ಮಹಿಳೆಯರಿಗೆ ರಾತ್ರಿ ಪಾಳಿಯ ಕೆಲಸಕ್ಕೆ ಕಾರ್ಮಿಕರ ವಿರೋಧ

By Kannadaprabha News  |  First Published Mar 24, 2023, 5:04 AM IST

ದುಡಿಯುವ ಮಹಿಳೆಯರನ್ನು ರಾತ್ರಿ ಪಾಳಿಯಲ್ಲಿ ದುಡಿಸಿಕೊಳ್ಳಲು ಅವಕಾಶ ಕಲ್ಪಿಸಿ ಕಾರ್ಖಾನೆ ಕಾಯ್ದೆ - 1948ಕ್ಕೆ ಮಾಡಿರುವ ತಿದ್ದುಪಡಿ ವಿರೋಧಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ನಗರದ ವಿವಿಧ ಕೈಗಾರಿಕೆಗಳ ಕಾರ್ಮಿಕರು ಮುಷ್ಕರ ಮಾಡಿ ಪ್ರತಿಭಟನೆ ನಡೆಸಿದರು. ಗುರುವಾರ ಬೆಳಿಗ್ಗೆ ನಗರದ ಬಿ.ಎಸ್‌.ಎನ್‌.ಎಲ್‌ ಮುಂದೆ ಜಮಾಯಿಸಿ ಜಿಲ್ಲಾಧಿಕಾರಿಗಳ ಕಚೇರಿಗೆ ಮೆರವಣಿಗೆಯಲ್ಲಿ ತೆರಳಿ ಅಲ್ಲಿ ಬಹಿರಂಗ ಸಭೆ ನಡೆಸಿದರು.


 ತುಮಕೂರು :  ದುಡಿಯುವ ಮಹಿಳೆಯರನ್ನು ರಾತ್ರಿ ಪಾಳಿಯಲ್ಲಿ ದುಡಿಸಿಕೊಳ್ಳಲು ಅವಕಾಶ ಕಲ್ಪಿಸಿ ಕಾರ್ಖಾನೆ ಕಾಯ್ದೆ - 1948ಕ್ಕೆ ಮಾಡಿರುವ ತಿದ್ದುಪಡಿ ವಿರೋಧಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ನಗರದ ವಿವಿಧ ಕೈಗಾರಿಕೆಗಳ ಕಾರ್ಮಿಕರು ಮುಷ್ಕರ ಮಾಡಿ ಪ್ರತಿಭಟನೆ ನಡೆಸಿದರು. ಗುರುವಾರ ಬೆಳಿಗ್ಗೆ ನಗರದ ಬಿ.ಎಸ್‌.ಎನ್‌.ಎಲ್‌ ಮುಂದೆ ಜಮಾಯಿಸಿ ಜಿಲ್ಲಾಧಿಕಾರಿಗಳ ಕಚೇರಿಗೆ ಮೆರವಣಿಗೆಯಲ್ಲಿ ತೆರಳಿ ಅಲ್ಲಿ ಬಹಿರಂಗ ಸಭೆ ನಡೆಸಿದರು.

ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್‌ ಮುಜೀಬ್‌ ಅವರು ಮಾತನಾಡಿ, ಈ ತಿದ್ದುಪಡಿಯು ಕೈಗಾರಿಕೆಯಲ್ಲಿ ಉದ್ಯೋಗ ಅವಕಾಶಗಳ ಕಡಿತವಾಗಿ, ಬಂಡವಾಳ ಶಾಹಿಗೆ ಲಾಭ ಹೆಚ್ಚಿಸುವ ಈ ತಿದ್ದುಪಡಿಯು ದೇಶದಲ್ಲಿ ನಿರುದ್ಯೋಗ ಹೆಚ್ಚಿಸಲಿದೆ. ಜಗತ್ತಿನಾದ್ಯಂತ ದಿನಕ್ಕೆ 7 ಗಂಟೆ ವಾರಕ್ಕೆ 5 ದಿನ ಬೇಡಿಕೆ ಬರುವಾಗ ಕೆಲಸದ ಅವಧಿ ಹೆಚ್ಚಳ ಯಾಕೆ ಎಂದು ಅವರು ಪ್ರಶ್ನಿಸಿದರು.

Tap to resize

Latest Videos

ಎಐಯುಟಿಯುಸಿಯ ಜಲ್ಲಾ ಸಂಚಾಲಕಿ ಮಂಜುಳ ಮಾತನಾಡಿ, ಪ್ರತಿದಿನ ಮಹಿಳೆ ಮೇಲೆ ನಿಲ್ಲದೆ ದೌರ್ಜನ್ಯ ನಡೆಯುತ್ತಿದೆ. ಇಂತಹ ಪರಿಸ್ಥಿತಿ ಇರುವಾಗ ರಾತ್ರಿ ಪಾಳಿಯಲ್ಲಿ ಮಹಿಳೆಯನ್ನು ರಕ್ಷಣೆ ಇಲ್ಲದ ದುಡಿಮೆಗೆ ಹಚ್ಚುವ ಕೆಲಸ ಒಪ್ಪಲಾಗದು ಎಂದರು.

ಎಐಟಿಯುಸಿ ಗಿರೀಶ್‌ ಮಾತನಾಡಿ, ಸರ್ಕಾರ 8 ಗಂಟೆಯ ದುಡಿಮೆ ಹಕ್ಕು ಕಸಿದು ಕಾರ್ಮಿಕರುನ್ನು ಗುಲಾಮಗಿರಿಗೆ ತಳ್ಳುವ ಕ್ರಮ ಎಂದು ಅಪಾಧಿಸಿದರು. ಜನ ವಿರೋಧಿ ನೀತಿಗಳ ಜಾರಿ ಮಾಡುತ್ತಿರುವ ಬಿಜೆಪಿ ಸರ್ಕಾರವನ್ನು ಸೋಲಿಸಿ ದಶಕಗಳ ತ್ಯಾಗ ಬಲಿದಾನಗಳಿಂದ ಗಳಿಸಿರುವ ಹಕ್ಕುಗಳನ್ನು ರಕ್ಷಿಸಲು ಕರೆ ನೀಡಿದರು.

ಸಿಐಟಿಯು ಎನ್‌.ಕೆ. ಸುಬ್ರಮಣ್ಯ, ಷಣಮ್ಮಪ್ಪ, ರಂಗಧಾಯಯ್ಯ, ಕರ್ನ ಲಿಬರ್ಸ ಕಾರ್ಮಿಕರ ಸಂಘದ ಶಿವ ಕುಮಾರ್‌ ಸ್ವಾಮಿ, ದಿಲೀಪ್‌, ಪಿಟ್‌ ವೇಲ್‌ ಕಾರ್ಮಿಕರ ಸಂಘ ಕಾರ್ಯದರ್ಶಿ ಸುಜಿತ್‌, ರಾಮಣ್ಣ ಎಂಎಚ್‌ಐಎನ್‌ ಕಾರ್ಮಿಕ ಸಂಘದ ಶಶಿಕಿರಣ್‌, ಉಮೇಶ್‌, ವಿಶಾಕ ಕಾರ್ಮಿಕರ ಸಂಘ ರುದ್ರೇಶ್‌, ಕಟ್ಟಡ ಕಾರ್ಮಿಕ ಸಂಘದ ಕಲೀಲ್‌, ಶಂಕರಪ್ಪ, ಎಐಟಿಯುಸಿ ಕಾಂತರಾಜು, ಅಶ್ವತ್ಥನಾರಾಯಣ, ಚಂದ್ರಶೇಖರ್‌, ವಿಪೋ› ನಾರಯಣ, ಚಾಮುಂಡಿ ಜಾಪಾರ್‌ ಇತರು ಪ್ರತಿಭಟನೆಯ ಮುಂದಾಳತ್ವ ವಹಿಸಿದ್ದರು .

ಗರ್ಭಿಣಿಯರಿಗೆ ಅಪಾಯಕಾರಿ 

ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವುದು ಈಗ ಅನೇಕರಿಗೆ ಅನಿವಾರ್ಯ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡೋದ್ರಿಂದ ಆರೋಗ್ಯದಲ್ಲಿ ಏರುಪೇರಾಗೋದು ಸಹಜ. ಅದ್ರಲ್ಲೂ ಗರ್ಭಿಣಿಯರು ನೈಟ್ ಶಿಫ್ಟ್ ನಲ್ಲಿ ಕೆಲಸ ಮಾಡೋದು ಬಹಳ ಅಪಾಯಕಾರಿ ಅಂದ್ರೆ ತಪ್ಪಾಗಲಾರದು. ಗರ್ಭಿಣಿಯರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವುದ್ರಿಂದ ಅವರಿಗೆ  ವಿಶ್ರಾಂತಿ ಪಡೆಯಲು ಮತ್ತು ಸಾಕಷ್ಟು ನಿದ್ರೆ ಮಾಡಲು ಸಮಯ ಸಿಗುವುದಿಲ್ಲ. ಇದ್ರಿಂದ ಆರೋಗ್ಯ ಸಮಸ್ಯೆ ನಿಮ್ಮನ್ನು ಕಾಡುತ್ತದೆ. ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಪ್ರಕಾರ, ಗರ್ಭಧಾರಣೆಯಲ್ಲಿ ಹಾರ್ಮೋನುಗಳಲ್ಲಿ ಸಾಕಷ್ಟು ಏರುಪೇರುಗಳಾಗ್ತಿರುತ್ತವೆ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವುದರಿಂದ ಇದು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಗರ್ಭಾವಸ್ಥೆಯಲ್ಲಿ ಕೆಲ ಅನಾರೋಗ್ಯ ನಿಮ್ಮನ್ನು ಕಾಡುವುದ್ರಿಂದ ಹಗಲಿನಲ್ಲಿ ಕೆಲಸ ಮಾಡುವುದೇ ಕಷ್ಟವಾಗಿರುತ್ತದೆ. ಅಂಥದ್ರಲ್ಲಿ ರಾತ್ರಿ ಕೆಲಸ ಮಾಡೋದು ಸವಾಲಿನ ಸಂಗತಿ. 

ರಾತ್ರಿ (Night) ಪಾಳಿ ಮಾಡುವ ಜನರಿಗೆ ಬೆಳಿಗ್ಗೆ ಸರಿಯಾಗಿ ನಿದ್ರೆ (Sleep ) ಮಾಡಲು ಸಾಧ್ಯವಾಗುವುದಿಲ್ಲ. ಹಗಲಿನಲ್ಲಿ ನಿದ್ರೆ ಬರುವುದಿಲ್ಲ. ಗಲಾಟೆ, ಬೆಳಕು ನಿದ್ರೆಗೆ ಅಡ್ಡಿಯುಂಟು ಮಾಡುತ್ತದೆ. ಹಾಗಾಗಿ ಕೆಲವರು ವಾರಾಂತ್ಯ (Weekend) ದಲ್ಲಿ ಮಾತ್ರ ನಿದ್ರೆ ಮಾಡ್ತಾರೆ. ಗರ್ಭಿಣಿ (pregnant) ಯರು ವಾರಗಟ್ಟಲೆ ನಿದ್ರೆ ಬಿಟ್ಟರೆ ಅವರ ಆರೋಗ್ಯದ ಜೊತೆ ಮಗುವಿನ ಆರೋಗ್ಯ (Health) ಹದಗೆಡುತ್ತದೆ. ಗರ್ಭಿಣಿಯರಿಗೆ ನಿದ್ರೆ ಬಹಳ ಮುಖ್ಯ. ನಿದ್ರಾಹೀನತೆ ರೋಗನಿರೋಧಕ ಶಕ್ತಿ ಮತ್ತು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಸ್ಲೀಪ್ ಫೌಂಡೇಶನ್ ಸೂಚಿಸುತ್ತದೆ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡ್ತಿರುವ ಗರ್ಭಿಣಿಯರು ಕೆಲ ವಿಷ್ಯವನ್ನು ತಿಳಿದಿರಬೇಕು. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. 

ರಾತ್ರಿ ಪಾಳಿಯಲ್ಲಿ ಗರ್ಭಿಣಿಯರನ್ನು ಕಾಡುತ್ತೆ ಈ ಸಮಸ್ಯೆ : ರಾತ್ರಿ ಕಚೇರಿಗಳಲ್ಲಿ ಸಿಬ್ಬಂದಿ ಸಂಖ್ಯೆ ಕಡಿಮೆಯಿರುತ್ತದೆ. ಗರ್ಭಿಣಿಯರಿಗೆ ತುರ್ತು ಚಿಕಿತ್ಸೆಯ ಅವಶ್ಯಕತೆಯಿದ್ರೆ ಅದು ಸಿಗದೆ ಹೋಗಬಹುದು. ಹಾಗೆ ನಿದ್ರೆ ತಡೆ ಹಿಡಿದು ಕೆಲಸ ಮಾಡುವುದ್ರಿಂದ ಒತ್ತಡ ಹೆಚ್ಚಾಗುತ್ತದೆ. ರಾತ್ರಿ ಕಚೇರಿಯಲ್ಲಾಗುವ ಗಲಾಟೆ, ಯಂತ್ರಗಳ ಶಬ್ಧ ಮತ್ತಷ್ಟು ಹಾನಿ ಮಾಡುತ್ತದೆ.

ಈ ವಿಟಮಿನ್ ಗಳ ಕೊರತೆಯಿಂದಾಗಿ, ಹಲ್ಲುಗಳು ದುರ್ಬಲವಾಗುತ್ತೆ!

ಕಾಡುತ್ತೆ ಈ ಅನಾರೋಗ್ಯ : ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಗರ್ಭಿಣಿಯರಿಗೆ ಮಧುಮೇಹದ ಅಪಾಯ ಹೆಚ್ಚಿರುತ್ತದೆ. ಇದಲ್ಲದೆ ಅಸಮರ್ಪಕ ನಿದ್ರೆಯು ಪ್ರಿಕ್ಲಾಂಪ್ಸಿಯಾ, ಹೆರಿಗೆಯಲ್ಲಿ ಸಮಸ್ಯೆ ಕಾಣಿಸಿಕೊಳ್ಳುವಂತಹ ಅಪಾಯ ಹೆಚ್ಚಾಗುತ್ತದೆ ಎಂದು ಜಾನ್ಸ್ ಹಾಪ್ಕಿನ್ಸ್ ಮೆಡಿಸಿನ್ ವರದಿ ಮಾಡಿದೆ.

PINK EYE ಗುಣಪಡಿಸಿಕೊಳ್ಳಲು ಇಲ್ಲಿವೆ ಸಿಂಪಲ್ ಮನೆಮದ್ದು!

ಗರ್ಭಿಣಿಯರು ಹೀಗೆ ಆರೋಗ್ಯ ಕಾಪಾಡಿಕೊಳ್ಳಿ : ಗರ್ಭಿಣಿಯರು ತಮ್ಮ ಮೇಲಾಧಿಕಾರಿಗಳಿಗೆ ವಿಷ್ಯ ತಿಳಿಸಿರಬೇಕು. ತುರ್ತು ಸಂದರ್ಭಕ್ಕೆ ಬೇಕಾದ ವ್ಯವಸ್ಥೆಯನ್ನು ಅವರು ಮಾಡಿರ್ತಾರೆ.  ರಾತ್ರಿ ಪಾಳಿಯಲ್ಲಿ ಬಿಗಿಯಾದ ಬಟ್ಟೆ ಧರಿಸುವುದನ್ನು ತಪ್ಪಿಸಿ. ಹಾಗೆಯೇ ದಿನದಲ್ಲಿ 7 ಗಂಟೆ ನಿದ್ರೆ ಮಾಡಿ. ನಿಮ್ಮ ಸಾಮರ್ಥ್ಯಕ್ಕಿಂತ ಹೆಚ್ಚಿನ ಕೆಲಸವನ್ನು ಮಾಡಬೇಡಿ. ರಾತ್ರಿ ಪಾಳಿಯಲ್ಲಿ ಆಹಾರದ ಮೇಲೆ ಗಮನವಿರಲಿ. ನಿದ್ರೆ ನಿಯಂತ್ರಣಕ್ಕೆ ಅನೇಕರು ಕಾಫಿ, ಟೀ ಸೇವನೆ ಹೆಚ್ಚು ಮಾಡ್ತಾರೆ. ಇದ್ರ ಮೇಲೆ ಗಮನವಿರಲಿ. ರಾತ್ರಿ ಸಮಯದಲ್ಲಿ ಹೆಚ್ಚು ನೀರು ಸೇವನೆ ಮಾಡಿ. ದ್ರವ ಆಹಾರ ನಿಮ್ಮ ಹೊಟ್ಟೆ ಸೇರುವಂತೆ ನೋಡಿಕೊಳ್ಳಿ. ನೀವು ಜ್ಯೂಸ್ ಸೇವನೆ ಮಾಡಬಹುದು. ಡ್ರೈ ಫ್ರೂಟ್ಸ್, ಹಣ್ಣುಗಳು ಸೇರಿದಂತೆ ಆರೋಗ್ಯಕರ ಆಹಾರ ಸೇವನೆ ಮಾಡಿ. ಮಾಂಸಾಹಾರ ಸೇವನೆ ಮಾಡಬೇಡಿ. ಇದು ಸರಿಯಾಗಿ ಜೀರ್ಣವಾಗುವುದಿಲ್ಲ. ಅಜೀರ್ಣ ಸಮಸ್ಯೆಯಿಂದ ಗ್ಯಾಸ್ ನಿಮ್ಮನ್ನು ಕಾಡುತ್ತದೆ. ಕೆಲಸ ಮಾಡಲು ಮತ್ತಷ್ಟು ಕಿರಿಕಿರಿಯಾಗುತ್ತದೆ. ರಾತ್ರಿ ಪಾಳಿಯಲ್ಲಿ ಧೂಮಪಾನ ಮಾಡಬೇಡಿ. ಅನಾರೋಗ್ಯದಿಂದ ಬಳಲುತ್ತಿದ್ದರೆ ಮತ್ತು ರಜೆಯ ಅಗತ್ಯವಿದ್ದರೆ ರಜೆ ತೆಗೆದುಕೊಂಡು ವಿಶ್ರಾಂತಿ ಪಡೆಯಿರಿ.

click me!