ಇದು ಮಾವಿನ ಮರ ಹೂಬಿಡುವ ಕಾಲ. ಈಗಾಗಲೇ ಕೆಲವು ಕಡೆ ಮಾವಿನ ಕಾಯಿಗಳು ಸಿಗುತ್ತಿವೆ. ಇನ್ನೊಂದು ತಿಂಗಳು ಕಳೆದರೆ ಸ್ವಾದಿಷ್ಟ ಮಾವಿನ ಹಣ್ಣುಗಳು ಮಾರುಕಟ್ಟೆಗೆ ಬರುತ್ತವೆ. ಅದಕ್ಕೂ ಮುನ್ನ ಮಾವು ಬೆಳೆಯುವ ರೈತರು ತಮ್ಮ ಬೆಳೆ ರಕ್ಷಿಸಿಕೊಳ್ಳಲು ಏನೇನು ಮಾಡಬೇಕು ಎಂಬ ಬಗ್ಗೆ ಇಲ್ಲಿದೆ ಸರಳ ಟಿಪ್ಸ್.
ಕೋಲಾರ(ಜ.14): ಇದು ಮಾವಿನ ಮರ ಹೂಬಿಡುವ ಕಾಲ. ಈಗಾಗಲೇ ಕೆಲವು ಕಡೆ ಮಾವಿನ ಕಾಯಿಗಳು ಸಿಗುತ್ತಿವೆ. ಇನ್ನೊಂದು ತಿಂಗಳು ಕಳೆದರೆ ಸ್ವಾದಿಷ್ಟ ಮಾವಿನ ಹಣ್ಣುಗಳು ಮಾರುಕಟ್ಟೆಗೆ ಬರುತ್ತವೆ. ಅದಕ್ಕೂ ಮುನ್ನ ಮಾವು ಬೆಳೆಯುವ ರೈತರು ತಮ್ಮ ಬೆಳೆ ರಕ್ಷಿಸಿಕೊಳ್ಳಲು ಕೆಲವು ಸರಳ ಕ್ರಮಗಳನ್ನು ಅನುಸರಿಬಹುದು.
ಮಾವು ಬೆಳೆ ರಕ್ಷ ಣೆಗೆ ಕೈಗೊಳ್ಳಬೇಕಾದ ಕ್ರಮ: ಗಂಧಕ ಅಥವಾ ತಾಮ್ರ ಮೂಲದ ಔಷಧ ಬಳಸದಂತೆ ರೈತರಿಗೆ ಸೂಚನೆ ನೀಡಲಾಗಿದೆ. ಮೊದಲ ಸಿಂಪಡಣೆಯನ್ನು ಹೂವಿನ ಹಂತದಲ್ಲಿ ಮಾಡಬೇಕು. ಇಮಿಡಾಕ್ಲೋಪ್ರಿಡ್ (17.8% ಎಸ್.ಎಲ್) 0.3-0.4 ಮಿ.ಲೀ ಜೊತೆಗೆ ಕಾರ್ಬನ್‌ಡೈಜಿಮ್ 1 ಗ್ರಾಂ ಅನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಬೇಕು.
ಗಂದಕವಿರುವ ಔಷಧ ಬಳಸಬೇಡಿ:
ಎರಡನೇ ಸಿಂಪಡಣೆಯನ್ನು ಕಾಯಿ ಕಚ್ಚಿದ ಕೂಡಲೇ ಲ್ಯಾಮಡಾಸೆಹೆಲೋತ್ರಿನ್ 5ಇಅ 0.5 ಮಿ.ಲೀ ಜೊತೆಗೆ ಹೆಕ್ಸಾಕೊನರೆಲ್ 1 ಮಿ.ಲೀ ಅನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಹೂವಿನ ಹಂತದಲ್ಲಿ ಗಂಧಕ ಅಥವಾ ತಾಮ್ರ ಮೂಲದ ಔಷಧಗಳನ್ನು ಬಳಸಬಾರದು. ಬೂದಿ ರೋಗ, ಹೂ ಗೊಂಚಲು ಒಣಗುವಿಕೆ ಮತ್ತು ಚಿಬ್ಬು ರೋಗ ಹತೋಟಿಗೆ ಕಾರ್ಬನ್‌ಡೈ ಜಿಮ್ 12% + ಮ್ಯಾಂಕೋಜೆಬ್ 63% ಡಬ್ಲೂ.ಪಿ. 1-1.5 ಗ್ರಾಂ ಅಥವಾ ಡೈ ನೋಕ್ಯಾಪ್ 48 ಇಸಿ 1 ಮಿ.ಲಿ ಅನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಬೇಕು.
ಸಂಯುಕ್ತ ಶಿಲೀಂದ್ರ ನಾಶಕ:
ಬೂದಿರೋಗ ಮತ್ತು ಚಿಬ್ಬುರೋಗ ಹಾವಳಿ ಹೆಚ್ಚಾಗಿ ಕಂಡಾಗ ಸಂಯುಕ್ತ ಶಿಲೀಂದ್ರ ನಾಶಕ ಟೆಬು ಕೋನೋಜಾಲ್ 50% + ಟ್ರೈಪ್ಲಾಕ್ಸಿ ಸ್ಟ್ರೋಬಿನ್ 25% ಡಬ್ಲ್ಯೂಜಿ 0.75 ಗ್ರಾಂ ಅನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪ ರಣೆ ಮಾಡಬೇಕು. ಹೂವು ಒಣಗುವ ರೋಗ ಹತೋಟಿಗೆ ಹೆಕ್ಸಾಕೊನರೆಲ್ 1 ಗ್ರಾಂ ಅನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
ಪ್ರೀತಿಸಿದ ಅಪ್ರಾಪ್ತೆಗೆ ವಿಷ ಕುಡಿಸಿ ಕೊಂದ ಯುವಕ..!
ಸಾವಯವ ಕಷಿ ಪದ್ಧತಿ ಯಡಿ ಬೇವಿನ ಸೊಪ್ಪು 10 ಗ್ರಾಂ ಅಥವಾ ಬಿವೆರಿಯಾ ಬ್ಯಾಸಿಯಾನ 5 ಮಿ.ಲೀ ಅನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಬೇಕು. ಹೂ ಅರಳಿದ ಸಮಯದಲ್ಲಿ ಯಾವುದೇ ರೋಗ/ಕೀಟನಾಶಕವನ್ನು ಸಿಂಪ ಡಿಸದಂತೆ ಎಚ್ಚರ ವಹಿಸಬೇಕು. ನೀರಾವರಿಯನ್ನು 5 ದಿನಗಳಿಗೊಮ್ಮೆ ಕೊಡಬೇಕು. ಮಾಹಿತಿಗಾಗಿ ದೂರವಾಣಿ ಸಂಖ್ಯೆ: 7829512236 ಅಥವಾ ತೋಟಗಾರಿಕೆ ಮಾಹಿತಿ ಮ ತ್ತು ಸಲಹಾ ಕೇಂದ್ರ (ಹಾರ್ಟಿಕ್ಲಿನಿಕ್), ಕೋಲಾರ ರವರನ್ನು ಸಂಪರ್ಕಿಸಬಹುದಾಗಿದೆ.