ಶ್ರೀಮಂತಿಗೆ ಇಲ್ಲದವರಿಗೆ ಅದನ್ನು ಪಡೆಯೋ ಚಿಂತೆಯಾದರೆ ಹಣ ಇದ್ದವರಿಗೆ ನೆಮ್ಮದಿ ಚಿಂತೆ. ಶಾಂತಿ, ಸಂತೋಷವನ್ನು ಅರಸಿ ಅವರು ಹೊರಡ್ತಾರೆ. ಮಲೇಷ್ಯಾದ ಕೋಟ್ಯಾಧಿಪತಿ ಮಗನೊಬ್ಬ ಇದಕ್ಕೆ ಉತ್ತಮ ನಿದರ್ಶನ.
ಕಣ್ಮುಂದೆ ನಡೆದ ಕೆಲವು ಘಟನೆಗಳನ್ನು ಕಂಡು ಬೇಸರಗೊಂಡು ತನ್ನ ರಾಜ್ಯ, ಸುಖ ಎಲ್ಲವನ್ನೂ ತೊರೆದು ಧರ್ಮದ ಹಾದಿಯಲ್ಲಿ ನಡೆಯತೊಡಗಿದವರು ಗೌತಮ ಬುದ್ಧ. ಅವರ ಕಥೆ ಬಹುತೇಕ ಎಲ್ಲರಿಗೂ ಗೊತ್ತು. ತಮ್ಮದೆಲ್ಲವನ್ನೂ ತೊರೆದು ಹೊರಟ ಬುದ್ಧ ಹೊಸ ಧರ್ಮ ಬೌದ್ಧ ಧರ್ಮವನ್ನು ಸ್ಥಾಪಿಸಿದರು. ಬೌದ್ಧ ಧರ್ಮವನ್ನು ಅನುರಿಸುವ ಮಂದಿ ನಮ್ಮಲ್ಲಿ ಅನೇಕರಿದ್ದಾರೆ. ಆದ್ರೆ ಬುದ್ಧನ ಅನುಯಾಯಿಯಾದ ವೆನ್ ಅಜಾನ್ ಸಿರಿಪ್ಯಾನೊ, ಬುದ್ಧನ ಕಥೆಯನ್ನು ನೆನಪಿಸುತ್ತಾರೆ.
ವೆನ್ ಅಜಾನ್ ಸಿರಿಪಾನ್ಯೋ (Ven Ajahn Siripanyo) ಅಂತಿಂತವರಲ್ಲ. ಈಗಿನ ಕಾಲದಲ್ಲಿ ಶ್ರೀಮಂತಿಕೆ, ಹಣದ ವ್ಯಾಮೋಹ ಪ್ರತಿಯೊಬ್ಬರಿಗೂ ಇದೆ. ಬಂದಷ್ಟು ಬರಲಿ ಎಂದು ಹಣ ದೋಚುವವರೇ ಹೆಚ್ಚು. ತಮ್ಮಲ್ಲಿರುವ ಹಣವನ್ನು ಬೇರೆಯವರಿಗೆ ಹಂಚುವವರ ಸಂಖ್ಯೆ ಬಹಳ ಕಡಿಮೆ. ಇನ್ನು ತಮ್ಮಲ್ಲಿರುವ ಆಸ್ತಿಯನ್ನು ಬಿಟ್ಟು, ಸನ್ಯಾಸತ್ವ ಸ್ವೀಕರಿಸೋದು ಸುಲಭದ ಮಾತಲ್ಲ. ಆದ್ರೆ ವೆನ್ ಅಜಾನ್ ಸಿರಿಪ್ಯಾನೊ ಎಲ್ಲರಿಗಿಂತ ಭಿನ್ನವಾಗಿ ನಿಲ್ಲುತ್ತಾರೆ. ತಮ್ಮ 18ನೇ ವಯಸ್ಸಿನಲ್ಲಿ 40 ಸಾವಿರ ಕೋಟಿ ಆಸ್ತಿಯನ್ನು ತ್ಯಜಿಸಿ ಬೌದ್ಧ (Buddhist) ಸನ್ಯಾಸಿಯಾಗಲು ನಿರ್ಧರಿಸಿದ್ದರು. ಅವರ ಕಥೆ ಇಲ್ಲಿದೆ.
WOMEN POWER: ಬಣ್ಣದ ಜಗತ್ತು ಬಿಟ್ಟು ಸ್ಮೃತಿ ಇರಾನಿ ರಾಜಕೀಯಕ್ಕೆ ಬಂದಿದ್ದೇಕೆ?
ಯಾರು ವೆನ್ ಅಜಾನ್ ಸಿರಿಪಾನ್ಯೋ ? : ಶ್ರೀಲಂಕಾ ತಮಿಳು ಮೂಲದ ಟೆಲಿಕಾಂ ಉದ್ಯಮಿ ಆನಂದ್ ಕೃಷ್ಣನ್ ಅವರ ಕುಟುಂಬಕ್ಕೆ ಸೇರಿದವರು ಸಿರಿಪ್ಯಾನೊ. ಇವರ ತಂದೆ ಆನಂದ್ ಕೃಷ್ಣನ್. ಕೃಷ್ಣನ್ ಮೆಗಾ ಬಿಲಿಯನ್ ಡಾಲರ್ ಟೆಲಿಕಾಂ ಸಾಮ್ರಾಜ್ಯವನ್ನು ಹೊಂದಿದ್ದಾರೆ. ಟೆಲಿಕಾಂ ಉದ್ಯಮ, ಮಾಧ್ಯಮ, ತೈಲ ಮತ್ತು ಅನಿಲ, ರಿಯಲ್ ಎಸ್ಟೇಟ್ ಮತ್ತು ಉಪಗ್ರಹಗಳ ವ್ಯವಹಾರವನ್ನು ಕೃಷ್ಣನ್ ಸಾಮ್ರಾಜ್ಯ ಒಳಗೊಂಡಿದೆ. ಕೃಷ್ಣನ್ ಕನಿಷ್ಠ 9 ದೊಡ್ಡ ಕಂಪನಿಗಳಲ್ಲಿ ಪಾಲನ್ನು ಹೊಂದಿದ್ದಾರೆ. ಮಲೇಷ್ಯಾದ ಮೂರನೇ ಶ್ರೀಮಂತ ವ್ಯಕ್ತಿ ಕೃಷ್ಣನ್. ಆನಂದ್ ಕೃಷ್ಣನ್ ಮ್ಯಾಕ್ಸಿಸ್ ಬೆರ್ಹಾಲ್ ಕಂಪನಿಯ ಮಾಲೀಕರಾಗಿದ್ದಾರೆ. ಈ ಕಂಪನಿಯು ಮಲೇಷಿಯಾದ ಟೆಲಿಕಾಂ ಕಂಪನಿಯಾಗಿದೆ. 2006 ರಲ್ಲಿ, ಮ್ಯಾಕ್ಸಿಸ್ ಶೇಕಡಾ 74ರಷ್ಟು ಪಾಲನ್ನು ಖರೀದಿಸುವ ಮೂಲಕ ಏರ್‌ಸೆಲ್‌ನ ಮಾಲೀಕತ್ವವನ್ನು ಪಡೆದುಕೊಂಡಿತು. ಇದು ಅನೇಕ ವಿವಾದಕ್ಕೂ ಸುದ್ದಿಯಾಗಿತ್ತು. 2018 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಪ್ರಾಯೋಜಿಸಿದ ಕೆಲವೇ ದಿನಗಳಲ್ಲಿ ಏರ್‌ಸೆಲ್ ದಿವಾಳಿಯಾಯ್ತು.
ಮೋಜಿಗಾಗಿ ಸನ್ಯಾಸತ್ವ ಸ್ವೀಕಾರ : ಆನಂದ ಕೃಷ್ಣನ್ ಬೌದ್ಧ ಧರ್ಮವನ್ನು ನಂಬುತ್ತಾರೆ. ಅವರ ಮಗ ಸಿರಿಪಾನ್ಯೋ 18 ನೇ ವಯಸ್ಸಿನಲ್ಲಿ ಬೌದ್ಧ ಸನ್ಯಾಸಿಯಾಗಲು ನಿರ್ಧರಿಸಿದರು. ಸಿರಿಪನ್ಯೋ ಸನ್ಯಾಸಿಯಾಗಲು ಕಾರಣಗಳು ಇನ್ನೂ ಬಹಿರಂಗವಾಗಿಲ್ಲ. ಏಕಾಂತದ ಸಮಯದಲ್ಲಿ ಮೋಜಿಗಾಗಿ ಸಿರಿಪಾನ್ಯೋ ಸನ್ಯಾಸಿಯ ಜೀವನವನ್ನು ಅಳವಡಿಸಿಕೊಂಡಿದ್ದಾರೆ ಎಂಬ ಮಾದ್ಯಮಗಳಲ್ಲಿ ವರದಿಯಾಗಿತ್ತು. ಅವರು ತಾತ್ಕಾಲಿಕವಾಗಿ ಸನ್ಯಾಸತ್ವ ಸ್ವೀಕರಿಸಿದ್ದರಂತೆ. ಆದ್ರೆ ಅದೇ ಜೀವನಶೈಲಿ ಶಾಶ್ವತವಾಗಿ ಬದಲಾಯ್ತು ಎನ್ನಲಾಗಿದೆ. ತಂದೆಯ ಬಳಿ ಕೋಟ್ಯಾಂತರ ರೂಪಾಯಿ ಆಸ್ತಿಯಿದ್ದರೂ ಸಿರಿಪಾನ್ಯೋ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದಾರೆ.
ಕಾಂಜೀವರಂ, ಬನಾರಸಿ ಅಷ್ಟೇ ಅಲ್ಲ ಭಾರತದ ಈ ಸಾಂಪ್ರದಾಯಿಕ ಸೀರೆಗಳೂ ಸಿಕ್ಕಾಪಟ್ಟೆ ಫೇಮಸ್
ಅರಣ್ಯದಲ್ಲಿ ವಾಸಿಸುತ್ತಾರೆ ಸಿರಿಪಾನ್ಯೋ : ವೆನ್ ಅಜಾನ್ ಸಿರಿಪಾನ್ಯೋ ಎರಡು ದಶಕಗಳಿಗೂ ಹೆಚ್ಚು ಕಾಲ ಅರಣ್ಯಗಳಲ್ಲಿ ಸನ್ಯಾಸಿಗಳ ಜೀವನವನ್ನು ಕಳೆಯುತ್ತಿದ್ದಾರೆ ಎನ್ನಲಾಗಿದೆ. ಅವರು ಥಾಯ್ಲೆಂಡ್‌ನ ಡಾಟಾವೊ ದಮ್ ಮಠದ ಮಠಾಧೀಶರೂ ಆಗಿದ್ದಾರೆ. ವೆನ್ ಅಜಾನ್ ಸಿರಿಪಾನ್ಯೋ, ತಾಯಿಯ ಕಡೆಯಿಂದ ಥಾಯ್ ರಾಜಮನೆತನದ ವಂಶಸ್ಥರೆಂದು ಜನರು ನಂಬುತ್ತಾರೆ. ವೆನ್ ಅಜಾನ್ ಸಿರಿಪಾನ್ಯೋ ಸನ್ಯಾಸಿ ಜೀವನಕ್ಕಿಂತ ಮೊದಲ ಜೀವನದ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಅವರ ಶಿಕ್ಷಣದ ಬಗ್ಗೆಯೂ ಸರಿಯಾಗಿ ಮಾಹಿತಿ ಇಲ್ಲ. ಬ್ರಿಟನ್‌ನಲ್ಲಿ ಇವರ ಇಬ್ಬರು ಸಹೋದರಿಯರಿದ್ದಾರೆ ಎನ್ನಲಾಗಿದೆ. ಅವರೊಂದಿಗೆ ಇವರು ಬಾಲ್ಯ ಕಳೆದಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ. ಸಿರಿಪಾನ್ಯೋ 8 ಭಾಷೆಗಳನ್ನು ಬಲ್ಲವರಾಗಿದ್ದಾರೆ.