‘ಎಕ್ಸಾಂ ಹತ್ರ ಬರ್ತಿದೆ, ಓದ್ಕೊಳ್ರೋ..’ ಮನೆಯಲ್ಲಿ, ಸ್ಕೂಲ್ ಕಾಲೇಜ್‌ಗಳಲ್ಲಿ ಈಗ ಪದೇ ಪದೇ ಕೇಳಿಸೋ ಮಾತು. ಫೆಬ್ರವರಿ 15 ರಿಂದಲೇ ಸಿಬಿಎಸ್‌ಸಿ ಎಕ್ಸಾಂ ಶುರು. ಊಟ, ನಿದ್ದೆ ಬಿಟ್ಟು ಓದುವ, ಮನೆಯವರಿಂದ ಸ್ಕೂಲ್‌ನವರ ಒತ್ತಡದಿಂದ ಟೆನ್ಶನ್, ಫ್ರಸ್ಪ್ರ್ರೇಶನ್‌ನಲ್ಲಿ ಒದ್ದಾಡುವ ಮಕ್ಕಳನ್ನು ಕಂಡು ತಬ್ಬಿಬ್ಬಾಗಿ ಪ್ರಜ್ಞಾವಂತ ಪ್ರಿನ್ಸಿಪಾಲ್ ಒಬ್ರು ಈ ಪತ್ರ ಬರೆದಿದ್ದಾರೆ. ಇದು ಹೆತ್ತವರಿಗೆ ಬರೆದಿರುವ ಕಾಳಜಿ ತುಂಬಿದ ಲೆಟರ್.
ನಿತ್ತಿಲೆ
ಪ್ರೀತಿಯ ಪೋಷಕರೇ,
undefined
ಇನ್ನೇನು ಕೆಲವೇ ದಿನಗಳಲ್ಲಿ ಮಕ್ಕಳಿಗೆ ಎಕ್ಸಾಂ ಶುರುವಾಗಲಿದೆ. ಮಕ್ಕಳು ಪರೀಕ್ಷೆ ಚೆನ್ನಾಗಿ ಮಾಡಲಿ ಅಂದುಕೊಂಡಿರುವ ನೀವೆಲ್ಲ ಬಹಳ ಉದ್ವೇಗದಲ್ಲಿರುತ್ತೀರ. ಆದರೆ ಒಂದು ವಿಷಯ ನೆನಪಿನಲ್ಲಿಟ್ಟುಕೊಳ್ಳಿ. ಎಕ್ಸಾಂ ಬರೆಯುತ್ತಿರುವ ಅಷ್ಟೂಮಕ್ಕಳಲ್ಲಿ ಕೆಲವರು ಕಲಾವಿದರಾಗಿರಬಹುದು. ಅಂಥವರಿಗೆ ಲೆಕ್ಕ ಅರ್ಥ ಆಗಲೇಬೇಕು ಅಂತಿಲ್ಲ. ಅವರಲ್ಲೊಬ್ಬಳಿಗೆ ಉದ್ಯಮಿಯಾಗುವ ಕನಸಿರಬಹುದು, ಅವಳು ಹಿಸ್ಟರಿ ಅಥವಾ ಇಂಗ್ಲೀಷ್ ಸಾಹಿತ್ಯವನ್ನು ಅಷ್ಟುಗಂಭೀರವಾಗಿ ತೆಗೆದುಕೊಳ್ಳದೇ ಇರಬಹುದು. ಎಕ್ಸಾಂ ಬರೆಯುವವರಲ್ಲಿ ಒಬ್ಬ ಸಂಗೀತಗಾರ ಆಗಬಹುದು, ಅವನಿಗೆ ಕೆಮಿಸ್ಟ್ರಿಯಲ್ಲಿ ಹೆಚ್ಚು ಮಾರ್ಕ್ಸ್ ಯಾಕೆ ಬೇಕು, ಅಥ್ಲೆಟ್ ಆಗಹೊರಟವನಿಗೆ ಫಿಸಿಕಲ್ ಫಿಟ್‌ನೆಸ್ ಮುಖ್ಯವೇ ಹೊರತು ಫಿಸಿಕ್ಸ್ ಅಲ್ಲವಲ್ಲ!
ನಿಮ್ಮ ಮಗುವಿನ ಐಕ್ಯೂ ಹೆಚ್ಚಿಸುವುದು ಹೇಗೆ?
ನಿಮ್ಮ ಮಗುವಿಗೆ ಚೆನ್ನಾಗಿ ಮಾರ್ಕ್ಸ್ ಬಂದರೆ ಬಹಳ ಸಂತೋಷ. ಆದರೆ ಮಗಳು ಅಥವಾ ಮಗನಿಗೆ ಮಾರ್ಕ್ಸ್ ಅಂದುಕೊಂಡದ್ದಕ್ಕಿಂತ ಕಡಿಮೆ ಬಂದರೆ ದಯವಿಟ್ಟು ಅವರ ಆತ್ಮವಿಶ್ವಾಸವನ್ನು ಕೊಂದುಹಾಕಬೇಡಿ, ಅವರ ಘನತೆಯನ್ನು ಕುಂದಿಸಬೇಡಿ. ಬದಲಿಗೆ, ಪರ್ವಾಗಿಲ್ಲ ಬಿಡು, ಇದು ಬರೀ ಎಕ್ಸಾಂ ಅಷ್ಟೇ. ಮಾರ್ಕ್ಸ್ ಅನ್ನೋದು ಅಂಥಾ ದೊಡ್ಡ ವಿಷ್ಯ ಏನಲ್ಲ ಅಂದುಬಿಡಿ. ಮಕ್ಕಳನ್ನು ಪ್ರೀತಿಸಿ, ಅವರನ್ನು ಜಡ್ಜ್ ಮಾಡಲು ಹೋಗಬೇಡಿ.
ಮಗುವಿನ ಜೊತೆ ಇಂಗ್ಲಿಷ್‌ನಲ್ಲೇ ಹೆಚ್ಚು ಮಾತಾಡ್ತೀರಾ? ಹಾಗಾದ್ರೆ ಇದನ್ನು ಓದಿ!
ದಯವಿಟ್ಟು ಈ ಮಾತನ್ನು ಪಾಲಿಸಿ. ಆಮೇಲೆ ನಿಮ್ಮ ಮಕ್ಕಳು ಹೇಗೆ ಜಗತ್ತನ್ನು ಗೆಲ್ಲುತ್ತಾರೆ ಅಂತ ನೋಡಿ. ಕಡಿಮೆ ಅಂಕಗಳು ಅವರ ಕನಸು, ಪ್ರತಿಭೆಗಳನ್ನು ಕಮರಿಸಲಾರದು. ಇನ್ನೊಂದು ಮಾತು, ದಯವಿಟ್ಟು ತಿಳಿದುಕೊಳ್ಳಿ - ಈ ಜಗತ್ತಿನಲ್ಲಿ ಸಂತೋಷವಾಗಿರುವವರು ಡಾಕ್ಟರ್ಸ್ ಅಥವಾ ಇಂಜಿನಿಯರ್ಸ್ ಮಾತ್ರ ಅಲ್ಲ!