ಸೈನಿಕರಿಂದ ಉಗ್ರರ ಮೇಲಿನ ದಾಳಿಗೆ ಡಿಕೆಶಿ ಭಿನ್ನ ಹೇಳಿಕೆ

By Web Desk  |  First Published Feb 26, 2019, 4:11 PM IST

ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಭಾರತೀಯ ಸೇನೆಯ ಮೇಲೆ ಉಗ್ರರು ನಡೆಸಿದ್ದ ದಾಳಿಗೆ ಭಾರತ ಪ್ರತಿದಾಳಿ ನಡೆಸಿ ಸೇಡು ತೀರಿಸಿಕೊಂಡಿದೆ. ಗಡಿ ನಿಯಂತ್ರಣ ರೇಖೆ ದಾಟಿದ ವಾಯುಸೇನೆಯು ಉಗ್ರರ ಕ್ಯಾಂಪ್ ಗಳನ್ನು ಧ್ವಂಸಗೊಳಿಸಿದೆ. ಸೇನಾ ಕಾರ್ಯಾಚರಣೆಗೆ ಇಡೀ ದೇಶಾದ್ಯಂತ ಸಂಭ್ರಮಾಚರಣೆ ವ್ಯಕ್ತವಾಗುತ್ತಿದೆ.


ಬಳ್ಳಾರಿ(ಫೆ. 26)  ಪಾಕ್ ಉಗ್ರರ ನೆಲೆ ಮೇಲೆ ಭಾರತೀಯ ವಾಯು ಸೇನೆ ಮಾಡಿದ ದಾಳಿಗೆ ಸಚಿವ ಡಿ.ಕೆ.ಶಿವಕುಮಾರ್ ಭಿನ್ನ ಹೇಳಿಕೆ ನೀಡಿದ್ದಾರೆ.

ಏನೇ ಇದ್ದರೂ ದೇಶದ ಐಕ್ಯತೆ ಮುಖ್ಯ.  ಮಾಧ್ಯಮಗಳಲ್ಲಿ ದಾಳಿ ಬಗ್ಗೆ ಭಿನ್ನ ವಿಶ್ಲೇಷಣೆ ಬರುತ್ತಿದೆ. ದೇಶ ಒಗ್ಗಟ್ಟಿನಲ್ಲಿ ಇರಬೇಕಿದೆ.  ಚುನಾವಣೆ ಹೊತ್ತಿನಲ್ಲಿ ನಾನೇನು ಮಾತನಾಡೋದಿಲ್ಲ. ಈ ಸಂಬಂಧ ನಮ್ಮ ನಾಯಕರು ಹೇಳ್ತಾರೆ. ಸೈನಿಕರ ಪರ ನಾವು ಇರುತ್ತೇವೆ ಎಂದಿದ್ದಾರೆ.

Tap to resize

Latest Videos

ದಾಳಿಯಾಯ್ತು, ಮುಂದೇನು?: ರಕ್ಷಣಾ ತಜ್ಞ ನಿತಿನ್ ಗೋಖಲೆ EXCLUSIVE ಸಂದರ್ಶನ!

ಸೈನಿಕರ ರಕ್ಷಣೆ ಮುಖ್ಯ. ರಾಜಕಾರಣದ ಮಾತು ಈಗ ಬೇಡ. ದಾಳಿ ಸರಿಯೋ ತಪ್ಪೋ ಅದರ ಬಗ್ಗೆ ಈಗ ಮಾತನಾಡೋದು ಸರಿಯಲ್ಲ.  ಮಾತನಾಡಿದರೆ ಬೇರೆಯದೇ ಅರ್ಥ ನೀಡುತ್ತದೆ ಎಂದಿದ್ದಾರೆ.

ಪಾಕ್ ಮೇಲೆ ಬಾಂಬ್ ದಾಳಿ: ಸೆಹ್ವಾಗ್ ಟ್ವೀಟ್ ಅದ್ಭುತ!

click me!