ವೃತ್ತಿಯಲ್ಲಿ ಡ್ರಗ್ ಅನಾಲಿಸ್ಟ್ ಆಗಿರುವ ಶ್ರೀನಿಧಿ ಅವರು ಬಹುಮುಖ ಪ್ರತಿಭೆಯ ಅಭಿಜಾತ ಕಲಾವಿದೆಯಾಗಿದ್ದಾರೆ. ಗುರು ಸುಪರ್ಣಾ ಅವರಲ್ಲಿ ಕಳೆದ ಒಂದು ದಶಕದಿಂದ ಭರತನಾಟ್ಯ ಅಭ್ಯಾಸ ಮಾಡಿ ನೃತ್ಯದ ಪಟ್ಟುಗಳನ್ನು ಸಮರ್ಥವಾಗಿ ಕರಗತ ಮಾಡಿಕೊಂಡಿದ್ದಾರೆ.
ಬೆಂಗಳೂರು(ಡಿ.01): ಕಲಾವಿದೆ ಡಾ. ಸುಪರ್ಣಾ ವೆಂಕಟೇಶ್ ಹೆಮ್ಮೆಯ ಶಿಷ್ಯೆ ಶ್ರೀನಿಧಿ ಹೆಗಡೆ ಅವರು ಇಂದು(ಭಾನುವಾರ) ಭರತನಾಟ್ಯ ರಂಗ ಪ್ರವೇಶಕ್ಕೆ ಅಣಿಯಾಗಿದ್ದಾರೆ.
ಸಾಯಿ ಆರ್ಟ್ಸ್ ಇಂಟರ್ ನ್ಯಾಷನಲ್ ಸಂಸ್ಥೆ ನಗರದ ವೈಯಾಲಿಕಾವಲ್‌ನಲ್ಲಿರುವ ತೆಲುಗು ವಿಜ್ಞಾನ ಸಮಿತಿಯ ಶ್ರೀ ಕೃಷ್ಣದೇವರಾಯ ರಂಗಮಂದಿರದಲ್ಲಿ ಇಂದು(ಭಾನುವಾರ) ಸಂಜೆ 5ಕ್ಕೆ ಶ್ರೀನಿಧಿ ರಂಗಾರೋಹಣ ಮಾಡಲಿದ್ದಾರೆ .
ಮುಖ್ಯ ಅತಿಥಿಗಳಾಗಿ ಹಿರಿಯ ಕಲಾವಿದೆ, ಸುನಂದಾದೇವಿ, ಪ್ರಖ್ಯಾತರಂಗ ಕಲಾವಿದ ಪ್ರಸಾದ್, ಕರ್ನಾಟಕ ಸಂಸ್ಕೃತ ವಿವಿ ಡೀನ್ ವಿನಯ್, ತಾಂತ್ರಿಕ ನಿರ್ದೇಶಕ ಸಾಯಿ ವೆಂಕಟೇಶ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಡಾ.ಮಧುರಾ ಹೆಗಡೆ ಮತ್ತು ಗಂಗಾಧರ ಹೆಗಡೆ ಅವರು ಉಪಸ್ಥಿತರಿರಲಿದ್ದಾರೆ.
ಪ್ರಿ ವೆಡ್ಡಿಂಗ್ ಶೂಟಲ್ಲಿ ಯಕ್ಷಗಾನ -ಭರತನಾಟ್ಯ ವೈಭವ… ವಿಭಿನ್ನ ಚಿಂತನೆಗೆ ನೆಟ್ಟಿಗರಿಂದ ಭಾರಿ ಮೆಚ್ಚುಗೆ!
ಶ್ರೀನಿಧಿ ಬಹುಮುಖಿ ಕಲಾವಿದೆ:
ವೃತ್ತಿಯಲ್ಲಿ ಡ್ರಗ್ ಅನಾಲಿಸ್ಟ್ ಆಗಿರುವ ಶ್ರೀನಿಧಿ ಅವರು ಬಹುಮುಖ ಪ್ರತಿಭೆಯ ಅಭಿಜಾತ ಕಲಾವಿದೆಯಾಗಿದ್ದಾರೆ. ಗುರು ಸುಪರ್ಣಾ ಅವರಲ್ಲಿ ಕಳೆದ ಒಂದು ದಶಕದಿಂದ ಭರತನಾಟ್ಯ ಅಭ್ಯಾಸ ಮಾಡಿ ನೃತ್ಯದ ಪಟ್ಟುಗಳನ್ನು ಸಮರ್ಥವಾಗಿ ಕರಗತ ಮಾಡಿಕೊಂಡಿದ್ದಾರೆ. ಜೂನಿಯರ್ ಮತ್ತು ಸೀನಿಯರ್ ಭರತನಾಟ್ಯ ಪರೀಕ್ಷೆಗಳನ್ನು ಅತ್ಯುನ್ನತ ಶ್ರೇಣಿಯಲ್ಲಿ ಪೂರ್ಣಗೊಳಿಸಿರುವ ಶ್ರೀನಿಧಿ, ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯದ ಕಥಕ್ ಮತ್ತು ಹಿಂದೂಸ್ತಾನಿ ಸಂಗೀತ ಪರೀಕ್ಷೆಯ ಮೂರು ಹಂತಗಳನ್ನು ಅತ್ಯುತ್ತಮ ಅಂಕದೊಂದಿಗೆ ಪೂರ್ಣಗೊಳಿಸಿರುವುದು ಇವರ ವಿಶೇಷತೆಯಾಗಿದೆ.
ಕಲಾ ಪ್ರಸ್ತುತಿ:
ಸಾಯಿ ನಿತ್ಯೋತ್ಸವ, ಬಿಎಂಐ ಟೈಟಾನ್ ಪಂದ್ಯಾವಳಿ, ಇಸ್ಕಾನ್ ಬ್ರಹ್ಮೋತ್ಸವ, ಗುರುವಾಯೂರು ಮತ್ತು ಸಾಯಿ ದೇಗುಲಗಳಲ್ಲಿ ಕಲಾ ಪ್ರದರ್ಶನ, ಮೈಸೂರು ದಸರಾ ಯುವ ಸಂಭ್ರಮದಲ್ಲಿ ನರ್ತನ, ನಂದಿ ಬೆಟ್ಟದ ಶಿವರಾತ್ರಿ ಕಾರ್ಯಕ್ರಮದಲ್ಲಿ ಶ್ರೀನಿಧಿ ಅವರು ಭರತನಾಟ್ಯ ಕಲಾ ಪ್ರೌಢಿಮೆ ಮೆರೆದಿದ್ದಾರೆ.
ಭರತನಾಟ್ಯ ಕಲಾವಿದೆ ಸುಷ್ಮಾ ಭಾಗ್ಯಲಕ್ಷ್ಮೀ ಸೀರಿಯಲ್‌ನಲ್ಲೂ ಡ್ಯಾನ್ಸ್ ಮಾಡ್ತಾರಾ?
ಭರತನಾಟ್ಯದೊಂದಿಗೆ ಕಥಕ್ ನೃತ್ಯ ಪ್ರಕಾರದಲ್ಲೂ ಆಸಕ್ತಿ ಹೊಂದಿದ್ದು, ನಾಲ್ಕು ವರ್ಷಗಳಿಂದ ಕಥಕ್ ನೃತ್ಯ ಅಭ್ಯಾಸದಲ್ಲಿ ವಿಶೇಷ ಆಸಕ್ತಿ ತೋರಿದ್ದಾರೆ. ಬಹುಮುಖಿ ಕಲಾವಿದೆಯಾದ ಶ್ರೀನಿಧಿಗೆ ಅನೇಕ ಪ್ರಶಸ್ತಿ- ಪುರಸ್ಕಾರಗಳು ಅರಸಿ ಬಂದಿವೆ.
ಹಿಮ್ಮೇಳ:
ಶ್ರೀನಿಧಿ ಹೆಗಡೆಯವರ ಭರತನಾಟ್ಯ ರಂಗ ಪ್ರವೇಶ ಕಾರ್ಯಕ್ರಮಕ್ಕೆ ರಂಗು ಏರಿಸಲು ನಟವಾಂಗದಲ್ಲಿ ಗುರು ಡಾ. ಸುಪರ್ಣಾ, ಗಾಯನದಲ್ಲಿ ನಂದಕುಮಾರ್ ಉನ್ನಿ ಕೃಷ್ಣನ್, ಮೃದಂಗದಲ್ಲಿ ಶ್ರೀಹರಿ, ವೀಣೆಯಲ್ಲಿ ಆರ್. ಪಿ. ಪ್ರಶಾಂತ್, ರಿದಂ ಪ್ಯಾಡ್ ನಲ್ಲಿ ಕಾರ್ತಿಕ್ ವಿದ್ಯಾರ್ಥಿ ಸಹಕಾರ ನೀಡಲು ಸಿದ್ಧರಾಗಿದ್ದಾರೆ.