ಕಂಕಣ ಭಾಗ್ಯವೇ ಕೂಡಿ ಬರುತ್ತಿಲ್ಲವೆಂದು ಯೋಚಿಸುತ್ತಿರುವವರಿಗೆ ಕೆಲವು ದೇವತೆಗಳನ್ನು ಪೂಜಿಸಬೇಕು. ಸುಖಾ ಸುಮ್ಮನೆ ತಲೆ ಕೆಡಿಸಿಕೊಳ್ಳುವ ಬದಲು, ನಿಮ್ಮ ಸಮಸ್ಯೆಯನ್ನು ದೇವರಿಗೇ ಬಿಟ್ಟು ಬಿಡಿ....
ಮಕ್ಕಳು ಮದುವೆ ವಯಸ್ಸು ಮೀರಿದರೆ ಪೋಷಕರಿಗೆ ಎಲ್ಲಿಲ್ಲದ ಟೆನ್ಷನ್. ಗ್ರಹ ಹಾಗೂ ನಕ್ಷತ್ರ ಕೂಡಿ ಬಂದರೆ, ಮಾತ್ರ ಕಂಕಣ ಭಾಗ್ಯ ಕೂಡಿ ಬರುತ್ತದೆ. ಕೆಲವೊಮ್ಮೆ ಇಷ್ಟಾರ್ಥ ದೇವರನ್ನು ಪೂಜಿಸಿದರೂ ಮದುವೆ ಬೇಗ ಆಗುತ್ತದೆ. ಯಾವ ದೇವರದು?
ಕಾಮದೇವ: ಕಾಮ ಎಂದರೆ ಪ್ರೀತಿ, ಅಸೆ, ಎಂದರ್ಥ. ದೇವ ಪದದ ಅರ್ಥ ದೈವೀಕ. ಕಾಮದೇವನನ್ನು ಗ್ರೀಕ್ ದೇವತೆ ಇರೋಜ್‌ಗೆ ಹೋಲಿಸುತ್ತಾರೆ. ಯುವ ಮತ್ತು ಸುಂದರವಾದ ಕಾಮದೇವ ಬ್ರಹ್ಮ ದೇವನ ಪುತ್ರ. ಈ ದೇವನನ್ನು ನೆನೆದರೆ ಪ್ರೀತಿ, ಮದುವೆ ಎಲ್ಲವೂ ಆಗುತ್ತದೆ.
ಕೃಷ್ಣ: ಪ್ರೀತಿ-ಪ್ರೇಮದ ಸಿಂಬಲ್ ಕೃಷ್ಣ. ವಿನೋದ ಪ್ರಿಯನೀತ. ಪ್ರೀತಿ ಮತ್ತು ಕಾಮ ಭಾವನೆಗಾಗಿ ಕೃಷ್ಣನನ್ನು ಆರಾಧಿಸುವುದು ಸೂಕ್ತ. ಯಾವ ಜೋಡಿ ಕೃಷ್ಣ ಮತ್ತು ರಾಧೆಯನ್ನು ಪೂಜಿಸುತ್ತಾರೋ, ಅವರಿಗೆ ಜೀವನದಲ್ಲಿ ಪ್ರೀತಿಯ ಕೊರತೆಯೇ ಕಾಡುವುದಿಲ್ಲ.
ರತಿ: ಪ್ರೀತಿ ಮತ್ತು ಕಾಮ ದೇವತೆ ರತಿ. ಈಕೆ ಪ್ರಜಾಪತಿ ದಕ್ಷನ ಮಗಳು. ಪ್ರೀತಿ ಮತ್ತು ಶಾರೀರಿಕ ಸಂಬಂಧ ವಿಷಯಗಳಿಗಾಗಿ ರತಿ ದೇವಿಯನ್ನು ಪ್ರಾರ್ಥಿಸಬೇಕು.
ಶಿವ : ಶಿವ -ಪಾರ್ವತಿಯ ಜೋಡಿಯೂ ಪ್ರೀತಿಯ ಸಂಕೇತ. ಮೊದಲ ಪ್ರೇಮ ವಿವಾಹವಾದ ಜೋಡಿ ಸಹ ಶಿವ -ಪಾರ್ವತಿಯರದ್ದು. ಮಹಾಶಿವರಾತ್ರಿಯ ದಿನ ಮತ್ತು ಸೋಮವಾರದ ದಿನ ಒಳ್ಳೆಯ ಗಂಡ ಸಿಗಲಿ ಎಂದು ಪ್ರಾರ್ಥಿಸಿ ಪೂಜಿಸಿದರೆ, ಇಷ್ಟಾರ್ಥ ನೆರವೇರುತ್ತದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Mar 8, 2019, 4:38 PM IST