ಇಲ್ಲಿನ ಗ್ರಾಮೀಣ ಪ್ರದೇಶದಲ್ಲಿ ಈ ಸುಂದರ ದೃಶ್ಯಗಳು ಕಂಡು ಬರುತ್ತಿದೆ. ಗ್ರಾಮೀಣ ಮಹಿಳೆಯರು ಈ ರೀತಿ ತಲೆ ಮೇಲೆ ಹೊತ್ತು ಪೊರಕೆ ಮಾರುತ್ತಿದ್ದಾರೆ. ಕೈಗೂ ಆದಾಯ ಬರುತ್ತಿದೆ
ವರದಿ : ಕಾಗತಿ ನಾಗರಾಜಪ್ಪ.
ಚಿಕ್ಕಬಳ್ಳಾಪುರ (ನ.23): ಬರಡು ಜಿಲ್ಲೆಯಲ್ಲಿ ಈ ವರ್ಷ ಮಳೆ ತೋರಿದ ಕೃಪೆಗೆ ಗ್ರಾಮೀಣ ಪ್ರದೇಶದಲ್ಲಿ ಪೊರಕೆ ಕಡ್ಡಿಗಳ ಸಂಗ್ರಹಕ್ಕೆ ಗ್ರಾಮೀಣ ಮಹಿಳೆಯರಲ್ಲಿ ಪೈಪೋಟಿ ಏರ್ಪಟಿದೆ. ಪೊರಕೆ ಕೊಯ್ಲಿನ ಸುಗ್ಗಿ ಈಗ ಗ್ರಾಮೀಣ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಆಸರೆಯಾಗಿದೆ.
ಗುಡ್ಡಗಾಡು ಪ್ರದೇಶ, ಹೊಲಗಳ ಬದುಗಳ ಮೇಲೆ ಪ್ರಾಕೃತಿಕವಾಗಿ ಬೆಳೆಯುವ ಪೊರಕೆ ಕಡ್ಡಿಗಳು ಈ ಬಾರಿ ಉತ್ತಮ ಮಳೆಯಿಂದ ಬಂಪರ್ ಬೆಳೆ ಬಂದಿದ್ದು ವರ್ಷ ಪೂರ್ತಿ ಮನೆಗೆ ಬೇಕಾಗುವಷ್ಟುಪೊರಕೆಗಳ ಸಂಗ್ರಹಕ್ಕೆ ರೈತ ಮಹಿಳೆಯರು ಒಂದಡೆ ಮುಂದಾದರೆ ಮತ್ತೊಂದಡೆ ಗ್ರಾಮೀಣ ಕೃಷಿ ಕೂಲಿ ಕಾರ್ಮಿಕ ಮಹಿಳೆಯರಿಗೆ ಪೊರಕೆ ಕಡ್ಡಿಗಳ ಕೊಯ್ಲಿನ ಸುಗ್ಗಿ ಆದಾಯದ ಮೂಲವಾಗಿವೆ.
ಮಹಿಳೆಯರಿಗೆ ಉತ್ತಮ ಆದಾಯ
ರಾಗಿ, ನೆಲಗಲಡೆ ಮತ್ತಿತರ ಕೃಷಿ ಉತ್ಪನ್ನಗಳ ಕೊಯ್ಲು ಪೊರ್ಣಗೊಳಿಸಿರುವ ರೈತ ಮಹಿಳೆಯರು ಚಿತ್ತ ಈಗ ಪೊರಕೆ ಕಡ್ಡಿಗಳ ಸಂಗ್ರಹದತ್ತ ನೆಟ್ಟಿದ್ದು ದಿನ ಬೆಳೆಗಾದರೂ ಗ್ರಾಮೀಣ ಮಹಿಳೆಯರು ಗುಂಪು ಗುಂಪುಗಳಾಗಿ ಪೊರಕೆ ಕಡ್ಡಿಗಳ ಸಂಗ್ರಹಕ್ಕೆ ತೆರಳುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಪೊರಕೆ ಕಡ್ಡಿಗಳ ಸಂಗ್ರಹ ಒಂದು ಉದ್ಯಮವಾಗಿ ಮಾರ್ಪಟ್ಟಿದ್ದು ವರ್ಷಕ್ಕೊಮ್ಮೆ ಬರುವ ಪೊರಕೆ ಕಡ್ಡಿಗಳ ಕೊಯ್ಲಿನ ಸುಗ್ಗಿಯಲ್ಲಿ ಗ್ರಾಮೀಣ ಮಹಿಳೆಯರು ಸಾವಿರಾರು ರುಪಾಯಿ ಹಣ ಸಂಪಾದಿಸುತ್ತಿದ್ದಾರೆ.
ಕಡಕ್‌ನಾಥ್ ಕೋಳಿ ಸಾಕಲು ಮುಂದಾದ ಎಂ ಎಸ್ ಧೋನಿ..! .
ಸಾಮಾನ್ಯವಾಗಿ ನವೆಂಬರ್ ಆರಂಭದಿಂದ ಮಾಚ್‌ರ್ ಅಂತ್ಯದ ವರೆಗೆ ಈ ಪೊರಕೆ ಕಡ್ಡಿಗಳ ಸುಗ್ಗಿ ಜಿಲ್ಲೆಯಲ್ಲಿ ಇರುತ್ತದೆ. ಕುರಿ, ಮೇಕೆ ಕಾಯುವ ಕುರಿಗಾಯಿ ಮಹಿಳೆಯರು ಸಹಜವಾಗಿ ಪೊರಕೆ ಕಡ್ಡಿಗಳ ಸಂಗ್ರಹದಲ್ಲಿ ತೊಡಗಿದರೆ, ಕೆಲ ಗ್ರಾಮೀಣ ಮಹಿಳೆಯರು ಪೊರಕೆ ಕಡ್ಡಿಗಳನ್ನು ಸಂಗ್ರಹಿಸಿ ನೂರಾರು ಪೊರಕೆಗಳನ್ನು ಸಿದ್ದಪಡಿಸಿ ವರ್ಷಪೂರ್ತಿ ಮಾರಾಟ ಮಾಡುವ ಕಾಯಕವನ್ನು ರೂಢಿಸಿಕೊಂಡಿದ್ದಾರೆ. ಕೆಲವರು ಪೊರಕೆಗಳನ್ನು ಸಿದ್ಧಪಡಿಸಿ ಬೆಂಗಳೂರು ಸೇರಿದಂತೆ ಜಿಲ್ಲಾ ಕೇಂದ್ರಗಳಿಗೆ ತಂದು ಮಾರಾಟ ಮಾಡಿ ಬದುಕು ನಡೆಸುತ್ತಿದ್ದಾರೆ.
ಬೆಳಗ್ಗೆ ಪೊರಕೆ ಕಡ್ಡಿ ಸಂಗ್ರಹಕ್ಕೆ ಹೋದರೆ ಸಂಜೆ 4 ಗಂಟೆಗೆ ವಾಪಸ್ಸು ಹೋಗುತ್ತೇವೆ. ದಿನಕ್ಕೆ 10 ರಿಂದ 12 ಪೊರಕೆಗೆ ಆಗುವಷ್ಟುಕಡ್ಡಿಗಳನ್ನು ಕೊಯ್ಲು ಮಾಡಬಹದು. ಒಂದು ಪೊರಕೆ ಮಾರುಕಟ್ಟೆಯಲ್ಲಿ 20 ರಿಂದ 25 ರು, ಮಾರಾಟವಾಗುತ್ತದೆ. 200 ರಿಂದ 250 ರೂ, ಸಂಪಾದನೆ ಮಾಡಬಹುದು.
ನಾರಾಯಣಮ್ಮ, ದೊಬರನಾಯಕನಹಳ್ಳಿ