ರೋಹಿತ್ ಶರ್ಮಾ ಎಲ್ಲರ ಅಚ್ಚುಮೆಚ್ಚಿನ ಆಟಗಾರ. ಟಿ20 ವಿಶ್ವಕಪ್ ನಲ್ಲಿ ದಾಖಲೆ ಬರೆದ ನಾಯಕ. 200 ಕೋಟಿ ಆಸ್ತಿ ಹೊಂದಿರುವ ಶರ್ಮಾಗೆ ಒಂದು ಕಾಲದಲ್ಲಿ ಶಾಲೆಗೆ ಹೋಗಲು ಹಣವಿರಲಿಲ್ಲ.
ಟಿ 20 ವಿಶ್ವಕಪ್ ಗೆಲ್ಲುವ ದಶಕದ ಕನಸು ನನಸಾಗಿದೆ (Indian Winning T20 world Cup has come true). ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಭಾರತೀಯರ ಈ ಆಸೆಯನ್ನು ಈಡೇರಿಸಿದ್ದಾರೆ. 2024ರ ಟಿ 20 ವಿಶ್ವಕಪ್ ಟ್ರೋಫಿ ಕೈನಲ್ಲಿ ಹಿಡಿದ ರೋಹಿತ್ ಶರ್ಮಾ, ಅಂತರಾಷ್ಟ್ರೀಯ ಟಿ20 ಕ್ರಿಕೆಟ್ ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಏಕದಿನ ಪಂದ್ಯ ಹಾಗೂ ಟೆಸ್ಟ್ ಕ್ರಿಕೆಟ್ ಮುಂದುವರೆಸುವ ರೋಹಿತ್ ಶರ್ಮಾ, ಸಾಧಕ ನಾಯಕರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಕಪಿಲ್ ದೇವ್ ಮತ್ತು ಎಂ.ಎಸ್. ಧೋನಿ ನಂತ್ರ, ಭಾರತಕ್ಕೆ ವಿಶ್ವಕಪ್ ತಂದುಕೊಟ್ಟ ನಾಯಕರ ಪಟ್ಟಿಯಲ್ಲಿ ರೋಹಿತ್ ಶರ್ಮಾ ಹೆಸರೂ ಸೇರಿದೆ.
ರೋಹಿತ್ ಶರ್ಮಾ (Rohit Sharma) ಇಷ್ಟೆತ್ತರಕ್ಕೆ ಬೆಳೆಯೋದು ಸುಲಭವಾಗಿರಲಿಲ್ಲ. ಅವರು ನಡೆದು ಬಂದ ಹಾದಿ ಸಾಕಷ್ಟು ಕಲ್ಲು – ಮುಳ್ಳಿನಿಂದ ಕೂಡಿದೆ. ರೋಹಿತ್ ಶರ್ಮಾ, ಬಡ ಕುಟುಂಬದಿಂದ ಬಂದವರು. ಎಲ್ಲರಿಂದಲೂ ಸಾಧಿಸಲು ಸಾಧ್ಯವಾಗದ ಈ ಸ್ಥಾನವನ್ನು ರೋಹಿತ್ ತಮ್ಮ ಪ್ರತಿಭೆ (Talent) ಯ ಆಧಾರದ ಮೇಲೆ ಸಾಧಿಸಿದ್ದಾರೆ. ರೋಹಿತ್ ಶರ್ಮಾ ಅವರಿಗೆ ಶಾಲೆಯ ಶುಲ್ಕ ನೀಡಲೂ ಹಣವಿರುತ್ತಿರಲಿಲ್ಲ. ಅವರ ಕುಟುಂಬ ತುಂಬಾ ಬಡತನದಲ್ಲಿತ್ತು. ಆದ್ರೆ ತಾನು ಮುಂದೆ ದೊಡ್ಡ ಕ್ರಿಕೆಟರ್ (Cricketer) ಆಗ್ಬೇಕು ಎಂಬ ಕನಸು ಮಾತ್ರ ರೋಹಿತ್ ಬೆನ್ನು ಹತ್ತಿತ್ತು.
undefined
ಭಾರತ ಟಿ20 ವಿಶ್ವಕಪ್ ಗೆದ್ದು 24 ಗಂಟೆ ಕಳೆದರೂ ನಿಲ್ಲದ ಸಂಭ್ರಮ..!
ರೋಹಿತ್ ತಂದೆ ಸಾರಿಗೆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ತಾಯಿ ಗೃಹಿಣಿಯಾಗಿದ್ದರು. ಕುಟುಂಬ ಆರ್ಥಿಕವಾಗಿ ಉತ್ತಮವಾಗಿರದ ಕಾರಣ ರೋಹಿತ್ ಶರ್ಮಾ ಅವರನ್ನು ಅವರ ಪಾಲಕರು ಬೊರಿವಲಿರುವ ಅಜ್ಜನ ಮನೆಗೆ ಕಳುಹಿಸಿದ್ದರು. ಅಲ್ಲಿ ರೋಹಿತ್ ಶರ್ಮಾ ಗಲ್ಲಿ ಕ್ರಿಕೆಟ್ ಶುರುವಾಯ್ತು.
ಹನ್ನೊಂದನೇ ವರ್ಷದಲ್ಲಿ ಕ್ಲಬ್ ಸೇರಿದ ರೋಹಿತ್ : ರೋಹಿತ್ ಶರ್ಮಾ ತಮ್ಮ ಹನ್ನೊಂದನೇ ವಯಸ್ಸಿನಲ್ಲಿ ಅಂದ್ರೆ ಆರನೇ ಕ್ಲಾಸಿನಲ್ಲಿರುವಾಗ ಬೇಸಿಗೆ ಶಿಬಿರದಲ್ಲಿ ಬೊರಿವಲಿ ( ಈಗಿನ ಮುಂಬೈ ಉಪನಗರ)ಯಲ್ಲಿರುವ ಸ್ಥಳೀಯ ಕ್ರಿಕೆಟ್ ಕ್ಲಬ್ ಸೇರಿದ್ದರು. ಅವರು ಆರಂಭದಲ್ಲಿ ಬ್ಯಾಟ್ಸ್ ಮೆನ್ ಆಗಿ ಅಭ್ಯಾಸ ಶುರು ಮಾಡಲಿಲ್ಲ. ಅವರು ಆಫ್ ಸ್ಪಿನ್ ಬೌಲರ್ ಆಗಿ ಆಟ ಆರಂಭಿಸಿದ್ದರು.
ಕೋಚ್ ದಿನೇಶ್ ಲಾಡ್ ರಿಂದ ಬದಲಾಯ್ತು ದಾರಿ : ರೋಹಿತ್ ಶರ್ಮಾ ಅದೃಷ್ಟ ಬದಲಿಸಿದ್ದು ಅವರ ಕೋಚ್ ದಿನೇಶ್ ಲಾಡ್ ಎನ್ನಬಹುದು. ಶಾಲೆಯ ಕೋಚ್ ದಿನೇಶ್ ಲಾಡ್, ರೋಹಿತ್ ಶರ್ಮಾ ಟೀಂ ಹಾಗೂ ಅವರ ಟೀಂ ಪಂದ್ಯವನ್ನು ವೀಕ್ಷಣೆ ಮಾಡಿದ್ದರು. ಈ ವೇಳೆ ರೋಹಿತ್ ಶರ್ಮಾ ಆಟದ ಮೇಲೆ ಅವರ ಗಮನ ಹರಿದಿತ್ತು. ರೋಹಿತ್ ಶರ್ಮಾರನ್ನು ತಮ್ಮ ಸ್ಕೂಲಿಗೆ ಸೇರಿಸುವಂತೆ ಅಜ್ಜನ ಬಳಿ ಕೇಳಿದ್ದರು. ಆದ್ರೆ ಅವರ ಬಳಿ ಹಣವಿರಲಿಲ್ಲ. ಆಗ ದಿನೇಶ್ ಲಾಡ್, ಮ್ಯಾನೇಜ್ಮೆಂಟ್ ಜೊತೆ ಮಾತನಾಡಿ ರೋಹಿತ್ ಶರ್ಮಾ, ಸ್ಕೂಲ್ ಪ್ರವೇಶ ಮಾಡುವಂತೆ ಮಾಡಿದ್ದರು. ಒಂದ್ವೇಳೆ ದಿನೇಶ್ ಲಾಡ್ ಅವರನ್ನು ಸ್ಕೂಲಿಗೆ ಸೇರಿಸದೆ ಹೋಗಿದ್ರೆ ಭಾರತಕ್ಕೆ ಇಂಥ ಅಧ್ಬುತ ಆಟಗಾರ ಸಿಗೋದು ಅನುಮಾನವಿತ್ತು.
ಸ್ಕೂಲ್ ಗೆ ದಾಖಲಾದ ರೋಹಿತ್ ಶರ್ಮಾ ಬಳಿ ಕ್ರಿಕೆಟ್ ಕಿಟ್ ತೆಗೆದುಕೊಳ್ಳಲು ಹಣವಿರಲಿಲ್ಲ. ಈ ಸಮಯದಲ್ಲಿ ಶರ್ಮಾ ಹಾಲು ಮಾರಾಟ ಮಾಡಿದ್ದರು. ಹಾಲು ಮಾರಾಟ ಮಾಡಿ ಬಂದ ಹಣವನ್ನು ಕ್ರಿಕೆಟ್ ಕಿಟ್ ಖರೀದಿಗೆ ಬಳಸಿದ್ದರು.
ಟ್ರೋಫಿ ಗೆದ್ದ ಟೀಂ ಇಂಡಿಯಾಗೆ ಬಿಸಿಸಿಐ ಗಿಫ್ಟ್, 125 ಕೋಟಿ ರೂ ಬಹುಮಾನ ಮೊತ್ತ ಘೋಷಿಸಿದ ಜಯ್ ಶಾ!
ಆರಂಭದಲ್ಲಿ 8 -9ನೇ ಕ್ರಮಾಂಕದಲ್ಲಿ ಆಡ್ತಿದ್ದ ರೋಹಿತ್ ಸಾಮರ್ಥ್ದಯ ನೋಡಿದ ಕೋಚ್, ಬ್ಯಾಟಿಂಗ್ ಪ್ರಾಕ್ಟೀಸ್ ಮಾಡುವಂತೆ ಹೇಳಿದ್ದರು. ಇಂಟರ್-ಸ್ಕೂಲ್ ಗೈಲ್ಸ್ ಶೀಲ್ಡ್ ಪಂದ್ಯಾವಳಿಯಲ್ಲಿ ಮೊದಲ ಬಾರಿ ರೋಹಿತ್, ಬ್ಯಾಟಿಂಗ್ ಶೈಲಿಯನ್ನು ಪ್ರದರ್ಶಿಸಿದ್ದರು. ಮೊದಲ ಪಂದ್ಯದಲ್ಲೇ 120 ರನ್ ಕಲೆ ಹಾಕಿದ್ದರು. ಅಲ್ಲಿಂದ ಅವರ ಕ್ರಿಕೆಟ್ ಜೀವನ ಬದಲಾಯ್ತು. ಆಗ ಹಾಲು ಮಾರಾಟ ಮಾಡಿದ್ದ ಆಟಗಾರನ ನಿವ್ವಳ ಆದಾಯ ಈಗ 200 ಕೋಟಿ. ಅದಕ್ಕೆ ಶರ್ಮಾ ಶ್ರಮವೇ ಕಾರಣ.