ಚೈಲ್ಡ್ ಲಾಕ್‌ ನಿಷ್ಕ್ರಿಯ ಮಾಡದ ಟ್ಯಾಕ್ಸಿಗಳ ಮೇಲೆ RTO ಅಧಿಕಾರಿಗಳ ದಾಳಿ!

By Web DeskFirst Published Jan 12, 2019, 7:29 PM IST
Highlights

ಚೈಲ್ಡ್ ಲಾಕ್ ನಿಷ್ಕ್ರೀಯಗೊಳಿಸಿದ ಖಾಸಗಿ ಟ್ಯಾಕ್ಸಿಗಳ ಮೇಲೆ  RTO ಅಧಿಕಾರಿಗಳು ದಾಳಿ ಮಾಡಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದ ಹಿನ್ನಲೆಯಲ್ಲಿ ಆಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ಕುರಿತ ಹೆಚ್ಚಿನ ವಿವರ ಇಲ್ಲಿದೆ.
 

ಬಳ್ಳಾರಿ(ಜ.12): ಮಹಿಳೆ ಹಾಗೂ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಟ್ಯಾಕ್ಸಿ  ವಾಹನಗಳಲ್ಲಿ ಚೈಲ್ಡ್ ಲಾಕ್ ತೆಗೆಯಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಜನವರಿ 16 ರಿಂದ ಹೊಸ ನಿಯಮ ಜಾರಿಗೆ ಬರಲಿದೆ. ಕೋರ್ಟ್ ಆದೇಶದ ಹಿನ್ನಲೆಯಲ್ಲಿ ಟ್ಯಾಕ್ಸಿಗಳ ಮೇಲೆ ಬಳ್ಳಾರಿ RTO ಅಧಿಕಾರಿಗಳು ದಾಳಿ ಮಾಡಿದ್ದಾರೆ. 

ಇದನ್ನೂ ಓದಿ: ರೀ ಮಿನಿಸ್ಟರ್ ಜವಾಬ್ ಕೊಡ್ರಿ: ರೈತನ ಧ್ವನಿಗೆ ತಬ್ಬಿಬ್ಬಾದ ಸಚಿವ!

ಪರಿಶೀಲನೆ ವೇಳೆ ನಿಷ್ಕ್ರೀಯಗೊಳಿಸದ ಖಾಸಗಿ ಟ್ಯಾಕ್ಸಿಗಳ ಚೈಲ್ಡ್ ಲಾಕ್ ಸಿಸ್ಟಮ್‌ನ್ನ ಪೊಲೀಸರು ತೆಗೆದು ಹಾಕಿದ್ದಾರೆ. ಬಳ್ಳಾರಿಯ ಸಾಯಿ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ಹಾಗೂ ಇತರ ಸಂಸ್ಥೆಗಳಿಗೆ ಸೇರಿದ ಟ್ಯಾಕ್ಸಿಗಳ ಮೇಲೆ RTO ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. 

ಇದನ್ನೂ ಓದಿ:ಝಾಲಾಚ ಪಾಯಿಜೇ ಎಂದವರಿಗೆ ಶ್.....ಎಂದ ಪವಾರ್!

ಮಕ್ಕಳ ಸುರಕ್ಷತೆಗಾಗಿ ಚೈಲ್ಡ್ ಲಾಕ್ ಸಿಸ್ಟಮ್‌ಗಳನ್ನ ಆಟೋಮೊಬೈಲ್ ಕಂಪೆನಿಗಳು ಅಳವಡಿಸಿತ್ತು. ಆದರೆ ಇದೀಗ ಚೈಲ್ಡ್ ಲಾಕ್ ಮಾಡಿ ಮಹಿಳಾ ಪ್ರಯಾಣಿಕರ ಮೇಲೆ ದೌರ್ಜನ್ಯ ಮಾಡಲಾಗುತ್ತಿದೆ ಅನ್ನೋ ದೂರುಗಳು ಹೆಚ್ಚಾಗಿದೆ. ಹೀಗಾಗಿ ಸುಪ್ರೀಂ ಕೋರ್ಟ ಚೈಲ್ಡ್ ಲಾಕ್ ನಿಷ್ಕ್ರೀಯಗೊಳಿಸಲು ಆದೇಶಿಸಿದೆ.

click me!