Breaking: ಕ್ಯಾನ್ಸರ್‌ನಿಂದ ನಟಿ ಪೂನಮ್‌ ಪಾಂಡೆ ನಿಧನ!

By Santosh Naik  |  First Published Feb 2, 2024, 11:50 AM IST

ಗರ್ಭಕಂಠದ ಕ್ಯಾನ್ಸರ್‌ ವಿರುದ್ಧ ಹೋರಾಟ ನಡೆಸಿದ್ದ ನಟಿ ಪೂನಮ್‌ ಪಾಂಡೆ ನಿಧನರಾಗಿದ್ದಾರೆ. ಅವರಿಗೆ 32 ವರ್ಷ ವಯಸ್ಸಾಗಿತ್ತು. ಈ ಸುದ್ದಿಯನ್ನು ಅವರ ಮ್ಯಾನೇಜರ್‌ ಕೂಡ ಖಚಿತಪಡಿಸಿದ್ದಾರೆ.


ಮುಂಬೈ (ಫೆ.2): ಹಾಟ್‌ ನಟಿ ಪೂನಂ ಪಾಂಡೆ ಅವರು 32 ನೇ ವಯಸ್ಸಿನಲ್ಲಿ ಗರ್ಭಕಂಠದ ಕ್ಯಾನ್ಸರ್‌ನಿಂದ ಸಾವನನ್ನಪ್ಪಿದ್ದಾರೆ. ಅವರ ಮ್ಯಾನೇಜರ್‌ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ. ಪೂನಮ್‌ ಪಾಂಡೆ ಅವರ ಮ್ಯಾನೇಜರ್‌ ಹಾಗೂ ಅವರ ಟೀಮ್‌ ಈ ಕುರಿತಾಗಿ ಇನ್ಸ್‌ಟಾಗ್ರಾಮ್‌ನಲ್ಲಿ ಅಧಿಕೃತವಾಗಿ ಪೋಸ್ಟ್‌ ಮಾಡಿದ್ದಾರೆ. ಅಧಿಕೃತ ಇನ್ಸ್‌ಟಾಗ್ರಾಮ್‌ ಪೇಜ್‌ನಲ್ಲಿ ಬರೆದುಕೊಂಡಿರುವ ಟೀಮ್‌, 'ಇಂದಿನ ಬೆಳಗ್ಗೆ ನಮಗೆಲ್ಲರಿಗೂ ಕಠಿಣ ದಿವಾಗಿತ್ತು. ಗರ್ಭಕಂಠದ ಕ್ಯಾನ್ಸರ್‌ನ ಕಾರಣದಿಂದಾಗಿ ಇಂದು ನಾವು ಪೂನಮ್‌ ಅವರನ್ನು ಕಳೆದುಕೊಂಡಿದ್ದೇವೆ ಎಂದು ತಿಳಿಸಲು ದುಃಖವಾಗುತ್ತಿದೆ. ಆಕೆಯೊಂದಿಗೆ ಸಂಪರ್ಕಕ್ಕೆ ಬಂದ ಪ್ರತಿಯೊಂದು ಜೀವಗಳಿಗೂ ಶುದ್ಧ ಪ್ರತಿ ಹಾಗೂ ದಯೆಯಿಂದ ಭೇಟಿಯಾಗುತ್ತಿದ್ದರು. ಈ ದುಃಖದ ಸಮಯದಲ್ಲಿ ನಾವು ನಮ್ಮ ಖಾಸಗಿತನಕ್ಕಾಗಿ ವಿನಂತಿ ಮಾಡುತ್ತಿದ್ದೇವೆ. ಆಕೆಯೊಂದಿಗೆ ಹಂಚಿಕೊಂಡ ಎಲ್ಲಾ ಕ್ಷಣಗಳನ್ನು ನಾವು ನೆನಪಿಸಿಕೊಳ್ಳುತ್ತಿದ್ದೇವೆ' ಎಂದು ಬರೆದುಕೊಂಡಿದೆ. ಫೆಬ್ರವರಿ 1 ರಂದು ಅವರ ನಿಧನವಾಗಿದೆ ಎಂದು ಅಧಿಕೃತವಾಗಿ ತಿಳಿಸಿದ್ದಾರೆ.

ಕಾನ್ಪುರದಲ್ಲಿ ನಿಧನ: ಪೂನಮ್‌ ಪಾಂಡೆ ಅವರು ತಮ್ಮ ತವರು ಕಾನ್ಪುರದ ಮನೆಯಲ್ಲಿ ನಿಧನರಾಗಿದ್ದಾರೆ. ಅಂತ್ಯ ಸಂಸ್ಕಾರ ಕುರಿತಾದ ಇತರ ಮಾಹಿತಿಗಳು ಇನ್ನಷ್ಟೇ ಬರಬೇಕಿದೆ. ತಮ್ಮ ವಿವಾದಿತ ಮಾತುಗಳಿಂದಲೇ ಪ್ರಖ್ಯಾತಿ ಪಡೆದಿದ್ದ ಪೂನಮ್‌ ಪಾಂಡೆ, ಸೋಶಿಯಲ್‌ ಮೀಡಿಯಾದಲ್ಲಿ ದೊಡ್ಡ ಮಟ್ಟದ ಫಾಲೋವರ್‌ಗಳನ್ನು ಹೊಂದಿದ್ದರು.
2013ರಲ್ಲಿ ನಶಾ ಚಿತ್ರದ ಮೂಲಕ ಬಾಲಿವುಡ್‌ಗೆ ಲಗ್ಗೆ ಇಟ್ಟಿದ್ದ ಪೂನಮ್‌ ಪಾಂಡೆ ಅವರ ನಿಧನ ಅಭಿಮಾನಿಗಳಲ್ಲಿ ಆಘಾತಕ್ಕೆ ಕಾರಣವಾಗಿದೆ.

Tap to resize

Latest Videos

39 ವರ್ಷ ಹಿರಿಯ ಶಕ್ತಿ ಕಪೂರ್​ ಜತೆ ಪೂನಂ ಪಾಂಡೆಯ ಮಳೆಯಲ್ಲಿನ ಫಸ್ಟ್​ ನೈಟ್​ ಸೀನ್: ಬೆಚ್ಚಿಬಿದ್ದ ಪ್ರೇಕ್ಷಕರು!

ಪೂನಮ್‌ ಪಾಂಡೆ ಅವರ ಇನ್ಸ್‌ಟಾಗ್ರಾಮ್‌ ಪೋಸ್ಟ್‌ನಲ್ಲಿ ಇದನ್ನು ಪ್ರಕಟಿಸಲಾಗಿತ್ತು. ಇದರ ಬೆನ್ನಲ್ಲಿಯೇ ಹೆಚ್ಚಿನ ಅಭಿಮಾನಿಗಳು ಗರ್ಭಕಂಠದ ಕ್ಯಾನ್ಸರ್‌ ಕುರಿತಾಗಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅವರ ಅಕೌಂಟ್‌ಅನ್ನು ಹ್ಯಾಕ್‌ ಮಾಡಿ ಈ ರೀತಿ ಮಾಡಿರಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಅವರ ಟೀಮ್‌ನಲ್ಲಿರುವ ಪಾರುಲ್‌ ಚಾವ್ಲಾ, ಪೂನಮ್‌ ಪಾಂಡೆ ನಿಧನವನ್ನು ಖಚಿತಪಡಿಸಿದ್ದಾರೆ. ಕೆಲ ಸಮಯದಿಂದ ಹಿಂದೆ ಅವರಿಗೆ ಗರ್ಭಕಂಠದ ಕ್ಯಾನ್ಸರ್‌ ಇದೆ ಎನ್ನುವುದು ಗೊತ್ತಾಗಿತ್ತು. ಆದರೆ, ಅದಾಗಲೇ ಕಾಲ ಮೀರಿ ಹೋಗಿತ್ತು. ಅವರು ಉತ್ತರ ಪ್ರದೇಶ ತಮ್ಮ ಮನೆಯಲ್ಲಿಯೇ ಇದ್ದರು. ಅಂತ್ಯಸಂಸ್ಕಾರ ಕೂಡ ಅಲ್ಲಿಯೇ ನಡೆಯುವ ಸಾಧ್ಯತೆ ಇದೆ ಎಂದಿದ್ದಾರೆ.

ವಿಶ್ವಕಪ್‌ ಗೆದ್ದರೆ ಬೆತ್ತಲಾಗುತ್ತೇನೆಂದು ಹೇಳಿದ್ದ ಪೂನಂ ಪಾಂಡೆ ಎಲ್ಲೂ ಸುದ್ದಿಯಲ್ಲಿಲ್ಲ ಯಾಕೆ?

ಕೊನೆಯ ಬಾರಿಗೆ ಲಾಕ್‌ ಅಪ್‌ ರಿಯಾಲಿಟಿ ಶೋನಲ್ಲಿ ಅವರು ಕಾಣಿಸಿಕೊಂಡಿದ್ದರು. ಆ ಬಳಿಕ ಅವರು ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ ಪೋಸ್ಟ್‌ಗಳ ಮೂಲಕವೇ ಹೆಚ್ಚಾಗಿ ಸುದ್ದಿಯಲ್ಲಿರುತ್ತಿದ್ದರು. ಇತ್ತೀಚೆಗೆ ಬಾಯ್ಕಾಟ್‌ ಮಾಲ್ಡೀವ್ಸ್‌ ಟ್ರೆಂಡ್‌ ವೇಳೆ ತಮ್ಮ ಮುಂದಿನ ಶೂಟ್‌ಅನ್ನು ಲಕ್ಷದ್ವೀಪದಲ್ಲಿಯೇ ಮಾಡುವುದಾಗಿ ಅವರು ತಿಳಿಸಿದ್ದರು. ತಮ್ಮ ಬೋಲ್ಡ್‌ ಫೋಟೋಗಳು ಹಾಗೂ ಹೇಳಿಕೆಗಳಿಂದಲೇ ಸುದ್ದಿಯಾಗುತ್ತಿದ್ದ ಪೂನಮ್‌ ಪಾಂಡೆ ಅವರದರು ಬಹುಮುಖಿ ವ್ಯಕ್ತಿತ್ವ, ಮಾಡೆಲ್‌ ಹಾಗೂ ನಟಿಯಾಗಿ ಕೆಲ ಕಾಲ ರಂಜಿಸಿದ್ದರು.
 

Model, Actress and Influencer dies due to cervical cancer. The news has been shared on her official instagram. pic.twitter.com/0rHZ5IwAXH

— Film window (@Filmwindow1)
click me!