ಬಿಜೆಪಿಯ ಭದ್ರಕೋಟೆಯಾಗಿ ರೂಪಗೊಂಡ ಧಾರವಾಡ ಜಿಲ್ಲೆಯಲ್ಲಿ ಕಳೆದ ಚುನಾವಣೆಯಲ್ಲಿ 7 ಕ್ಷೇತ್ರಗಳ ಪೈಕಿ 5ರಲ್ಲಿ ಬಿಜೆಪಿ ಗೆಲವು ಕಂಡಿತು. ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಈ ಭಾಗದ ಪ್ರಬಲ ಲಿಂಗಾಯತ ನಾಯಕ, ಮಾಜಿ ಸಿಎಂ ಜಗದೀಶ ಶೆಟ್ಟರ್ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ತೆರಳಿ ಮಹೇಶ್ ತೆಂಗಿನಕಾಯಿ ವಿರುದ್ಧ ಸೋತಿದ್ದಾರೆ.
ಧಾರವಾಡ (ಮೇ.13): ಬಿಜೆಪಿಯ ಭದ್ರಕೋಟೆಯಾಗಿ ರೂಪಗೊಂಡ ಧಾರವಾಡ ಜಿಲ್ಲೆಯಲ್ಲಿ ಕಳೆದ ಚುನಾವಣೆಯಲ್ಲಿ 7 ಕ್ಷೇತ್ರಗಳ ಪೈಕಿ 5ರಲ್ಲಿ ಬಿಜೆಪಿ ಗೆಲವು ಕಂಡಿತು. ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಈ ಭಾಗದ ಪ್ರಬಲ ಲಿಂಗಾಯತ ನಾಯಕ, ಮಾಜಿ ಸಿಎಂ ಜಗದೀಶ ಶೆಟ್ಟರ್ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ತೆರಳಿ ಮಹೇಶ್ ತೆಂಗಿನಕಾಯಿ ವಿರುದ್ಧ ಸೋತಿದ್ದಾರೆ. ಕಲಘಟಗಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಸಂತೋಷ್ ಲಾಡ್, ಧಾರವಾಡ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ವಿನಯ್ ಕುಲಕರ್ಣಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 7 ಕ್ಷೇತ್ರಗಳ ಪೈಕಿ 4ರಲ್ಲಿ ಕಾಂಗ್ರೆಸ್, 3ರಲ್ಲಿ ಬಿಜೆಪಿ ಗೆಲುವು ಕಂಡಿದೆ.
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರ (Hubli Dharawad Central Assembly Constituency): ಬಿಜೆಪಿಯ ಮಹೇಶ್ ತೆಂಗಿನಕಾಯಿ ಗೆಲುವು
ಇಬ್ಬರು ಮುಖ್ಯಮಂತ್ರಿಗಳನ್ನು (ಎಸ್.ಆರ್.ಬೊಮ್ಮಾಯಿ, ಜಗದೀಶ ಶೆಟ್ಟರ್) ನೀಡಿದ ಕ್ಷೇತ್ರ ಇದು. 1994ರಿಂದ ಈ ವರೆಗೆ ನಡೆದ 6 ಚುನಾವಣೆಗಳಲ್ಲಿ ಬಿಜೆಪಿಯಿಂದ ಜಗದೀಶ ಶೆಟ್ಟರ್ ಆಯ್ಕೆಯಾಗಿದ್ದರು. ಹೀಗಾಗಿ, ಬಿಜೆಪಿ ಭದ್ರಕೋಟೆ ಎನಿಸಿದೆ. ಶೆಟ್ಟರ್, ಬಿಜೆಪಿ ತೊರೆದು ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದರು. ಬಿಜೆಪಿಯಿಂದ ಇಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಮಹೇಶ ಟೆಂಗಿನಕಾಯಿ ಸ್ಪರ್ಧಿಸಿದ್ದರು. ಆದರೆ ಜಗದೀಶ್ ಶೆಟ್ಟರ್ ವಿರುದ್ಧ ಬಿಜೆಪಿಯ ಮಹೇಶ್ ತೆಂಗಿನಕಾಯಿ 95064 ಮತಗಳನ್ನು ಗಳಿಸಿ ಗೆಲುವಿನ ನಗೆ ಬೀರಿದ್ದಾರೆ. ಇನ್ನು 2018 ರಲ್ಲಿ ಜಗದೀಶ್ ಶೆಟ್ಟರ್ ಅವರು ಬಿಜೆಪಿಯಿಂದ 1,46,682 ಮತಗಳನ್ನು ಗಳಿಸಿ ಜಯಶಾಲಿಯಾಗಿದ್ದರು.
ಅಭ್ಯರ್ಥಿಗಳು-ಪಡೆದ ಮತಗಳು
ಬಿಜೆಪಿ-ಮಹೇಶ್ ತೆಂಗಿನಕಾಯಿ (Mahesh Tenginakayi)-95064
ಕಾಂಗ್ರೆಸ್-ಜಗದೀಶ್ ಶೆಟ್ಟರ್ (Jagadish Shettar)-60775
ಜೆಡಿಎಸ್-ಸಿದ್ದಲಿಂಗೇಶಗೌಡ ಮಹಾಂತ (Siddalingeshagouda Mahanta)-513
ಪುರುಷ ಮತದಾರರು-123584
ಮಹಿಳಾ ಮತದಾರರು-125617
ಇತರೆ-39
ಒಟ್ಟು-249240
ಹು-ಧಾ ಕೇಂದ್ರ ಜಾತಿ ಲೆಕ್ಕಾಚಾರ
ಲಿಂಗಾಯತ 71,000
ಬ್ರಾಹ್ಮಣ 22,000
ಮುಸ್ಲಿಂ 43,000
ಕ್ರೈಸ್ತ 26,500
ಮರಾಠ 22,700
ಎಸ್ಸಿ/ಎಸ್ಟಿ 32,000
ಇತರೆ 25,000
ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರ (Hubli Dharawad East Assembly Constituency): ಕಾಂಗ್ರೆಸ್‌ನ ಪ್ರಸಾದ್ ಅಬ್ಬಯ್ಯ ಗೆಲುವು
ಜಿಲ್ಲೆಯ ಏಕೈಕ ಮೀಸಲು ಕ್ಷೇತ್ರ ಇದು. ಬಿಜೆಪಿ-ಕೆಜೆಪಿ ಗದ್ದಲದಲ್ಲಿ 2013ರಲ್ಲಿ ಸಲೀಸಾಗಿ ಗೆದ್ದು ಕ್ಷೇತ್ರ ವಶಕ್ಕೆ ಪಡೆದಿರುವ ಕಾಂಗ್ರೆಸ್ ಈಗ ಹ್ಯಾಟ್ರಿಕ್ ಗೆಲುವು ಬಾರಿಸಿದೆ. ಕಾಂಗ್ರೆಸ್‌ನಿಂದ ಪ್ರಸಾದ ಅಬ್ಬಯ್ಯ 85426 ಮತಗಳನ್ನು ಗಳಿಸಿ ಗೆದ್ದಿದ್ದಾರೆ. ಬಿಜೆಪಿಯಿಂದ ನರರೋಗ ತಜ್ಞ ಡಾ.ಕ್ರಾಂತಿಕಿರಣ ಮೊದಲ ಚುನಾವಣೆಯಲ್ಲೇ 53056 ಮತಗಳನ್ನು ಗಳಿಸಿ ಸೋತಿದ್ದಾರೆ. ಇನ್ನು 2018 ರಲ್ಲಿ ಪ್ರಸಾದ್ ಅಬ್ಬಯ್ಯ ಅವರು ಬಿಜೆಪಿಯಿಂದ 1,34,837 ಮತಗಳನ್ನು ಗಳಿಸಿ ಜಯಶಾಲಿಯಾಗಿದ್ದರು.
ಅಭ್ಯರ್ಥಿಗಳು-ಪಡೆದ ಮತಗಳು
ಬಿಜೆಪಿ-ಡಾ.ಕ್ರಾಂತಿ ಕಿರಣ್ (Dr KrantiKiran)-53056
ಕಾಂಗ್ರೆಸ್-ಪ್ರಸಾದ್ ಅಬ್ಬಯ್ಯ (Prasad Abbaiah)-85426
ಜೆಡಿಎಸ್-ವೀರಭದ್ರಪ್ಪ ಹಾಲಹರವಿ (Veerabhadrappa Halaharavi)-900
ಪುರುಷ ಮತದಾರರು-104222
ಮಹಿಳಾ ಮತದಾರರು-105294
ಇತರೆ-14
ಒಟ್ಟು-209530
ಹು-ಧಾ ಪೂರ್ವ ಜಾತಿ ಲೆಕ್ಕಾಚಾರ
ಲಿಂಗಾಯತ 50,000
ಬ್ರಾಹ್ಮಣ 18,000
ಮುಸ್ಲಿಂ 57,000
ಮರಾಠ 20,000
ಎಸ್ಸಿ/ಎಸ್ಟಿ 42,000
ಇತರೆ 7,000
ಕುಂದಗೋಳ ಕ್ಷೇತ್ರ (Kundagola Assembly Constituency): ಬಿಜೆಪಿಯ ಎಂ.ಆರ್.ಪಾಟೀಲ್ ಗೆಲುವು
ಕುಂದಗೋಳ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಕುಸುಮಾವತಿ ಶಿವಳ್ಳಿ ಕಣಕ್ಕಿಳಿದಿದ್ದರು. ಬಿಜೆಪಿಯಿಂದ ಸಚಿವ ಸಿ.ಸಿ.ಪಾಟೀಲ ಸಂಬಂಧಿಕ ಎಂ.ಆರ್.ಪಾಟೀಲ ಇಲ್ಲಿ ಕಣಕ್ಕಿಳಿದು 76105 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಸಂಬಂಧಿಕ ಮಾಜಿ ಎಸ್.ಐ.ಚಿಕ್ಕನಗೌಡರ, ಬಿಜೆಪಿ ಟಿಕೆಟ್ ಸಿಗದ ಕಾರಣ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿದ್ದರು. ಇನ್ನು 2018 ರಲ್ಲಿ ಚನ್ನಬಸಪ್ಪ ಶಿವಳ್ಳಿ ಅವರು ಕಾಂಗ್ರೆಸ್‌ನಿಂದ 1,46,492 ಮತಗಳನ್ನು ಗಳಿಸಿ ಜಯಶಾಲಿಯಾಗಿದ್ದರು.
ಅಭ್ಯರ್ಥಿಗಳು-ಪಡೆದ ಮತಗಳು
ಬಿಜೆಪಿ-ಎಂ.ಆರ್.ಪಾಟೀಲ್ (MR Patil)-76105
ಕಾಂಗ್ರೆಸ್-ಕುಸುಮಾವತಿ ಶಿವಳ್ಳಿ (Kusumavati Shivalli)-40764
ಜೆಡಿಎಸ್-ಹಜರತ್ ಅಲಿ ಅಲ್ಲಾಸಾಬ್ (Hajarat Ali Allasab)-4304
ಪುರುಷ ಮತದಾರರು-95794
ಮಹಿಳಾ ಮತದಾರರು-90733
ಇತರೆ-8
ಒಟ್ಟು-186535
Karnataka Election 2023 Live: ಮುಖ್ಯಮಂತ್ರಿ ಯಾರಾಗ್ತಾರೆ ಅನ್ನೋದೆ ಕುತೂಹಲವೀಗ!
ನವಲಗುಂದ ಕ್ಷೇತ್ರ (Navalagunda Assembly Constituency): ಕಾಂಗ್ರೆಸ್‌ನ ಎನ್.ಎಚ್.ಕೋನರೆಡ್ಡಿ ಗೆಲುವು
ಕಳಸಾ- ಬಂಡೂರಿ ಹೋರಾಟ, ಬಂಡಾಯದ ನೆಲ ಎಂದರೆ ಥಟ್ಟನೆ ನೆನಪಾಗುವುದು ನವಲಗುಂದ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎನ್.ಎಚ್.ಕೋನರೆಡ್ಡಿ 86081 ಮತಗಳನ್ನು ಗಳಿಸಿ ಜಯಶಾಲಿಯಾಗಿದ್ದಾರೆ. ಕಾಂಗ್ರೆಸ್ ಟಿಕೆಟ್ ವಂಚಿತ ಮಾಜಿ ಸಚಿವ ಕೆ.ಎನ್.ಗಡ್ಡಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದರು. ಇನ್ನು 2018 ರಲ್ಲಿ ಮುನೇನಕೊಪ್ಪ ಅವರು ಬಿಜೆಪಿಯಿಂದ 1,58,483 ಮತಗಳನ್ನು ಗಳಿಸಿ ಜಯಶಾಲಿಯಾಗಿದ್ದರು.
ಅಭ್ಯರ್ಥಿಗಳು-ಪಡೆದ ಮತಗಳು
ಬಿಜೆಪಿ-ಶಂಕರ್ ಪಾಟೀಲ್ (Shankar Patil)-63882
ಕಾಂಗ್ರೆಸ್-ಎನ್.ಎಚ್.ಕೋನರೆಡ್ಡಿ (NH Konaraddi)-86081
ಜೆಡಿಎಸ್-ಕಲ್ಲಪ್ಪ ನಾಗಪ್ಪ ಗಡ್ಡಿ (Kallappa Nagappa Gaddi)-6914
ಪುರುಷ ಮತದಾರರು-104611
ಮಹಿಳಾ ಮತದಾರರು-102104
ಇತರೆ-7
ಒಟ್ಟು-206722
ನವಲಗುಂದ ಜಾತಿ ಲೆಕ್ಕಾಚಾರ
ಲಿಂಗಾಯತ 67,000
ಕುರುಬ 45,000
ರೆಡ್ಡಿ 15,000
ಮುಸ್ಲಿಂ 35,000
ಎಸ್ಸಿ/ಎಸ್ಟಿ 30,000
ಇತರೆ 11,500
ಕಲಘಟಗಿ ಕ್ಷೇತ್ರ (Kalaghataki Assembly Constituency): ಕಾಂಗ್ರೆಸ್‌ನ ಸಂತೋಷ್ ಲಾಡ್ ಗೆಲುವು
ಒಂದು ಕಾಲದ ದೋಸ್ತಿಗಳೇ ಇಲ್ಲಿ ಎದುರಾಳಿಗಳು. ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ಸಂತೋಷ ಲಾಡ್- ನಾಗರಾಜ ಛಬ್ಬಿ ಭಾರೀ ಪೈಪೋಟಿ ನಡೆಸಿದ್ದರು. ಕೊನೆಗೆ ಲಾಡ್‌ಗೆ ಕಾಂಗ್ರೆಸ್ ಮಣೆ ಹಾಕಿದರೆ, ಟಿಕೆಟ್ ಸಿಗದೇ ಮುನಿಸಿಕೊಂಡ ಛಬ್ಬಿ ಬಿಜೆಪಿ ಹುರಿಯಾಳಾಗಿದ್ದರು. ಆದರೆ ಕಾಂಗ್ರೆಸ್ ಅಭ್ಯರ್ಥಿ ಸಂತೋಷ್ ಲಾಡ್ 85761 ಮತಗಳನ್ನು ಗೆಲುವು ಸಾಧಿಸಿದ್ದಾರೆ. ಅಲ್ಲದೇ ಶೆಟ್ಟರ್ ಕಾಂಗ್ರೆಸ್‌ಗೆ ಹೋಗಿರುವುದು ಕ್ಷೇತ್ರದ ಮೇಲೆ ಕೊಂಚ ಪರಿಣಾಮ ಬೀರಿದ್ದು, ಇದು ಛಬ್ಬಿಗೆ ಮೈನಸ್ ಪಾಯಿಂಟ್. ಇನ್ನು 2018 ರಲ್ಲಿ ಸಿ.ಎಂ.ನಿಂಬಣ್ಣವರ್ ಅವರು ಬಿಜೆಪಿಯಿಂದ 1,58,483 ಮತಗಳನ್ನು ಗಳಿಸಿ ಜಯಶಾಲಿಯಾಗಿದ್ದರು.
ಅಭ್ಯರ್ಥಿಗಳು-ಪಡೆದ ಮತಗಳು
ಬಿಜೆಪಿ-ನಾಗರಾಜ್ ಛಬ್ಬಿ (Nagaraj Chabbi)-71404
ಕಾಂಗ್ರೆಸ್-ಸಂತೋಷ್ ಲಾಡ್ (Santosh Lad)-85761
ಜೆಡಿಎಸ್-ವೀರಪ್ಪ ಬಸಪ್ಪ ಶಿಗೇಹಟ್ಟಿ (Veerappa Basappa Shigehatti)-891
ಪುರುಷ ಮತದಾರರು-99992
ಮಹಿಳಾ ಮತದಾರರು-94305
ಇತರೆ-7
ಒಟ್ಟು-194304
ಕಲಘಟಗಿ ಜಾತಿ ಲೆಕ್ಕಾಚಾರ
ಲಿಂಗಾಯತ 60,000
ಮರಾಠ 40,000
ವಾಲ್ಮೀಕಿ 30,500
ಮುಸ್ಲಿಂ 22,500
ಎಸ್ಸಿ 20,000
ಇತರೆ 16,000
ಧಾರವಾಡ ಕ್ಷೇತ್ರ (Dharawad Assembly Constituency): ಕಾಂಗ್ರೆಸ್‌ನ ವಿನಯ್ ಕುಲಕರ್ಣಿ ಗೆಲುವು
ಈ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಕಳೆದ ಚುನಾವಣೆಯಲ್ಲಿ ಬಿಜೆಪಿಯ ಅಮೃತ ದೇಸಾಯಿ ಎದುರು ಸೋಲು ಕಂಡವರು. ಈ ಬಾರಿಯೂ ದೇಸಾಯಿ ವರ್ಸಸ್ ವಿನಯ ಮಧ್ಯೆ ನೇರ ಪೈಪೋಟಿ ಇತ್ತು. ಆದರೆ 89333 ಮತಗಳನ್ನು ಗಳಿಸುವ ಮೂಲಕ ವಿನಯ್ ಕುಲಕರ್ಣಿ ಗೆಲಲುವಿನ ನಗೆ ಬೀರಿದ್ದಾರೆ. ಜೆಡಿಎಸ್‌ನಿಂದ ಧಾರವಾಡದ ಉದ್ಯಮಿ ಮಂಜುನಾಥ ಹಗೇದಾರ, ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದಿಂದ ಮಧುಲತಾ ಗೌಡರ್ ಸೇರಿದಂತೆ ಒಟ್ಟು 15 ಅಭ್ಯರ್ಥಿಗಳು ಕಣದಲ್ಲಿದ್ದರು. ಇನ್ನು 2018 ರಲ್ಲಿ ಅಮೃತ್ ದೇಸಾಯಿ ಅವರು ಬಿಜೆಪಿಯಿಂದ 1,53,663 ಮತಗಳನ್ನು ಗಳಿಸಿ ಜಯಶಾಲಿಯಾಗಿದ್ದರು.
ಅಭ್ಯರ್ಥಿಗಳು-ಪಡೆದ ಮತಗಳು
ಬಿಜೆಪಿ-ಅಮೃತ್ ಅಯ್ಯಪ್ಪ ದೇಸಾಯಿ (Amrit Ayyappa Desai)-71296
ಕಾಂಗ್ರೆಸ್-ವಿನಯ್ ಕುಲಕರ್ಣಿ (Vinay Kulakarni)-89333
ಜೆಡಿಎಸ್-ಮಂಜುನಾಥ್ ಹಗೇದಾರ್ (Manjunath Hagedar)-921
ಪುರುಷ ಮತದಾರರು-107340
ಮಹಿಳಾ ಮತದಾರರು-106337
ಇತರೆ-10
ಒಟ್ಟು-213687
ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರ (Hublic Dharad West Assembly Constituency): ಬಿಜೆಪಿಯ ಅರವಿಂದ್ ಬೆಲ್ಲದ್ ಗೆಲುವು
ಪಶ್ಚಿಮ ಕ್ಷೇತ್ರದಲ್ಲಿ ಕಾಂಗ್ರೆಸ್ ಜೊತೆ ಬಿಜೆಪಿಯೊಂದಿಗೆ ನೇರ ಪೈಪೋಟಿಯಿತ್ತು. ಈ ನಡುವೆ ಅರವಿಂದ ಬೆಲ್ಲದ 101410 ಮತಗಳನ್ನು ಗಳಿಸಿ ಜಯಭೇರಿ ಬಾರಿಸಿದ್ದಾರೆ. ಕ್ಷೇತ್ರದಲ್ಲಿ ಜೆಡಿಎಸ್ ನಿಂದ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಗುರುರಾಜ ಹುಣಸೀಮರದ ಸೇರಿದಂತೆ ಒಟ್ಟು ಕ್ಷೇತ್ರದಲ್ಲಿ 16 ಜನರು ಚುನಾವಣಾ ಕಣದಲ್ಲಿದ್ದರು. ಇನ್ನು 2018 ರಲ್ಲಿ ಅರವಿಂದ್ ಬೆಲ್ಲದ್ ಅವರು ಬಿಜೆಪಿಯಿಂದ 1,55,766 ಮತಗಳನ್ನು ಗಳಿಸಿ ಜಯಶಾಲಿಯಾಗಿದ್ದರು.
ಅಭ್ಯರ್ಥಿಗಳು-ಪಡೆದ ಮತಗಳು
ಬಿಜೆಪಿ-ಅರವಿಂದ್ ಬೆಲ್ಲದ್ (Aravind Bellad)-101410
ಕಾಂಗ್ರೆಸ್-ದೀಪಕ್ ಚಿಂಚೋರೆ (Deepakk Chinchore)-62717
ಜೆಡಿಎಸ್-ಗುರುರಾಜ್ ಹುಣಸಿಮರದ್ (Gururaj Hunasimarad)-1195
ಪುರುಷ ಮತದಾರರು-129613
ಮಹಿಳಾ ಮತದಾರರು-123445
ಇತರೆ-4
ಒಟ್ಟು-263062
ಹು-ಧಾ ಪಶ್ಚಿಮ ಜಾತಿ ಲೆಕ್ಕಾಚಾರ
ಲಿಂಗಾಯತ 82,000
ಮುಸ್ಲಿಂ 65,000
ಬ್ರಾಹ್ಮಣ 22,000
ಮರಾಠ 25,000
ಎಸ್ಸಿ/ಎಸ್ಟಿ 42,500
ಇತರೆ 19,000