ತಾಳಿ ನಿಲ್ಲು ಮನವೇ..ಆತ್ಮಹತ್ಯೆ ಮನಸ್ಥಿತಿ ಹೆಚ್ಚಾಗ್ತಿರೋದಕ್ಕೆ ಕಾರಣವೇನು?

By Vinutha Perla  |  First Published Sep 10, 2023, 12:30 PM IST

ಇತ್ತೀಚೆಗಂತೂ ಕ್ಷುಲ್ಲಕ ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇಂಥ ಹೊತ್ತಲ್ಲಿ ನೀವು ಅಂಥವರಿಗೆ ನಾಲ್ಕು ಮಾತು ಹೇಳುವ ಮೂಲಕ, ಅವರ ಆತ್ಮವಿಶ್ವಾಸ ಹೆಚ್ಚಿಸಬಹುದು. ಬದುಕುವ ಆಸೆ ಚಿಗುರಿಸಬಹುದು. ಒಮ್ಮೆ ಅವರನ್ನು ಸಾವಿನಿಂದ ವಿಮುಖರಾಗಿಸಿದರೆ ಸಾಕು, ನಂತರ ಅವರು ಗೆಲ್ಲುತ್ತಾರೆ ಅನುವುದು ಅನೇಕ ಸಂದರ್ಭಗಳಲ್ಲಿ ನಿಜವಾಗಿದೆ.


ಡಾ.ಕೆ.ಎಸ್ ಪವಿತ್ರಾ

ನನ್ನ ಮನದೊಳಗೆ ನಾನೇ ಮಾಡಿದೆ ಅತಿಕ್ರಮಣ! ಈಗ ಮುಕ್ತ ಮನ!

Tap to resize

Latest Videos

undefined

ಅಮ್ಮನೆಂದಳು 'ಪ್ರೀತಿಯೆಂದರೆ ಅತಿಕ್ರಮಣ!' ನಾನೆಂದೆ ಜೀವಿಸುವುದೂ ಅತಿಕ್ರಮಣ!

ಅರ್ಥವಾಗದ, ನಿಗೂಢವಾದ ಕವಿತೆಯ ಸಾಲುಗಳಂತಿವೆಯಲ್ಲವೆ? ತಾಯಿ ಮಕ್ಕಳ ನಡುವೆ ಆತ್ಮಹತ್ಯೆ ಯ ಸಂಭಾಷಣೆಯಿದು, ಯಿಯನ್ ಲೀ ಎಂಬ ಲೇಖಕಿ ಬರೆದಿರುವ 'ವೇಲ್‌ಸನ್ಸ್ ಎಂಡ್' ಎಂಬ ಕಾದಂಬರಿಯಲ್ಲಿ ಬರುವ ನಾಯಕಿ ಆತ್ಮಹತ್ಯೆ ಮಾಡಿಕೊಂಡ ತನ್ನ ಮಗನೊಡನೆ ಮಾತಾಡುತ್ತಾಳೆ. ಶೋಕತಪ್ತಳಾದ ತಾಯಿ ತನ್ನ ನರಳುವಿಕೆಯಿಂದ ಹೊರಬರಲು ಬಳಸುವ ಸಾಧನ ಈ ಸಂಭಾಷಣೆ, 'ಶ್ರೀ' ಸ್ವತಃ ಖಿನ್ನತೆಗೆ ಒಳಗಾಗಿ, ಅದರ ಅನುಭವವನ್ನು ಬರಹದಲ್ಲಿ ಒಂದು ಕಥನವಾಗಿ ದಾಖಲಿಸಿದವಳು. ಅದು ಹೊರಬಂದ ಒಂದು ವರ್ಷದ ಒಳಗೆ ಆಕೆಯ 16 ವರ್ಷದ ಮಗ ತನ್ನನ್ನು ತಾನು ಕೊಂದುಕೊಳ್ಳುತ್ತಾನೆ. 'ನಾನು ಆಗ ನೀನೇ ಆಗಿದ್ದ. ಹಾಗಾಗಿಯೇ ನಾನು ನಿನ್ನೊಡನೆ ಮಾತನಾಡಬಲ್ಲ ಪ್ರೀತಿಸುವುದೆಂದರೇ ಅತಿಕ್ರಮಣ ಮನದೊಳಗೆ ಪ್ರವೇಶಿಸುವ ಹಕ್ಕು ಪ್ರೀತಿಗಿದೆ' ಅನ್ನುತ್ತಾಳೆ ತಾಯಿ. ತನ್ನ ನೋವನ್ನು ಸಹನೀಯವಾಗಿಸಲು, ನಾವು ಸಾಮಾನ್ಯವಾಗಿ ತಪ್ಪಿಸಿಕೊಳ್ಳುವ ಪ್ರಶ್ನೆಗಳನ್ನು ಕೇಳಲು ಆಕೆ ಬರೆಯುವುದನ್ನು ಉಪಯೋಗಿಸಿಕೊಳ್ಳುತ್ತಾಳೆ.

ಈ ಪುಸ್ತಕವನ್ನು ಓದುತ್ತಾ ಕಣ್ಣು ಹನಿಗೂಡಿದ್ದಾಗ ಥಟ್ಟನೆ ಅನ್ನಿಸಿದ್ದು, ಕಲೆ-ಮಾಧ್ಯಮಗಳಿಗೆ ಆತ್ಮಹತ್ಯೆಯ ನಿಗೂಢತೆಯನ್ನು ಹಿಡಿದಿಡುವ ಸಾಮರ್ಥ್ಯವಿದೆ! ಸಾಹಿತ್ಯದಲ್ಲಿ ಆತ್ಮಹತ್ಯೆಯ ಬಗ್ಗೆ ಯುವಜನರು ಸುಮ್ಮನೇ ಓದುವ ಅಪಾಯದ ಬಗ್ಗೆ ವರುಷಗಳಿಂದ ಮನೋವೈದ್ಯಕೀಯ ಎಚ್ಚರಿಸುತ್ತಲೇ ಬಂದಿದೆ. 1774ರಲ್ಲಿ ಮೊದಲ ಬಾರಿ ಪ್ರಕಟವಾದ 'ದಿ ಸಾರೋಸ್ ಆಫ್ ಯಂಗ್ ವರ್ಥ ಕೃತಿ ಯೂರೋಪ್‌ನ ತುಂಬ ಯುವ ಜನರಲ್ಲಿ ಸರಣಿ ಆತ್ಮಹತ್ಯೆಗಳನ್ನು ಪ್ರಚೋದಿಸಿತು. ಈ ಮಾದರಿಯ ಬಗ್ಗೆ ಹಲವು ವೈಜ್ಞಾನಿಕ ಸಂಶೋಧನೆಗಳೇ ದಾಖಲಾಗಿವೆ, ಕಣ ನಾಯಕ ಪರ್ಥ‌್ರನ ವೇಷ ಭೂಷಣಗಳು, ಕೊ೦ಡುಕೊಂಡ ವಿಧಾನವನ್ನೇ ಬಹುಜನ ಯುವಕರು ಅನುಕರಿಸಿದ್ದನ್ನು ಅಧ್ಯಯನಗಳು ವರದಿ ಮಾಡಿವೆ.  ಜಗತ್ತಿನಾದ್ಯಂತ ಪ್ರಸಾರವಿರುವ ಪಾಶ್ಚಾತ್ಯ ಜಗತ್ತಿನ ಕಥೆ-ಕಾದಂಬರಿಗಳು, ಇತ್ತೀಚಿನ ಕಾದಂಬರಿ ಆಧಾರಿತ ನೆಟ್‌ಫ್ಲಿಕ್ಸ್‌ನ ಸರಣಿ 'ಥರ್ಟೀನ್ ರೀಸನ್ಸ್ ವೈ' ಎಂಬ ಧಾರಾವಾಹಿಗಳಲ್ಲಿ ಇದೇ ರೀತಿಯ ಅವಾದನೆಗೆ ತುತ್ತಾಗಿರುವಂತಹವು.

ಆರ್ಥಿಕ ಸಂಕಷ್ಟ: ಮಗಳ ಮದುವೆ ಮಾಡಿಸಿದ್ದ ಫೈವ್ ಸ್ಟಾರ್ ಹೊಟೇಲ್‌ನಲ್ಲೇ ಕೇರಳ ದಂಪತಿ ಆತ್ಮಹತ್ಯೆ

ವಿಪರ್ಯಾಸವೆಂದರೆ ಒಂದು ಒಳ್ಳೆಯ ಕಥೆ ಮಾಡಲು ಬೇಕಾದ ಅಂಶಗಳೆಲ್ಲವೂ ಆತ್ಮಹತ್ಯೆ ಪ್ರಚೋದನೆಗೂ ಕಾರಣವಾಗಬಹುದು. ಉದ್ವೇಗ, ಆತ್ಮಹತ್ಯೆಗೆ ಒಳಗಾಗುವ ಪಾತ್ರಗಳ ವ್ಯಕ್ತಿತ್ವದ ಚಿತ್ರಣ, ಕೊನೆಗೆ ಆತ್ಮಹತ್ಯೆ ಎಂಬ ಘಟನೆಯ ದೃಶ್ಯ ಇವೆಲ್ಲಾ ಕಲ್ಪನೆಯನ್ನು ವಾಸ್ತವವಾಗಿಸುತ್ತಾ ಜನರನ್ನು ಮುನ್ನಡೆಸುವ ಸಾಧ್ಯತೆ ಮನೋವೈದ್ಯಕೀಯ ಜಗತ್ತನ್ನು ಕಂಗಾಲುಗೊಳಿಸುತ್ತದೆ.

ಆತ್ಮಹತ್ಯೆ ಯನ್ನು ಸಾಹಿತ್ಯ, ಸಿನಿಮಾಗಳು ವೈಭವೀಕರಿಸಿವೆ. ಆದರೆ ಅತ್ಮಹತ್ಯೆಗೆ ಪ್ರಯತ್ನಿಸಿ ಬದುಕುಳಿದವರ ಬಗ್ಗೆ ಮನರಂಜನೆಯ ಜಗತ್ತು ಗಮನ ಹರಿಸಿಯೇ ಇಲ್ಲ." ಒಂದು 'ಸಾವು' ನಮ್ಮಲ್ಲಿ ಕುತೂಹಲ-ಅನುಕಂಪ ಹುಟ್ಟಿಸುವಷ್ಟು 'ಬದುಕು' ಮಾಡಲಾರದಷ್ಟೆ! ಆತ್ಮಹತ್ಯೆಯ ಅಂಕಿ ಅಂಶಗಳಲ್ಲಿಯೂ ಅಷ್ಟೆ, ಇಂತಿಷ್ಟು ಜನ ಆತ್ಮಹತ್ಯೆಗೆ ಪ್ರಯತ್ನಿಸಿದವರು ಎಂದಷ್ಟೇ ಬರೆದು, ಇಷ್ಟು ಜನ ಸಾವಿಗೀಡಾಗುತ್ತಾರೆ. ಎಂಬುದನ್ನು ನಾವು ಎತ್ತಿ ಹಿಡಿಯುತ್ತೇವೆ. ಆತ್ಮಹತ್ಯೆಯ ಆಲೋಚನೆಗಳನ್ನು ಮನಸ್ಸಿನಲ್ಲಿ ಅನುಭವಿಸಿದ ಎಂಟು ಜನರಲ್ಲಿ ಏಳು ಜನ ಅದನ್ನು ಕಾರ್ಯರೂಪಕ್ಕೆ ತರುವುದಿಲ್ಲ!

ಆತ್ಮಹತ್ಯೆಯ ವಿಶ್ವವರದಿಗಳನ್ನು ನೋಡಿದರೆ ಆತ್ಮಹತ್ಯೆಗೆ ಪ್ರಯತ್ನಿಸಿದ ಜನರಲ್ಲಿ ಶೇಕಡ 96 ಮಂದಿ ಬದುಕುಳಿಯುತ್ತಾರೆ. ಅಂದರೆ ಸುಮಾರು ಕಾಲು ಮಿಲಿಯನ್ ಜನ 'ಆತ್ಮಹತ್ಯೆಯಿಂದ ಪಾರಾದವರು | ಬದುಕುಳಿದವರು' ಎಂಬ ವರ್ಗಕ್ಕೆ ಸೇರುತ್ತಾರೆ. ಆದರೆ ಹೀಗೆ 'ಉಳಿದವರ' ಕಥೆಯನ್ನು ಯಾವ ಸಿನಿಮಾ, ಕಾದಂಬರಿಯೂ ಚಿತ್ರಿಸುವುದಿಲ್ಲ. ಒಂದೊಮ್ಮೆ ಕಥೆಯಾಗಿಸಿದರೆ ನಾವ್ಯಾರೂ ಓದುವುದಿಲ್ಲ ಎಂಬುದು ಒಂದು ಕಾರಣ. ಮತ್ತೊಂದು ಕಾರಣ ಬದುಕುಳಿದದ್ದನ್ನು ಹೇಳುವ ಮಾತು, ಭಾಷೆ ನಮ್ಮಲ್ಲಿರದಿರುವುದು, ನೋವು, ನರಳುವಿಕೆಯನ್ನು ಇತರರಿಗೆ ಅರ್ಥವಾಗುವಂತೆ ಹೇಳುವ ಬಗೆ ಹೇಗೆ? ಆತ್ಮಹತ್ಯೆಗೆ ಪ್ರಯತ್ನಿಸಿ ಬದುಕುಳಿದವರಲ್ಲಿ ಉಂಟಾಗುವ ನಿರಾಳತೆ, ನಾಚಿಕೆ, ಭಾವನೆ, ಅಂಜಿಕೆಗಳನ್ನು ಪದಗಳಲ್ಲಿ ಹಿಡಿದಿಡುವ ಪ್ರಯತ್ನ ಸಾಧ್ಯವೆ!

Bengaluru ಅಪ್ಪ ಇಂಜಿನಿಯರ್‌, ಅಮ್ಮ ಟೀಚರ್‌: ಮಗಳು ಶಾಲೆಗೆ ಹೋಗದೇ 12ನೇ ಫ್ಲೋರ್‌ನಿಂದ ಬಿದ್ದು ಸತ್ತಳು

ವೈದ್ಯಕೀಯ ಪುಭಾಷೆಯಲ್ಲಿ ಖಿನ್ನತೆ, ಆತಂಕ, ಆತ್ಮಹತ್ಯೆಗಳನ್ನು ಆಗಾಗ್ಗೆ ಬಳಸುವ ನನಗೆ ಅದರ ತಾಂತ್ರಿಕತೆಯನ್ನು ದೂರವಿರಿಸಿ, 'ಆತ್ಮಪ್ರಾಯ ಈ ಕ್ಷಣದಲ್ಲಿ ಗೆದ್ದು ಬಂದೆ, ಬದುಕುಳಿದೆ' ಎಂಬ ಗೆಲುವಿನ ಕಥೆಗಳು ಸಮಾಜದ ಮುಂದೆ ಬರಬೇಕು ಎನಿಸುತ್ತದೆ. ಅದು ಆತ್ಮಹತ್ಯೆಗೆ ಪ್ರಯತ್ನಿಸಿ, ಅದಕ್ಕೆ ತುತ್ತಾಗುವ ಶೇಕಡ 4ರಷ್ಟು ಮಂದಿಯನ್ನು ಬದುಕಿದವರು' ಎಂಬ ವರ್ಗಕ್ಕೆ ಸೇರಿಸಬಹುದು ಎನಿಸುತ್ತದೆ.

'ಆತ್ಮಹತ್ಯೆಯೆಂದರೆ ಯಾವುದೋ ಅದು ಪೂರ್ಣ ಸಾವಲ್ಲ. ರೂಪದಲ್ಲಿ ಬದುಕುಳಿಯುತ್ತಾರೆ, ತಮ್ಮ ಅಂತ್ಯಕ್ರಿಯೆಯನ್ನು ನೋಡುತ್ತಾರೆ, ತಮ್ಮ ಸಾವು ಇತರರ ಮೇಲೆ ಬೀರುವ ಪ್ರಭಾವವನ್ನು ವೀಕ್ಷಿಸಬಲ್ಲರು' ಇಂತಹ ನಂಬಿಕೆಗಳು ಜಗತ್ತಿನ ಎಲ್ಲ ಸಂಸ್ಕೃತಿಗಳಲ್ಲಿ ಕಾಣಸಿಗುತ್ತವೆ. ಇಂತಹ ನಂಬಿಕೆಗಳನ್ನು ಸಿನಿಮಾ, ಕಾದಂಬರಿಗಳು ಮತ್ತಷ್ಟು ಪ್ರಚೋದಿಸುತ್ತವೆ, ಇವು ನಿಜವೋ ಸುಳ್ಳೋ ಎಂಬ ನ್ಯಾಯ ನಿರ್ಣಯಕ್ಕಿಂತ, ಆತ್ಮಹತ್ಯೆಯಿಂದ ಪ್ರಾಣ ಕಳೆದುಕೊಂಡವರ ಆತ್ಮೀಯರ ನರಳುವಿಕೆ, ಅನಂತರದ ಬದುಕೆಂಬ ಕಟು ಸತ್ಯಗಳನ್ನು ಸಮಾಜ ತೆರೆದ ಕಣ್ಣು, ಮನಸ್ಸುಗಳಿಂದ ಸ್ಪಷ್ಟವಾಗಿ ನೋಡಲೇಬೇಕು.

ಆತ್ಮಹತ್ಯೆಯಿಂದ ಬದುಕುಳಿದವರ ಕಥೆಗಳು ನಮಗೆ ಬೇಕೇ ಬೇಕು. ಅದು ಆತ್ಮಹತ್ಯೆಯನ್ನು ತಡೆಯುತ್ತದೆ. ಎಂಬ ಕಾರಣಕ್ಕಲ್ಲ, ಅಥವಾ ಬದುಕಲು ಕಾರಣಗಳನ್ನು ಅದು ನೀಡುತ್ತದೆ ಎಂಬುದಕ್ಕೂ ಅಲ್ಲ. ಮತ್ತೆ ? ಕಥೆಯನ್ನು ಪೂರ್ಣಗೊಳಿಸಲು, ರೂಪಿಸಲು ಒಂದಕ್ಕಿಂತ ಹೆಚ್ಚು ದಾರಿಗಳಿವೆ. ಆತ್ಮಹತ್ಯೆಯನ್ನು ತಡೆಯಲೂ ಅಷ್ಟ ಕಲ್ಪನೆಯಲ್ಲಾಗಲೀ, ನಿಜಜೀವನದಲ್ಲಾಗಲೀ ಹಲವು ಎಂಬುದನ್ನು ತೋರಿಸಲು.

click me!