ವೈಷ್ಣೋದೇವಿಗೆ ‘ವಂದೇ ಭಾರತ’; ಇದು ನವರಾತ್ರಿ ಉಡುಗೊರೆ

By Web Desk  |  First Published Oct 4, 2019, 8:14 AM IST

ದೆಹಲಿಯಿಂದ ಜಮ್ಮು- ಕಾಶ್ಮೀರದ ಕಟ್ರಾದಲ್ಲಿರುವ ಪುಣ್ಯ ಕ್ಷೇತ್ರ ವೈಷ್ಣೋದೇವಿಗೆ ಸಂಪರ್ಕ ಕಲ್ಪಿಸುವ ವಂದೇ ಭಾರತ ಎಕ್ಸ್‌ಪ್ರೆಸ್‌ ರೈಲಿಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಗುರುವಾರ ಚಾಲನೆ ನೀಡಿದ್ದಾರೆ. ದೆಹಲಿ- ವಾರಾಣಸಿ ಬಳಿಕ ವಂದೇ ಭಾರತ ಎಕ್ಸ್‌ಪ್ರೆಸ್‌ ರೈಲಿನ 2ನೇ ಮಾರ್ಗ ಇದಾಗಿದೆ. 


ನವದೆಹಲಿ (ಅ. 04):  ದೆಹಲಿಯಿಂದ ಜಮ್ಮು- ಕಾಶ್ಮೀರದ ಕಟ್ರಾದಲ್ಲಿರುವ ಪುಣ್ಯ ಕ್ಷೇತ್ರ ವೈಷ್ಣೋದೇವಿಗೆ ಸಂಪರ್ಕ ಕಲ್ಪಿಸುವ ವಂದೇ ಭಾರತ ಎಕ್ಸ್‌ಪ್ರೆಸ್‌ ರೈಲಿಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಗುರುವಾರ ಚಾಲನೆ ನೀಡಿದ್ದಾರೆ. ದೆಹಲಿ- ವಾರಾಣಸಿ ಬಳಿಕ ವಂದೇ ಭಾರತ ಎಕ್ಸ್‌ಪ್ರೆಸ್‌ ರೈಲಿನ 2 ನೇ ಮಾರ್ಗ ಇದಾಗಿದೆ.

ಭಾರತ- ಪಾಕ್ ಯುದ್ಧ ಆದರೆ 12 ಕೋಟಿ ಸಾವು!

Tap to resize

Latest Videos

ನವದೆಹಲಿ- ಕಟ್ರಾ ಎಕ್ಸ್‌ಪ್ರೆಸ್‌ ರೈಲು ದೆಹಲಿ ರೈಲ್ವೆ ನಿಲ್ದಾಣದಿಂದ ಮುಂಜಾನೆ 6 ಗಂಟೆಗೆ ಹೊರಡಲಿದ್ದು, ಮಧ್ಯಾಹ್ನ 2 ಗಂಟೆಗೆ ಕಟ್ರಾ ತಲುಪಲಿದೆ. ಕಟ್ರಾದಿಂದ ಮಧ್ಯಾಹ್ನ 3 ಗಂಟೆಗೆ ಹೊರಟು, ರಾತ್ರಿ 11 ಗಂಟೆಗೆ ದೆಹಲಿಯನ್ನು ತಲುಪಲಿದೆ. ಸಾಮಾನ್ಯ ರೈಲಿಗೆ ಹೋಲಿಸಿದರೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣ ಸಮಯ 12 ಗಂಟೆಯಿಂದ 8 ಗಂಟೆಗೆ ಇಳಿಕೆಯಾಗಲಿದೆ.

ಮಂಗಳವಾರವನ್ನು ಹೊರತುಪಡಿಸಿ ವಾರದ ಎಲ್ಲಾ ದಿನ ಈ ರೈಲು ಸಂಚರಿಸಲಿದೆ. ಇದೇ ವೇಳೆ ದೆಹಲಿ- ಕಟ್ರಾ ವಂದೇ ಭಾರತ ಎಕ್ಸ್‌ಪ್ರೆಸ್‌ ರೈಲು ವೈಷ್ಣೋದೇವಿ ಭಕ್ತರಿಗೆ ನವರಾತ್ರಿ ಉಡುಗೊರೆ ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ.

ಸ್ವಚ್ಛ ರೈಲು ನಿಲ್ದಾಣ: ಮೊದಲ 3 ಸ್ಥಾನ ರಾಜಸ್ಥಾನಕ್ಕೆ, ಕರ್ನಾಟಕಕ್ಕೆ ಸ್ಥಾನವಿಲ್ಲ!

ರೈಲಿನ ವಿಶೇಷತೆಗಳು

- ಸ್ವದೇಶಿ ನಿರ್ಮಿತ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಗಂಟೆಗೆ ಗರಿಷ್ಠ 130 ಕಿ.ಮೀ. ವೇಗದಲ್ಲಿ ಸಂಚರಿಸಬಲ್ಲದು

- ವೈಫೈ, ಬಯೋ ವ್ಯಾಕ್ಯೂಮ್‌ ಟಾಯ್ಲೆಟ್‌, ಸಿಸಿ ಟೀವಿ, ಜಿಪಿಎಸ್‌ ಆಧಾರಿತ ಮಾಹಿತಿ ವ್ಯವಸ್ಥೆ ಇದೆ

- ರೈಲು ಎ.ಸಿ. 16 ಬೋಗಿಗಳನ್ನು ಹೊಂದಿದ್ದು, 1,100 ಜನರು ಏಕಕಾಲಕ್ಕೆ ಪ್ರಯಾಣಿಸಬಹುದಾಗಿದೆ

- ಇದರಲ್ಲಿರುವ ಕುರ್ಚಿಗಳೂ 180 ಡಿಗ್ರಿಯಷ್ಟುತಿರುಗಲಿದ್ದು, ಪ್ರಯಾಣಿಕರು ಪ್ರಕೃತಿ ಸೌಂದರ್ಯ ಸವಿಯಬಹುದು.

 

click me!