
ಖಾಜಾಮೈನುದ್ದೀನ್ ಪಟೇಲ್
ವಿಜಯಪುರ(ಫೆ.12): ಈ ಬಾರಿ ಕೈಕೊಟ್ಟ ಮುಂಗಾರು-ಹಿಂಗಾರು ಮಳೆ. ಹೀಗಾಗಿ ಬರಗಾಲ ಕೂಡ ತೀವ್ರವಾಯಿತು. ಇದರಿಂದ ಬದುಕಿನ ಬಂಡಿಸಾಗಿಸಲು ರೈತರು ಹರಸಾಹಸ ಪಡುವ ಪರಿಸ್ಥಿತಿ ಉದ್ಭವವಾಗಿದೆ. ಆದರೆ ಇಲ್ಲೊಬ್ಬ ಯುವ ರೈತ ಬರಡು ಭೂಮಿಯಲ್ಲಿ ಬ್ಯಾಡಗಿ ಮೆಣಸು ಬೆಳೆದು ಅದರ ಘಾಟು ಹೆಚ್ಚು ಪಸರಿಸುವಂತೆ ಮಾಡಿದ್ದಾನೆ. ಈ ಮೂಲಕ ಅದರಲ್ಲಿ ಯಶಸ್ಸು ಕೂಡ ಕಂಡಿದ್ದಾನೆ.
ಹೌದು! ಜಿಲ್ಲೆಯ ಚಡಚಣ ತಾಲೂಕಿನ ಭಾಗದಲ್ಲಿ ಹೆಚ್ಚು ಮಡ್ಡಿ ಜಮೀನು ಇವೆ. ಮಡ್ಡಿಯಲ್ಲಿ ಒಂದು ಕಡ್ಡಿನೂ ಬೆಳೆಯಲ್ಲ ಎಂಬ ಹಿರಿಯರು ಹೇಳುವ ಮಾತು. ಆದರೆ ಇದೆ ಭಾಗದ ಇಂಚಗೇರಿಯ ಗ್ರಾಮದ ಎತ್ತರದ ಪ್ರದೇಶದಲ್ಲಿ ಶ್ರೀಶೈಲ ಕುಂಬಾರ ಎಂಬ ಯುವ ರೈತ ಬರದ ಇದ್ದರೂ ಬೋರ್‌ವೆಲ್ ನೀರಿನ ಮೂಲಕ ಬ್ಯಾಡಗಿ ಮೆಣಸಿನಕಾಯಿ ಬೆಳೆದು ಗಮನ ಸೆಳೆದಿದ್ದಾನೆ.
ಬಿಜೆಪಿಗೆ 400+ ಸ್ಥಾನ ಬರುತ್ತೆಂಬ ಸತ್ಯ ಖರ್ಗೆ ಬಾಯಲ್ಲಿ ಬಂದಿದೆ: ವಿಜಯೇಂದ್ರ
ಈ ಭಾಗದಲ್ಲಿ ಕುಡಿಯಲು ಸರಿಯಾದ ನೀರು ಸಿಗುವುದು ಕಷ್ಟ ಅಂತದರಲ್ಲಿ ಬ್ಯಾಡಿಗಿ ಬೆಳೆದಿರುವುದು ನಿಜಕ್ಕೂ ಸಾಧನೆ ಕಾರ್ಯವಾಗಿದೆ. ತಂದೆ ಯಲ್ಲಪ್ಪ ಕುಂಬಾರ ಮಗನ ಬೆನ್ನಿಗೆ ನಿಂತು ಈ ಸಾಧನೆ ಕಾರಣವಾಗಿದ್ದಾರೆ. ಇಂಚಗೇರಿಯ ಯುವ ರೈತ ಶ್ರೀಶೈಲ ಹಲವಾರು ಬೆಳೆ ಮಾಡಿದ್ದರೂ ಯಶಸ್ಸು ಆಗದ ಹಿನ್ನಯಲ್ಲಿ ಸ್ವತ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ನೋಡಿ, ನಾನು ಮೆಣಸು ಬೆಳೆಯ ಬೇಕೆಂದು ಧಾರವಾಡದ ಕೃಷಿ ವಿವಿಗೆ ಭೇಟಿ ನೀಡಿ, ಅಲ್ಲಿಂದ ಸರಪ್ನ್ ೧೦೨ ಎಂಬ ಬ್ಯಾಡಗಿ ಮೆಣಸಿನ ಬೀಜ ತಂದು, ನರ್ಸರಿಯಲ್ಲಿ ಸಸಿ ತಯಾರಿಸಿಕೊಂಡು, ಮೊದಲು ಸ್ವಲ್ಪ ಪ್ರಮಾಣದಲ್ಲಿ ಕೃಷಿ ಮಾಡಿದ್ದ. ಅದು ಆರಂಭದಲ್ಲಿ ಉತ್ತಮ ಆದಾಯ ಬಂದ ನಂತರ. ಮತ್ತೆ ಧಾರವಾಡಕ್ಕೆ ಹೋಗಿ ಬೀಜ ತಂದು ನರ್ಸರಿಯಲ್ಲಿ ಸಸಿ ತಯಾರಿಸಿ ಸಾವಯವ ಕೃಷಿ ಪದ್ಧತಿಯಲ್ಲಿ ಎರಡು ಎಕರೆ ಜಮೀನಲ್ಲಿ ನಾಟಿ ಮಾಡಿ, ಉತ್ತಮ ಬೆಳೆ ಬಂದಿದ್ದು, ಈ ಭಾಗದಲ್ಲಿ ಬ್ಯಾಡಗಿ ಬೆಳೆದು ಸೈ ಎನ್ನಿಸಕೊಂಡಿದ್ದಾನೆ.
೨೬ ಕ್ವಿಂಟಲ್ ಇಳುವರಿ:
ಈ ಬಾರಿ ಮಳೆ ಕೈಕೊಟ್ಟ ಪರಿಣಾಮ ಭೀಕರ ಬರದಿಂದ ನೀರನ ಅಭಾವು ಎದುರಾದರೂ ಧರ್ಯದಿಂದ ಬ್ಯಾಡಗಿ ಮೆಣಸಿನಕಾಯಿ ಬೆಳೆದಿದ್ದಾರೆ. ಕೃಷಿ ಹೊಂಡದಲ್ಲಿ ಬೋರ್ವೇಲ್ ನೀರು ಸಂಗ್ರಹಿಸಿ, ಎರಡು ಎಕರೆ ಜಮೀನಲ್ಲಿ ತಂದೇ ಸಹಕಾರದಿಂದ ಬೆಳೆದು ಇತರೆ ರೈತರಿಗೆ ಮಾದರಿಯಾಗಿದ್ಧಾನೆ. ಎರಡು ಎಕರೆ ಜಮೀನಲ್ಲಿ ೨೬ ಕ್ವಿಂಟಲ್ ಇಳುವರಿ ಬಂದಿದ್ದು, ಕೆಜಿಗೆ ₹೪೪೦ ಮಾರಾಟವಾಗಿದೆ.
೮ ಎಕರೆ ಜಮೀನಲ್ಲಿ ಮೆಣಸು ಗುರಿ:
ಎತ್ತರ ಪ್ರದೇಶದಲ್ಲಿ ಇದ್ದರೂ ಕೃಷಿ ಮಾಡಬಹುದು ಎಂದು ತೋರಿಸಿದ್ದ ರೈತ. ತಮ್ಮ ೧೩ ಎಕರೆ ಜಮೀನಲ್ಲಿ ೮ ಎಕರೆ ಬ್ಯಾಡಗಿ ಮೆಣಸು ಬೆಳೆಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾನೆ. ಜುಲೈ ತಿಂಗಳಲ್ಲಿ ನಾಟಿ ಮಾಡಲು ಬೇಕಾಗುವು ಸಿದ್ಧತೆ ಮಾಡಿಕೊಂಡಿದ್ದಾನೆ.
ಒಂದು ಎಕರೆ ಮೆಣಸಿನಕಾಯಿ ಕೃಷಿ ಮಾಡಲು ₹೭೦ ಸಾವಿರ ಖರ್ಚು ಆಗಲಿದೆ. ನಾವು ವ್ಯವಸ್ಥಿತವಾಗಿ ಕೃಷಿ ಮಾಡಿದರೆ ಕೈ ತುಂಬ ಹಣ ಬರಲಿದೆ. ಮಡ್ಡಿಯಲ್ಲಿ ಉತ್ತಮ ಬೆಳೆಬರುತ್ತದೆ. ಅಲ್ಲದೇ ಕರಿ ಭೂಮಿ ಇದ್ದರೆ ಎಕರೆಗೆ ಸುಮಾರು ೧೬ ಕ್ವಿಂಟಲ್ ಬೆಳೆಯಬಹುದು ಎಂದು ರೈತ ಹೇಳುತ್ತಾನೆ.
ಆರೋಗ್ಯದ ವಿಷಯ ರಾಜಕಾರಣ ಎಷ್ಟು ಸರಿ?: ಬಿಜೆಪಿ ಸಂಸದ ರಮೇಶ ಜಿಗಜಿಣಗಿ
ಈ ರೈತನ ಸಾಹಸಕ್ಕೆ ಜಿಲ್ಲೆಯಿಂದ ರೈತರು ಜಮೀನಗೆ ಭೇಟಿ ನೀಡಿ, ಅವನಿಂದ ಮಾಹಿತಿ ಸಂಗ್ರಹಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಈಗಾಗಲೇ ಹಲವಾರು ರೈತರಿಗೆ ಬ್ಯಾಡಗಿ ಮೆಣಸು ಬೆಳೆಯಲು ಬೇಕಾದ ಮಾಹಿತಿ ನೀಡಿದ್ದಾನೆ. ಹೆಚ್ಚಿನ ಮಾಹಿತಿಗಾಗಿ ಶ್ರೀಶೈಲ್ ಕುಂಬಾರ ಮೊ.8970885034ಗೆ ಸಂಪರ್ಕಿಸಿ ಮಾಹಿತಿ ಪಡೆಯಬಹುವುದು.
ಬ್ಯಾಡಗಿ ಮೆಣಸಿಕಾಯಿ ಬೆಳೆಯಿಂದ ಉತ್ತಮ ಆದಾಯ ಬರಲಿದೆ. ಇದ್ದರೂ ಕಡಿಮೆ ಖರ್ಚಿನಲ್ಲಿ ಸಾವಯವ ಕೃಷಿ ಪದ್ಧತಿಯ ನಾಟಿ ಮಾಡಿದರೇ ಹೆಚ್ಚಿನ ಆದಾಯ ಪಡೆಯಬಹುದು ಎಂದು ಇಂಚಗೇರಿ ಶ್ರೀಶೈಲ್ ಕುಂಬಾರ ತಿಳಿಸಿದ್ದಾರೆ.