Onam Festival: ದೇವರನಾಡಿನಲ್ಲಿ ಆಚರಿಸುವ ಓಣಂ ಹಬ್ಬದ ವಿಶೇಷತೆಯೇನು?

Published : Sep 02, 2022, 01:58 PM ISTUpdated : Sep 02, 2022, 02:01 PM IST
Onam Festival: ದೇವರನಾಡಿನಲ್ಲಿ ಆಚರಿಸುವ ಓಣಂ ಹಬ್ಬದ ವಿಶೇಷತೆಯೇನು?

ಸಾರಾಂಶ

ದೇವರ ಸ್ವಂತ ನಾಡು ಕೇರಳದಲ್ಲಿ ಆಚರಿಸುವ ಪ್ರಸಿದ್ಧವಾದ ಹಬ್ಬ ಓಣಂ. ಓಣಂ ಹಬ್ಬವನ್ನು ಶ್ರಾವಣ ಮಾಸದಲ್ಲಿ ಆಚರಿಸಲಾಗುತ್ತದೆ, ಇದನ್ನು ಸುಗ್ಗಿಯ ಹಬ್ಬ ಎಂದು ಕರೆಯಲಾಗುತ್ತದೆ. ಆ ಬಗ್ಗೆ ಇನ್ನಷ್ಟು ವಿಚಾರಗಳನ್ನು ತಿಳಿದುಕೊಳ್ಳೋಣ.

ಕೇರಳ ರಾಜ್ಯದ ವಿಶೇಷ ಹಬ್ಬ ಓಣಂ. ಆಗಸ್ಟ್​ ಮತ್ತು ಸೆಪ್ಟೆಂಬರ್​ನಲ್ಲಿ ಓಣಂ ಹಬ್ಬವನ್ನು ಆಚರಿಸಲಾಗುತ್ತದೆ. ಇದನ್ನು ತಿರುವೋಣಂ ಎಂದು ಸಹ ಕರೆಯುತ್ತಾರೆ. ಬ್ಬದ ಇತಿಹಾಸ ಪುರಾಣಗಳ ಪ್ರಕಾರ, ಓಣಂ ಅನ್ನು ರಾಜ ಮಹಾಬಲಿಯ ಮರಳಿ ಬರುವ ನೆನಪಿಗಾಗಿ ಆಚರಿಸಲಾಗುತ್ತದೆ. ಆತನನ್ನ ಬ್ರಾಹ್ಮಣ ಋಷಿ ಮತ್ತು ಪ್ರಹ್ಲಾದನ ಮೊಮ್ಮಗನಾಗಿದ್ದ ಕಶ್ಯಪನ ವಂಶಸ್ಥನೆಂದು ಹೇಳಲಾಗುತ್ತದೆ. ಓಣಂ ಹಬ್ಬವನ್ನು ಒಟ್ಟು ಹತ್ತು ದಿನ ಆಚರಣೆ ಮಾಡಲಾಗುತ್ತೆ. ಆಚರಣೆಗಳು ಆಥಂ ದಿನದಂದು ಆರಂಭವಾಗಿ ಹತ್ತು ದಿನಗಳ ಕಾಲ ತಿರುವೋಣಂ ದಿನದವರೆಗೆ ನಡೆಯುತ್ತದೆ, ಇದನ್ನು ಹಬ್ಬದ ಅತ್ಯಂತ ಮಂಗಳಕರ ದಿನವೆಂದು ಪರಿಗಣಿಸಲಾಗುತ್ತದೆ. ಈ ಹಬ್ಬದ ಬಗ್ಗೆ ಇನ್ನೂ ಕೆಲವು ಆಸಕ್ತಿದಾಯಕ ಸಂಗತಿಗಳು ಇಲ್ಲಿದೆ.  

ಹತ್ತು ದಿನ ನಡೆಯುವ ಓಣಂ ಹಬ್ಬ
ಒಣಂ ಹಬ್ಬ ಮೂಲತಃ ಮಲಯಾಳಿ ಸಂಸ್ಕೃತಿ ಮತ್ತು ಸಂಪ್ರದಾಯಗಳ ಆಚರಣೆಯಾಗಿದೆ. ಹಬ್ಬವನ್ನು (Festival) ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಇದು 10 ದಿನಗಳ ಹಬ್ಬವಾಗಿದ್ದು, ಪ್ರತಿ ದಿನವೂ ತನ್ನದೇ ಆದ ಮಹತ್ವ (Importance)ವನ್ನು ಹೊಂದಿದೆ. ಮೊದಲ ದಿನವನ್ನು ಆಥಂ ಎಂದು ಕರೆಯಲಾಗುತ್ತದೆ, ನಂತರ ಚಿತಿರಾ, ಚೋಡಿ, ವಿಶಾಕಂ, ಅನಿಜಂ, ತ್ರಿಕೆಟ್ಟ, ಮೂಲಂ, ಪೂರದಂ, ಉತ್ರದೋಂ ಮತ್ತು ತಿರುವೋಣಂ ಎಂದು ಕರೆಯಲಾಗುತ್ತದೆ. ಕೊನೆಯ ದಿನವನ್ನು ಅತ್ಯಂತ ಮಂಗಳಕರ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನ ವಿಶೇಷ ಪೂಜೆ ಸಲ್ಲಿಸಿ, ಪೂಕಳಂ ರಚಿಸಿ, ಬಗೆ ಬಗೆಯ ಅಡುಗೆ (Cooking) ತಯಾರಿಸಿ ಓಣಂ ಸದ್ಯವನ್ನು ಸವಿಯುತ್ತಾರೆ. ಈ ವರ್ಷ, ಓಣಂ ಹಬ್ಬಗಳು ಆಗಸ್ಟ್ 30 ರಂದು ಪ್ರಾರಂಭವಾಗಲಿದ್ದು, ಸೆಪ್ಟೆಂಬರ್ 8ರಂದು ತಿರುವೋಣಂನೊಂದಿಗೆ ಮುಕ್ತಾಯಗೊಳ್ಳುತ್ತದೆ.

ಕೇರಳದ ಓಣಂ ಸ್ಪೆಷಲ್ ಡಿಶ್ ಅವಿಯಲ್ ಮಾಡೋದು ಹೇಗೆ ?

ಅಥಂ: ಇದು ಓಣಂನ ಮೊದಲನೇ ದಿನ. ಅಥಂನ ದಿನ ಜನರು ತಮ್ಮ ಮನೆಯನ್ನು ಹಳದಿ ಹೂವುಗಳಿಂದ (Flower) ಅಲಂಕಾರ ಮಾಡುತ್ತಾರೆ.  ಈ ಹೂವುಗಳನ್ನು ಪೂಕಳಂ ಎಂದು ಕರೆಯಲಾಗುತ್ತದೆ.

ಚಿತಿರಾ:  ಇದು ಹಬ್ಬದ ಎರಡನೇ ದಿನ. ಈ ದಿನದಂದು ಇಡೀ ಮನೆಯನ್ನು ಸಂಪೂರ್ಣವಾಗಿ ಸ್ವಚ್ಛ ಮಾಡಲಾಗುತ್ತದೆ.  ಈ ದಿನ ಹಳದಿ ಹೂವಿನ ಜೊತೆ ಇನ್ನೊಂದು ಹೂವನ್ನು ಸೇರಿಸಿ ರಂಗೋಲಿ ಹಾಕಲಾಗುತ್ತದೆ.

ಚೋಡಿ:  ಹಬ್ಬದ ಮೂರನೇ ದಿನವನ್ನು ಚೋಡಿ ಎಂದು ಕರೆಯುತ್ತಾರೆ. ಈ ದಿನದಂದು ಕುಟುಂಬ ಸದಸ್ಯರು ತಮ್ಮ ಆತ್ಮೀಯರನ್ನು ಭೇಟಿ ಮಾಡಿ ಉಡುಗೊರೆಗಳನ್ನು ಮತ್ತು ಆಭರಣಗಳನ್ನು ವಿನಿಮಯ ಮಾಡಿಕೊಂಡು ಸಂಭ್ರಮಾಚರಣೆ ಮಾಡುತ್ತಾರೆ.

ವಿಶಾಖಂ: ಈ ದಿನ ಹಬ್ಬದ ಪ್ರಮುಖ ದಿನಗಳಲ್ಲಿ ಒಂದು. ವಿಷಾಖಂ ದಿನದಂದು ಜನರು ಓಣಂ ಸದ್ಯಕ್ಕೆ (Onam sadya) ತಯಾರಿ ನಡೆಸುತ್ತಾರೆ. 

ಅನಿಝಮ್: ಈ ದಿನದಂದು, ಹಾವು ದೋಣಿ ಓಟದ ಸ್ಪರ್ಧೆಯಾದ ವಲ್ಲಂಕಳಿ ಆರಂಭವಾಗುತ್ತದೆ.

ತ್ರಿಕೆಟ್ಟ: ಕೇರಳದಲ್ಲಿ, ಈ ದಿನ ಶಾಲೆಗಳು ಮುಚ್ಚಲಾಗುತ್ತದೆ ಮತ್ತು ಮಕ್ಕಳು  ಹಬ್ಬದ ಪ್ರಾರ್ಥನೆಗಳನ್ನು ಸಿದ್ಧ ಮಾಡಿಕೊಳ್ಳುತ್ತಾರೆ.

ಮೂಲಂ: ಓಣಂ ಸದ್ಯ ಈ ದಿನ ಆರಂಭವಾಗುತ್ತದೆ. ಹಬ್ಬದ ಉತ್ಸಾಹವನ್ನು ಹೆಚ್ಚಿಸಲು ಜನರು ನೃತ್ಯ ಪ್ರದರ್ಶನಗಳನ್ನು  ಮಾಡುವ ಮೂಲಕ ಈ ದಿನವನ್ನು ಆಚರಿಸುತ್ತಾರೆ.

ಪೂರದಂ: ಈ ದಿನ ರಾಜ ಮಹಾಬಲಿ ಮತ್ತು ವಾಮನ ಮೂರ್ತಿಗಳನ್ನು ಭಕ್ತರು ಸ್ವಚ್ಛಗೊಳಿಸಿ ಹಬ್ಬದ ಆಚರಣೆ ಸಿದ್ಧತೆ ಮಾಡಿಕೊಳ್ಳುತ್ತಾರೆ.

ಉತ್ತರಾಡಂ: ಇದು ಹಬ್ಬದ ಕೊನೆಯ ದಿನದ ಹಿಂದಿನ ದಿನ. ಈ ದಿನ ತರಕಾರಿ (Vegetables) ಮತ್ತು ಹಣ್ಣು (Fruits)ಗಳಿಂದ ಆಹಾರ ಪದಾರ್ಥವನ್ನು ಸಿದ್ಧ ಮಾಡಿ, ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆ.

ತಿರುವೋಣಂ: ಇದು ಹಬ್ಬದ ಪ್ರಮುಖ ದಿನ ಮತ್ತು ಬಹಳ ಪವಿತ್ರವಾದ ದಿನ ಕೂಡ ಹೌದು. ಈ ದಿನ ಹೆಚ್ಚಿನವರು ಇಪ್ಪತ್ತಾರು ಬಗೆಯ ಭಕ್ಷ್ಯವನ್ನು ಸಿದ್ಧಪಡಿಸಿ ಓಣಂ ಸದ್ಯವನ್ನು ಸವಿಯುತ್ತಾರೆ. 

ಓಣಂ ಹಬ್ಬದ ಇತಿಹಾಸ
ಪ್ರಾಚೀನ ಗ್ರಂಥಗಳ ಪ್ರಕಾರ, ರಾಜ ಮಹಾಬಲಿ ಒಮ್ಮೆ ಕೇರಳ ರಾಜ್ಯವನ್ನು ಆಳುತ್ತಿದ್ದನು. ಕರುಣಾಮಯಿ ರಾಜ ಮಹಾಬಲಿ ದೇವತೆಗಳನ್ನು ಸೋಲಿಸಿ ಮೂರು ಲೋಕಗಳನ್ನು ಆಳಲು ಪ್ರಾರಂಭಿಸಿದನು. ಆದರೆ, ಮಹಾಬಲಿಯ ಜನಪ್ರಿಯತೆಯ ಬಗ್ಗೆ ದೇವರುಗಳಿಗೆ ಅಭದ್ರತೆಯಿತ್ತು. ಮಹಾಬಲಿ ಉದಾರ ಮತ್ತು ಬುದ್ಧಿವಂತ ನಾಯಕನಾಗಿದ್ದನು. ಹೀಗಾಗಿ ಈತನನ್ನು ಸೋಲಿಸಲು ದೇವರುಗಳು ಭಗವಾನ್ ವಿಷ್ಣುವನ್ನು  ಸಹಾಯ ಮಾಡಲು ಕೇಳಿಕೊಂಡರು. ಆದ್ದರಿಂದ, ವಿಷ್ಣುವು ಬ್ರಾಹ್ಮಣ ಕುಬ್ಜ ವಾಮನನ ಐದನೇ ಅವತಾರವನ್ನು ತೆಗೆದುಕೊಂಡನು.

ಕೇರಳದ ಸಾಂಪ್ರದಾಯಿಕ ಸೀರೆ ಲುಕ್‌ನಲ್ಲಿ ದಕ್ಷಿಣದ ನಟಿಯರು!

ನಂತರ, ವಾಮನನು ರಾಜ ಮಹಾಬಲಿಯನ್ನು ಭೇಟಿ ಮಾಡಿದನು. ಉದಾರಿ ರಾಜನು ಭೇಟಿಯಾದ ನಂತರ ಬ್ರಾಹ್ಮಣನಿಗೆ ಏನು ಬೇಕು ಎಂದು ಕೇಳಿದನು, ಅದಕ್ಕೆ ವಾಮನನು ಮೂರು ಭೂಮಿಯ ತುಂಡುಗಳು ಎಂದು ಹೇಳಿದನು. ವಾಮನನು ನಂತರ ಬೃಹತ್ ಗಾತ್ರದಲ್ಲಿ ಬೆಳೆದನು ಮತ್ತು ಅವನ ಮೊದಲ ಮತ್ತು ಎರಡನೆಯ ಹೆಜ್ಜೆಗಳಲ್ಲಿ ಅವನು ಆಕಾಶ ಮತ್ತು ಭೂಮಿಯನ್ನು ಆವರಿಸಿದನು. ವಾಮನನು ಮೂರನೇ ಹೆಜ್ಜೆಯನ್ನು ಎಲ್ಲಿ ಇಡಲಿ ಎಂದು ಕೇಳಿದಾಗ ರಾಜ ಮಹಾಬಲಿ ತನ್ನ ತಲೆಯನ್ನು ತೋರಿಸಿದ್ದು, ವಾಮನ ಆತನ ತಲೆಯ ಮೇಲೆ ಕಾಲಿಟ್ಟು ಪಾತಾಳಕ್ಕೆ ತಳ್ಳಿದನು. ಸಂತಸಗೊಂಡ ಭಗವಾನ್ ವಿಷ್ಣು, ನಂತರ ರಾಜನಿಗೆ ಓಣಂ ಸಮಯದಲ್ಲಿ ತನ್ನ ರಾಜ್ಯ ಮತ್ತು ಜನರನ್ನು ಭೇಟಿ ಮಾಡುವ ಹಕ್ಕನ್ನು ನೀಡಿದನು.

10 ದಿನಗಳ ಓಣಂ ಉತ್ಸವದಲ್ಲಿ, ಭಕ್ತರು ಮುಂಜಾನೆ ಸ್ನಾನ ಮಾಡಿ ತಮ್ಮ ಮನೆಗಳ ಹೊರಗೆ ಪೂಕಳಂ (ಹೂವಿನ ಮಾದರಿ) ರಚಿಸುತ್ತಾರೆ. ಕುಟುಂಬ ಸದಸ್ಯರ ಜೊತೆ ಸೇರಿ 26 ಭಕ್ಷ್ಯಗಳನ್ನು ಒಳಗೊಂಡ ಓಣಂ ಸದ್ಯವನ್ನು ಸವಿಯುತ್ತಾರೆ. ಮಹಿಳೆಯರು ಕಸುವ ಸೀರೆ ಎಂದು ಕರೆಯಲ್ಪಡುವ ಬಿಳಿ ಮತ್ತು ಚಿನ್ನದ ರೇಝೆ ಸೀರೆಯನ್ನು ಧರಿಸುತ್ತಾರೆ. ಇದು ಓಣಂ ಸೀರೆ ಎಂದೇ ಹೆಸರುವಾಸಿಯಾಗಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾತ್ರಿ ಮಲಗುವ ಮುನ್ನ ಸ್ವಲ್ಪ ಜೇನುತುಪ್ಪ ಬೆರೆಸಿದ ಉಗುರು ಬೆಚ್ಚಗಿನ ನೀರನ್ನು ಕುಡಿದರೆ ಏನಾಗುತ್ತೆ?
ಈ ಎಣ್ಣೆ ಹಚ್ಚಿ.. ಕಣ್ಣು ಮಿಟುಕಿಸುವುದರೊಳಗೆ ಡ್ರೈ ಸ್ಕಿನ್ ಮಾಯವಾಗುತ್ತೆ, ದೇಹ ಬೆಚ್ಚಗಿರುತ್ತೆ