ಕಲಬುರಗಿ: ಕೋವಿಡ್‌ ಸೋಂಕಿದೆ, ಆದರೆ ಲಕ್ಷಣಗಳೇ ಇಲ್ಲ..!

By Kannadaprabha News  |  First Published Jun 24, 2020, 12:45 PM IST

ನಿತ್ಯ ಸರಾಸರಿ 30 ರಿಂದ 50 ಸೋಂಕಿನ ಪ್ರಕರಣ ವರದಿ| ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದರೂ, ಶೇ.90 ರಿಂದ 95 ಸೋಂಕಿತರಿಗೆ ಕೋವಿಡ್‌ ಲಕ್ಷಣಗಳೇ ಇಲ್ಲ| ಆದ್ದರಿಂದ ಬಹುತೇಕ ಕೋವಿಡ್‌ ಪಾಸಿಟಿವ್‌ ಬಂದ ವ್ಯಕ್ತಿಗಳು ಆಸ್ಪತ್ರೆ ಮುಖ ಸಹ ನೋಡುತ್ತಿಲ್ಲ| 


ಶೇಷಮೂರ್ತಿ ಅವಧಾನಿ

ಕಲಬುರಗಿ(ಜೂ.24): ಕೋವಿಡ್‌- 19 ಸೋಂಕು ಇದೆ, ಆದರೆ ಜ್ವರ, ಕೆಮ್ಮು, ನೆಗಡಿ, ಫ್ಲೂ ಹೆಮ್ಮಾರಿ ಇದೆ ಎಂದು ಸಾರುವ ಇಂತಹ ಯಾವ ಲಕ್ಷಣಗಳು ಇವರ ಬಳಿ ಇಲ್ಲ. ಕೊರೋನಾ ಮಹಾ ಕಂಟಕಕ್ಕೊಳಗಾಗಿ ನಿತ್ಯ ಹೆಮ್ಮಾರಿ ಸೋಂಕಿತರ ಸಂಖ್ಯಾಬಲದಲ್ಲಿ ಭಾರಿ ಹೆಚ್ಚಳ ಕಾಣುತ್ತಿರುವ ಕಲಬುರಗಿ ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿದ್ದವರಿಗೆ ಯಾವುದೂ ಲಕ್ಷಣಗಳಿಲ್ಲದ ಬೆಳವಣಿಗೆ ಕಂಡು ಬಂದಿದೆ.

Tap to resize

Latest Videos

ನಿತ್ಯ ಸರಾಸರಿ 30 ರಿಂದ 50 ಸೋಂಕಿನ ಪ್ರಕರಣ ವರದಿಯಾಗುತ್ತ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದರೂ, ಶೇ.90 ರಿಂದ 95 ಸೋಂಕಿತರಿಗೆ ಕೋವಿಡ್‌ ಲಕ್ಷಣಗಳೇ ಇಲ್ಲ. ಆದ್ದರಿಂದ ಬಹುತೇಕ ಕೋವಿಡ್‌ ಪಾಸಿಟಿವ್‌ ಬಂದ ವ್ಯಕ್ತಿಗಳು ಆಸ್ಪತ್ರೆ ಮುಖ ಸಹ ನೋಡುತ್ತಿಲ್ಲ. ಜಿಲ್ಲೆಯಲ್ಲಿ ಕೊರೋನಾ ಸೋಂಕಿನ 500 ಕ್ಕೂ ಅಧಿಕ ಸಕ್ರಿಯ ಪಾಸಿಟಿವ್‌ ರೋಗಿಗಳಿದ್ದರೂ, ಜಿಮ್ಸ್‌- 103, ಇಎಸ್‌ಐಸಿ- 6 ಸೇರಿದಂತೆ ಕೋವಿಡ್‌ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಒಳಗಾಗುತ್ತಿರೋರು 109 ಜನ ಮಾತ್ರ.

ಕೊರೋನಾ ಸೋಂಕು ಕಂಡರೂ ಲಕ್ಷಣ ಕಾಣದಿದ್ದವರನ್ನು ‘ಸೂಪರವೈಸ್ಡ್‌ ಐಸೋಲೇಷನ್‌ ಸೆಂಟರ್‌’ಗೆ ದಾಖಲಿಸಲಾಗುತ್ತಿದೆ. ಇದಕ್ಕಾಗಿಯೇ ಗುರುತಿಸಲಾಗಿರುವ ಇಂತಹ 3 ಸೆಂಟರ್‌ಗಳಲ್ಲಿ ಇದುವರೆಗೂ 450 ಜನರನ್ನು ಪ್ರತ್ಯೇಕಿಸಲಾಗಿದೆ. ಕೆಮ್ಮು, ನೆಗಡಿ, ಉಸಿರಾಯ ತೊಂದರೆ, ವಿಷಮಶೀತ ಜ್ವರದಂತಹ ಕೋವಿಡ್‌ ಲಕ್ಷಣ ಕಂಡಲ್ಲಿ ಮಾತ್ರ ನಿಗದಿತ ಆಸ್ಪತ್ರೆಗೆ ರವಾನಿಸುವ ನಿಯಮ ಇಲ್ಲಿನ ಜಿಲ್ಲಾಡಳಿತ ಪಾಲಿಸುತ್ತಿದೆ.

SSLC ಪರೀಕ್ಷೆ: ಹಾಲ್‌ ಟಿಕೆಟ್‌ ಸಿಗದೆ 77 ವಿದ್ಯಾರ್ಥಿಗಳು ಅತಂತ್ರ

ಕೊರೋನಾ ಸೋಂಕು ಹೆಚ್ಚುತ್ತಿರುವ ಜಿಲ್ಲೆಯಲ್ಲಿ ಇದುವರೆಗೂ 11 ಸಾವಾಗಿದ್ದು ಸೋಂಕು 1, 226 ಕ್ಕೆ ಹೆಚ್ಚಿದ್ದರೂ ಸೋಂಕಿತರಲ್ಲಿ ಶೇ. 95 ರಷ್ಟು ಜನರಿಗೆ ಲಕ್ಷಣಗಳೇ ಇಲ್ಲದಂತಾಗಿರೋದು ಜಿಲ್ಲೆಯ ವೈದ್ಯರಿಗೂ ಅಚ್ಚರಿಯಾಗಿ ಕಾಡುತ್ತಿದೆ. ಸೋಂಕಿದೆ, ಲಕ್ಷಣಗಳಿಲ್ಲ. ಹೀಗಾಗಿ ಸೋಂಕು ಇಂತಹವರಲ್ಲಿ ಆಗಲೇ ತಾನಿಗಿಯೇ ಬಂದು ಹೋಗಿರುವ ಸಾಧ್ಯತೆಗಳೇ ಅಧಿಕ ಎನ್ನುತ್ತಾರೆ ಇಂತಹ ರೋಗಿಗಳ ನಿಗಾ ಇಟ್ಟಿರುವ ವೈದ್ಯರು ಹಾಗೂ ಸಿಬ್ಬಂದಿ ವರ್ಗ. ಜಿಲ್ಲೆಯಲ್ಲಿ ಕಂಡಿರುವ ಸೋಂಕಿತರಲ್ಲಿ 800 ರಷ್ಟು ಮಂದಿ ಮಹಾರಾಷ್ಟ್ರ ವಲಸೆ ಕಾರ್ಮಿಕರೇ ಆಗಿರೋದು ಗಮನಾರ್ಹ. ಹೀಗೆ ಸೋಂಕು ಕಾಡಿದವರಲ್ಲಿ ಬಹುತೇಕರು ಮಧ್ಯವಯಸ್ಸಿನವರು 35 ರಿಂದ 55 ವರ್ಷದೊಳಗಿನ ಇವರೆಲ್ಲರೂ ಗಟಿಮುಟ್ಟಾಗಿದ್ದಾರೆ. ಹೀಗಾಗಿ ಕೊರೋನಾ ಸೋಂಕು ಇವರಲ್ಲಿದ್ದೂರ ಲಕ್ಷಣಗಲೇ ಕಾಣುತ್ತಿಲ್ಲ ಎಂಬುದು ಅವರೆಲ್ಲರ ಆರೋಗ್ಯದ ಮೇಲೆ ನಿಗಾ ಇಟ್ಟಿರುವ ವೈದ್ಯರ ತರ್ಕವಾಗಿದೆ. ಆದಾಗ್ಯೂ ಕೊರೋನಾ ಪಾಸಿಟಿವ್‌ ಇದ್ದವರ ಆರೋಗ್ಯದ ಮೇಲೆ ನಿಗಾ ಇಡುವುದು ಅತ್ಯಂತ ಮಹತ್ವದ್ದಾಗಿದೆ ಎಂದು ಇಲ್ಲಿ ಅವರೆಲ್ಲರ ಮೇಲೂ ನಿಗಾ ಇಡಲಾಗುತ್ತಿದೆ.

ಕಲಬುರಗಿ ಒಟ್ಟು ಸೋಂಕಿತರು- 1, 225

ಸಕ್ರಿಯ- 500
ಗುಣಮುಖ- 700
ಸೋಂಕಿತರ ಸಂಪರ್ಕ- 100 (ಐಸೋಲೇಷನ್‌ ವಾರ್ಡ್‌)
ಐಸಿಯೂ ಚಿಕಿತ್ಸೆ- 13 ಸೋಂಕಿತರು

ಸರಕಾರಿ ಆಸ್ಪತ್ರೆಗಳಲ್ಲೇ ಹಾಸಿಗೆ ಖಾಲಿ:

ಸೋಂಕಿತರು ಹೆಚ್ಚುತ್ತಿದ್ದರೂ ಲಕ್ಷಣಗಳೇ ಇಲ್ಲದ ಕಾರಣ ಅವರ್ಯಾರು ಆಸ್ಪ6ಎ ಮೆಟ್ಟಿಲು ತುಲಿಯುತ್ತಿಲ್ಲ, ಹೀಗಾಗಿ ಜಿಲ್ಲೆಯಲ್ಲಿ ಕೊವಿಡ್‌ ಚಿಕಿತ್ಸೆಗೆ ಗುರುತಿಸಲಾಗಿರುವ ಜಿಮ್ಸ್‌ ಹಾಗೂ ಇಎಸ್‌ಐಸಿ ಆಸ್ಪತ್ರೆಗಳಲ್ಲೇ ಹಾಸಿಗೆ ಖಾಲಿ ಇವೆ. ಕ್ವಾರಂಟೈನ್‌- 600 ಹಾಸಿಗೆ, ಯುನಾನಿ ಆಸ್ಪತ್ರೆ- 34, ಪಾಲಿ ಗೆಸ್ಟ್‌ ಹೌಸ್‌- 40, ಭೂಮಾಪನ ತರಬೇತಿ ಕೇಂದ್ರ- 24, ಅಲ್ಪಸಂಖ್ಯಾತ ಇಲಾಖೆ ಹಾಸ್ಟೆಲ್‌ 40, ಕೃಷಿ ವಿವಿಯ ಹಾಸ್ಟೆಲ್‌-41, ಸಿಯುಕೆ ಹಾಸ್ಟೆಲ್‌- 80, ಸ್ಲಂಬೋರ್ಡ್‌ ವಸತಿ ನಿಲಯದಲ್ಲಿ 320 ಹಾಸಿಗೆಗಳು ಚಿಕಿತ್ಸೆಗೆ ಸದ್ಯ ಲಭ್ಯ. ಇವುಗಳ ಜೊತೆಗೇ ಜಿಲ್ಲೆಯ 26 ಖಾಸಗಿ ಆಸ್ಪತ್ರೆಗಳಿಗೂ ಕೊರೋನಾ ಟಿಕಿತ್ಸೆಗೆ ಪರವಾನಿಗೆ ದೊರಕಿದೆ.

ಕೋವಿಡ್‌ ಆಸ್ಪತ್ರೆಗಳ ಹಾಸಿಗೆ ಸಾಮರ್ಥ್ಯ 

ಜಿಮ್ಸ್‌- 360 ಹಾಸಿಗೆಗಳ ಸಾಮರ್ಥ್ಯ, 40 ಐಸಿಯೂ ವಾರ್ಡ್‌, 200 ಐಸೋಲೇಷನ್‌ ಬೆಡ್‌, ಇಎಸ್‌ಐಸಿ- 360 ಹಾಸಿಗೆ, 20 ಐಸಿಯೂ ವಾರ್ಡ್‌, 340 ಐಸೋಲೇಷನ್‌ ಬೆಡ್‌

ಟ್ರಾಮಾ ಸೆಂಟರ್‌- 120 ಬೆಡ್‌ ರೆಡಿ

ಹಳೆ ಜಿಲ್ಲಾಸ್ಪತ್ರೆ ಕಟ್ಟಡ- 300 ಹಾಸಿಗೆ (ನಾನ್‌ ಕೋವಿಡ್‌ ರೋಗಿಗಳಿಗಾಗಿ) (ಹೆರಿಗೆ ಪ್ರಕರಣಗಳು ಮತ್ತು ತಾಯಿ-ಮಕ್ಕಳಿಗೆ ಚಿಕಿತ್ಸೆ, ತುರ್ತು ಆರೋಗ್ಯ ಸೇವೆಗೂ ಅವಕಾಶ)
 

click me!