ಪ್ರಜ್ವಲ್ ರೇಪ್ ಬಗ್ಗೆ ಕಿಡಿಕಾರಿದ್ದ ಆಪ್, ಸ್ವಾತಿ ವಿಷಯದಲ್ಲಿ ಮೌನ!

By Kannadaprabha News  |  First Published May 17, 2024, 7:29 AM IST

ಕರ್ನಾಟಕದಲ್ಲಿ ಜೆಡಿಎಸ್‌ ಸಂಸದ ಪ್ರಜ್ವಲ್‌ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ್ದಾರೆ. ಆದರೆ ಅವರಿಗೆ ಬಿಜೆಪಿ ರಕ್ಷಣೆ ನೀಡುತ್ತಿದೆ. ಮಹಿಳೆಯರಿಗೆ ಅನ್ಯಾಯ ಆಗಿರುವ ಕುರಿತು ಬಿಜೆಪಿ ಏಕೆ ಕ್ರಮ ವಹಿಸುತ್ತಿಲ್ಲ ಎಂದು ಪ್ರಶ್ನಿಸಿದ್ದ ಆಮ್‌ಆದ್ಮಿ ಪಕ್ಷ, ತನ್ನದೇ ಪಕ್ಷದ ಸಂಸದೆ ಸ್ವಾತಿ ಮಲಿವಾಲ್‌ ಪ್ರಕರಣದಲ್ಲಿ ಜಾಣ ಮೌನಕ್ಕೆ ಶರಣಾಗಿದೆ.


ಲಖನೌ (ಮೇ.17): ಕರ್ನಾಟಕದಲ್ಲಿ ಜೆಡಿಎಸ್‌ ಸಂಸದ ಪ್ರಜ್ವಲ್‌ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ್ದಾರೆ. ಆದರೆ ಅವರಿಗೆ ಬಿಜೆಪಿ ರಕ್ಷಣೆ ನೀಡುತ್ತಿದೆ. ಮಹಿಳೆಯರಿಗೆ ಅನ್ಯಾಯ ಆಗಿರುವ ಕುರಿತು ಬಿಜೆಪಿ ಏಕೆ ಕ್ರಮ ವಹಿಸುತ್ತಿಲ್ಲ ಎಂದು ಪ್ರಶ್ನಿಸಿದ್ದ ಆಮ್‌ಆದ್ಮಿ ಪಕ್ಷ, ತನ್ನದೇ ಪಕ್ಷದ ಸಂಸದೆ ಸ್ವಾತಿ ಮಲಿವಾಲ್‌ ಪ್ರಕರಣದಲ್ಲಿ ಜಾಣ ಮೌನಕ್ಕೆ ಶರಣಾಗಿದೆ.

ಸ್ವಾತಿ ಮೇಲೆ ಹಲ್ಲೆ ನಡೆಸಿದ ಆರೋಪಿ ಭಿಭವ್‌ ಕುಮಾರ್‌ ಜೊತೆ ಗುರುವಾರ ಬಹಿರಂಗವಾಗಿಯೇ ಕಾಣಿಸಿಕೊಂಡ ಸಿಎಂ ಕೇಜ್ರಿವಾಲ್‌, ಬಳಿಕ ಪತ್ರಿಕಾಗೋಷ್ಠಿಯಲ್ಲಿ ಸ್ವಾತಿ ಕುರಿತು ಪ್ರಶ್ನೆ ಕೇಳಿದ ವೇಳೆ ಉತ್ತರ ನೀಡಲು ಹಿಂದೆ ಸರಿದರು. ಬಳಿಕ ಈ ಕುರಿತು ಆಪ್‌ ಸಂಸದ ಸಂಜಯ್‌ ಸಿಂಗ್‌ ಪ್ರತಿಕ್ರಿಯೆ ನೀಡಿದಾರಾದರೂ, ಈ ವಿಷಯದಲ್ಲಿ ನಮ್ಮ ನಿಲುವು ಈಗಾಗಲೇ ಸ್ಪಷ್ಟಪಡಿಸಿದ್ದೇವೆ ಎಂದು ಹೇಳಿ ತಪ್ಪಿಸಿಕೊಳ್ಳುವ ಯತ್ನ ಮಾಡಿದರು.

Tap to resize

Latest Videos

Swati Maliwal case: ಮುಖ, ಎದೆ, ಹೊಟ್ಟೆ, ದೇಹದ ಸೂಕ್ಷ್ಮ ಭಾಗಗಳ ಮೇಲೆ ಕೇಜ್ರಿವಾಲ್ ಆಪ್ತನಿಂದ ಹಲ್ಲೆ

ಎರಡು ದಿನಗಳ ಹಿಂದೆ ಉತ್ತರಪ್ರದೇಶದ ಚುನಾವಣಾ ರ್‍ಯಾಲಿಯಲ್ಲ ಮಾತನಾಡಿದ್ದ ಸಂಜಯ್‌ ಸಿಂಗ್‌ ಪ್ರಜ್ವಲ್‌ ರೇವಣ್ಣ ವಿಷಯದ ಕುರಿತು ಬಿಜೆಪಿ ವಿರುದ್ಧ ಹರಿಹಾಯ್ದಿದ್ದರು.

ನವದೆಹಲಿ: ಆಪ್‌ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್‌ ಜೊತೆ ಅನುಚಿತವಾಗಿ ನಡೆದುಕೊಂಡ ಆರೋಪ ಹೊತ್ತಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಆಪ್ತ ಭಿಭವ್‌ ಕುಮಾರ್‌ಗೆ ರಾಷ್ಟ್ರೀಯ ಮಹಿಳಾ ಆಯೋಗ ನೋಟಿಸ್‌ ನೀಡಿದೆ. ಶುಕ್ರವಾರ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.

ಸ್ವಾತಿ ಪ್ರಕರಣದ ಹಿನ್ನೆಲೆ ಏನು?:
ದೆಹಲಿ ಮುಖ್ಯಮಂತ್ರಿ ನಿವಾಸದಲ್ಲಿ ಅರವಿಂದ್‌ ಕೇಜ್ರಿವಾಲ್‌ ಆಪ್ತ ಬಿಭವ್‌ ಕುಮಾರ್‌ನಿಂದ ಹಲ್ಲೆಗೊಳಗಾದ ಆಪ್‌ ಸಂಸದೆ ಸ್ವಾತಿ ಮಲಿವಾಲ್‌ ದಾಖಲಿಸಿದ್ದ ದೂರಿನ ಎಲ್ಲ ವಿವರ ಬಹಿರಂಗವಾಗಿದೆ. ಇದೇ ವೇಳೆ ಶುಕ್ರವಾರ ದಿಲ್ಲಿಯ ತೀಸ್ ಹಜಾರಿ ನ್ಯಾಯಾಲಯಕ್ಕೆ ಹಾಜರಾದ ಅವರು ನ್ಯಾಯಾಲಯದ ಮುಂದೆ ಸಮಸ್ತ ಘಟನಾವಳಿಯ ಹೇಳಿಕೆ ನೀಡಿದ್ದಾರೆ.

ಅದರಲ್ಲಿ ಬಿಭವ್‌ ಕುಮಾರ್‌ ಎಷ್ಟು ಹೇಳಿದರೂ ಕೇಳದೆ ತನಗೆ ಮೇಲಿಂದ ಮೇಲೆ ಹಲ್ಲೆ ಮಾಡಿದ. ನಿನ್ನನ್ನು ಸಮಾಧಿ ಮಾಡುವೆ ಎಂದು ಬೆದರಿಸಿದ. ಹೀಗಾಗಿ ತಾನೂ ಆತ್ಮರಕ್ಷಣೆಗಾಗಿ ಆತನ ತಲೆಯನ್ನು ಟೇಬಲ್‌ಗೆ ಅಪ್ಪಳಿಸಿ ಹಲ್ಲೆ ಮಾಡಿದೆ ಹಾಗೂ ಒದ್ದೆ ಎಂದು ಹೇಳಿದ್ದಾರೆ.

Swati Maliwal case: ಮುಖ, ಎದೆ, ಹೊಟ್ಟೆ, ದೇಹದ ಸೂಕ್ಷ್ಮ ಭಾಗಗಳ ಮೇಲೆ ಕೇಜ್ರಿವಾಲ್ ಆಪ್ತನಿಂದ ಹಲ್ಲೆ

ಎಫ್‌ಐಆರ್‌ನಲ್ಲೇನಿದೆ?
ಸೋಮವಾರ ಮುಂಜಾನೆ ದೆಹಲಿ ಮುಖ್ಯಮಂತ್ರಿ ನಿವಾಸಕ್ಕೆ ಹೋದೆ ಅಲ್ಲಿನ ಭದ್ರತಾ ಸಿಬ್ಬಂದಿ, ಸಿಎಂ ಬರುವವರೆಗೆ ಒಂದು ರೂಂನಲ್ಲಿ ಕಾಯುವಂತೆ ಹೇಳಿದರು.

ಕೆಲ ಕ್ಷಣಗಳ ಬಳಿಕ ಬಿಭವ್‌ ಕುಮಾರ್‌ ಸ್ವಾತಿಯಿದ್ದ ರೂಂಗೆ ಬಂದು ಸಕಾರಣವಿಲ್ಲದೆ ನನ್ನ ಮೇಲೆ ನಿಂದನೆ ಹಾಗೂ ಬೈಗುಳವನ್ನು ಪ್ರಾರಂಭಿಸಿದರು. ತನಾನು ನಿಂದನೆಯನ್ನು ನಿಲ್ಲಿಸಿ ಎಂದು ಹೇಳಿದ್ದಕ್ಕೆ ಆಕ್ರೋಶಗೊಂಡ ಭಿಭವ್‌ ನನ್ನ ಕೆನ್ನೆಗೆ 7-8 ಬಾರಿ ಬಾರಿಸಿದ. ಇದರಿಂದ ಆಕ್ರೋಶಗೊಂಡ ನಾನು ಕಾಪಾಡುವಂತೆ ಕಿರುಚಿದರೂ ಯಾರೂ ನೆರವಿಗೆ ಧಾವಿಸಲಿಲ್ಲ.

ಬಳಿಕ ಆತ್ಮರಕ್ಷಣೆಯ ಸಲುವಾಗಿ ಭಿಭವ್‌ಗೆ ಕಾಲಿನಿಂದ ಒದ್ದೆ.ತಲೆಯನ್ನು ಟೇಬಲ್‌ ಮೇಲೆ ಅಪ್ಪಳಿಸಿದೆ. ಇದರಿಂದ ಮತ್ತಷ್ಟು ಆಕ್ರೋಶಭರಿತನಾದ ಬಿಭವ್‌ ನೆಲದ ಮೇಲೆ ಬಿದ್ದಿದ್ದ ನನ್ನನ್ನು ತುಳಿದು, ಎಳೆದಾಡಿದ. ಶರ್ಟನ್ನು ಎಳೆದ ರಭಸಕ್ಕೆ ನನ್ನ ಶರ್ಟ್‌ ಗುಂಡಿಗಳು ಹರಿದು ಹೋದವು. ಬಳಿಕ ಆತ ನನ್ನ ಎದೆ, ಹೊಟ್ಟೆ, ಜಠರ ಮುಂತಾದ ಅಂಗಗಳಿಗೆ ಒದ್ದು ಹಲ್ಲೆ ಮಾಡಿದ. ಕೊನೆಗೆ ನಾನು ಋತುಚಕ್ರದಲ್ಲಿದ್ದೇನೆ ಎಂದೆ. ಆದರೂ ಬಿಭವ್‌ ತನ್ನ ಹಲ್ಲೆಯನ್ನು ಮುಂದುವರಿಸಿದ.

ಪ್ರಜ್ವಲ್ ರೇಪ್ ಬಗ್ಗೆ ಕಿಡಿಕಾರಿದ್ದ ಆಪ್, ಸ್ವಾತಿ ವಿಷಯದಲ್ಲಿ ಮೌನ!

ಕೊನೆಗೆ ಸಾವರಿಸಿಕೊಂಡು ಎದ್ದು ಪೊಲೀಸ್‌ ಹೆಲ್ಪ್‌ಲೈನ್‌ಗೆ ಕರೆ ಮಾಡಿ ವಿಷಯ ತಿಳಿಸಿದೆ. ಆಗ ಬಿಭವ್‌ ದರ್ಪದಿಂದ ‘ಏನು ಬೇಕಾದರೂ ಮಾಡಿಕೋ. ನಿನ್ನ ಮೂಳೆಯನ್ನು ಮುರಿದು ನಿನ್ನನ್ನು ಸಮಾಧಿ ಮಾಡುತ್ತೇವೆ’ ಎಂದು ಗದರಿಸಿದ. ಪೊಲೀಸರು ಬರುವವರೆಗೆ ಇರುತ್ತೇನೆ ಎಂದರೂ ಕೇಳದೆ ಮನೆಯಿಂದ ಹೊರದಬ್ಬಿಸಿದ.

click me!