ಪಾದಯಾತ್ರೆ ಪಾಲಿಟಿಕ್ಸ್‌ನಿಂದ ಗೆದ್ದವರಾರು? ಸೋತವರೆಷ್ಟು?

By Suvarna News  |  First Published Aug 5, 2024, 12:30 PM IST

ದಕ್ಷಿಣ ಭಾರತದಲ್ಲಿ ಪಾದಯಾತ್ರೆ ಇಂಪ್ಯಾಕ್ಟ್‌ನಿಂದಲೇ ಮುಖ್ಯಮಂತ್ರಿಯಾಗಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ನೆಲ ಕಚ್ಚಿದ ಕಾಂಗ್ರೆಸ್, ರಾಹುಲ್ ಗಾಂಧಿ ಹಮ್ಮಿಕೊಂಡ ಎರಡೆರಡು ಪಾದಯಾತ್ರೆಗಳಿಂದಲೇ ಪಕ್ಷವನ್ನು ಮೇಲೆತ್ತಿದ್ದಾರೆ. 


- ನರಸಿಂಹ ಮೂರ್ತಿ ಕುಲಕರ್ಣಿ, ಸುವರ್ಣ ನ್ಯೂಸ್ ಬಳ್ಳಾರಿ ವರದಿಗಾರ
ಬಳ್ಳಾರಿ: ಪಾದಯಾತ್ರೆ ಮಾಡಿದ್ರೇ ಅಧಿಕಾರಕ್ಕೆ ಬರೋದು ನಿಶ್ಚಿತವೇ? ಅಧಿಕಾರಕ್ಕೆ ಬರೋದಕ್ಕೋ ಜನರ ಸಮಸ್ಯೆ ಮುಂದಿಟ್ಟುಕೊಂಡು ಪಾದಯಾತ್ರೆ ಮಾಡ್ತಾರೋ ಗೊತ್ತಿಲ್ಲ. ಒಟ್ಟಲ್ಲಿ ಪಾದಯಾತ್ರೆ ಮಾಡಿದವರ ಸೆಕ್ಸಸ್ ರೇಟ್ ಜಾಸ್ತಿ ಇದೆ ಎನ್ನುವುದು ದಕ್ಷಿಣ ಭಾರತದ ರಾಜ್ಯದಲ್ಲಿ ಇದು ಸಾಬೀತಾಗಿದೆ.
ಬಿಜೆಪಿಯ ನಾಯಕರು ಮೂಡ ಮತ್ತು ವಾಲ್ಮೀಕಿ  ಹಗರಣ ಮುಂದಿಟ್ಟುಕೊಂಡು ಮಾಡ್ತಿರೋ ಪಾದಯಾತ್ರೆ ಬೆನ್ನಲ್ಲೇ ಇಂತಹದ್ದೊಂದು ಚರ್ಚೆ ರಾಜ್ಯದಲ್ಲಿ ಮುನ್ನೆಲೆಗೆ ಬಂದಿರುವುದು ಸತ್ಯ.

ಪ್ರಮುಖವಾಗಿ ಈ ವಿಚಾರ ಚರ್ಚೆಗೆ ಬರಲು ಬಹುದೊಡ್ಡ ಕಾರಣವೇನೆಂದರೆ ಕಳೆದ ಇಪ್ಪತ್ತು ವರ್ಷದ ಅವಧಿಯ ದಕ್ಷಿಣ ಭಾರತದ ರಾಜ್ಯಗಳ ರಾಜಕೀಯದಲ್ಲಿ ಪಾದಯಾತ್ರೆ ಪಾಲಿಟಿಕ್ಸ್ ಹೆಚ್ಚು ಇಂಪ್ಯಾಕ್ಟ್ ಆಗಿದೆ. ಜನರ ಸಮಸ್ಯೆ ಅಥವಾ ಹಗರಣ ಮುಂದಿಟ್ಟುಕೊಂಡು ರಾಜ್ಯದಲ್ಲಿ ಪಾದಯಾತ್ರೆ ಮಾಡಿ ಬಹುತೇಕ ನಾಯಕರು ದೊಡ್ಡ ಯಶಸ್ಸನ್ನು ಕಂಡಿದ್ದಾರೆ..

Tap to resize

Latest Videos

undefined

ಗೆದ್ದವರೆಷ್ಟು ಬಿದ್ದವರ್ಯಾರು? 
ಪ್ರಮುಖವಾಗಿ ಪಾದಯಾತ್ರೆ ಪರಿಣಾಮವೇ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ, ವೈ.ಎಸ್.  ರಾಜಶೇಖರ ರೆಡ್ಡಿ, ಚಂದ್ರಬಾಬು ನಾಯ್ಡು,  ಜಗನ್ಮೋಹನ ರೆಡ್ಡಿ  
ಎನ್ನುವದು ರಾಜಕೀಯ ಲೆಕ್ಕಾಚಾರ ಅದರಂತೆ  ಶ್ರೀರಾಮುಲು, ಅಣ್ಣಾಮಲೈ, ಶರ್ಮಿಳಾ ಪಾದಯಾತ್ರೆ ಮಾಡಿ ಹೆಸರು ತಂದುಕೊಟ್ಟಿತೇ ವಿನಃ ಅಧಿಕಾರಕ್ಕೆರಲಾಗಲಿಲ್ಲ.

ಇನ್ನೂ ಯಾರ್ಯಾರು ಯಾವ್ಯಾವ ಕಾರಣಕ್ಕೆ ಪಾದಯಾತ್ರೆ ಮಾಡಿದ್ರು ಅನ್ನೋದು ನೋಡೋದಾದ್ರೇ, 2002ರಲ್ಲಿ  ರೈತರ ಸಮಸ್ಯೆ,  ಜನ ಸಾಮಾನ್ಯರ ಮೇಲಿನ ರಾಜಕೀಯ ದಬ್ಬಾಳಿಕೆ, ಆಡಳಿತ ವಿರೋಧಿ ಅಲೆಯನ್ನು ಜನರಿಗೆ ತೋರಿಸಲು‌ ಆಂಧ್ರದ ವೈಎಸ್ ರಾಜಶೇಖರ ರೆಡ್ಡಿ ಮೂರು ಸಾವಿರ ಕಿ.ಮೀ ಪಾದಯಾತ್ರೆ ಮಾಡಿದರು. ಇದಕ್ಕೆ ಅತಿದೊಡ್ಡ ಜನ ಬೆಂಬಲ ಸಿಕ್ತು. ಅಧಿಕಾರವಿಲ್ಲದೇ ಕಂಗಾಲಾಗಿದ್ದ ಕಾಂಗ್ರೆಸ್ ಪಕ್ಷ ಮತ್ತದರ ನಾಯಕ ವೈ.ಎಸ್. ರಾಜಶೇಖರ ರೆಡ್ಡಿ 2004ರಲ್ಲಿ ನಡೆದ ಚುನಾವಣೆಯಲ್ಲಿ ಭರ್ಜರಿ ಯಶಸ್ಸು ಕಂಡು ಬಹುದೊಡ್ಡ  ಬಹುಮತದಿಂದ ಮುಖ್ಯಮಂತ್ರಿಯಾದರು.

ಜೈಲಿಗೆ ಕಳುಹಿದ ಎಚ್‌ಡಿಕೆ ಜೊತೆ ಬಿಎಸ್‌ವೈ ಪಾದಯಾತ್ರೆ: ಸಚಿವ ಚಲುವರಾಯಸ್ವಾಮಿ

ಸಿದ್ದರಾಮಯ್ಯ ಪಾದಯಾತ್ರೆ ಮಾಡಿ ಮುಖ್ಯಮಂತ್ರಿಯಾದ್ರು. ಇನ್ನೂ ಆಂಧ್ರದ ಮಾದರಿಯಲ್ಲಿಯೇ ಕರ್ನಾಟಕದಲ್ಲಿಯೂ 2010ರಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾಗ ಸಿದ್ದರಾಮಯ್ಯ ದೊಡ್ಡ ಮಟ್ಟದ ಪಾದಯಾತ್ರೆ ಮಾಡಿದ್ರು. ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ರೆಡ್ಡಿ ಸಹೋದರರು ಬಳ್ಳಾರಿ ಗಣಿ ಲೂಟಿ ಹೊಡೆದಿದ್ದಾರೆಂದು ಮತ್ತು ಸದನದಲ್ಲಿ ಜನಾರ್ದನ ರೆಡ್ಡಿ ಮತ್ತವರ ಬೆಂಬಲಿಗರ ಅಟ್ಟಹಾಸದ ವಿರುದ್ಧ ಸಿದ್ದರಾಮಯ್ಯ ಸಿಡಿದೆದ್ರು. 2010ರಲ್ಲಿ ಬೆಂಗಳೂರಿನಿಂದ ಬಳ್ಳಾರಿವರೆಗೂ 320km ಪಾದಯಾತ್ರೆ ಮಾಡಿದ್ರು. ಜನಾಂದೋಲನ ಮಾದರಿಯಲ್ಲಿ ನಡೆದ ಪಾದಯಾತ್ರೆ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿತ್ತು.
ಪರಿಣಾಮ 2013ರಲ್ಲಿ ಭರ್ಜರಿ ಬಹುಮತದಿಂದ ಸಿದ್ದರಾಮಯ್ಯ ಮುಖ್ಯಮಂತ್ರಿಯಾದ್ರು.

ಮತ್ತೊಮ್ಮೆ ಆಂಧ್ರದಲ್ಲಿ ನಡೆದ ಪಾದಯಾತ್ರೆ 2004ರಿಂದ 2014ರವರೆಗೂ ಹತ್ತು ವರ್ಷಗಳ ಕಾಲ ವೈಎಸ್ ರಾಜಶೇಖರ ರೆಡ್ಡಿ ನೇತೃತ್ವದಲ್ಲಿ ಗೆದ್ದ ಕಾಂಗ್ರೆಸ್ ಆಡಳಿತದಿಂದ ಕಂಗಾಲಾಗಿದ್ದ ತೆಲುಗು ದೇಶಂ ಪಕ್ಷದ ಚಂದ್ರಬಾಬು ನಾಯ್ಡು 2013 ಪಾದಯಾತ್ರೆ ಮಾಡಿದ್ರು. ಸುದೀರ್ಘವಾಗಿ ನಡೆದ ಪಾದಯಾತ್ರೆಯ ಅಂತಿಮ ದಿನ ರೈತರ ಸಾಲಮನ್ನಾ ಮಾಡೋದಾಗಿ ಘೋಷಣೆ ಮಾಡಿದರು. ಪರಿಣಾಮ 2014ರಲ್ಲಿ  ತೆಲುಗುದೇಶಂ ಪಕ್ಷದ ಚಂದ್ರಬಾಬು ನಾಯ್ಡು ಮುಖ್ಯಮಂತ್ರಿಯಾದರು. ಅದಾಗಲೇ ವೈ.ಎಸ್. ರಾಜಶೇಖರ ರೆಡ್ಡಿ ಸಾವಿನಿಂದ ಹಿನ್ನಡೆ ಅನುಭವಿಸಿದ್ದ ಕಾಂಗ್ರೆಸ್ ರಾಜ್ಯ ವಿಭಜನೆ ಮಾಡಿದ ವಿರೋಧದ  ಹಿನ್ನಲೆ ನೆಲ ಕಚ್ಚಿತ್ತು. ರಾಜಶೇಖರ ರೆಡ್ಡಿ ಪುತ್ರ ಕಟ್ಟಿದ ವೈಎಸ್‌ಅರ್ ಪಕ್ಷ ವಿರೋಧ ಪಕ್ಷದಲ್ಲಿ ಕೂಡುವಷ್ಟು ಸ್ಥಾನ ಗಳಿಸಿತ್ತು. 

ಯಾವ ಪುರುಷಾರ್ಥಕ್ಕೆ ಬಿಜೆಪಿ-ಜೆಡಿಎಸ್‌ನಿಂದ ಪಾದಯಾತ್ರೆ?: ಸಚಿವ ಎಚ್.ಕೆ.ಪಾಟೀಲ್

ದಾಖಲೆ ಬರೆದ ಜಗನ್ಮೋಹನ ರೆಡ್ಡಿ ಪಾದಯಾತ್ರೆ: 
ತಮ್ಮ ತಂದೆ ರಾಜಶೇಖರ ಮಾದರಿಯಲ್ಲಿ  ಕಾಂಗ್ರೆಸ್ ಪಕ್ಷದ ವಿರುದ್ಧವೇ ಗುಡುಗಿ ಹೊಸ ಪಕ್ಷ ಕಟ್ಟಿದ ಜಗನ್ಮೋಹನ ರೆಡ್ಡಿ 2018ರಲ್ಲಿ ಸುದೀರ್ಘ 3400  ಕಿ.ಮೀ ಪಾದಯಾತ್ರೆ ಮಾಡಿದ್ರು. ಇದು ಪಾದಯಾತ್ರೆಯ ಇತಿಹಾಸದಲ್ಲಿ ದೊಡ್ಡ ಪಾದಯಾತ್ರೆ ಎಂದು ವಿಶ್ಲೇಷಣೆ ಮಾಡಲಾಗ್ತಿದೆ. ಪಾದಯಾತ್ರೆ  ಪರಿಣಾಮ 2019 ದೊಡ್ಡ ಬಹುಮತದಿಂದ ಮುಖ್ಯಮಂತ್ರಿಯಾದರು..

ಪಾದಯಾತ್ರೆ ಮಾಡಿ ಹೆಸರು ಬಂತು ಅದರೆ ಪಕ್ಷ ಸೋತಿತ್ತು
ಇನ್ನೂ 2012ರಲ್ಲಿ ಬಿಎಸ್‌ಅರ್ ಪಕ್ಷ ಕಟ್ಟಿದ ಶ್ರೀರಾಮುಲು ಬೀದರ್‌ದಿಂದ ಬೆಂಗಳೂರುವರೆಗೆ ಪಾದಯಾತ್ರೆ ಮಾಡಿದ್ರು.‌ 2013ರ ಚುನಾವಣೆಯಲ್ಲಿ ಕೇವಲ ನಾಲ್ಕು ಕ್ಷೇತ್ರದಲ್ಲಿ ಶ್ರೀರಾಮುಲು ಪಕ್ಷ ಗೆದ್ದಿತ್ತು. ಆದರೆ ಶ್ರೀರಾಮುಲುಗೆ ಈ ಪಾದಯಾತ್ರೆ ದೊಡ್ಡ ಹೆಸರು ತಂದು ಕೊಟ್ಟಿತು.  ಆಂಧ್ರದ ಶರ್ಮಿಳಾ ಕೂಡ ತಮ್ಮ ಸಹೋದರ ಜಗನ್ಮೋಹನ ರೆಡ್ಡಿ ಅವರು ಜೈಲಿಗೆ ಹೋದಾಗ ಓದಾರ್ಪು ಯಾತ್ರೆಯ ಪಾದಯಾತ್ರೆ ಪೂರ್ಣಗೊಳಿಸಿದ್ರು. ಸದ್ಯ ಕಾಂಗ್ರೆಸ್ ಪಕ್ಷದ ಆಂಧ್ರದ ರಾಜ್ಯಾದ್ಯಕ್ಷೆಯಾದ್ರೂ ರಾಜಕೀಯದಲ್ಲಿ ಸೆಕ್ಸಸ್ ಒಲಿದಿಲ್ಲ. ಇನ್ನೂ ಕಳೆದ ವರ್ಷ ತಮಿಳುನಾಡಿನಲ್ಲಿ ಅಣ್ಣಾಮಲೈ ಕೂಡ ಪಾದಯಾತ್ರೆ ಮಾಡಿದ್ರು. ನಿರೀಕ್ಷಿತ ಮಟ್ಟದಲ್ಲಿ ಪಕ್ಷ ಗೆಲ್ಲದೇ ಹೋದರೂ ಬಿಜೆಪಿಗೆ ದೊಡ್ಡ ಮಟ್ಟದ ನೆಲೆ ಸಿಗೋದ್ರ ಜೊತೆಗೆ ಅಣ್ಣಾಮಲೈಗೆ ದೊಡ್ಡ ಹೆಸರು ಬಂತು. ಹೀಗೆ ದಕ್ಷಿಣ ಭಾರತದ ರಾಜಕೀಯದಲ್ಲಿ ಪಾದಯಾತ್ರೆ ಪಾಲಿಟಿಕ್ಸ್ ಹಲವರಿಗೆ ವರವಾದ್ರೇ ಮತ್ತಷ್ಟು ನಾಯಕರಿಗೆ ಹೆಸರು ತಂದು ಕೊಟ್ಟಿದೆ.

'ಕಾಂಗ್ರೆಸ್‌ಗೆ ಮಾನ ಮಾರ್ಯಾದೆ ಇದ್ಯಾ?' ಜನಾಂದೋಲ ಕಾರ್ಯಕ್ರಮದಲ್ಲಿ ಶಾಸಕ ಶಿವಲಿಂಗೇಗೌಡ ಎಡವಟ್ಟು!

click me!