Fact check: ಇದು ತೆಲಂಗಾಣ ಅತ್ಯಾಚಾರ ಆರೋಪಿಗಳ ಎನ್‌ಕೌಂಟರ್‌ ಫೋಟೋವೇ?

By Kannadaprabha News  |  First Published Dec 9, 2019, 10:19 AM IST

ತೆಲಂಗಾಣದ ಪಶುವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳು ಹೈದರಾಬಾದ್‌ ಪೊಲೀಸರ ಎನ್‌ಕೌಂಟರ್‌ನಲ್ಲಿ ಹತ್ಯೆಯಾಗಿದ್ದಾರೆ. ಸದ್ಯ ಹತ್ಯೆಯಾಗಿ ಬಿದ್ದಿರುವ ಆರೋಪಿಗಳು ಎಂದು ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ? 


ತೆಲಂಗಾಣದ ಪಶುವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳು ಹೈದರಾಬಾದ್‌ ಪೊಲೀಸರ ಎನ್‌ಕೌಂಟರ್‌ನಲ್ಲಿ ಹತ್ಯೆಯಾಗಿದ್ದಾರೆ. ಸದ್ಯ ಹತ್ಯೆಯಾಗಿ ಬಿದ್ದಿರುವ ಆರೋಪಿಗಳು ಎಂದು ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

Fact Check| ಈ ಹಕ್ಕಿಯ ವಿಡಿಯೋ ಸೆರೆ ಹಿಡಿಯಲು 62 ದಿನ ಬೇಕಾಯ್ತಂತೆ!

Tap to resize

Latest Videos

ಹಲವು ಮಾಧ್ಯಮಗಳೂ ಈ ಫೋಟೋವನ್ನು ಪ್ರಕಟಿಸಿ ವರದಿ ಮಾಡಿವೆ. ಫೋಟೋದಲ್ಲಿ ಮೂರು ಹೆಣಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ದೃಶ್ಯ ಮತ್ತು ಪೊಲೀಸರು ಅದನ್ನು ಮಹಜರು ಮಾಡಿಕೊಳ್ಳುತ್ತಿರುವ ದೃಶ್ಯವಿದೆ. ಈ ಫೋಟೋವನ್ನು ಹಲವರು ಫೇಸ್‌ಬುಕ್‌, ಟ್ವೀಟರ್‌ನಲ್ಲಿ ಪೋಸ್ಟ್‌ ಮಾಡಿ ‘ಅತ್ಯಾಚಾರ ಮಾಡಿದ್ದ ಕೀಚರನ್ನು ಎನ್‌ಕೌಂಟರ್‌ನಲ್ಲಿ ಕೊಂದ ಹೈದರಾಬಾದ್‌ ಪೊಲೀಸರಿಗೆ ಅಭಿನಂದನೆಗಳು’ ಎಂದು ಬರೆದುಕೊಂಡಿದ್ದಾರೆ. ಆದರೆ ನಿಜಕ್ಕೂ ಈ ಪೋಟೋ ಹೈದರಾಬಾದ್‌ನ ಪಶು ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳದ್ದೇ ಎಂದು ಬೂಮ್‌ ಲೈವ್‌ ಸುದ್ದಿ ಸಂಸ್ಥೆ ಪರಿಶೀಲಿಸಿದಾಗ ವೈರಲ್‌ ಆಗಿರುವ ಫೋಟೋ 4 ವರ್ಷ ಹಳೆಯದು ಎಂದು ತಿಳಿದಿಬಂದಿದೆ.

 

There can be no Human Rights for rapists , traitors and terrorists.😌
Shame on people talking about Human Rights today.🖕🖕 pic.twitter.com/i27bqKY5YQ

— Adarsh singh🇮🇳 (@AdarshRo45)

2015 ರಲ್ಲಿ ಆಂಧ್ರಪ್ರದೇಶದ ಪೊಲೀಸರು ರಕ್ತ ಚಂದನ ಮರಗಳನ್ನು ಅಕ್ರಮವಾಗಿ ಕಡಿದು ಸಾಗಿಸುತ್ತಿದ್ದ 20 ಜನ ಮರ ಕಡಿಯುವವರನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ್ದರು. ಈ ಪ್ರಕರಣಕ್ಕೂ ಹೈದರಾಬಾದ್‌ ಅತ್ಯಾಚಾರ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ. ರಿವರ್ಸ್‌ ಇಮೇಜ್‌ನಲ್ಲಿ ಹುಡುಕಿದರೆ 2015 ಏಪ್ರಿಲ್‌ 7ರಂದು ‘ದಿ ಹಿಂದು’ ಕೂಡ ಈ ಕುರಿತು ವರದಿ ಮಾಡಿದೆ.

ಅದರಲ್ಲಿ ರಕ್ತ ಚಂದನವನ್ನು ಕಡಿದು ಅಕ್ರಮವಾಗಿ ಸಾಗಿಸುತ್ತಿದ್ದ ತಮಿಳುನಾಡು ಮೂಲದ 20 ಜನ ಮರ ಕಡಿಯುವವರ ಪೊಲೀಸರು ಎನ್‌ಕೌಂಟರ್‌ ಮಾಡಿದ್ದಾರೆ ಎಂದು ಹೇಳಲಾಗಿದೆ. ಇದೇ ಚಿತ್ರವನ್ನು ಇದೀಗ ತೆಲಂಗಾಣ ಅತ್ಯಾಚಾರ ಆರೋಪಿಗಳ ಎನ್‌ಕೌಂಟರ್‌ನದ್ದು ಎಂದು ಸೋಷಿಯಲ್‌ ಮೀಡಿಯಾಗಳಲ್ಲಿ ಸುಳ್ಳು ಸುದ್ದಿ ಹರಡಲಾಗುತ್ತಿದೆ.

- ವೈರಲ್ ಚೆಕ್ 

click me!