ಮಾಜಿ ಸಚಿವ ವಿನಯ ಕುಲಕರ್ಣಿಗೆ ಧಾರವಾಡ ಜಿಲ್ಲೆಯ ಪ್ರವೇಶಕ್ಕೆ 3 ಗಂಟೆಗಳ ಕಾಲಾವಕಾಶವನ್ನು ನೀಡಿ ಬೆಂಗಳೂರು ಜನಪ್ರತಿನಿಧಿಗಳ ನ್ಯಾಯಾಲಯ ಆದೇಶ ಹೊರಡಿಸಿದೆ.
ಹುಬ್ಬಳ್ಳಿ (ಡಿ.04): ಮಾಜಿ ಸಚಿವ ವಿನಯ ಕುಲಕರ್ಣಿಗೆ ಧಾರವಾಡ ಜಿಲ್ಲೆಯ ಪ್ರವೇಶಕ್ಕೆ 3 ಗಂಟೆಗಳ ಕಾಲಾವಕಾಶವನ್ನು ನೀಡಿ ಬೆಂಗಳೂರು ಜನಪ್ರತಿನಿಧಿಗಳ ನ್ಯಾಯಾಲಯ ಆದೇಶ ಹೊರಡಿಸಿದೆ. ವಿನಯ್ ಸಂಬಂಧಿಕರಾದ ಜಿಪಂ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮಿ ಪಾಟೀಲ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಅವರನ್ನು ಹುಬ್ಬಳ್ಳಿಯ ಸುಚಿರಾಯು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ವಿಜಯಲಕ್ಷ್ಮಿ ಪಾಟೀಲರ ಆರೋಗ್ಯ ವಿಚಾರಿಸಲು ಅನುಮತಿ ನೀಡುವಂತೆ ಕೋರ್ಚ್‌ಗೆ ವಿನಯ ಕೋರಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ 3 ಗಂಟೆ ಮಾತ್ರ ಧಾರವಾಡ ಜಿಲ್ಲಾ ಪ್ರವೇಶಕ್ಕೆ ಅನುಮತಿ ನೀಡಿ ಆದೇಶ ಹೊರಡಿಸಿದೆ. ಜಿಪಂ ಸದಸ್ಯ ಯೋಗೇಶಗೌಡ ಹತ್ಯೆ ಪ್ರಕರಣ ಹಿನ್ನಲೆಯಲ್ಲಿ ಕೋರ್ಚ್ ವಿನಯ ಕುಲಕರ್ಣಿಗೆ ಧಾರವಾಡ ಜಿಲ್ಲೆಯ ಪ್ರವೇಶಕ್ಕೆ ನಿರ್ಬಂಧ ಹೇರಿತ್ತು. ವಿನಯ ಅವರು ನಿರ್ದಿಷ್ಟವಾಗಿ ಯಾವಾಗ ಬರಲಿದ್ದಾರೆ ಎಂಬುದನ್ನು ಕಾದು ನೋಡಬೇಕು.
ವಿಡಿಯೋ ಕಾಲ್‌ನಲ್ಲೇ ಆಕಳುಗಳ ಫಾರ್ಮ್ ನೋಡುತ್ತಿದ್ದೇನೆ: ಜಿ.ಪಂ. ಸದಸ್ಯ ಯೋಗೇಶ್ ಗೌಡರ್ ಹತ್ಯೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರು ಧಾರವಾಡಕ್ಕೆ ಭೇಟಿ ನೀಡಲು ತಮಗೆ ವಿಧಿಸಿರುವ ನಿರ್ಬಂಧದ ಕುರಿತು ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ನಾನೇನು ಭಯೋತ್ಪಾದಕನಾ? ನಾನು ಸಾವಿರಾರು ಆಕಳುಗಳನ್ನು ಮಕ್ಕಳಿಗಿಂತ ಜಾಸ್ತಿ ನೋಡಿಕೊಳ್ಳುತ್ತಿದ್ದೆ. ಈಗ ವಿಡಿಯೋ ಕಾಲ್‌ನಲ್ಲಿ ನನ್ನ ಫಾರ್ಮ್ ನೋಡಿಕೊಳ್ಳುವ ಪರಿಸ್ಥಿತಿ ಇದೆ ಎಂದು ನೋವು ತೋಡಿಕೊಂಡಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಒಂದು, ಎರಡು ಆಕಳು ಇದ್ದರೆ ಸಾಕುವುದೇ ಕಷ್ಟ.
Vijayapura: ಕೃಷಿ ಹೊಂಡಕ್ಕೆ ಬಿದ್ದು ಸಹೋದರಿಬ್ಬರು ಸಾವು
ಆದರೆ ನಾನು ಹೊರಗಿದ್ದು ಸಾವಿರಾರು ಆಕಳುಗಳನ್ನು ಹೇಗೆ ಸಾಕಬೇಕು? ನನ್ನ ಮಕ್ಕಳಿಗಿಂತ ಜಾಸ್ತಿ ನಾನು ಅವುಗಳನ್ನು ಸಾಕುತ್ತಿದ್ದೆ. ನನಗೆ ಎಷ್ಟುನೋವಾಗಬಹುದು ಎಂದು ಹೇಳಿದರು. ನಾನು ಮಂತ್ರಿ ಆದಾಗೂ ಬೆಂಗಳೂರಿನಲ್ಲಿದ್ದಾಗ ಹೊರತುಪಡಿಸಿ ಒಂದು ದಿನವೂ ಡೈರಿಗೆ ಹೋಗದ ದಿನವೇ ಇಲ್ಲ. ನನ್ನನ್ನು ರಾಜ್ಯದಿಂದ, ಜಿಲ್ಲೆಯಿಂದ ಹೊರಗಿಡಲು ನಾನೇನು ದೊಡ್ಡ ಭಯೋತ್ಪಾದಕನಾ? ಇದರಿಂದ ನನಗೆ ಬಹಳಷ್ಟು ನೋವಾಗಿದೆ. ಇವತ್ತಿಗೂ ಹೊಲ ಹಾಗೂ ಡೈರಿಯನ್ನು ನಾನೇ ನಿರ್ವಹಣೆ ಮಾಡುತ್ತಿದ್ದೇನೆ. ನನಗೆ ಬಂದ ಪರಿಸ್ಥಿತಿ ಯಾರಿಗೂ ಬರೋದು ಬೇಡ ಎಂದು ಬೇಸರ ತೋಡಿಕೊಂಡರು. ಇದೇ ವೇಳೆ ಮುಂದಿನ ಚುನಾವಣೆಯಲ್ಲಿ ಧಾರವಾಡ ಗ್ರಾಮೀಣ ಕ್ಷೇತ್ರದಿಂದಲೇ ಸ್ಪರ್ಧಿಸುವುದಾಗಿ ತಿಳಿಸಿದರು.
ಜಿಲ್ಲೆಯಿಂದ ಹೊರಗಿಡಲು ನಾನೇನು ಟೆರರಿಸ್ಟಾ?: ಯಾವುದೇ ಪಕ್ಷದ ಶಾಸಕ ಹಾಗೂ ಸಮುದಾಯ ಎಂದು ಭೇದ- ಭಾವ ಮಾಡದೇ ಎಲ್ಲರಿಗೂ ಪ್ರಾಮಾಣಿಕವಾಗಿ ಕೆಲಸ ಮಾಡಿಕೊಟ್ಟಿರುವ ನನ್ನನ್ನು ಜಿಲ್ಲೆಯಿಂದ ಹೊರಗಿಡಲು ನಾನೇನು ದೊಡ್ಡ ಟೆರರಿಸ್ಟಾ? ಇದರಿಂದ ನನಗೆ ಬಹಳಷ್ಟು ನೋವಾಗಿದೆ. ನನಗೆ ಬಂದ ಪರಿಸ್ಥಿತಿ ಯಾರಿಗೂ ಬರೋದು ಬೇಡ ಎಂದು ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ವಿನಯ ಕುಲಕರ್ಣಿ ಭಾವುಕರಾಗಿ ತಮ್ಮ ನೋವನ್ನು ಹೊರ ಹಾಕಿದ್ದಾರೆ.
Chikkamagaluru: ಕಾಫಿನಾಡು ವಿವಾದಿತ ದತ್ತಪೀಠಕ್ಕೆ ಹಿಂದೂ ಅರ್ಚಕರ ನೇಮಕ
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಹಿತೈಸಿಗಳು, ವಿರೋಧ ಪಕ್ಷದವರು ಕೂಡ ಇಂತಹವರನ್ನು ಹೋಗಿ ಅಲ್ಲಿ ಇಟ್ಟರಲ್ಲ ಎನ್ನುತ್ತಿದ್ದಾರೆ. ಬಿಜೆಪಿಯ ಶೇ.80 ಅಲ್ಲ, ಶೇ.90ರಷ್ಟುಜನರು ಅದನ್ನೇ ಬಯಸುತ್ತಿದ್ದಾರೆ. ನಾನು ಶಾಸಕನಾಗಿದ್ದಾಗ ಯಾವುದೇ ರೀತಿ ಪಾರ್ಟಿ ನೋಡದೇ ನಮ್ಮ ಮನೆ ಬಾಗಿಲಿಗೆ ಬಂದ ಎಲ್ಲರ ಕೆಲಸ ಮಾಡಿಕೊಟ್ಟಿದ್ದೇನೆ ಎಂದು ಭಾವುಕರಾಗಿ ಮಾತನಾಡಿದರು. ಎಲ್ಲದಕಿಂತ ಹೆಚ್ಚು ನೋವು ಇರೋದು ನಾನು ಸಾಕಿದ ಜಾನುವಾರುಗಳನ್ನು ನೋಡದೇ ಇರೋದು. ರಾಜಕಾರಣದಲ್ಲಿ ಈ ರೀತಿ ಷಢ್ಯಂತ್ರ ಮಾಡೋದು ಏನಿದೆ..? ಯಾರಿಗೂ ನನಗೆ ಬಂದ ಪರಿಸ್ಥಿತಿ ಬರೋದು ಬೇಡ. ನನ್ನ 25 ವರ್ಷದ ರಾಜಕೀಯದಲ್ಲಿ ಒಮ್ಮೆಯೂ ಈ ರೀತಿಯ ರಾಜಕಾರಣ ಮಾಡಿಲ್ಲ ಎಂದರು.