'ಮೋದಿ ಬಗ್ಗೆ ಉದ್ಧಟತನದ ಹೇಳಿಕೆ ನೀಡ್ತಿದ್ರೆ ನಾಲಿಗೆ ಸುಡಬೇಕಾಗುತ್ತೆ'

By Web Desk  |  First Published Nov 10, 2018, 9:13 PM IST

'ಮೋದಿ ಬಗ್ಗೆ ಉದ್ಧಟತನದ ಹೇಳಿಕೆ ನೀಡ್ತಿದ್ರೆ ನಾಲಿಗೆ ಸುಡಬೇಕಾಗುತ್ತೆ' ಎಂದು ಯಾರು? ಯಾರಿಗೆ ಹೇಳಿದ್ರು? ಇಲ್ಲಿದೆ ನೋಡಿ


ಕಲಬುರಗಿ, [ನ.10]: ಪ್ರಧಾನಿ ನರೇಂದ್ರ ಮೋದಿ ಅವರನ್ನ ಜೀವಂತವಾಗಿ ಸುಡುವ ಸಮಯ ಬಂದಿದೆ ಎನ್ನುವ ಕಾಂಗ್ರೆಸ್ ಮಾಜಿ ಸಚಿವ  ಟಿ.ಬಿ. ಜಯಚಂದ್ರ ಹೇಳಿಕೆಗೆ ಬಸನಗೌಡ ಪಾಟೀಲ್​ ಯತ್ನಾಳ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಲಬುರಗಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​,  ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಮಾಜಿ ಸಚಿವ ಟಿ.ಬಿ. ಜಯಚಂದ್ರ ಅವರು ಉದ್ಧಟತನದ ಹೇಳಿಕೆಗಳನ್ನು ನೀಡಿದರೆ ಅವರ ನಾಲಿಗೆಯನ್ನು ಸುಡಬೇಕಾಗುತ್ತೆ ಎಂದು ತಿರುಗೇಟು ನೀಡಿದರು.

Tap to resize

Latest Videos

ಮೋದಿ ಸುಡುವ ಕಾಲ ಬಂದಿದೆ: ಟಿ. ಬಿ ಜಯಚಂದ್ರ

ಕಾಂಗ್ರೆಸಿಗರಿಗೆ ಬುದ್ಧಿಭ್ರಮಣೆ ಆದಂತಿದೆ. ದೇಶದ ಅತ್ಯುನ್ನತ ಹುದ್ದೆಯಲ್ಲಿರುವ ವ್ಯಕ್ತಿ ಬಗ್ಗೆ ಮಾತನಾಡುವಾಗ ಎಚ್ಚರ ಇರಬೇಕು. ಹೇಳಿಕೆ ನೀಡುವಾಗ ನಾಲಿಗೆ ಮೇಲೆ ಹಿಡಿತವಿರಬೇಕು. ಹೇಗೆ ಬೇಕಾದರೂ ಮಾತನಾಡಿದರೆ ನಡೆಯುತ್ತೆ ಎಂದು ಭಾವಿಸಿದ್ದರೆ ಅವರಿಗಿಂತ ಮೂರ್ಖ ಮತ್ತೊಬ್ಬರಿಲ್ಲದಂತೆ. ಜಯಚಂದ್ರಗೆ ಬುದ್ಧಿ ಸರಿಯಿಲ್ಲ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಹರಿಹಾಯ್ದರು.

ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ಚೋರ್ ಅಂತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆರಿಸಿ ಬಂದು ದೇಶದ ಪ್ರಧಾನಿಯಾಗಿ ಜಗತ್ತಿನ ಗೌರವಕ್ಕೆ ಪಾತ್ರರಾಗಿರುವ ಮೋದಿ ಬಗ್ಗೆ ಕೈ ನಾಯಕರು ಬಾಯಿಗೆ ಬಂದಂತೆ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಎಚ್ಚರಿಸಿದರು.

ಮುಸ್ಲಿಂ ಮತಬ್ಯಾಂಕ್ ಸಲುವಾಗಿ ಟಿಪ್ಪು ಜಯಂತಿ ಆಚರಿಸುವ ಬದಲಿಗೆ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅಥವಾ ಪಾಕಿಸ್ತಾನದ ವಿರುದ್ಧ ಹೋರಾಡಿದ್ದ, ಶೌರ್ಯಚಕ್ರ ಪುರಸ್ಕೃತ ಅಪ್ಪಟ ದೇಶಭಕ್ತ ಅಬ್ದುಲ್ ಹಮೀದ್ ಜಯಂತಿ ಆಚರಿಸಲಿ ಎಂದು ಸಲಹೆ ನೀಡಿದರು.

click me!