ಸಿದ್ದರಾಮಯ್ಯ ಬಾಯಲ್ಲಿ ರಾಜಕರಾಣದಿಂದ ನಿವೃತ್ತಿ ಮಾತು! ಕಾರಣ ಯಾರು?

By Web Desk  |  First Published Jan 17, 2019, 5:08 PM IST

ಒಂದು ಕಡೆ ರಾಜ್ಯ ರಾಜಕಾರಣದಲ್ಲಿ ಕ್ಷಣಕ್ಕೊಂದು ಬೆಳವಣಿಗೆ ನಡೆಯುತ್ತಿದ್ದರೆ ಅತ್ತ ಮಾಜಿ ಸಿಎಂ ಸಿದ್ದರಾಮಯ್ಯ ರಾಜಕಾರಣದಿಂದ ನಿವೃತ್ತಿ ಆಗಲಿದ್ದಾರೆಯೇ? ಎಂಬ ಅನುಮಾನ ಸಹ ವ್ಯಕ್ತವಾಗಿದೆ. ಕಾರ್ಯಕರ್ತರ ಸಭೆಯಲ್ಲಿ ಅವರು ಹೇಳಿದ ಮಾತೇ ಇದಕ್ಕೆ ಕಾರಣ..


ಬಾಗಲಕೋಟೆ(ಜ.17)   ಕಾರ್ಯಕರ್ತರ ಮಾತಿಗೆ ರಾಜಕೀಯ ನಿವೃತ್ತಿ ಸುಳಿವನ್ನು ಮಾಜಿ ಸಿಎಂ ಸಿದ್ದರಾಮಯ್ಯ ನೀಡಿದ್ರಾ? ಎನ್ನುವ ಪ್ರಶ್ನೆ ಮೂಡಿದೆ. ಕೆರೂರಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ,  ನೀವೇ ಮುಖ್ಯಮಂತ್ರಿ ಆಗಿ ಎಂದು ಕಾರ್ಯಕರ್ತರೊಬ್ಬರು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ,  ಐದು ವರ್ಷ ನನ್ನನ್ನು  ಎಂಎಲ್ಎ ಎಂದು ಆಯ್ಕೆ ಮಾಡಿದ್ದೀರಿ. ಮುಂದೆ ಎಲೆಕ್ಷನ್ ನಿಲ್ತಿನೋ ಇಲ್ವೋ ಗೊತ್ತಿಲ್ಲ. ಈಗ ನನಗೆ 72 ವಯಸ್ಸಾಗಿದೆ. ಸರ್ಕಾರ ಮುಗಿಯುವುದರೊಳಗೆ  ನನಗೆ  75 ವರ್ಷವಾಗುತ್ತದೆ. 75 ವಯಸ್ಸಾದವರು  ಮನೆ ಸೇರಿಕೊಳ್ಳಬೇಕು ಎಂದು ಹೇಳಿದರು.

"

Tap to resize

Latest Videos

ಈಗ ಯಡಿಯೂರಪ್ಪನ ಬಗ್ಗೆ ಮಾತನಾಡುವದಿಲ್ಲ. ನನಗೆ ಐದು ವರ್ಷ ಎಂಎಲ್ ಎ ಆಗೋಕೆ ಸೀಲು ಒತ್ತಿದ್ದೀರಿ. ಐದು ವರ್ಷದಲ್ಲಿ  ಎಷ್ಟು ಸಾಧ್ಯ ಆಗುತ್ತೇ ಅಷ್ಟು ನಿಮ್ಮ ಋಣ ತೀರಿಸುವ ಕೆಲಸ ಮಾಡ್ತೀನಿ. ಮೈತ್ರಿ ಸರ್ಕಾರವಿದೆ. ಸಮನ್ವಯ ಸಮಿತಿ ಅಧ್ಯಕ್ಷ ನಿದ್ದೇನೆ. ಮತ್ತೊಂದು ಲಾಭ ಎಂದರೆ ಜೆಡಿಎಸ್ ಸಚಿವರು ಸಹ ನನ್ನ ಮಾತು ಕೇಳುತ್ತಾರೆ. ಕೆಲಸ ಮಾಡಿಕೊಡುತ್ತಾರೆ ಎಂದು ಹೇಳಿದರು.

ಕೊನೆಘಳಿಗೆಯಲ್ಲಿ ಅತೃಪ್ತ ಶಾಸಕರಿಗೆ ಸಿದ್ದರಾಮಯ್ಯ ಶಾಕ್!ಮಾಡುತ್ತೇನೆ. 

ಚಾಡಿ ಹೇಳುವ ಗಿರಾಕಿ ಮಾತು ಕೇಳಬೇಡಿ. ಅವರು  ಒಳ್ಳೆಯ ಕೆಲಸ ಮಾಡೋದಿಲ್ಲ. ಕ್ಷೇತ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಐದು ನೂರು ಕೋಟಿ ನೀರಾವರಿ ಯೋಜನೆ ಜಾರಿಗೆ ಚಿಂತನೆ ನಡೆದಿದೆ. ಮುಂದಿನ ಬಜೆಟ್ ನಲ್ಲಿ ಸೇರಿಸುವ ಪ್ರಯತ್ನ ಮಾಡ್ತೀನಿ ಎಂದರು.

ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತನಾಡುತ್ತೇನೆ. ಸಿದ್ದರಾಮಯ್ಯ ಮಾಜಿ ಸಿಎಂ ಎಂದು ಜನ  ಅಭಿವೃದ್ಧಿಗೆ ಬಹಳ ನಿರೀಕ್ಷೆ ಇಟ್ಟುಕೊಂಡಿರ್ತಾರೆ. ನನ್ನಿಂದ ಸಾಧ್ಯವಿರೋದೆಲ್ಲವನ್ನು ಮಾಡ್ತೀನಿ. ನನ್ನಿಂದ ಎಷ್ಟು ಸಾಧ್ಯವೋ ಅಷ್ಟು ಬದಾಮಿ ಕ್ಷೇತ್ರ ಅಭಿವೃದ್ಧಿ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಮುಂಬೈಯಲ್ಲಿರೋ ಅತೃಪ್ತ ಶಾಸಕರ ಕ್ಯಾಂಪ್‌ನಲ್ಲಿ ಈ ವ್ಯಕ್ತಿ??!!

ನಾನು ಮುಖ್ಯಮಂತ್ರಿ ಆಗಿದ್ದಾಗ ಬಹಳಷ್ಟು ಯೋಜನೆ ಜಾರಿಗೆ ತಂದಿದ್ದೇನೆ. ಅವೆಲ್ಲವೂ   ಮೈತ್ರಿ ಸರ್ಕಾರದಲ್ಲಿ ಮುಂದುವರಿಯುತ್ತಿದೆ.  ಹೇಗಾದರೂ ಮಾಡಿ ಸಮ್ಮಿಶ್ರ ಸರ್ಕಾರ ಕಿತ್ತು ಹಾಕೋಕೆ ಪ್ರಯತ್ನ ಮಾಡುತ್ತಿದ್ದಾರೆ.  ಇದನ್ನು ಬಿಟ್ಟು ವಿರೋಧ ಪಕ್ಷದಲ್ಲಿ  ಐದು ವರ್ಷ ಕುಳಿತು ಕೊಳ್ಳಿ ಎಂದು ಬಿಜೆಪಿಗೆ ಪರೋಕ್ಷ ಟಾಂಗ್ ನೀಡಿದರು. ಜನರ ತೀರ್ಪು ಬಿಟ್ಟು ಶಾಸಕರಿಗೆ ಆಮೀಷ ತೋರಿಸಿ ಅಧಿಕಾರ ಪಡೆಯುವ ಪ್ರಯತ್ನ ಮಾಡಬಾರದು ಎಂದು ಹೇಳಿದರು.

click me!