Employees Leaving Tech Companies: ಟೆಕ್ ಕಂಪೆನಿಗಳಲ್ಲಿ ಹೆಚ್ಚುತ್ತಿರುವ ಉದ್ಯೋಗಿಗಳ ರಾಜೀನಾಮೆ!

By Suvarna News  |  First Published Feb 4, 2022, 6:09 PM IST

ಟೆಕ್ ಮಹೀಂದ್ರಾ ಉದ್ಯಮದಲ್ಲಿ ಕ್ಷೀಣತೆಯನ್ನು ಕಾಣುತ್ತಿರುವ ಈ ಸಮಯದಲ್ಲಿ  TCS ಮತ್ತು Wipro ಗಿಂತಲೂ ಹೆಚ್ಚಿನ ಮಟ್ಟದಲ್ಲಿ ಉದ್ಯೋಗಿಗಳು ಟೆಕ್ ಮಹೀಂದ್ರವನ್ನು ತೊರೆಯುತ್ತಿದ್ದಾರೆ. ಇನ್ಫೋಸಿಸ್, ವಿಪ್ರೋ, ಟಿಸಿಎಸ್‌ ಕಂಪೆನಿಗಳಲ್ಲೂ ಇದೇ ಮಾದರಿ ಇದೆ.


ಬೆಂಗಳೂರು(ಫೆ.4): ತಂತ್ರಜ್ಞಾನ ಕಂಪನಿ ಟೆಕ್ ಮಹೀಂದ್ರಾ (Tech Mahindra) ಕಂಪನಿಯು ಫೆಬ್ರವರಿ 2 ರಂದು ಸುಮಾರು 4% ನಷ್ಟು ಕುಸಿದವು, ಏಕೆಂದರೆ ಹೂಡಿಕೆದಾರರು ಕಂಪನಿಯು ನಿರೀಕ್ಷಿತ ಲಾಭಕ್ಕಿಂತ ಕಡಿಮೆಯನ್ನು ನೀಡಿದ ನಂತರ ಷೇರುಗಳನ್ನು ಮಾರಾಟ ಮಾಡಿದರು.   ಇದರ ಪರಿಣಾಮವಾಗಿ ಷೇರಿನ ಬೆಲೆ ಅದರ ಮಾರುಕಟ್ಟೆ ಬೆಲೆಗಿಂತ 4%ನಷ್ಟು ಇಳಿಕೆ ಕಂಡಿತು. ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗಿನ ವಿಶ್ಲೇಷಕರ ₹1,454 ಕೋಟಿ ಒಮ್ಮತದ  ನಿರೀಕ್ಷೆಗಳಿಗೆ ಹೋಲಿಸಿದರೆ ಕಂಪನಿಯ ನಿವ್ವಳ ಲಾಭವು 1,369 ಕೋಟಿ ರೂ. ಗೆ ಅಂದರೆ 2.2% ರಷ್ಟು ಅನುಕ್ರಮವಾಗಿ ಏರಿಕೆ ಕಂಡಿದೆ.

ಯುಬಿಎಸ್ ಇನ್ವೆಸ್ಟ್‌ಮೆಂಟ್ ಬ್ಯಾಂಕಿಂಗ್‌ನ ವರದಿಯ ಪ್ರಕಾರ ಆದಾಯವು ನಿರೀಕ್ಷೆಗಳಿಗೆ ಅನುಗುಣವಾಗಿದೆ. ಆದರೆ ದುರ್ಬಲ ಮಾರ್ಜಿನ್ ಮತ್ತು ನಿಧಾನಗತಿಯಲ್ಲಿ ನಡೆಯುತ್ತಿರುವ ನೇಮಕಾತಿಯ ಬಗ್ಗೆ ವಿಶ್ಲೇಷಕರು ಕಳವಳ ವ್ಯಕ್ತಪಡಿಸಿದ್ದಾರೆ. ಜೊತೆಗೆ, ಪ್ರತಿ ಷೇರಿಗೆ   ₹1,260 ಡಾಲರ್‌ ಟಾರ್ಗೆಟ್ ಬೆಲೆಯೊಂದಿಗೆ ಸ್ಟಾಕ್‌ನ ಮೇಲೆ 'ಮಾರಾಟ ರೇಟಿಂಗ್ ಅನ್ನು ಕೂಡ ಕಾಪಾಡಿಕೊಂಡಿದೆ.

Tap to resize

Latest Videos

undefined

ಉದ್ಯೋಗಿಗಳಿಂದ ನಿಲ್ಲದ ರಾಜೀನಾಮೆ: ಟೆಕ್ ಮಹೀಂದ್ರಾ ಉದ್ಯಮದಲ್ಲಿ ಕ್ಷೀಣತೆಯನ್ನು ಕಾಣುತ್ತಿರುವ ಈ ಸಮಯದಲ್ಲಿ  TCS ಮತ್ತು Wipro ಗಿಂತಲೂ ಹೆಚ್ಚಿನ ಮಟ್ಟದಲ್ಲಿ ಉದ್ಯೋಗಿಗಳು ಟೆಕ್ ಮಹೀಂದ್ರವನ್ನು ತೊರೆಯುತ್ತಿದ್ದಾರೆ. ಇದು ನಿರ್ಗಮನ ದರ ಹೆಚ್ಚಾಗಿರುವ ಏಕೈಕ IT ಸಂಸ್ಥೆಯಾಗಿಲ್ಲ. ಇತರ IT ಸಂಸ್ಥೆಗಳಲ್ಲೂ ರಾಜೀನಾಮೆಗಳು ಹೆಚ್ಚಾಗುತ್ತಿವೆ . ಇನ್ಫೋಸಿಸ್‌ನಲ್ಲೂ, ಆಟ್ರಿಷನ್(ನಿರ್ಗಮನ) ದರವು ಅತ್ಯಧಿಕವಾಗಿದೆ.

BMS Student Offered FMCG: ಡಿಗ್ರಿ ಫೈನಲ್ ನಲ್ಲಿರುವಾಗಲೇ ವಾರ್ಷಿಕ 30 ಲಕ್ಷ ರೂ. ವೇತನದ ಉದ್ಯೋಗ

ಐಟಿ ಕಂಪೆನಿಗಳಲ್ಲಿ ಅಕ್ಟೋಬರ್-ಡಿಸೆಂಬರ್ ತಿಂಗಳ ನಿರ್ಗಮನ  ದರ (Attrition rate)ಇಂತಿದೆ
ಇನ್ಫೋಸಿಸ್ (Infosys)-25.5%
ಟೆಕ್ ಮಹೀಂದ್ರಾ (Tech Mahindra)-24%
ವಿಪ್ರೋ (Wipro)-22.7%
ಟಿಸಿಎಸ್‌(TCS)-15.3%

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಟೆಕ್ ಮಹೀಂದ್ರಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿಪಿ ಗುರ್ನಾನಿ ಅವರು, “ನಾವು ನಮ್ಮ ಉಪಸ್ಥಿತಿಯನ್ನು ಬಲಪಡಿಸುವುದನ್ನು ಮುಂದುವರಿಸುತ್ತೇವೆ. ನಮ್ಮ ಕಂಪನಿಯು ಭವಿಷ್ಯದ ಉನ್ನತ ನವ ಪ್ರತಿಭೆಗಳು ಮತ್ತು ಡಿಜಿಟಲ್ ಸಾಮರ್ಥ್ಯಗಳ ಬೆಂಬಲದೊಂದಿಗೆ ನಮ್ಮ ಗ್ರಾಹಕರಿಗೆ ಲಾಭದಾಯಕ ಬೆಳವಣಿಗೆ ಮತ್ತು ಮೌಲ್ಯವನ್ನು ತಲುಪಿಸುವ ಕಾರ್ಯವನ್ನು ಮುಂದುವರಿಸುತ್ತದೆ" ಎಂದು ಹೇಳಿದರು.

ಕಳೆದ ವರ್ಷಕ್ಕೆ ಹೋಲಿಸಿದರೆ ನೌಕರರ ಸಂಖ್ಯೆ ಹೆಚ್ಚು: ಟೆಕ್ ಮಹೀಂದ್ರಾದ ಡಿಸೆಂಬರ್ ತ್ರೈಮಾಸಿಕ ವರದಿಯ ಪ್ರಕಾರ, ಕಂಪನಿಯು ಒಟ್ಟು 1.45 ಲಕ್ಷ ನೌಕರರನ್ನು ಹೊಂದಿದ್ದು, ಇದು  ಹಿಂದಿನ ವರ್ಷದ ಅವಧಿಗೆ ಹೋಲಿಸಿದರೆ 19%ರಷ್ಟು ಏರಿಕೆಯಾಗಿದೆ.

"ಚರ್ನ್ ದರ" ಎಂದೂ ಕರೆಯಲ್ಪಡುವ ಅಟ್ರಿಷನ್ ದರವು ಜನರು ಕಂಪನಿಯನ್ನು ತೊರೆಯುವ ದರವಾಗಿದೆ. ಡಿಸೆಂಬರ್ ಅಂತ್ಯದ ತ್ರೈಮಾಸಿಕದಲ್ಲಿ ರಾಜೀನಾಮೆಯ ಸಂಖ್ಯೆ ಆತಂಕಕಾರಿ ಪ್ರಮಾಣದಲ್ಲಿ ಏರಿಕೆಯಾಗಿದ್ದು , ಮೂರು ವರ್ಷಗಳಲ್ಲಿನ ಗರಿಷ್ಟ ಮಟ್ಟವನ್ನು ತಲುಪಿದೆ.

ಡಿಸೆಂಬರ್ ತ್ರೈಮಾಸಿಕದಲ್ಲಿ, ಭಾರತದ ಅತಿದೊಡ್ಡ IT ಕಂಪನಿಯಾದ TCS, 15.3% ನಷ್ಟು ಆಟ್ರಿಷನ್ ದರವನ್ನು ಕಂಡಿತು. ಹಿಂದಿನ ತ್ರೈಮಾಸಿಕದಲ್ಲಿ ಇದು 11.9% ಆಗಿತ್ತು. ಆದರೆ ಅದರ ಪ್ರತಿಸ್ಪರ್ಧಿಗಳಾದ ಇನ್ಫೋಸಿಸ್ ಮತ್ತು ವಿಪ್ರೋಗೆ ಹೋಲಿಸಿದಲ್ಲಿ ಇದು ಕಡಿಮೆಯಾಗಿದೆ.

Jobs 2365.99 ಕೋಟಿ ರೂ. ಬಂಡವಾಳ ಆಕರ್ಷಿಸಿದ ಕರ್ನಾಟಕ, 10904 ಉದ್ಯೋಗ

ಆಟ್ರಿಷನ್ ದರ: ಭಾರತದ 2ನೇ ಅತಿದೊಡ್ಡ IT ಕಂಪನಿಯಾದ ಇನ್ಫೋಸಿಸ್ 25.5% ನಷ್ಟು ಬೃಹತ್ ಆಟ್ರಿಷನ್ ದರವನ್ನು ಕಂಡಿತು, ಆದರೆ IT ಸಂಘಟಿತ ವಿಪ್ರೋ 22.7% ನಷ್ಟು ಆಟ್ರಿಷನ್ ದರವನ್ನು ಹೊಂದಿದೆ. 2022ರ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ, TCS 43,000 ಫ್ರೆಶರ್‌ಗಳನ್ನು ನೇಮಿಸಿಕೊಂಡಿದೆ. IT ಕಂಪನಿಯು Q3ನಲ್ಲಿಯೇ 34,000 ಫ್ರೆಶರ್‌ಗಳನ್ನು ನೇಮಿಸಿಕೊಂಡಿದೆ ಮತ್ತು ನಾಲ್ಕನೇ ತ್ರೈಮಾಸಿಕದಲ್ಲಿ ಇನ್ನೂ ಹೆಚ್ಚಿನ ಉದ್ಯೋಗಿಗಳನ್ನು ನೇಮಿಸಿಕೊಳ್ಳಲಿದೆ. ಡಿಸೆಂಬರ್ ಅಂತ್ಯದ ವೇಳೆಗೆ ಒಟ್ಟು TCS ಉದ್ಯೋಗಿಗಳ ಸಂಖ್ಯೆ 556,986. Q3 ಹಣಕಾಸು ವರ್ಷ 22ರಂತೆ Infosysನಿಂದ ಒಟ್ಟು 292,067 ಜನರು ಉದ್ಯೋಗದಲ್ಲಿದ್ದಾರೆ.

ಮೂರನೇ ತ್ರೈಮಾಸಿಕದ ಕೊನೆಯಲ್ಲಿ, ವಿಪ್ರೋ 10,306 ಹೊಸ ಉದ್ಯೋಗಿಗಳನ್ನು ನೇಮಿಸಿಕೊಂಡಿದ್ದು ಅದರ ಒಟ್ಟು ಉದ್ಯೋಗಿಗಳ ಮೊತ್ತ 231,671 ಆಗಿದೆ. ಈ ಮೂರು ಕಂಪನಿಗಳು ಒಟ್ಟಾಗಿ , ಹಣಕಾಸು ವರ್ಷ 22 (ಏಪ್ರಿಲ್ 2021 ರಿಂದ ಮಾರ್ಚ್‌ 2022) ನಲ್ಲಿ 134,000 ಉದ್ಯೋಗಿಗಳನ್ನು ನೇಮಿಸಿಕೊಂಡರು. ಇದು ಹಣಕಾಸು ವರ್ಷ 21ರಲ್ಲಿ ನೇಮಕಗೊಂಡಿದ್ದ ಉದ್ಯೋಗಿಗಳ ಸಂಖ್ಯೆಯ ಸುಮಾರು ನಾಲ್ಕು ಪಟ್ಟು ಹೆಚ್ಚಾಗಿದೆ.

click me!