'ನನಗೆ ಶಾಪ ಹಾಕಿದ್ರೆ ಯಾವ ಬದಲಾವಣೆಯೂ ಆಗಲ್ಲ..' ದರ್ಶನ್‌ ಪುತ್ರ ವಿನೀಶ್‌ ಪೋಸ್ಟ್‌!

By Santosh Naik  |  First Published Jun 13, 2024, 7:53 PM IST


Vinish Darshan On Darshan Case ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪೊಲೀಸ್‌ ಕಸ್ಟಡಿಯಲ್ಲಿ ನಟ ದರ್ಶನ್‌ ವಿಚಾರಣೆ ಎದುರಿಸುತ್ತಿದ್ದಾರೆ. ಇನ್ನೊಂದೆಡೆ ಸೋಶಿಯಲ್‌ ಮೀಡಿಯಾದಲ್ಲಿ ದರ್ಶನ್‌ ವಿರೋಧವಾಗಿ ಸಾಕಷ್ಟು ಕಾಮೆಂಟ್‌ಗಳು ಬರುತ್ತಿವೆ.



ಬೆಂಗಳೂರು (ಜೂನ್‌ 13): ಸ್ಯಾಂಡಲ್‌ವುಡ್‌ ನಟ ದರ್ಶನ್‌ ಕೊಲೆ ಕೇಸ್‌ನಲ್ಲಿ ಪೊಲೀಸ್‌ ಕಸ್ಟಡಿಯಲ್ಲಿದ್ದಾರೆ. ಇನ್ನೊಂದೆಡೆ ದರ್ಶನ್‌ ವಿಚಾರವಾಗಿ ಒಂದು ನಿರ್ಧಾರ ತೆಗೆದುಕೊಳ್ಳಲು ಫಿಲ್ಮ್‌ ಚೇಂಬರ್‌, ನಿರ್ಮಾಪಕರ ಸಂಘ ಒದ್ದಾಡುತ್ತದೆ. ಆದರೆ, ನಟನ ರಾಕ್ಷಸೀ ಕೃತ್ಯದಿಂದ ಒಬ್ಬ ಸಾಮಾನ್ಯ ವ್ಯಕ್ತಿ ಜೀವ ಕಳೆದುಕೊಂಡಿದ್ದಾನೆ. ಈ ಪ್ರಕರಣದ ವಿಚಾರವಾಗಿ ದರ್ಶನ್‌ ಅವರ ಮೊದಲ ಪತ್ನಿ ವಿಜಯಲಕ್ಷ್ಮೀ ಕೂಡ ಈವರೆಗೂ ಯಾವುದೇ ಕಾಮೆಂಟ್‌ ಮಾಡಿಲ್ಲ. ಆದರೆ, ತಮ್ಮ ಸೋಶಿಯಲ್‌ ಅಕೌಂಟ್‌ನಲ್ಲಿ ದರ್ಶನ್‌ ಜೊತೆಗಿದ್ದ ಫೋಟೋವನ್ನು ಅವರು ಡಿಲೀಟ್‌ ಮಾಡಿದ್ದಾರೆ. ಇನ್ನು ತಮ್ಮ ಸೋಶಿಯಲ್‌ ಮೀಡಿಯಾ ಅಕೌಂಟ್‌ಅನ್ನೇ ಅವರು ಡಿಆಕ್ಟಿವೇಟ್‌ ಮಾಡಿದ್ದಾರೆ ಎನ್ನುವ ಸುದ್ದಿ ಇದೆ. ಇದರ ನಡುವೆ ದರ್ಶನ್‌ ಹಾಗೂ ವಿಜಯಲಕ್ಷ್ಮೀ ಅವರ ಪುತ್ರ 15 ವರ್ಷದ ವಿನೇಶ್‌ ಸೋಶಿಯಲ್‌ ಮೀಡಿಯಾದಲ್ಲಿ ಮಾಡಿರುವ ಪೋಸ್ಟ್‌ ಗಮನಸೆಳೆದಿದೆ. ಅವರಿಗೆ ಬರುತ್ತಿರುವ ಸೋಶಿಯಲ್‌ ಮೀಡಿಯಾ ಒತ್ತಡ ಹಾಗೂ ಕೆಟ್ಟ ಕಾಮೆಂಟ್‌ಗಳ ಬಗ್ಗೆ ಅವರು ಬರೆದುಕೊಂಡಿದ್ದಾರೆ.

ಆರೋಪಿಗಳಿಗೆ ಠಾಣೆಯಲ್ಲೇ ಸ್ಮೋಕಿಂಗ್‌ ಜೋನ್‌? 'ನ್ಯಾಯದ್ ಮನೆಗೀಗ್ಲೂ ಎರಡೆರಡಂತೆ ಬಾಗ್ಲು..' ಮಾತು ಸಾಬೀತಾಯ್ತು!

Tap to resize

Latest Videos

ಅಪ್ಪ ದರ್ಶನ್‌ ಅರೆಸ್ಟ್‌ಗೆ ವಿನೀಶ್ ಇನ್ಸ್‌ಟಾಗ್ರಾಮ್‌ ಸ್ಟೋರಿ ಹಂಚಿಕೊಂಡಿದ್ದಾರೆ.' ನನ್ನ ತಂದೆ ಬಗ್ಗೆ ಕೆಟ್ಟ ಕಾಮೆಂಟ್ಸ್ ಮತ್ತು ಅಸಭ್ಯ ಭಾಷೆಯಲ್ಲಿ ನಿಂದನೆ ಮಾಡುತ್ತಿರುವರಿಗೆ ಧನ್ಯವಾದಗಳು. ನನಗೆ 15 ವರ್ಷ, ನನಗೂ ಮನಸಿದೆ, ಈ ಕಷ್ಟದ ಸಮಯದಲ್ಲಿ ನನ್ನ ತಾಯಿ ಮತ್ತು ತಂದೆಗೆ ನಿಮ್ಮ ಬೆಂಬಲದ ಅಗತ್ಯವಿದೆ. ನನಗೆ ಶಾಪ ಹಾಕಿದ್ರೆ ಯಾವ ಬದಲಾವಣೆಯೂ ಆಗೋದಿಲ್ಲ' ಎಂದು ವಿನೇಶ್‌ ಬರೆದುಕೊಂಡಿದ್ದಾರೆ. ಎಲ್ಲರಿಗೂ ಥ್ಯಾಂಕ್ಸ್‌ ಎಂದು ಕೆಳಗೆ ಇಮೋಜಿಯನ್ನೂ ಕೂಡ ಹಂಚಿಕೊಂಡಿದ್ದಾರೆ.

'ದರ್ಶನ್‌ ನಂಬಿಕೊಂಡು ಹಣ ಹಾಕಿದ್ದಾರೆ..' ಬ್ಯಾನ್‌ ಬಗ್ಗೆ ಮಾತನಾಡಿದ ನಿರ್ಮಾಪಕರ ಸಂಘದ ಅಧ್ಯಕ್ಷ!

ತನ್ನ ಗೆಳತಿ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್‌ ಮಾಡುತ್ತಿದ್ದ ಎನ್ನುವ ಒಂದೇ ಒಂದು ಕಾರಣಕ್ಕೆ ಚಿತ್ರದುರ್ಗದಿಂದ ರೇಣುಕಾಸ್ವಾಮಿ ಎನ್ನುವ ವ್ಯಕ್ತಿಯನ್ನು ಕಿಡ್ನಾಪ್‌ ಮಾಡಿಕೊಂಡು ಬಂದಿದ್ದ ದರ್ಶನ್‌ & ಗ್ಯಾಂಗ್‌, ಆತನಿಗೆ ಪಟ್ಟಣಗೆರೆ ಬಳಿಯ ಶೆಡ್‌ನಲ್ಲಿ ಚಿತ್ರಹಿಂಸೆ ನೀಡಿ ಕೊಂದಿದ್ದರು. ಪವಿತ್ರಾಗೌಡಗೆ ಮರ್ಮಾಂಗದ ಫೋಟೋ ಕಳಿಸಿದ್ದ ಎನ್ನುವ ಕಾರಣಕ್ಕೆ ಆತನ ಮರ್ಮಾಂಗದ ಮೇಲೆ ಅತ್ಯಂತ ಅಮಾನವೀಯ ರೀತಿಯಲ್ಲ ಹಲ್ಲೆ ಮಾಡಲಾಗಿತ್ತು ಎನ್ನುವುದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಗೊತ್ತಾಗಿದೆ.

ಈ ಕೇಸ್‌ನಲ್ಲಿ ದರ್ಶನ್‌ ಸೇರಿದಂತೆ 13 ಜನ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದ್ದು, ಎಲ್ಲರನ್ನೂ ಆರು ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ನೀಡಲಾಗಿದೆ. ಆ ಬಳಿಕ ದರ್ಶನ್‌ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಸೋಶಿಯಲ್‌ ಮೀಡಿಯಾದಲ್ಲಿ ದರ್ಶನ್‌ ಮಾಡಿರುವ ತಪ್ಪಿಗೆ ಶಿಕ್ಷೆಯಾಗಲೇಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ. ಸಹಜವಾಗಿ ಇನ್ಸ್‌ಟಾಗ್ರಾಮ್‌ನಲ್ಲಿ ಆಕ್ಟೀವ್‌ ಆಗಿರುವ ವಿನೀಶ್‌ ದರ್ಶನ್‌ಗೂ ಕೆಟ್ಟ ಕೆಟ್ಟ ಕಾಮೆಂಟ್‌ಗಳು ಹಾಗೂ ಬೆದರಿಕೆಗಳು ಬಂದಿವೆ. ಶಾಪ ಹಾಕುವಂಥ ಮೆಸೇಜ್‌ಗಳೂ ಬಂದಿವೆ ಎನ್ನುವುದನ್ನು ಸ್ವತಃ ವಿನೀಶ್‌ ಬರೆದುಕೊಂಡಿದ್ದಾರೆ. ಇದರ ಬೆನ್ನಲ್ಲಿಯೇ ಅವರು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ವಿಜಯಲಕ್ಷ್ಮೀ ಜೊತೆ ಧರ್ಶನ್‌ ಗಲಾಟೆ ಮಾಡಿಕೊಂಡಿದ್ದರೂ, ಪುತ್ರನ ಬಗ್ಗೆ ಮಾತ್ರ ಪ್ರೇಮ ಹೊಂದಿದ್ದರು.

click me!