ಚಿತ್ರ ವಿಮರ್ಶೆ: ಜ್ಞಾನಂ

By Web Desk  |  First Published Oct 12, 2019, 10:27 AM IST

ಮಕ್ಕಳಿಲ್ಲದ ಇಬ್ಬರು ಬೇರೆ ಬೇರೆ ದಂಪತಿಗಳಿಗೆ ಒಂದೇ ದಿನ, ಒಂದೇ ಸಮಯದಲ್ಲಿ ಎರಡು ಮುದ್ದಾದ ಗಂಡು ಮಕ್ಕಳು ಹುಟ್ಟುತ್ತವೆ. ಇವರಲ್ಲಿ ಒಬ್ಬ ಬುದ್ಧಿವಂತ, ಮತ್ತೊಬ್ಬ ಬುದ್ಧಮಾಂದ್ಯ. ಈ
ಎರಡು ಕುಟುಂಬಗಳು, ಇಬ್ಬರು ಮಕ್ಕಳ ಮೇಲೆಯೇ ಕತೆ ಸಾಗುತ್ತದೆ.


ಕೆಂಡಪ್ರದಿ

ನಿರ್ದೇಶಕ ವರದರಾಜ್ ವೆಂಕಟಸ್ವಾಮಿ ಅವರ ತಲೆಯಲ್ಲಿ ಸಮಾಜಕ್ಕೆ ಒಂದು ಸಂದೇಶ ನೀಡಬೇಕು. ಒಳ್ಳೆಯ ಮಕ್ಕಳ ಚಿತ್ರವನ್ನು ಮಾಡಬೇಕು ಎನ್ನುವ ತವಕ ಇದ್ದರೂ ಅದನ್ನು ಪರದೆಯ ಮೇಲೆ ಹೇಗೆ ತೋರಿಸಬೇಕು. ಪ್ರೇಕ್ಷಕನ ಎದೆಯಾಳಕ್ಕೆ ತಮ್ಮ ಚಿಂತನೆಯನ್ನು ಹೇಗೆ ತಲುಪಿಸಬೇಕು ಎನ್ನುವ ಜ್ಞಾನ ತುಂಬಾ ಎನ್ನುವಷ್ಟು ಕಡಿಮೆ ಇದೆ.

Tap to resize

Latest Videos

ಇದೇ ಕಾರಣಕ್ಕೆ ‘ಜ್ಞಾನಂ’ ಎಲ್ಲಿಯೂ ಗಟ್ಟಿಯಾಗಿ ನಿಲ್ಲುವುದಿಲ್ಲ. ಪ್ರಾರಂಭದಿಂದಲೂ ಆಮೆಗತಿಯಲ್ಲಿ ಶುರುವಾಗುವ ಚಿತ್ರ ಕಡೆಯವರೆಗೂ ಎಲ್ಲಿಗೂ ಜಿಗಿಯುವ ಪ್ರಯತ್ನ  ಮಾಡದೇ ಪ್ರೇಕ್ಷಕನ ಮೆದುಳಿಗೆ ಕೈ ಹಾಕುವಂತಹ ಕೆಲಸ ಮಾಡುತ್ತದೆ. ಕೆಲವಷ್ಟು ಪಾತ್ರಗಳು ಯಾಕೆ ಬಂದವು, ಅವುಗಳ ಕಾರ್ಯ ಕಾರಣ ಸಂಬಂಧವೇನು ಎನ್ನುವ ಪ್ರಶ್ನೆಗಳಿಗೆ ನಿರ್ದೇಶಕರು ಸಶಕ್ತವಾದ ಉತ್ತರ ಒದಗಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ.

ಚಿತ್ರ ವಿಮರ್ಶೆ: ಎಲ್ಲಿದ್ದೆ ಇಲ್ಲಿ ತನಕ

ಇದರೊಂದಿಗೆ ಸಾಧಾರಣ ಮಟ್ಟದ ನಟನೆ, ಕ್ಯಾಮರಾ ವರ್ಕ್, ಸಂಗೀತ, ಹಿನ್ನೆಲೆ ಸಂಗೀತ ಎಲ್ಲವೂ ನಾ ಮುಂದು ತಾ ಮುಂದು ಎನ್ನುವಂತೆ ಚಿತ್ರದ ಓಟಕ್ಕೆ ತಡೆಯೊಡ್ಡಿವೆ. ಇದರ ನಡುವಲ್ಲಿ ಮಾ. ಲೋಹಿತ್, ಮಾ. ಧ್ಯಾನ್ ನಟನೆಯಲ್ಲಿ ಒಂದಷ್ಟು ಭರವಸೆ ಮೂಡಿಸಿರುವುದು ಸಂತೋಷ. ಎರಡು ಭಿನ್ನ ಪರಿಸರದಲ್ಲಿ ಸಾಗುವ ಕತೆ ಕಡೆಯಲ್ಲಿ ಹೇಗೆ ಇದ್ದಕ್ಕಿದ್ದ ಹಾಗೆ ಒಟ್ಟಾಗುತ್ತದೆ, ಪುಟ್ಟ ಪುಟ್ಟ ಮಕ್ಕಳ ಮನಸ್ಸಿನಲ್ಲಿ ಭಯೋತ್ಪಾದನೆಯಂತಹ ದೊಡ್ಡ ವಿಚಾರ ಹೇಗೆ ಚಿಂತನೆ ಹುಟ್ಟಿಸುತ್ತದೆ, ಪ್ರಬುದ್ಧವಾದ ಭಾಷಣಗಳು ಅವರನ್ನು ತಟ್ಟುತ್ತವೆಯೇ ಎನ್ನುವ ಸಾಕಷ್ಟು ಅನುಮಾನಗಳು ನಮ್ಮೊಳಗೇ ಉಳಿದುಬಿಡುತ್ತವೆ.

ಚಿತ್ರ ವಿಮರ್ಶೆ: ಲುಂಗಿ

ಹೀಗೆ ಹುಡುಕುತ್ತಾ ಹೋದರೆ ಕೊರತೆಗಳು, ಚಿತ್ರದಲ್ಲಿನ ಯಡವಟ್ಟುಗಳ ಪಟ್ಟಿಯನ್ನು ಹೇಳುತ್ತಲೇ ಹೋಗಬಹುದಾದರೂ, ಮಕ್ಕಳ  ಬಾಲ್ಯ, ಅವರ ಚಿಂತನಾ ಕ್ರಮ, ಪೋಷಕರ ಮನಸ್ಥಿತಿ,  ಶಿಕ್ಷಣದ ಕ್ರಮ ಮೊದಲಾದವುಗಳ ಬಗ್ಗೆ ಸಣ್ಣ ಬೆಳಕೊಂದನ್ನು ನಿರ್ದೇಶಕರು ಚೆಲ್ಲಿದ್ದಾರೆ. ಜೊತೆಗೆ ಇಲ್ಲೊಂದು ಅತೀಂದ್ರಿಯದ ಟಚ್ ಇಟ್ಟಿದ್ದಾರೆ ಎನ್ನಿಸಿದರೂ ಅದಕ್ಕೆ ಸ್ಪಷ್ಟತೆ ಕಡೆಯವರೆಗೂ ಸಿಗುವುದಿಲ್ಲ.

click me!