ಭ್ರೂಣ ಹತ್ಯೆಗೆ ಒಳಗಾದವರಿಗೂ ಕಠಿಣ ಶಿಕ್ಷೆ ಆಗಲಿ: ಸಚಿವ ವೆಂಕಟೇಶ್

By Kannadaprabha NewsFirst Published Dec 1, 2023, 12:29 PM IST
Highlights

ಭ್ರೂಣ ಹತ್ಯೆಯಂತ ದ್ರೋಹದ ಕೆಲಸ ಮತ್ತೊಂದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಹೇಳಿದರು. ಚಾಮರಾಜನಗರದಲ್ಲಿ ಮಾಧ್ಯಮವರೊಂದಿಗೆ ಮಾತನಾಡಿದ ಅವರು, ಭ್ರೂಣ ಹತ್ಯೆ ಮಾಡಿದವರ ಜೊತೆಗೆ ಭ್ರೂಣ ಹತ್ಯೆಗೆ ಒಳಗಾದವರಿಗೂ ಕಠಿಣ ಶಿಕ್ಷೆ ಆಗಬೇಕು.

ಚಾಮರಾಜನಗರ (ಡಿ.01): ಭ್ರೂಣ ಹತ್ಯೆಯಂತ ದ್ರೋಹದ ಕೆಲಸ ಮತ್ತೊಂದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಹೇಳಿದರು. ಚಾಮರಾಜನಗರದಲ್ಲಿ ಮಾಧ್ಯಮವರೊಂದಿಗೆ ಮಾತನಾಡಿದ ಅವರು, ಭ್ರೂಣ ಹತ್ಯೆ ಮಾಡಿದವರ ಜೊತೆಗೆ ಭ್ರೂಣ ಹತ್ಯೆಗೆ ಒಳಗಾದವರಿಗೂ ಕಠಿಣ ಶಿಕ್ಷೆ ಆಗಬೇಕು, ಆಗ ಮಾತ್ರ ಈ ರೀತಿ ಪಾಪದ ಕೃತ್ಯ ನಿಲ್ಲಲಿದೆ, ಭ್ರೂಣ ಹತ್ಯೆಯಂತಹ ಘಟನೆಗಳು ಬೆಳಕಿಗೆ ಬಂದರೆ ಸರ್ಕಾರದಿಂದ ಕಠಿಣ ಕ್ರಮ ನಿಶ್ಚಿತ ಎಂದರು.

ಇನ್ನು, ಚೀನಾದಲ್ಲಿ ನ್ಯುಮೋನಿಯಾ ಸೋಂಕು ಹೆಚ್ಚಳವಾದ ಕಾರಣ ರಾಜ್ಯವೂ ಕೂಡ ಎಚ್ಚೆತ್ತುಕೊಂಡಿದೆ. ಜಿಲ್ಲೆಯಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು, ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ಹಾಗೂ ಆಸ್ಪತ್ರೆಯಲ್ಲಿ ವಿಶೇಷ ವಾರ್ಡ್ ಗಳನ್ನು ರೂಪಿಸಲಾಗುತ್ತದೆ ಎಂದು ಮಾಹಿತಿ ನೀಡಿದರು. ಜಾತಿ ಗಣತಿ ವರದಿ ಬಿಡುಗಡೆಯಾದ ನಂತರ ಸರ್ಕಾರ ಪತನವಾಗುತ್ತದೆ ಹಾಗೂ ಲೋಕಸಭಾ ಚುನಾವಣೆಗೂ ಮುನ್ನ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಜೈಲು ಸೇರುತ್ತಾರೆ ಎಂಬ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಟೀಕೆಗೆ ಉತ್ತರಿಸಿದರು.

ಹೈಕೋರ್ಟ್‌ ರಿಲೀಫ್ ಕೊಟ್ಟಿಲ್ಲ, ಇವರೇ ತೆಗೆದುಕೊಂಡಿದ್ದಾರೆ: ಎಚ್‌ಡಿಕೆ ಟಾಂಗ್‌

ಈಶ್ವರಪ್ಪ ಮನಸ್ಸಿಗೆ ಬಂದಂತೆ ಏನೇನೋ ಮಾತನಾಡುತ್ತಾರೆ, ಅವರ ಹೇಳಿಕೆ ನಮ್ಮ ಅಧ್ಯಕ್ಷರನ್ನು ಉದ್ದೇಶ ಪೂರ್ವಕವಾಗಿ ಜೈಲಿಗೆ ಕಳಿಸುವ ಹುನ್ನಾರದಂತಿದೆ, ಈಶ್ವರಪ್ಪನವರ ಈ ಹೇಳಿಕೆಯ ಹಿಂದೆ ಷಡ್ಯಂತ್ರ ಅಡಗಿದೆ, ಯಾರು ಏನೆ ಅಂದರೂ ಸರ್ಕಾರ ಐದು ವರ್ಷ ಸುಭದ್ರವಾಗಿರಲಿದೆ ಎಂದರು. ಸುರ್ಜೇವಾಲ ರಾಜ್ಯಕ್ಕೆ ವಸೂಲಿಗೆ ಬರುತ್ತಾರೆ ಎಂಬ ಬಿಜೆಪಿಯವರ ಆರೋಪಕ್ಕೆ ಉತ್ತರಿಸಿದ ಸಚಿವರು, ಸುರ್ಜೇವಾಲ ರಾಜ್ಯದ ಉಸ್ತುವಾರಿ ಆಗಿದ್ದಾರೆ, ಅವರು ವಿಮಾನದಲ್ಲಿ ದುಡ್ಡು ಹಿಡಿದುಕೊಂಡು ಹೋಗಲು ಆಗುತ್ತಾ? ಬಿಜೆಪಿಯವರ ಇಂತಹ ಆಪಾದನೆಗಳಿಗೆ ಯಾವುದೇ ಅರ್ಥವಿಲ್ಲ ಎಂದು ಕಿಡಿಕಾರಿದರು.

ಹೆಣ್ಣು ಭ್ರೂಣ ಹತ್ಯೆ ಕರಾಳ ದಂಧೆ ಕೋರರಿಗೆ ಶಿಕ್ಷೆಯಾಗಲಿ: ಹೆಣ್ಣು ಭ್ರೂಣ ಪತ್ತೆ ಹಾಗೂ ಹತ್ಯೆ ಮಾಡುವ ಜಾಲ ದೊಡ್ಡ ಮಟ್ಟದಲ್ಲಿ ವಿಸ್ತರಿಸಿದ್ದು, ಸಮಗ್ರ ತನಿಖೆ ನಡೆಸುವುದರೊಂದಿಗೆ ಮೂಲ ಪತ್ತೆ ಹಚ್ಚಿ ತಪ್ಪಿತಸ್ಥರನ್ನು ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ ಸರ್ಕಾರವನ್ನು ಒತ್ತಾಯಿಸಿದರು. ತಾಲೂಕಿನ ಹುಳ್ಳೇನಹಳ್ಳಿ ಆಲೆಮನೆಗೆ ಭೇಟಿ ನೀಡಿ ಪರಿಶೀಲಿಸಿದ ಆವರು, ಆಧುನಿಕ ಕಾಲದಲ್ಲೂ ಹೆಣ್ಣು-ಗಂಡು ಎಂದು ತಾರತಮ್ಯ ಮಾಡಿ ಗರ್ಭದಲ್ಲಿಯೇ ಭ್ರೂಣ ಪತ್ತೆಗೆ ಮುಂದಾಗಿರುವುದು ಅಮಾನವೀಯ. ಹಣಕ್ಕಾಗಿ ನಾಗರಿಕ ಸಮಾಜ ತಲೆತಗ್ಗಿಸುವ ಇಂಥ ಕೃತ್ಯವನ್ನು ಮಾಡುವುದು ಕ್ರೂರ. ವಿದ್ಯಾವಂತ ಜನರೇ ಇಂತಹ ಕೃತ್ಯಕ್ಕೆ ಇಳಿದಿರುವುದು ನೋವಿನ ವಿಚಾರ. 

ಎಚ್‌.ಡಿ.ಕುಮಾರಸ್ವಾಮಿಗೆ ಅಮಿತ್‌ ಶಾ ಸುಪಾರಿ: ಕೆಪಿಸಿಸಿ ವಕ್ತಾರ ಲಕ್ಷ್ಮಣ್‌ ಆರೋಪ

ಸಮಾಜದಲ್ಲಿ ಈಗಾಗಲೇ ಹೆಣ್ಣು ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿದೆ, ಇಂತಹ ಮಾನವ ವಿರೋಧಿ ಕೃತ್ಯವನ್ನ ಎಲ್ಲರೂ ಸೇರಿ ತಡೆಯಬೇಕು ಎಂದರು. ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ಉನ್ನತ ತನಿಖೆ ನಡೆಸುವ ಮೂಲಕ ಆರೋಪಿಗಳನ್ನು ಪತ್ತೆಹಚ್ಚಬೇಕು, ಆರೋಗ್ಯ ಇಲಾಖೆ ಮುನ್ನ್ನೆಚ್ಚರಿಕೆ ವಹಿಸಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಸುತ್ತಮುತ್ತಲ ಪ್ರದೇಶದಲ್ಲಿ ಯಾವ್ಯಾವ ಚಟುವಟಿಕೆ ನಡೆಯುತ್ತಿದೆ ಎಂಬುದರ ಬಗ್ಗೆ ಗಮನಹರಿಸುವಂತೆ ತಿಳಿಸಿದರು. ಹೆಣ್ಣು ಭ್ರೂಣ ಹತ್ಯೆ ಮಾಡುವುದು ಘೋರ ಅಪರಾಧ. ಕರಾಳ ದಂಧೆಯಲ್ಲಿ ಭಾಗಿಯಾಗಿರುವ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ವಾಗಬೇಕು ಎಂದರು.

click me!