ಪೂಜಾ ಹಡಪದ ಹತ್ಯೆ ಪ್ರಕರಣ: ಬಿಜೆಪಿ ಕಾರ‍್ಯಕರ್ತರ ವಿರುದ್ಧ ದಾಖಲಾಗಿದ್ದ ಪ್ರಕರಣ ವಾಪಸ್‌ !

By Kannadaprabha News  |  First Published Mar 31, 2023, 10:12 AM IST

ಪೂಜಾ ಹಡಪದ ಹತ್ಯೆ ವಿರೋಧಿಸಿ ಪ್ರತಿಭಟಿಸಿದ್ದ ಬಿಜೆಪಿ ಕಾರ್ಯಕರ್ತರ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ರಾಜ್ಯ ಸರ್ಕಾರ ವಾಪಸ್‌ ಪಡೆದಿರುವುದು ಸಂತಸದ ಸಂಗತಿ ಎಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ್‌ ನಾಗಮಾರಪಳ್ಳಿ ತಿಳಿಸಿದ್ದಾರೆ.


ಬೀದರ್‌ (ಮಾ.31) : ಪೂಜಾ ಹಡಪದ ಹತ್ಯೆ ವಿರೋಧಿಸಿ ಪ್ರತಿಭಟಿಸಿದ್ದ ಬಿಜೆಪಿ ಕಾರ್ಯಕರ್ತರ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ರಾಜ್ಯ ಸರ್ಕಾರ ವಾಪಸ್‌ ಪಡೆದಿರುವುದು ಸಂತಸದ ಸಂಗತಿ ಎಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ್‌ ನಾಗಮಾರಪಳ್ಳಿ ತಿಳಿಸಿದ್ದಾರೆ.

ಪೂಜಾ ಹಡಪದ ಪ್ರಕರಣ ವಿರೋಧಿಸಿ ನಗರದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಗಿತ್ತು. ಆಗ ಕಾರ್ಯಕರ್ತರ ವಿರುದ್ಧ ನಗರದ ಮಾರ್ಕೆಟ್‌ ಠಾಣೆ ಹಾಗೂ ನಗರ ಪೊಲೀಸ್‌ ಠಾಣೆಯಲ್ಲಿ ವಿವಿಧ ಕಲಂಗಳ ಅಡಿ ಪ್ರಕರಣ ದಾಖಲಿಸಲಾಗಿತ್ತು. ಅಮಾಯಕ ಕಾರ್ಯಕರ್ತರ ವಿರುದ್ಧ ದಾಖಲಾಗಿದ್ದ ಪ್ರಕರಣ ವಾಪಸ್‌ ಪಡೆಯುವಂತೆ ರಾಜ್ಯ ಸರ್ಕಾರವನ್ನು ಹಲವು ಬಾರಿ ಕೋರಲಾಗಿತ್ತು. ಮುಖ್ಯಮಂತ್ರಿಯವರು ಈ ಬೇಡಿಕೆಗೆ ಸ್ಪಂದಿಸಿದ್ದಾರೆ ಎಂದು ಸೂರ್ಯಕಾಂತ್‌ ನಾಗಮಾರಪಳ್ಳಿ ಮಾಹಿತಿ ನೀಡಿ ಪ್ರಕರಣ ವಾಪಸ್‌ ಪಡೆದ ಮುಖ್ಯಮಂತ್ರಿಗಳಿಗೆ ಕೃತಜ್ಞತೆ ಸಲ್ಲಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

Tap to resize

Latest Videos

undefined

ಗೋರ್ಟಾ ಹುತಾತ್ಮರ ಸ್ಮಾರಕ ಇಂದು ಅಮಿತ್‌ ಶಾ ಉದ್ಘಾಟನೆ: ಬೆಂಗಳೂರಲ್ಲಿ ಬಸವಣ್ಣ, ಕೆಂಪೇಗೌಡ ಪುತ್ಥಳಿ ಅನಾವರಣ

ಪ್ರಕರಣ ವಾಪಸ್‌ ಪಡೆದ ಹಿನ್ನೆಲೆಯಲ್ಲಿ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು.

ಬಿಜೆಪಿ ನಾಯಕರು ಹಾಗೂ ಪರಿವಾರದ ಹಿರಿಯರಿಗೆ ಧನ್ಯವಾದಗಳು:

ಕಳೆದ ಐದಾರು ವರ್ಷಗಳಿಂದ ಕೋಸಂನ ಪೂಜಾ ಹಡಪದ ಕೊಲೆ ವಿರೋಧಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ ಅಮಾಯಕ ಯುವಕರ ಮೇಲೆ ಉದ್ದೇಶ ಪೂರ್ವಕವಾಗಿ ದಾಖಲಿಸಲಾಗಿಸಿದ್ದ ಕೇಸ್‌ಗಳನ್ನು ರಾಜ್ಯ ಸರ್ಕಾರ ಹಿಂಪಡೆದಿರುವುದಕ್ಕೆ ಮುಖ್ಯಮಂತ್ರಿ ಬಸವರಾಜ ಬೊವåಾ್ಮಯಿ ಹಾಗೂ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಹಾಗೂ ಜಿಲ್ಲಾ ಬಿಜೆಪಿ ನಾಯಕರು ಹಾಗೂ ಪರಿವಾರದ ಹಿರಿಯರಿಗೆ ಧನ್ಯವಾದಗಳು ಎಂದು ಹಿಂದೂ ಹಿತರಕ್ಷಣಾ ವೇದಿಕೆಯ ಸಂಚಾಲಕರಾದ ವಿಜಯಕುಮಾರ ಎಸ್‌.ಪಾಟೀಲ್‌ ಗಾದಗಿ ತಿಳಿಸಿದ್ದಾರೆ.

'ಮಲ್ಲಿಕಾರ್ಜುನ ಖರ್ಗೆ ನೀಡಿದ ‘ಅರಳಿ’ ಕೊಡುಗೆ ಬೀದರ್‌ ಅಭಿವೃದ್ಧಿಗೆ ‘ಶಾಪ’

click me!