ಪುಟ್ಟ ಬಿಕಿನಿ ತೊಟ್ಟು ಫೋಟೋ ಪೋಸ್ಟ್‌ ಮಾಡಿದ ಟೆನಿಸ್‌ ತಾರೆ ಬೌಚಾರ್ಡ್‌, ಲೇವಡಿ ಮಾಡಿದ ಸ್ಯಾಮ್‌ ಕ್ವೆರಿ!

By Santosh Naik  |  First Published Jul 4, 2024, 8:48 PM IST

ನನ್ನ ಸೆಕ್ಸಿ ಲುಕ್‌ಅನ್ನು ಜಗತ್ತಿಗೆ ತೋರಿಸಲು ನೆರವಾಗಿದ್ದೇ ಟೆನಿಸ್‌ ಎಂದು ಹೇಳಿದ್ದ ಕೆನಡಾದ ಪ್ರಖ್ಯಾತ ಟೆನಿಸ್‌ ತಾರೆ ಜೆನ್ನಿ ಬೌಚಾರ್ಡ್‌ ಈಗ ಇನ್ಸ್‌ಟಾಗ್ರಾಮ್‌ನಲ್ಲಿ ತಮ್ಮ ಬಿಕಿನಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
 


ಸಾಮಾನ್ಯವಾಗಿ ಸೋಶಿಯಲ್‌ ಮೀಡಿಯಾದಲ್ಲಿ ಕೊಲಾಬ್ರೇಷನ್‌ಗಳು ಸಾಮಾನ್ಯ. ಆದರೆ, ಕೆನಡಾದ ಟೆನಿಸ್‌ ತಾರೆ ಹಾಗೂ ವಿಂಬಲ್ಡನ್‌ನ ಮಾಜಿ ಫೈನಲಿಸ್ಟ್‌ ಜೆನ್ನಿ ಬೌಚಾರ್ಡ್‌ ಇತ್ತೀಚೆಗೆ ಸೋಶಿಯಲ್‌ ಮೀಡಿಯಾದಲ್ಲಿ ಅತೀ ಚಿಕ್ಕ ಬಿಕಿನಿ ತೊಟ್ಟು ಅವರು ಫೋಟೋ ಪೋಸ್ಟ್‌ ಮಾಡಿದ್ದರು. ಇದರಲ್ಲಿ ಅವರ ಮಾನ ಮುಚ್ಚಿದ್ದಕ್ಕಿಂತ ಹೊರಗಿದ್ದಿದ್ದೇ ಜಾಸ್ತಿ ಎನ್ನುವಂತಿತ್ತು. ಸೋಶಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಅಗ್ತಿದ್ದ ಈ ಫೋಟೋವನ್ನು ಅಮೆರಿಕದ ನಿವೃತ್ತ ಟೆನಿಸ್‌ ಪ್ಲೇಯರ್‌ ಸ್ಯಾಮ್‌ ಕ್ವೆರ್ರಿ ಕಾಪಿ ಮಾಡಿದ್ದಾರೆ. ಅದರೊಂದಿಗೆ ನಿಮ್ಮ ಸ್ಟೈಲ್‌ಅನ್ನು ನಾನು ಹೇಗೆ ಕಾಪಿ ಮಾಡಿದ್ದೇನೆ? ಎಂದು ಬೌಚಾರ್ಡ್‌ಗೆ ಪ್ರಶ್ನೆ ಮಾಡಿದ್ದಾರೆ. ಈ ವಾರದ ಆರಂಭದಲ್ಲಿ ಕೆನಡಾ ಮೂಲದ ಟೆನಿಸ್‌ ಹಾಗೂ ಪಿಕಲ್‌ಬಾಲ್‌ ಪ್ಲೇಯರ್‌ ಬೌಚಾರ್ಡ್‌ ಹೊಸ ಫೋಟೋಶೂಟ್‌ನ ಚಿತ್ರಗಳನ್ನು ಹಂಚಿಕೊಂಡಿದ್ದರು. ಇದರಲ್ಲಿ ಆಕೆ ಅತೀ ಪುಟ್ಟದಾದ ಗ್ರೀನ್‌ ಬಿಕಿನಿ ಧರಿಸಿ ಯಾರ್ಡ್‌ನಲ್ಲಿ ಕೆಲಸ ಮಾಡುವ ಚಿತ್ರವನ್ನು ಪೋಸ್ಟ್‌ ಮಾಡಿದ್ದರು.

ಭಾನುವಾರಗಳು ಯಾರ್ಡ್‌ನ ಕೆಲಸಕ್ಕೆ ಸೀಮಿತ ಎಂದು ಅವರು ಬರೆದುಕೊಂಡಿದ್ದರು. ಯಾರ್ಡ್‌ನಲ್ಲಿ ಬಿದ್ದ ಎಲೆಗಳನ್ನು ಗುಡಿಸಿದ್ದ ಆಕೆ, ನೀರಿನ ಪೈಪ್‌ನಿಂದ ಯಾರ್ಡ್‌ಅನ್ನು ಕ್ಲೀನ್‌ ಮಾಡಿದ್ದರು. ಯಾವುದೇ ಫೋಟೋದಲ್ಲಿಯೂ ಆಕೆಗೆ ಯಾರ್ಡ್‌ ಕ್ಲೀನ್‌ ಮಾಡೋದೇ ಮೂಲ ಉದ್ದೇಶವಾಗಿರಲಿಲ್ಲ ಅನ್ನೋದು ಫೋಟೋ ನೋಡಿದ ತಕ್ಷಣವೇ ಗೊತ್ತಾಗುವಂತಿತ್ತು. 

2022ರಲ್ಲಿ ಟೆನಿಸ್‌ನಿಂದ ನಿವೃತ್ತಿಯಾಗಿ ಈಗ ಪಿಕಲ್‌ಬಾಲ್‌ ಪ್ಲೇಯರ್‌ ಕೂಡ ಆಗಿರುವ ಸ್ಯಾಮ್‌ ಕ್ವೆರಿ ತಮ್ಮ ವರ್ಷನ್‌ನ ಬೌಚರ್ಡ್‌ ಬಿಕಿನಿ ಫೋಟೋಗಳನ್ನ ರಿಕ್ರಿಯೇಟ್‌ ಮಾಡಿದ್ದಾರೆ. ಬೌಚಾರ್ಡ್‌ ಯಾರ್ಡ್‌ನಲ್ಲಿ ಪೋಸ್‌ ನೀಡಿದ ರೀತಿಯಲ್ಲಿಯೇ ಅವರು ಪೋಸ್‌ ನೀಡಿದ್ದಾರೆ. ಎರಡೂ ಚಿತ್ರಗಳಿಗೂ ಇರುವ ಡಿಫರೆನ್ಸ್‌ ಏನೆಂದರೆ, ಸ್ಯಾಮ್‌ ಕ್ವೆರಿ ಟಾಪ್‌ಲೆಸ್‌ ಆಗಿ ಬಾತಿಂಗ್‌ ಸೂಟ್‌ನಲ್ಲಿದ್ದರೆ, ಬೌಚಾರ್ಡ್‌ ಮಾತ್ರ ಟೂ ಪೀಸ್‌ ಬಿಕಿನಿಯಲ್ಲಿದ್ದರು.

'ನನಗೂ ವಿನಯ್‌ ರಾಜ್‌ಕುಮಾರ್‌ಗೂ ಮದುವೆಯಾಗಿಲ್ಲ..' ಸ್ಪಷ್ಟನೆ ನೀಡಿದ ಸರಳ ಪ್ರೇಮಕಥೆ ನಾಯಕಿ!

Tap to resize

Latest Videos

ಬೌಚಾರ್ಡ್‌ ತಮ್ಮನ್ನು ಲೇವಡಿ ಮಾಡಿದ ಸ್ಯಾಮ್‌ ಕ್ವೆರಿ ಫೋಟೋಗಳಿಂದ ಬೇಸರ ಪಟ್ಟುಕೊಳ್ಳಲಿಲ್ಲ. ಬದಲಾಗಿ ಮುಂದಿನ ಸಾರಿ ನಾವಿಬ್ಬರೂ ಜೊತೆಯಾಗಿಯೇ ಫೋಟೋಶೂಟ್‌ ಮಾಡಿಸೋಣ ಎಂದು ಕಾಮೆಂಟ್‌ ಮಾಡಿದ್ದಾರೆ. ದಿ ಟೆನಿಸ್‌ ಚಾನೆಲ್‌ಗೆ ಕಾಮೆಂಟೇಟರ್‌ ಕೂಡ ಆಗಿರುವ 30 ವರ್ಷದ ಬೌಚಾರ್ಡ್‌, ಸೋಶಿಯಲ್‌ ಮೀಡಿಯಾದಲ್ಲಿ 2.3 ಮಿಲಿಯನ್‌ ಫಾಲೋವರ್‌ಗಳನ್ನು ಹೊಂದಿದ್ದಾರೆ. ತಮ್ಮ ಫೋಟೋಗಳಿಗೆ ಅವರು ಸಾಕಷ್ಟು ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದ್ದಾರೆ.

WATCH: ಕಿಕ್ಕಿರಿದ ಜನಸಂದಣಿ ನಡುವೆಯೂ ಅಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಟ್ಟ ಟೀಮ್‌ ಇಂಡಿಯಾ ಫ್ಯಾನ್ಸ್‌!

click me!