ಹಬ್ಬಕ್ಕೆಂದು ಊರಿಗೆ ಬಂದವನು ಹೆಣವಾದ : ಭರ್ಜಿಯಿಂದ ಇರಿದು ಕೊಂದರು

By Kannadaprabha News  |  First Published Mar 13, 2021, 10:21 AM IST

ಯುವಕರ ಗುಂಪೊಂದು ಕ್ಷೌರದ ಅಂಗಡಿ ಮುಂದೆ ಕೂತು ಪತ್ರಿಕೆ ಓದುತ್ತಿದ್ದ ಯುವಕನೊಬ್ಬನ ಮೇಲೆ ಏಕಾಏಕಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಹತ್ಯೆ  ಮಾಡಿದೆ. ಹಬ್ಬಕ್ಕೆಂದು ಬಂದವನನ್ನು ಚುಚ್ಚಿ ಕೊಂದಿದೆ.


ಮಧುಗಿರಿ (ಮಾ.13):  ಎರಡು ಬೈಕ್‌ನಲ್ಲಿ ಬಂದ ನಾಲ್ವರು ಯುವಕರ ಗುಂಪೊಂದು ಕ್ಷೌರದ ಅಂಗಡಿ ಮುಂದೆ ಕೂತು ಪತ್ರಿಕೆ ಓದುತ್ತಿದ್ದ ಯುವಕನೊಬ್ಬನ ಮೇಲೆ ಏಕಾಏಕಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಹತ್ಯೆ ಮಾಡಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.

ತುಮಕೂರು ನಗರದ ವಾಸಿ ವೀರಭದ್ರಯ್ಯ(26) ಎಂಬಾತನೇ ಇರಿತಕ್ಕೆ ಒಳಾಗಾಗಿ ಮೃತಪಟ್ಟಯುವಕ ಎಂದು ಗುರುತಿಸಲಾಗಿದೆ. ಶುಕ್ರವಾರ ಬೆಳಗ್ಗೆ 9.30ರ ವೇಳೆ ಶಂಕರ್‌ ಚಿತ್ರ ಮಂದಿರದ ಮುಂಭಾಗವಿರುವ ಟಿವಿಎಸ್‌ ಶೋರೂಮ್‌ ಬಳಿ ಹಾಡಹಗಲೇ ಈ ಘಟನೆ ನಡೆದಿದ್ದು, ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ. 

Tap to resize

Latest Videos

ಮೃತ ಯುವಕ ವೀರಭದ್ರಯ್ಯ ಮೂಲತಃ ಮಧುಗಿರಿಯವನಾಗಿದ್ದು, ಇತ್ತೀಚೆಗೆ ತುಮಕೂರಿನ ಮಂಜುನಾಥ ನಗರದಲ್ಲಿ ವಾಸವಾಗಿದ್ದು, ಶಿವರಾತ್ರಿ ಹಬ್ಬಕ್ಕಾಗಿ ಮಧುಗಿರಿಗೆ ಬಂದಿದ್ದ ಏನ್ನಲಾಗಿದೆ. ಈತ ಶುಕ್ರವಾರ ಬೆಳಗ್ಗೆ ಪತ್ರಿಕೆ ಓದುತ್ತಾ ಕೂಲ್‌ ಹೇರ್‌ ಸಲೂನ್‌ ಮುಂಭಾಗದ ಕಟ್ಟೆಯ ಮೇಲೆ ಕೂತಿದ್ದಾಗ ನಾಲ್ವರು ಯುವಕರ ಗುಂಪು ದಿಚಕ್ರ ವಾಹನದಲ್ಲಿ ಬಂದು ಆತನನ್ನು ಎಳೆದಾಡಿ ರಾಡಿನಿಂದ ಹೊಡೆದು ಭರ್ಜಿ, ಚಾಕುವಿನಿಂದ ಇರಿದು ರಸ್ತೆಗೆ ಎಸೆದು ಪರಾರಿಯಾಗಿದ್ದಾರೆ.

ಅಕ್ಕನ ಮನೇಲಿ ಚಿನ್ನಾಭರಣ ಕದ್ದು ತಂಗಿ ಟೂರ್‌..! .

ಶಿವರಾತ್ರಿ ಹಬ್ಬದ ಸಂಜೆ ಪಟ್ಟಣದ ಶಿರಾ ಗೇಟ್‌ ಬಳಿ ಎರಡು ಯುವಕರ ಗುಂಪುಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದ್ದು, ಈ ಕೊಲೆಗೆ ಕಾರಣ ಎನ್ನಲಾಗಿದೆ. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ಯುವಕನಿಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದ ಕಾರಣ ಯುವಕ ವೀರಭದ್ರಯ್ಯ ಮೃತಪಟ್ಟಿದ್ದಾನೆ. 

ಘಟನೆ ನಡೆದ ಸ್ಥಳ್ಕಕಕೆ ಡಿವೈಎಸ್‌ಪಿ ರಾಮಕೃಷ್ಣ, ಸಿಪಿಐ ಎಂ.ಎಸ್‌.ಸರ್ದಾರ್‌, ಪಿಎಸ್‌ಐ ಮಂಗಳಗೌರಮ್ಮ, ಎಎಸ್‌ಐ ಸಾಕ್ಷ್ಯಪ್ಪ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪ್ತತೆಗೆ ಪೋಲಿಸರು ಬಲೆ ಬೀಸಿದ್ದಾರೆ. ಈ ನಡುವೆ ತುಮಕೂರು ಅಡಿಷನಲ್‌ ಎಸ್ಪಿ ಉದೇಶ್‌ ಮಧುಗಿರಿ ಠಾಣೆಗೆ ಭೇಟಿ ನೀಡಿ ಮಾಹಿತಿ ಪಡೆದರು. ನಂತರ ಕೊಲೆ ಆರೋಪಿಗಳ ಪತ್ತಗೆ ಸಿಪಿಐ ಸರ್ದಾರ್‌ ಅವರ ನೇತೃತ್ವದಲ್ಲಿ ಎರಡು ತಂಡಗಳನ್ನು ರಚಿಸಲಾಗಿದೆ ಎಂದು ಪೋಲಿಸ್‌ ಮೂಲಗಳಿಂದ ತಿಳಿದು ಬಂದಿದೆ.

click me!