ಬಂಟ್ವಾಳ ಎಸ್.ವಿ.ಎಸ್. ಕಾಲೇಜಿನಲ್ಲಿ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ವಿನಾಯಕ್ ಕೆ.ಎಸ್. ಅವರ ನೇತೃತ್ವದ ಸಂಶೋಧನಾ ತಂಡದಿಂದ ‘ಉಸ್ನೆಯ ಹಿರುಟ’ ಎಂಬ ಅಪರೂಪದ ಕಲ್ಲು ಹೂವು ಪ್ರಭೇದವನ್ನು ಮುಳ್ಳಯ್ಯನಗಿರಿಯಲ್ಲಿ ಗುರುತಿಸಲಾಗಿದೆ. ಇದು ಭಾರತದಲ್ಲೇ ಮೊದಲ ಬಾರಿಗೆ ಗುರುತಿಸಲಾದ ಪ್ರಭೇದ ಎಂದು ಡಾ. ವಿನಾಯಕ್ ತಿಳಿಸಿದ್ದಾರೆ.
ಬಂಟ್ವಾಳ (ಫೆ.23): ಬಂಟ್ವಾಳ ಎಸ್.ವಿ.ಎಸ್. ಕಾಲೇಜಿನಲ್ಲಿ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ವಿನಾಯಕ್ ಕೆ.ಎಸ್. ಅವರ ನೇತೃತ್ವದ ಸಂಶೋಧನಾ ತಂಡದಿಂದ ‘ಉಸ್ನೆಯ ಹಿರುಟ’ ಎಂಬ ಅಪರೂಪದ ಕಲ್ಲು ಹೂವು ಪ್ರಭೇದವನ್ನು ಮುಳ್ಳಯ್ಯನಗಿರಿಯಲ್ಲಿ ಗುರುತಿಸಲಾಗಿದೆ. ಇದು ಭಾರತದಲ್ಲೇ ಮೊದಲ ಬಾರಿಗೆ ಗುರುತಿಸಲಾದ ಪ್ರಭೇದ ಎಂದು ಡಾ. ವಿನಾಯಕ್ ತಿಳಿಸಿದ್ದಾರೆ.
ಈ ಪ್ರಭೇದವು ಪಾರ್ಮಿಲಿಯ(Parmilia) ಎಂಬ ಕಲ್ಲು ಹೂವಿನ ಕುಟುಂಬಕ್ಕೆ ಸೇರಿದ್ದಾಗಿದ್ದು, 1500 ಅಡಿಗಿಂತ ಎತ್ತರ ಪ್ರದೇಶದಲ್ಲಿ ಮಾತ್ರ ಕಾಣಸಿಗುತ್ತದೆ. ಪಾಚಿ ಮತ್ತು ಶಿಲೀಂಧ್ರಗಳ ಸಹಯೋಗದಿಂದ ಮಾತ್ರ ಉತ್ಪತ್ತಿ ಆಗಲು ಸಾಧ್ಯ. ಇದು ವಾತಾವರಣದ ಮಾಲಿನ್ಯಕ್ಕೆ ಬೇಗ ನಶಿಸಿಹೋಗುವ ಪ್ರಭೇದವಾಗಿದ್ದು ಅತ್ಯಂತ ಕಡಿಮೆ ಮಾಲಿನ್ಯ ಇರುವ ಪ್ರದೇಶದಲ್ಲಿ ಮಾತ್ರ ಅಪರೂಪವಾಗಿ ದೊರೆಯುತ್ತದೆ.
50 ಸಾವಿರ ವರ್ಷಗಳ ನಂತರ ಧೂಮಕೇತು ಆಗಮನ: ಬರಿಗಣ್ಣಿಗೂ ಕಾಣಲಿದೆ ಎಂದ ಅತುಲ್ ಭಟ್
ಪ್ರಪಂಚದ ಕೆಲವೇ ದೇಶಗಳಾದ ಫಿಲಿಫೈನ್ಸ್ ಅಸ್ಪ್ರೇಲಿಯಾ, ಕ್ಯಾಲಿಫೋರ್ನಿಯ, ಪಶ್ಚಿಮ ಆಫ್ರಿಕಾ ದೇಶದಲ್ಲಿ ಕಾಣಸಿಗುವ ಈ ಕಲ್ಲು ಹೂವಿನ(Stone flower) ಕುರಿತು,P್ಸ ಜರ್ನಲ್ ಆಫ್ ತ್ರಿಟನ್ ಟ್ಯಾ(Journal of Triton )… ಎಂಬ ವಿಜ್ಞಾನ ಪತ್ರಿಕೆಯ ಫೆಬ್ರವರಿ ತಿಂಗಳಿನ ವಿಶೇಷ ಆವೃತ್ತಿಯಲ್ಲಿ ಅವರು ಬರೆದ ಲೇಖನ ಪ್ರಕಟವಾಗಿರುತ್ತದೆ. ಇದುವರೆಗೆ ಭಾರತದಲ್ಲಿ ಈ ಕುಟುಂಬಕ್ಕೆ ಸೇರಿದ 57, ಕರ್ನಾಟಕದಲ್ಲಿ 8 ಕಲ್ಲು ಹೂಗಳ ಪ್ರಭೇದ ಗುರುತಿಸಲಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಈ ಪ್ರಭೇದದ ಕಲ್ಲು ಹೂಗಳು ವಿಶಿಷ್ಟರೀತಿಯ ಆವಾಸಸ್ಥಾನಕ್ಕೆ ಹೊಂದಿಕೊಂಡಿದ್ದು ಅವುಗಳ ಆವಾಸಸ್ಥಾನ ನಾಶವಾದರೆ ಪ್ರಕೃತಿಯಿಂದ ಇವುಗಳು ಕೂಡ ವಿನಾಶ ಹೊಂದುತ್ತವೆ. ಹಾಗಾಗಿ ಇವುಗಳ ಸಂರಕ್ಷಣೆ ಅತ್ಯಂತ ಮುಖ್ಯವಾಗಿದೆ ಎಂದು ಹೇಳಿದ್ದಾರೆ. ತಂಡದಲ್ಲಿ ಅರ್ಚನಾ ಆರ್. ಮೇಸ್ತ ಮತ್ತು ಎನ್. ರಾಜೇಶ್ವರಿ ಇದ್ದರು.
ಮೊಮ್ಮಗನಿಗೆ ಕಿಡ್ನಿ ನೀಡಿ ಇಳಿವಯಸ್ಸಿನಲ್ಲೂ ಮಾದರಿಯಾದ ಅಜ್ಜಿ