ ಇತರ ಸಮಸ್ಯೆಗಳು ಎದುರಾಗಲಿದೆ. ಪ್ರಮುಖವಾಗಿ ಮತ್ತೆ ಕೆಲಸಕ್ಕೆ ಸೇರಿಕೊಳ್ಳಲು ಕಷ್ಟವಾಗಲಿದೆ. ಕೆಲಸದಲ್ಲಿದ್ದುಕೊಂಡು ಮತ್ತೊಂದು ಕೆಲಸ ಹುಡುಕುವುದು ಸುಲಭ. ಆದರೆ ಕೆಲಸವಿಲ್ಲದೇ ಮತ್ತೊಂದು ಕೆಲಸ ಹುಡುಕುವುದು ಕಷ್ಟ. 

ಒಂದು ವೇಳೆ ಕಂಪನಿ ಉದ್ಯೋಗದ ಸಂದರ್ಶನದ ವೇಳೆ ಕೆಲಸದ ಗ್ಯಾಪ್ ಪ್ರಮುಖವಾಗಿ ಪ್ರಶ್ನಿಸಲಾಗುತ್ತದೆ. ವಿರಾಮ ಪಡೆದು ಮತ್ತೆ ಕೆಲಸಕ್ಕೆ ಸೇರಿಕೊಳ್ಳುವುದು ಅಂದುಕೊಂಡಷ್ಟು ಸುಲಭವಲ್ಲ. ಈಗಷ್ಟೇ ಮುಗಿಸಿ ಬಂದ ಅನುಭವಿಲ್ಲದವರಿಗೆ ಕೆಲಸದ ಆಫರ್ ಸುಲಭವಾಗಿ ಸಿಗಬಹುದು. ಆದರೆ ವಿರಾಮ ಪಡೆದು ಮತ್ತೆ ಉದ್ಯೋಗಕ್ಕೆ ಸೇರಿಕೊಳ್ಳುತ್ತೇನೆ ಅನ್ನೋದು ಹೆಚ್ಚು ಸವಾಲು ಒಡ್ಡಲಿದೆ.

ಕೆಲಸ ಕಳೆದುಕೊಂಡ ಮಹಿಳೆ… ಸ್ಕಿಪ್ಪಿಂಗ್ ಮಾಡಿಯೇ ಲಕ್ಷಾಂತರ ರೂಪಾಯಿ ಗಳಿಸ್ತಾರೆ!

ಪ್ರಮುಖವಾಗಿ ನೇಕೆಡ್ ರೆಸಿಗ್ನೇಶನ್ ಮೂಲಕ ಒತ್ತಡದ ಕೆಲಸದಿಂದ ಹೊರಬಂದು ಪರಿತಪಿಸಿದವರ ಸಂಖ್ಯೆ ಹೆಚ್ಚು. ಹಾಗಂತ ಸವಾಲು ಸ್ವೀಕರಿಸಿ ಮತ್ತೆ ಕೆಲಸಕ್ಕೆ ಸೇರಿ ಯಶಸ್ವಿಯಾದವರೂ ಇದ್ದಾರೆ. ಪರಿಸ್ಥಿತಿ, ಸಂದರ್ಭಗಳು ಕೂಡ ಬೆಂಬಲ ನೀಡಬೇಕು. ಹೀಗಾಗಿ ನೇಕೆಡ್ ರೆಸಿಗ್ನೇಶನ್ ಆಯ್ಕೆ ಕ್ಷಣಕ್ಕೆ ಸರಿ ಏನಿಸಿದರೂ ಕರಿಯರ್‌ನಲ್ಲಿ ತೀವ್ರ ಹೊಡೆತ ನೀಡುವ ಸಾಧ್ಯತೆಗಳೇ ಹೆಚ್ಚು.
 

click me!