ಮಕ್ಕಳು ಬೆರಳು ಚೀಪೋದರಲ್ಲಿ ಅಂಥ ಯಾವುದೇ ವಿಶೇಷ ಇಲ್ಲ. ನಿದ್ರಿಸಲು, ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು ಅಥವಾ ಖುಷಿ ಸಿಗುವ ಕಾರಣಕ್ಕೆ ಮಕ್ಕಳು ಬೆರಳು ಚೀಪುತ್ತಾರೆ. ಹಲವು ಮಕ್ಕಳು ಒಂದು ಸಮಯವಾದ ಮೇಲೆ ಅವರಾಗಿಯೇ ಬೆರಳು ಚೀಪೋ ಅಭ್ಯಾಸ ಬಿಟ್ಟುಬಿಡುತ್ತಾರೆ. ಆದರೆ ಕೆಲ ಮಕ್ಕಳು ಮಾತ್ರ ನಾಲ್ಕು ವರ್ಷ ದಾಟಿದರೂ ಈ ಅಭ್ಯಾಸ ಬಿಡುವುದಿಲ್ಲ. ಇಂಥ ಸಂದರ್ಭದಲ್ಲಿ ಪೋಷಕರು ಮಧ್ಯೆ ಪ್ರವೇಶಿಸುವ ಅಗತ್ಯವಿದೆ. ಏಕೆಂದರೆ ಈ ಅಭ್ಯಾಸದಿಂದ ಮಕ್ಕಳಿಗೆ ಮುಂಬು ಹಲ್ಲು ಹುಟ್ಟಬಹುದು.
ಮಕ್ಕಳನ್ನು ಗೆಳೆಯರನ್ನಾಗಿ ಮಾಡಿಕೊಳ್ಳುವುದು ಹೇಗೆ?
ವಸಡುಗಳು ಒಂದ್ಕಕೊಂದು ಸರಿಯಾಗಿ ಕೂಡದೆ ಹೋಗಬಹುದು. ಅಲ್ಲದೆ, ಉಗ್ಗಿನಂಥ ಮಾತಿನ ತೊಂದರೆಗಳು ಎದುರಾಗಬಹುದು. ಬಾಯಿ ಹಾಗೂ ವಸಡಿನ ಒಟ್ಟಾರೆ ರೂಪ ಬದಲಾಗಬಹುದು. ಮಕ್ಕಳ ಬೆರಳು ಚೀಪುವ ಅಭ್ಯಾಸ ತಪ್ಪಿಸಲು ನೀವೇನು ಮಾಡಬೇಕು ಹಾಗೂ ಏನು ಮಾಡಬಾರದು ಎಂಬುದು ಇಲ್ಲಿದೆ.
- ಮಗು ಸ್ವಲ್ಪ ದೊಡ್ಡದಿದ್ದಾಗ ಅದಕ್ಕೆ ಈ ಕೈ ಚೀಪುವ ಅಭ್ಯಾಸ ಕೇವಲ ಮಲಗುವ ಸಮಯಕ್ಕೆ ಎಂದು ತಿಳಿಸಿ. ಕೈ ಚೀಪಲು ಸಮಯ ನಿಗದಿಗೊಳಿಸುವುದು ಇದನ್ನು ಬಿಡಿಸುವ ಮೊದಲ ಪ್ರಯತ್ನ.
- ಕೈಚೀಪುವುದಕ್ಕೆ ಮಕ್ಕಳನ್ನು ಬೈಯ್ಯುವುದಾಗಲೀ, ದೂರುವುದಾಗಲೀ ಮಾಡಬೇಡಿ. ಬದಲಿಗೆ ಮಗುವು ಕೈ ಚೀಪದ ಸಮಯವನ್ನು ಹೊಗಳಿ. ಆಗ ಮಗು ನಿಧಾನವಾಗಿ ನಿಮ್ಮ ಮೆಚ್ಚುಗೆ ಗಳಿಸಲು ಕೈ ಚೀಪುವುದನ್ನು ಬಿಡುತ್ತವೆ. ಇಲ್ಲವೇ ಹೆಚ್ಚಿನ ಸಮಯ ಮಗು ಬೆರಳು ಚೀಪದಿದ್ದರೆ ಅದಕ್ಕಾಗಿ ಅವರನ್ನು ಹೊಗಳಿ, ಅವರಿಗೆ ಬೆಡ್ ಟೈಂನಲ್ಲಿ ಒಂದು ಎಕ್ಸ್ಟ್ರಾ ಕತೆ ಹೇಳುವುದನ್ನೋ, ಚಾಕೋಲೇಟ್ ಕೊಡುವುದನ್ನೋ ಮಾಡಿ. ಮಕ್ಕಳಲ್ಲಿ ಉತ್ತಮ ಹವ್ಯಾಸ ಬೆಳೆಸುವುದಕ್ಕೆ ಪಾಸಿಟಿವ್ ರಿಇನ್‌ಫೋರ್ಸ್‌ಮೆಂಟ್‌ಗಿಂತಲೂ ಉತ್ತಮ ಮಾರ್ಗ ಇನ್ನೊಂದಿಲ್ಲ. ಇದನ್ನೇ ಪಾಸಿಟಿವ್ ಪೇರೆಂಟಿಂಗ್ ಎನ್ನುವುದು.
- ಕೈ ಚೀಪುವುದರಿಂದ ಏನು ಸಮಸ್ಯೆಗಳಾಗುತ್ತವೆ ಎಂಬುದನ್ನು ಮಗುವಿಗೆ ವಿವರಿಸಿ ಹೇಳಿ. ಅವರಿಗೆ ಯಾವುದೇ ವಿಷಯಕ್ಕೆ ಏನೇ ಅಗತ್ಯವಿದ್ದರೂ ನೀವು ಸಹಾಯ ಮಾಡುವುದಾಗಿ ತಿಳಿಸಿ. ಒಂದು ಹಗ್ ಅಥವಾ ಕಿಸ್‌ನಿಂದ ಕಂಫರ್ಟ್ ಮಾಡಿ. ಆಗ ಮಕ್ಕಳಿಗೆ ಆತಂಕದಿಂದ ಕಂಫರ್ಟ್ ಆಗಲು ಬೆರಳು ಚೀಪುವ ಹೊರತಾಗಿ ಬೇರೆ ವಿಧಾನಗಳೂ ಇವೆ ಎಂದು ತಿಳಿಯುತ್ತವೆ.
ಮಕ್ಕಳ ಸಿಟ್ಟನ್ನು ನಿಭಾಯಿಸುವುದು ಹೇಗೆ?
- ಮಗು ಸಿಟ್ಟಾದಾಗ, ದುಃಖವಾದಾಗ ಅಥವಾ ನೋವಾದಾಗ ಬೆರಳು ಚೀಪುತ್ತಿದ್ದರೆ ಆ ಸಮಯದಲ್ಲಿ ಅವರ ಬೆರಳನ್ನು ಎಳೆಯುವುದಾಗಲೀ, ಚೀಪುವುದು ಬೇಡ ಎಂದಾಗಲೀ ಹೇಳಬೇಡಿ. ಇದು ಅವನ್ನು ಮತ್ತಷ್ಟು ಹೆದರಿಸುತ್ತದೆ. ಮಕ್ಕಳಿಗೂ ಕಂಫರ್ಟ್ ಜೋನ್ ಬೇಕು. ಮಗು ಸಿಟ್ಟು ಅಥವಾ ಒತ್ತಡದಿಂದಾಗಿ ಬೆರಳು ಚೀಪುತ್ತಿದ್ದರೆ ಆ ಒತ್ತಡಕ್ಕೆ ಕಾರಣವೇನು ಎಂಬುದನ್ನು ತಿಳಿದುಕೊಂಡು ಅದನ್ನು ನಿವಾರಿಸುವತ್ತ ಗಮನ ಹರಿಸಿ.
- ಬೆರಳಿಗೆ ಬೇವಿನ ಎಣ್ಣೆ ಅಥವಾ ಇನ್ನಾವುದೇ ಕಹಿ ಪದಾರ್ಥ ಹಚ್ಚುವ ಅಭ್ಯಾಸ ಬೇಡ. ಇದು ಕ್ರೂರವೆನಿಸುತ್ತದೆ. ಮಕ್ಕಳಿಗೆ ನಿಮ್ಮ ಬಗ್ಗೆ ಭಯ ಹುಟ್ಟಬಹುದು.
- ಮಕ್ಕಳು ಎಲ್ಲವನ್ನೂ ಕಾಪಿ ಮಾಡುತ್ತವೆ. ಅದರಲ್ಲೂ ತಮಗಿಷ್ಟದವರು ಮಾಡುವುದನ್ನು ಕಾಪಿ ಮಾಡಲು ಹೋಗುತ್ತವೆ. ಹೀಗಾಗಿ, ಅರಿಷ್ಟ ಕಾರ್ಟೂನ್ ಕ್ಯಾರೆಕ್ಟರ್ ಹೇಗೆ ಬೆರಳನ್ನೇ ಚೀಪದೆ ಆರಾಮಾಗಿ ಇರುತ್ತವೆ ಎಂಬುದನ್ನು ತಿಳಿಸಿ.
- ಮಗುವಿನ ಕೈಗೆ ಮಿಟ್ಟನ್ಸ್ ಹಾಕಿಡುವುದರಿಂದ ಅವುಗಳ ಆತಂಕ ಹೆಚ್ಚುತ್ತದೆ. ಈ ಅಭ್ಯಾಸ ಬೇಡ.
ನಿಮ್ಮ ಮಕ್ಕಳಿಗೆ ಈ ಗುಣಗಳನ್ನು ಹೇಳಿಕೊಟ್ಟಿದ್ದೀರಾ?
- ಮಕ್ಕಳು ಬೆಳೆದಂತೆಲ್ಲ ನಿಧಾನವಾಗಿ ಕೈ ಚೀಪುವುದು ಬಿಡುತ್ತಾರೆ. ಸಾಮಾನ್ಯವಾಗಿ 2ರಿಂದ 4 ವರ್ಷದ ನಡುವೆ ಈ ಅಭ್ಯಾಸ ಬಿಡಬಹುದು. ನೀವು ತಲೆ ಕೆಡಿಸಿಕೊಳ್ಳುವುದು ಬಿಟ್ಟು, ಅವರನ್ನು ಅವರ ಪಾಡಿಗೆ ಬಿಡಿ. ಅತಿಯಾದ ಪ್ರೆಶರ್ ಹಾಕುವುದರಿಂದ ಮಕ್ಕಳಿಗೆ ಮತ್ತಷ್ಟು ಹೆದರಿಸಿದಂತಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.