* ಕೋಲಾರ ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ
* ಭಯದಿಂದ ದಿನ ದೂಡಬೇಕಾದ ಅನಿವಾರ್ಯತೆ
* ಕಾರಿಡಾರ್ ಯೋಜನೆ ಅವೈಜ್ಞಾನಿಕ
ವರದಿ : ದೀಪಕ್ , ಏಷಿಯಾನೆಟ್ ಸುವಣ೯ ನ್ಯೂಸ್ ಕೋಲಾರ
ಕೋಲಾರ(ಮಾ. 29) ಕಾಡಾನೆಗಳಿಂದ ಮುಕ್ತಿ ಯಾವಾಗ…! ಅವರೆಲ್ಲಾ ನೆಮ್ಮದಿಯಿಂದ ನಿದ್ದೆ ಮಾಡಿ ಅದೆಷ್ಟೂ ವಷ೯ ಆಯ್ತೋ.ಸದಾ ಭಯದಿಂದಿದಲೇ ಜೀವನ ಸಾಗಿಸ್ತಿರೋ ಅವ್ರೂ ಹಗಲಲ್ಲೂ ಬೆಚ್ಚಿ ಬೀಳ್ತಿದ್ದಾರೆ.ಎಲ್ಲಿಂದ ಹೇಗೆ ನಮಗೆ ಸಾವು ಬರುತ್ತೋ ಗೊತ್ತಿಲ್ಲ ಅನ್ನೋ ಆತಂಕದಲ್ಲಿದ್ದಾರೆ.ಯಾಕೆ ಏನಾಯ್ತು ಅನ್ನೋ ಕುತೂಹಲಕ್ಕೆ ಈ ಸ್ಟೋರಿ ನೋಡಿ…
ಇದು ಕೋಲಾರ (Kolar) ಜಿಲ್ಲೆಯ ಬಂಗಾರಪೇಟೆ (Bangarpete0 ತಾಲ್ಲೂಕಿನ ಗಡಿ ಕಾಮಸಮುದ್ರ ಅರಣ್ಯ ಪ್ರದೇಶ, ಸಾವಿರಾರು ಹೆಕ್ಟೇರು ಅರಣ್ಯ ಪ್ರದೇಶ ಗಡಿಗೆ ಹೊಂದಿಕೊಂಡಿದೆ. ಈ ಅರಣ್ಯ ಪ್ರದೇಶ ಆಂಧ್ರಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳ ಅರಣ್ಯಕ್ಕೆ ಸಂಪರ್ಕ ಕೂಡ ಹೊಂದಿದೆ. ಹಾಗಾಗಿ ಈ ಭಾಗದಲ್ಲಿ ಆನೆ ಸೇರಿದಂತೆ ಕಾಡು ಪ್ರಾಣಿಗಳು ಆಗಾಗ ದಾಳಿ ಮಾಡಿ ಸಾಕಷ್ಟು ಬೆಳೆ ಹಾಗೂ ಜೀವ ಹಾನಿ ಮಾಡಿವೆ. ಪ್ರತಿ ವರ್ಷ ನೂರಾರು ಆನೆಗಳು ಈ ಗಡಿಯಲ್ಲಿ ಆಹಾರ ನೀರಿಗಾಗಿ ದಾಳಿ ಮಾಡುತ್ತಲೇ ಇವೆ. ಇದಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ನೂತನ ಯೋಜನೆಯೊಂದನ್ನ ರೂಪಿಸಿತ್ತು. ಅದು 7 ಸಾವಿರ ಹೆಕ್ಟೇರು ಪ್ರದೇಶದಲ್ಲಿ ಆನೆ ಕಾರಿಡಾರ್ ಮಾಡಿ ಆನೆ ದಾಳಿಯಿಂದ ರಕ್ಷಿಸುವ ಯೋಜನೆ.ಅದಕ್ಕಾಗಿ ನಾಲ್ಕು ವರ್ಷದ ಹಿಂದೆಯೇ ಕಾಂಡಚಲ್ಲಿ ಆನೆ ಕಾರಿಡಾರ್ (Elephant corridor) ಮಾಡಿದೆ, ಕಾರಿಡಾರ್ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವ ಹಿನ್ನೆಲೆ ಆನೆಗಳ ದಾಳಿ ಮುಂದುವರೆದಿದೆ. ಇದರಿಂದ ಕಾಡಂಚಿನ ಗ್ರಾಮಗಳ ಜನರು ಹಾಗೂ ರೈತರು ಪದೇ ಪದೇ ತಾವು ಬೆಳೆದ ಬೆಳೆಗಳನ್ನು ಹಾಗೂ ಆನೆ ದಾಳಿಗೆ ಸಿಕ್ಕಿ ಪ್ರಾಣಗಳನ್ನು ಕಳೆದುಕೊಳ್ಳೋದು ಈಭಾಗದಲ್ಲಿ ಕಾಮನ್ ಆಗಿದೆ, ಇದರಿಂದ ರೈತರು ತಮ್ಮ ಗೋಳು ಕೇಳೊರಿಲ್ಲ ಎಂದು ಕಣ್ಣೀರಾಕುತ್ತಿದ್ದಾರೆ.
ಇನ್ನೂ ಕಾಮಸಮುದ್ರಂ ಅರಣ್ಯ ಪ್ರದೇಶವನ್ನ ವನ್ಯಜೀವ ತಾಣ ಮಾಡಲು ಸರ್ಕಾರ ನಿರ್ಧರಿಸಿದೆ. ಜೊತೆಗೆ ಅಪಾರ ಪ್ರಮಾಣದ ಬೆಳೆ ನಷ್ಟ ಉಂಟು ಮಾಡುತ್ತಿದ್ದ ಆನೆಗಳಿಗೆ ಆಹಾರ ನೀರು ಒದಗಿಸುವುದು ಆನೆ ಕಾರಿಡಾರ್ ಉದ್ದೇಶ, ಜೊತೆಗೆ ಕಾಡು ಪ್ರಾಣಿಗಳಿಗೆ ಸಂರಕ್ಷಣೆ ನೀಡುವುದು ಕೂಡ ಯೋಜನೆಯ ಉದ್ದೇಶವಾಗಿದೆ. ಸದ್ಯ ಅರಣ್ಯ ಇಲಾಖೆ ಆನೆ ಕಾರಿಡಾರ್ ಯೋಜನೆಯನ್ನ ಅರ್ಧಂಬರ್ಧ ಮಾಡಿ ಸುಮ್ಮನಾಗಿದೆ. ಆನೆ ಕಾರಿಡಾರ್ ಹಾಗೂ ವನ್ಯ ಜೀವಿ ಸಂರಕ್ಷಣಾ ತಾಣವನ್ನಾಗಿ ಮಾಡಲು ಸರ್ಕಾರದಿಂದ ಇನ್ನು ಒಪ್ಪಿಗೆ ಸಿಕ್ಕಿಲ್ಲ ಪರಿಣಾಮ ಅಲ್ಪಸ್ವಲ್ಪ ಯೋಜನೆ ಮಾಡಲಾಗಿದೆ.
Fact Check: ಬಿಸಿಲಿನಿಂದ ಸಿಂಹದ ಮರಿ ಕಾಪಾಡಿದ ಆನೆ ಫೋಟೋ ವೈರಲ್, ಅಷ್ಟಕ್ಕೂ ಸತ್ಯವೇನು?
ಆದರೂ ಅದರಲ್ಲಿ ಅಕ್ರಮದ ವಾಸನೆ ಕೇಳಿಬಂದಿದೆ. ಸರ್ಕಾರದಿಂದ ಆನೆ ಕಾರಿಡಾರ್ಗೆ ಬಂದಿದ್ದ ಅನುದಾನದಲ್ಲಿ ಸದ್ಯ 34 ಕಿ.ಮೀ ಕಾರಿಡಾರ್ ಮಾಡಲಾಗಿದೆ.ಆದ್ರೆ ಅದನ್ನು ಅವೈಜ್ನಾನಿಕವಾಗಿ ನಿಯಮಗಳನ್ನು ಉಲ್ಲಂಘಿಸಿ ಮಾಡಲಾಗಿದೆ 15 - 20 ಅಡಿ ಅಗಲದಷ್ಟು ಕಂದಕ ನಿರ್ಮಾಣ ಮಾಡಿ, ಕಾಡಿನಿಂದ ನಾಡಿನತ್ತ ಬರದ ಹಾಗೆ, ತಂತಿ ಬೇಲಿ ನಿರ್ಮಾಣ ಮಾಡಬೇಕು, ಆದ್ರೆ ಇದ್ಯಾವುದು ಮಾಡದೆ ಅವೈಜ್ಞಾನಿಕವಾಗಿ ಯೋಜನೆ ಹೆಸರಲ್ಲಿ ಹಣ ತಿಂದುಹಾಕಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ. ಸದ್ಯಕ್ಕೆ ವ್ಯನ್ಯಜೀವಿ ಸಂರಕ್ಷಣಾ ತಾಣಕ್ಕೆ ಸರ್ಕಾರದಿಂದ ಅನುಮತಿ ಸಿಕ್ಕಿದ್ದೇ ಆದಲ್ಲಿ ಯೋಜನೆ ಸಮಗ್ರರೂಪ ಪಡೆದುಕೊಳ್ಳುತ್ತದೆ, ಆದ್ರೆ ಯೋಜನೆ ಅನುಮೋದನೆಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಿರ್ಲ್ಯಕ್ಷ ಎದ್ದುಕಾಣುತ್ತಿದೆ.ಕೇವಲ ಒಂದೇ ವಷ೯ದಲ್ಲಿ ಏಳಕ್ಕೂ ಹೆಚ್ಚು ಜನರು ಆನೆ ತುಳಿತಕ್ಕೆ ಸ್ಳಳದಲ್ಲೆ ಅಸುನೀಗಿದ್ದಾರೆ.
ಒಟ್ನಲ್ಲಿ ಕಾಡಿನಿಂದ ನಾಡಿನತ್ತ ಬರುತ್ತಿರುವ ಆನೆಗಳು ಅಪಾರ ಪ್ರಮಾಣದ ಬೆಳೆ ಹಾನಿ ಮಾಡಿ ಈ ಭಾಗದ ರೈತರನ್ನ ಆತಂಕಕ್ಕೆ ದೂಡುವಂತೆ ಮಾಡುತ್ತಿವೆ. ಸಕಾ೯ರಕ್ಕೆ ಇನ್ನೆಷ್ಟೂ ಅಮಾಯಕರ ಬಲಿ ಬೇಕೋ ಗೊತ್ತಿಲ್ಲ.