ರಾಜ್ಯ ರಾಜಕಾರಣದಲ್ಲಿ ಪವರ್‌ಫುಲ್ ರಾಜಕಾರಣಿ ಎಂದೇ ಗುರುತಿಸಿಕೊಂಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕನಕಪುರ ಕ್ಷೇತ್ರದಿಂದ ನಾಲ್ಕನೇ ಬಾರಿಗೆ ಗೆಲುವು ಸಾಧಿಸಿದ್ದಾರೆ.
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಪವರ್‌ಫುಲ್ ರಾಜಕಾರಣಿ ಎಂದೇ ಗುರುತಿಸಿಕೊಂಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕನಕಪುರ ಕ್ಷೇತ್ರದಿಂದ ನಾಲ್ಕನೇ ಬಾರಿಗೆ ಗೆಲುವು ಸಾಧಿಸಿದ್ದಾರೆ. ಡಿ.ಕೆ.ಶಿವಕುಮಾರ್ 1,22,392 ಮತಗಳ ಭಾರೀ ಅಂತರದಿಂದ ಭರ್ಜರಿ ಜಯಭೇರಿ ಬಾರಿಸಿದ್ದು, ಇದು ಅಭ್ಯರ್ಥಿಯೊಬ್ಬರು ಈ ಚುನಾವಣೆಯಲ್ಲಿ ದಾಖಲಿಸಿದ ಅತೀ ಹೆಚ್ಚಿನ ಅಂತರದ ಗೆಲುವಾಗಿದೆ. ಡಿ.ಕೆ.ಶಿವಕುಮಾರ್ ಅವರು 1,43,023 ಮತಗಳನ್ನು ಪಡೆದಿದ್ದರೆ, ಪ್ರತಿಸ್ಪರ್ಧಿ ಜೆಡಿಎಸ್‌ನ ಬಿ.ನಾಗರಾಜು 20,631 ಮತಗಳಿಸಿದ್ದಾರೆ. ಬಿಜೆಪಿಯಿಂದ ಸ್ಪರ್ಧಿಸಿದ್ದ ಸಚಿವ ಆರ್.ಅಶೋಕ್ ಕೇವಲ 19,753 ಮತಗಳನ್ನಷ್ಟೇ ಪಡೆಯಲು ಶಕ್ತರಾಗಿದ್ದಾರೆ.
1985ರಲ್ಲಿ ಸಾತನೂರು ಕ್ಷೇತ್ರದಲ್ಲಿ ಜನತಾದಳದ ಎಚ್.ಡಿ.ದೇವೇಗೌಡರ ವಿರುದ್ಧ ಡಿ.ಕೆ.ಶಿವಕುಮಾರ್ ಪರಾಭವಗೊಂಡಿದ್ದರು. 1989, 1994ರ ಚುನಾವಣೆಯಲ್ಲಿ ಜನತಾದಳದ ಯು.ಕೆ.ಸ್ವಾಮಿ ವಿರುದ್ಧ ಡಿ.ಕೆ.ಶಿವಕುಮಾರ್ ಗೆಲುವು ಸಾಧಿಸಿದ್ದರು. ನಂತರ 1999ರಲ್ಲಿ ಜೆಡಿಎಸ್‌ನ ಎಚ್.ಡಿ.ಕುಮಾರಸ್ವಾಮಿ ಮತ್ತು 2004ರಲ್ಲಿ ಜೆಡಿಎಸ್ ಡಿ.ಎಂ.ವಿಶ್ವನಾಥ್ ವಿರುದ್ಧ ಜಯ ಗಳಿಸಿದ್ದರು. ಆ ಬಳಿಕ ಸಾತನೂರು ಕ್ಷೇತ್ರ, ಕನಕಪುರ ಮತ್ತು ಚನ್ನಪಟ್ಟಣ ಕ್ಷೇತ್ರಗಳಿಗೆ ಹಂಚಿ ಹೋದವು. ಕನಕಪುರಕ್ಕೆ ವಲಸೆ ಬಂದ ಡಿ.ಕೆ.ಶಿವಕುಮಾರ್ ಅವರು ಪಿ.ಜಿ.ಆರ್.ಸಿಂಧ್ಯಾ ಕಟ್ಟಿದ ಜೆಡಿಎಸ್ ಭದ್ರಕೋಟೆಯನ್ನು ಛಿದ್ರಪಡಿಸಿದರು. 2008ರಲ್ಲಿ ಜೆಡಿಎಸ್‌ನ ವಿಶ್ವನಾಥ್, 2013ರಲ್ಲಿ ಜೆಡಿಎಸ್ ಪಿ.ಜಿ.ಆರ್. ಸಿಂಧ್ಯಾ, 2018ರಲ್ಲಿ ನಾರಾಯಣಗೌಡ ವಿರುದ್ಧ ಗೆಲುವು ಸಾಧಿಸಿದ್ದರು. ಈ ಬಾರಿಯ ಚುನಾವಣೆ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಕಂದಾಯ ಸಚಿವರಾಗಿದ್ದ ಅಶೋಕ್‌ರನ್ನು ಬಿಜೆಪಿ ಕಣಕ್ಕಿಳಿಸಿದರೆ, ಜೆಡಿಎಸ್ಗೆ ಪ್ರಬಲ ಅಭ್ಯರ್ಥಿ ಸಿಗಲಿಲ್ಲ. ಇದು ಕಾಂಗ್ರೆಸ್ ಪಾಲಿಗೆ ವರದಾನವಾಯಿತು.
Karnataka election results 2023: ರಾಜಧಾನಿಯಲ್ಲಿ ಒಬ್ಬ ಬಂಡಾಯ ಅಭ್ಯರ್ಥಿಯೂ ಗೆದ್ದಿಲ್ಲ!
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮತ್ತು ಕುಮಾರಸ್ವಾಮಿ ಪ್ರಚಾರಕ್ಕೆ ಬಾರದಿರುವುದು, ಅಭ್ಯರ್ಥಿಯಲ್ಲಿ ಆರ್ಥಿಕ ಬಲ ಇಲ್ಲದಿರುವುದು, ಡಿ.ಕೆ.ಶಿವಕುಮಾರ್ ಅವರೊಂದಿಗೆ ಹೊಂದಾಣಿಕೆ ರಾಜಕಾರಣದ ವದಂತಿ ಜೆಡಿಎಸ್ ಅಭ್ಯರ್ಥಿ ಸೋಲಿಗೆ ಕಾರಣವಾಗಿದ್ದರೆ, ಬಿಜೆಪಿ ಅಭ್ಯರ್ಥಿ ಆರ್.ಅಶೋಕ್ ಹೊರಗಿನವರು ಎಂಬ ಮನೋಭಾವನೆ, ಕೊನೇ ಘಳಿಗೆಯಲ್ಲಿ ಟಿಕೆಟ್ ಘೋಷಿಸಿದ್ದು, ಕ್ಷೇತ್ರದಲ್ಲಿ ಪಕ್ಷಕ್ಕೆ ಅಸ್ತಿತ್ವವೇ ಇಲ್ಲದಿರುವುದು, ಆಡಳಿತ ವಿರೋಧಿ ಅಲೆಯಿಂದಾಗಿ ಬಿಜೆಪಿ ಹೀನಾಯ ಸೋಲುಕಂಡಿತು ಎನ್ನಲಾಗಿದೆ.
1985ರಲ್ಲಿ ಸಾತನೂರು ಕ್ಷೇತ್ರದಲ್ಲಿ ಜನತಾದಳದ ಎಚ್.ಡಿ.ದೇವೇಗೌಡರ ವಿರುದ್ಧ ಡಿಕೆಶಿ ಪರಾಭವಗೊಂಡಿದ್ದರು. 1989, 1994ರ ಚುನಾವಣೆಯಲ್ಲಿ ಜನತಾದಳದ ಯು.ಕೆ.ಸ್ವಾಮಿ ವಿರುದ್ಧ ಡಿಕೆಶಿ ಗೆಲವು ಸಾಧಿಸಿದ್ದರು. ಆನಂತರ 1999ರಲ್ಲಿ ಜೆಡಿಎಸ್‌ನ ಎಚ್.ಡಿ.ಕುಮಾರಸ್ವಾಮಿ ಮತ್ತು 2004ರಲ್ಲಿ ಜೆಡಿಎಸ್ ಡಿ.ಎಂ.ವಿಶ್ವನಾಥ್ ವಿರುದ್ಧ ಜಯ ಗಳಿಸಿದ್ದರು. ಆನಂತರ ಸಾತನೂರು ಕ್ಷೇತ್ರ ಕನಕಪುರ ಮತ್ತು ಚನ್ನಪಟ್ಟಣ ಕ್ಷೇತ್ರಗಳಿಗೆ ಹಂಚಿ ಹೋದವು. ಕನಕಪುರ ಕ್ಷೇತ್ರಕ್ಕೆ ವಲಸೆ ಬಂದ ಡಿಕೆಶಿರವರು ಸಿಂಧ್ಯಾ ಕಟ್ಟಿದ ಜೆಡಿಎಸ್ ಭದ್ರಕೋಟೆಯನ್ನು ಛಿದ್ರಪಡಿಸಿದರು. 2008ರಲ್ಲಿ ಜೆಡಿಎಸ್‌ನ ವಿಶ್ವನಾಥ್, 2013ರಲ್ಲಿ ಜೆಡಿಎಸ್ ಪಿಜಿಆರ್ ಸಿಂಧ್ಯಾ, 2018ರಲ್ಲಿ ನಾರಾಯಣಗೌಡ ವಿರುದ್ಧ ಗೆಲುವು ಸಾಧಿಸಿದ್ದ ಡಿಕೆಶಿ ಇದೀಗ ನಾಲ್ಕನೇ ಬಾರಿ ಗೆಲುವಿನ ನಗೆ ಬೀರಿದ್ದಾರೆ.
Karnataka Cabinet Formation: ಹೊಸ ಸಿಎಂಗೆ ಸಂಪುಟ ರಚನೆ ದೊಡ್ಡ ಸವಾಲ್: ಎಲ್ಲರಿಗೂ 'ಮಣೆ' ಚಾಲೆಂಜ್
ಈ ಬಾರಿಯ ಚುನಾವಣೆ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಕಂದಾಯ ಸಚಿವರಾಗಿದ್ದ ಅಶೋಕ್ ಅವರನ್ನು ಬಿಜೆಪಿ ಕಣಕ್ಕಿಳಿಸಿದರೆ, ಜೆಡಿಎಸ್ ಗೆ ಪ್ರಬಲ ಅಭ್ಯರ್ಥಿ ಸಿಗಲಿಲ್ಲ. ಇದು ಕಾಂಗ್ರೆಸ್ ಪಾಲಿಗೆ ವರದಾನವಾಯಿತು.
ಡಿಕೆಶಿ ಗೆಲುವಿಗೆ ಕಾರಣ:
ಕಾಂಗ್ರೆಸ್ ನ ಗ್ಯಾರೆಂಟಿಗಳು. ಕ್ಷೇತ್ರದಲ್ಲಿ ಡಿಕೆಶಿಯನ್ನು ವಿರೋಧಿಸುವ ಯಾವ ನಾಯಕನು ಇಲ್ಲದಿರುವುದು. ಇಡಿ, ಐಟಿ ಪ್ರಕರಣಗಳಿಂದ ಅನುಕಂಪ. ಸಹೋದರ ಸಂಸದ ಡಿ.ಕೆ.ಸುರೇಶ್ ರವರು ಕ್ಷೇತ್ರದಲ್ಲಿ ಸಾಕಷ್ಟು ಜನರೊಂದಿಗೆ ನೇರ ಸಂಪರ್ಕ ಹೊಂದಿದ್ದಾರಲ್ಲದೆ, ಹಿಡಿತವನ್ನು ಸಾಧಿಸಿರುವುದು. ಕ್ಷೇತ್ರ ವ್ಯಾಪ್ತಿಯಲ್ಲಿ ಕೈಗೊಂಡಿರುವ ಕೋಟ್ಯಂತರ ರುಪಾಯಿಗಳ ಅಭಿವೃದ್ಧಿ ಕಾರ್ಯಗಳು, ಕ್ಷೇತ್ರದಲ್ಲಿ ಹಿಡಿತ ಸಾಧಿಸಿ ಭಿನ್ನಮತಕ್ಕೆ ಅವಕಾಶ ನೀಡದೆ ಪಕ್ಷ ಸಂಘಟನೆ ಬಲಿಷ್ಠ ಪಡಿಸಿದ್ದು ಡಿಕೆಶಿ ಗೆಲುವಿಗೆ ಸಹಕಾರಿಯಾಯಿತು.
ದಳ - ಕಮಲದ ಸೋಲಿಗೆ ಕಾರಣವೇನು?:
ಜೆಡಿಎಸ್ ವರಿಷ್ಠರಾದ ದೇವೇಗೌಡ ಮತ್ತು ಕುಮಾರಸ್ವಾಮಿ ಪ್ರಚಾರಕ್ಕೆ ಬಾರದಿರುವುದು. ಅಭ್ಯರ್ಥಿಯಲ್ಲಿ ಆರ್ಥಿಕ ಬಲ ಇಲ್ಲದಿರುವುದು. ಡಿಕೆಶಿಯೊಂದಿಗೆ ಹೊಂದಾಣಿಕೆ ರಾಜಕಾರಣದ ವದಂತಿ. ಮಹಿಳಾ ಮತ್ತು ಯುವ ಮತದಾರರನ್ನು ಸೆಳೆಯುವಲ್ಲಿ ವಿಫಲರಾಗಿದ್ದ ಬಿ.ನಾಗರಾಜು ಸೋಲಿಕೆ ಕಾರಣ ಎನ್ನಲಾಗುತ್ತಿದೆ. ಬಿಜೆಪಿ ಅಭ್ಯರ್ಥಿ ಆರ್.ಅಶೋಕ್ ಹೊರಗಿನವರು ಎಂಬ ಮನೋಭಾವನೆ. ಕೊನೆ ಘಳಿಗೆಯಲ್ಲಿ ಟಿಕೆಟ್ ಘೋಷಣೆ ಮಾಡಿದ್ದು, ಕ್ಷೇತ್ರದಲ್ಲಿ ಪಕ್ಷಕ್ಕೆ ಅಸ್ತಿತ್ವವೇ ಇಲ್ಲದಿರುವುದು. ಬಿಜೆಪಿ ಸರ್ಕಾರದ ದ್ವೇಷದ ರಾಜಕಾರಣ, ಆಡಳಿತ ವಿರೋಧಿ ಅಲೆ, ಸರ್ಕಾರದ ಸಾಧನೆಗಳು ಹಾಗೂ ತಾಲೂಕಿಗೆ ತಮ್ಮ ಸರ್ಕಾರದಿಂದ ಬಂದಿರುವ ಅನುದಾನಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುವಲ್ಲಿ ಎಡವಿದ್ದರಿಂದ ಸೋಲು ಅನುಭವಿಸಬೇಕಾಯಿತು.