ಕರ್ನಾಟಕ ಎಲೆಕ್ಷನ್‌ಗೆ ₹196 ಕೋಟಿ ವೆಚ್ಚ ಮಾಡಿದ ಬಿಜೆಪಿ

By Kannadaprabha News  |  First Published Dec 16, 2023, 6:57 PM IST

ಮೇ ತಿಂಗಳಿನಲ್ಲಿ ನಡೆದಿದ್ದ ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ 341.65 ಕೋಟಿ ರು.ಗಳನ್ನು ದೇಣಿಗೆಯಾಗಿ ಸಂಗ್ರಹಿಸಿದ್ದು, 196.7 ಕೋಟಿ ರು.ಗಳನ್ನು ಖರ್ಚು ಮಾಡಿರುವುದಾಗಿ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಿದೆ. 


ನವದೆಹಲಿ (ಡಿ.16): ಮೇ ತಿಂಗಳಿನಲ್ಲಿ ನಡೆದಿದ್ದ ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ 341.65 ಕೋಟಿ ರು.ಗಳನ್ನು ದೇಣಿಗೆಯಾಗಿ ಸಂಗ್ರಹಿಸಿದ್ದು, 196.7 ಕೋಟಿ ರು.ಗಳನ್ನು ಖರ್ಚು ಮಾಡಿರುವುದಾಗಿ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಿದೆ. ಖರ್ಚು ಮಾಡಿದ 196.7 ಕೋಟಿ ರು.ಗಳ ಪೈಕಿ, 78.10 ಕೋಟಿ ರು.ಗಳನ್ನು ವಿವಿಧ ಮಾಧ್ಯಮಗಳಲ್ಲಿ ಜಾಹೀರಾತು ನೀಡಲು, 14,21ಕೋಟಿ ರುಗಳನ್ನು ರ್ಯಾಲಿ ಮತ್ತು ಚುನಾವಣಾ ಸಮಾವೇಶ ಆಯೋಜಿಸಲು ಹಾಗೂ ೩೪ ಕೋಟಿ ರು.ಗಳನ್ನು ಪಕ್ಷದ ಬೆಂಬಲಿತ ಅಭ್ಯರ್ಥಿಗಳಿಗೆ ಪ್ರಚಾರಕ್ಕೆಂದು ನೀಡಿರುವುದಾಗಿ ತಿಳಿಸಿದೆ.

ಇದೇ ವೇಳೆ, ಖರ್ಚು ಮಾಡಿದ 196.7ಕೋಟಿ ರು.ಗಳ ಪೈಕಿ ಒಟ್ಟಾರೆ 149.36 ಕೋಟಿ ರು.ಗಳನ್ನು ಸಾಮೂಹಿಕವಾಗಿ ಪಕ್ಷದ ಪ್ರಚಾರಕ್ಕಾಗಿಯೂ, ಉಳಿದ 47.33 ಕೋಟಿ ರು.ಗಳನ್ನು ಅಭ್ಯರ್ಥಿ ಕೇಂದ್ರಿತವಾಗಿ ಪ್ರಚಾರ ಮಾಡಲು ಬಳಸಿರುವುದಾಗಿ ವರದಿಯಲ್ಲಿ ಉಲ್ಲೇಖಿಸಿದೆ.ಕರ್ನಾಟಕ ಚುನಾವಣೆ ಘೋಷಣೆಯಾದ ದಿನದಿಂದ ಚುನಾವಣಾ ದಿನಾಂಕದ ಅಂತ್ಯದ ತನಕ ಪಕ್ಷದ ಕೇಂದ್ರ ಕಚೇರಿಗೆ 341.65 ಕೋಟಿ ರು. ದೇಣಿಗೆ ಹರಿದುಬಂದಿತ್ತು ಎಂದು ಅದು ಮಾಹಿತಿ ನೀಡಿದೆ. ಬಿಜೆಪಿಯು ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ 66ಸ್ಥಾನಗಳಲ್ಲಿ ವಿಜಯ ಸಾಧಿಸಿತ್ತು.

Tap to resize

Latest Videos

ರೈತರ ಮಕ್ಕಳಿಗೆ ಹೆಣ್ಣು ಕೊಡ್ಸಿ ಮೇಡಂ: ಜನತಾದರ್ಶನದಲ್ಲಿ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದ ಅನ್ನದಾತ!

ಮೇಲ್ಮನೆಯಲ್ಲಿ ಕೊನೆ ದಿನ ಉ.ಕ. ಚರ್ಚೆ: ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಚರ್ಚೆಗೆ ಚಳಿಗಾಲದ ಅಧಿವೇಶನದ ಕೊನೆಯ ದಿನವಾದ ಶುಕ್ರವಾರ ವಿಧಾನ ಪರಿಷತ್‌ನಲ್ಲಿ ಕೊನೆಗೂ ಅವಕಾಶ ದೊರೆಯಿತು. ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್‌ನ ವಿವಿಧ ಸದಸ್ಯರು ಮಾತನಾಡಿ ಈ ಭಾಗದಲ್ಲಿ ಆಗಬೇಕಿರುವ ಅಭಿವೃದ್ಧಿ ಕಾರ್ಯಗಳಿಗೆ ವಿಶೇಷ ಅನುದಾನ ನೀಡಲು ಸರ್ಕಾರವನ್ನು ಆಗ್ರಹಿಸಿದರು.

ಬಿಜೆಪಿಯ ಎಚ್‌.ವಿಶ್ವನಾಥ್‌ ಮಾತನಾಡಿ, ಉತ್ತರ ಕರ್ನಾಟಕ ಭಾಗ ಶೈಕ್ಷಣಿಕವಾಗಿ ಹಿಂದುಳಿದಿದೆ. ಈ ಭಾಗದ ಶಾಲೆಗಳಲ್ಲೇ 15 ಸಾವಿರ ಶಿಕ್ಷಕರ ಕೊರತೆ ಇದೆ. ಕೊಠಡಿಗಳ ಕೊರತೆ ಇದೆ. ಅಗತ್ಯ ಮೂಲಸೌಕರ್ಯಗಳಿಲ್ಲ. ಶಾಲಾ ಮಟ್ಟದಲ್ಲೇ ಇಂತಹ ಪರಿಸ್ಥಿತಿ ಇದ್ದರೆ ಅವರಿಗೆ ಗುಣಮಟ್ಟದ ಶಿಕ್ಷಣ ಎಲ್ಲಿ ಸಿಗುತ್ತದೆ? ಆ ಮಕ್ಕಳು ಪಿಯುಸಿ, ಉನ್ನತ ಶಿಕ್ಷಣಕ್ಕೆ ಹೋಗುವುದು ಹೇಗೆ? ಹಾಗಾಗಿ ಸರ್ಕಾರ ಉ.ಕ. ಭಾಗದ 14 ಜಿಲ್ಲೆಗಳಲ್ಲಿ ಶಿಕ್ಷಣದ ಬಗ್ಗೆ, ಸಾಕ್ಷರತಾ ಪ್ರಮಾಣ ಹೆಚ್ಚಳಕ್ಕೆ ಹೆಚ್ಚಿನ ಗಮನ ಹರಿಸಬೇಕು ಎಂದರು.

ಹಣಮಂತಪ್ಪ ನಿರಾಣಿ ಮಾತನಾಡಿ, ಅಭಿವೃದ್ಧಿ ಕಾರ್ಯಗಳ ವಿಚಾರದಲ್ಲಿ ಉ.ಕ. ಭಾಗಕ್ಕೆ ಎಲ್ಲ ಸರ್ಕಾರಗಳಲ್ಲೂ ಅನ್ಯಾಯವಾಗುತ್ತಲೇ ಬಂದಿದೆ. ಕೃಷಿ, ನೀರಾವರಿ, ಶಿಕ್ಷಣ, ಪ್ರವಾಸೋದ್ಯಮ, ವೈದ್ಯಕೀಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಈ ಭಾಗ ಹಿಂದುಳಿದಿರುವುದರಿಂದ ಈ ಪ್ರಾದೇಶಿಕ ಅಸಮಾನತೆ ಸರಿದೂಗಿಸಲು ಶಾಶ್ವತ ಪರಿಹಾರಗಳನ್ನು ಘೋಷಿಸಿಬೇಕು. ಈ ನಿಟ್ಟಿನಲ್ಲಿ ಉ.ಕ. ಭಾಗದ ನದಿಗಳ ಜೋಡಣೆ, ನ್ಯಾಯಾಧಿಕರಣಗಳ ತೀರ್ಪಿನಿಂದ ಲಭಿಸಿರುವ ರಾಜ್ಯದ ನೀರಿನ ಪಾಲನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಅಗತ್ಯ ನೀರಾವರಿ ಯೋಜನೆಗಳನ್ನು ಪ್ರಕಟಿಸಬೇಕು ಎಂದು ಆಗ್ರಹಿಸಿದರು.

ರಾಜ್‌ಕುಮಾರ್ ಅಪಹರಣ ವೇಳೆ ವೀರಪ್ಪನ್ ಹಿಡಿಯಲು ನಡೆದಿತ್ತು ಸಿದ್ಧತೆ: ಶಂಕರ್ ಬಿದರಿ

ಜೆಡಿಎಸ್‌ ಸದಸ್ಯ ತಿಪ್ಪೇಸ್ವಾಮಿ ಅವರು, ಕೃಷ್ಣಾ ಮೇಲ್ದಂಡೆ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆ ಇಂದಿಗೂ ನೆನೆಗುದಿಗೆ ಬಿದ್ದಿದೆ. ಸರ್ಕಾರಗಳು ಪ್ರತೀ ವರ್ಷ ಅಗತ್ಯ ಅನುದಾನ ನೀಡುವಲ್ಲಿ ವಿಫಲವಾಗಿವೆ. ಯೋಜನೆಗೆ ಬೇಕಿರುವ 1 ಲಕ್ಷ ಕೋಟಿ ರು. ಅಂದಾಜು ವೆಚ್ಚದಲ್ಲಿ ಇದುವರೆಗೆ 6000 ಕೋಟಿ ರು. ಮಾತ್ರ ನೀಡಲಾಗಿದೆ. ಇದರಿಂದ ಯೋಜನೆಗೆ ಗುರುತಿಸಿರುವ 1.33 ಲಕ್ಷ ಎಕರೆಯಲ್ಲಿ ಇದುವರೆಗೆ 27 ಸಾವಿರ ಎಕರೆಯಷ್ಟೇ ಸ್ವಾಧೀನಪಡಿಸಿಕೊಳ್ಳಲಾಗಿದೆ. ಸರ್ಕಾರ ಇನ್ನಾದರೂ ಉ.ಕ. ಭಾಗದ ನೀರಾವರಿ ಯೋಜನೆಗಳಿಗೆ ವಿಶೇಷ ಅನುದಾನ ನೀಡಿ ಯೋಜನೆಗೆ ವೇಗ ನೀಡಬೇಕು ಎಂದು ಒತ್ತಾಯಿಸಿದರು.

click me!