ಕರ್ನಾಟಕ ರಾಜ್ಯ ತೆಂಗಿನ ನಾರಿನ ಸಹಕಾರ ಮಹಾಮಂಡಳ ಉತ್ಪಾದಿಸಿ ಮಾರಾಟ ಮಾಡುತ್ತಿರುವ ವಸ್ತುಗಳು ಪ್ರಕೃತಿಗೆ ಪೂರಕವಾಗಿರುವ ಜತೆಗೆ ಪರಸರ ಸ್ನೇಹಿಯಾಗಿರುವ ಕಾರಣ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿದೆ. ಇತ್ತೀಚೆಗೆ ಚಿಕ್ಕಮಗಳೂರು ನಗರದಲ್ಲಿ ನಡೆದ ಚಿಕ್ಕಮಗಳೂರು ಹಬ್ಬದಲ್ಲಿಇವುಗಳೀಗೆ ಬೇಡಿಕೆ ಹೆಚ್ಚು ಕಂಡುಬಂದಿದೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು(ಜ.26): ತೆಂಗಿಗೆ ಕಲ್ಪವೃಕ್ಷ ಎಂಬ ಹೆಸರಿದೆ. ಹೀಗಾಗಿ ಅದರ ಒಂದು ನಾರನ್ನು ಕೂಡ ಕಸ ಎಂದು ಎಸೆಯದೆ ಬಳಸಿ ಬಳಕೆ ಯೋಗ್ಯ ವಸ್ತುಗಳನ್ನು ತಯಾರಿಸಲಾಗಿದೆ. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ತೆಂಗು ನಾರಿನಿಂದ ಏನೆಲ್ಲಾ ವಸ್ತುಗಳನ್ನು ಉತ್ಪಾದಿಸಬುದು ಎಂಬುದನ್ನು ರಾಜ್ಯ ಸರ್ಕಾದ ಅಂಗಸಂಸ್ಥೆ ಕರ್ನಾಟಕ ತೆಂಗುನಾರು ಸಹಕಾರ ಮಹಾಮಂಡಳ ತೋರಿಸಿಕೊಟ್ಟಿದ್ದು ಪರಿಸರಸ್ನೇಹಿ ಆಗಿರುವ ತೆಂಗುನಾರು ಉತ್ಪನ್ನಕ್ಕೆ ಇದೀಗ ಬಲು ಬೇಡಿಕೆ ವ್ಯಕ್ತವಾಗುತ್ತಿದೆ.
ಕೊಬ್ಬರಿ ಬೆಲೆ ಹೆಚ್ಚಳಕ್ಕೆ ಕೇಂದ್ರಕ್ಕೆ ರಾಜ್ಯ ಮೊರೆ
ಗೃಹಬಳಕೆಯ ವಸ್ತುಗಳಿಗೆ ಹೆಚ್ಚಿನ ಬೇಡಿಕೆ:
ಕರ್ನಾಟಕ ರಾಜ್ಯ ತೆಂಗಿನ ನಾರಿನ ಸಹಕಾರ ಮಹಾಮಂಡಳ ಉತ್ಪಾದಿಸಿ ಮಾರಾಟ ಮಾಡುತ್ತಿರುವ ವಸ್ತುಗಳು ಪ್ರಕೃತಿಗೆ ಪೂರಕವಾಗಿರುವ ಜತೆಗೆ ಪರಸರ ಸ್ನೇಹಿಯಾಗಿರುವ ಕಾರಣ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿದೆ. ಇತ್ತೀಚೆಗೆ ಚಿಕ್ಕಮಗಳೂರು ನಗರದಲ್ಲಿ ನಡೆದ ಚಿಕ್ಕಮಗಳೂರು ಹಬ್ಬದಲ್ಲಿಇವುಗಳೀಗೆ ಬೇಡಿಕೆ ಹೆಚ್ಚು ಕಂಡುಬಂದಿದೆ. ವಿದೇಶದಲ್ಲಿ ರಸ್ತೆ ನಿರ್ಮಾಣಕ್ಕೆ ಬಳಕೆ ಮಾಡುತ್ತಿದ್ದ ತೆಂಗಿನ ಹುರಿಗಳನ್ನು ದೇಶಿಯವಾಗಿ ತಯಾರಿಸಲಾಗಿದೆ. ಅಲ್ಲದೆ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಲ್ಲಿ ಬಳಕೆ ಮಾಡಲು ಹೆದ್ದಾರಿ ಸಚಿವ ನಿತಿನ್ ಗಡ್ಕರಿಯಿಂದ ಆದೇಶ ಹೊರಬಿದ್ದಿದೆ. ಶಾಲಾ ಕಾಲೇಜುಗಳಿಗೆ ತೆಂಗು ನಾರಿನಿಂದಲೇ (ಪ್ಲೇವುಡ್ ರೀತಿ)ತಯಾರಿಸಿರುವ ಡೆಸ್ಕ್, ಟೇಬಲ್, ಖುರ್ಚಿ, ಮಲಗಲು ಬೆಡ್ ಗಳನ್ನು ತಯಾರಿಸಿದ್ದು ದೀರ್ಘ ಬಳಕೆ ಬರುತ್ತವೆ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಜೊತೆಗೆ ಗೃಹ ಬಳಕೆಯ ವಸ್ತುಗಳಾದ ಮ್ಯಾಟ್, ಜಮುಕಾನ, ಹೂವಿನಕುಂಡಗಳು, ಕೃತಕ ಅಲಂಕಾರಿಕ ಹಕ್ಕಿಗೂಡುಗಳು, ಅಲಂಕಾರಿಕ ವಸ್ತುಗಳನ್ನು ತೆಂಗಿನ ನಾರಿನಲ್ಲಿ ಉತ್ಪಾದಿಸಿ ಮಾರಾಟಕ್ಕೆ ಇಟ್ಟಿದ್ದು ಇತ್ತೀಚೆಗೆ ನಡೆದ ಚಿಕ್ಕಮಗಳೂರು ಹಬ್ಬದಲ್ಲಿ ಯತೇಚ್ಛವಾಗಿ ಮಾರಾಟವಾಗಿವೆ.
Chitradurga: ಜೇನು ತುಪ್ಪದಿಂದ ಸಾಬೂನು ಫೇಶ್‌ವಾಶ್: ರೈತನ ಉತ್ಪನ್ನಗಳಿಗೆ ಭಾರಿ ಡಿಮ್ಯಾಂಡ್
ಪರಿಸರ ಸ್ನೇಹಿ, ದೀರ್ಘ ಬಾಳಿಕೆ ವಸ್ತುಗಳ ತಯಾರಿ:
ತೆಂಗುನಾರಿನಿಂದ ತಯಾರಿಸಿದ ವಸ್ತುಗಳು ಪರಿಸರಕ್ಕೆ ಹೇಗೆ ಪೂರಕ ಎಂಬುದನ್ನು ಸಾರ್ವಜನಿಕರಿಗೆ ತಿಳಿಹೇಳಲಾಗಿದೆ.ತೆಂಗುನಾರನ್ನು ಕಡಲ ಕೊರೆತ, ಭೂಮಿ ಸವಕಳಿ ಪ್ರದೇಶದಲ್ಲಿ ಬಳಸಿ ಅಲ್ಲಿ ಲಾವಂಚಹುಲ್ಲು ಬೆಳೆಸಿದಲ್ಲಿ ಅಲ್ಲಿ ಸಹಜವಾದ ಪ್ರದೇಶ ನಿರ್ಮಾಣವಾಗಿ ಮತ್ತೆ ಆ ಜಾಗದಲ್ಲಿ ಭೂ ಕುಸಿತ ಆಗುವುದಿಲ್ಲ , ಇದು ಯಶಸ್ವಿ ಕೂಡ ಆಗಿದೆ ಎನ್ನುವುದು ರಾಜ್ಯ ತೆಂಗುನಾರು ಸಹಕಾರ ಮಹಾಮಂಡಳದ ಅಧ್ಯಕ್ಷರಾದ ಕಿಡಿಗಣ್ಣಪ್ಪ ರವರ ಮಾತಾಗಿದೆ. ಅಲ್ಲದೆ ಕಳೆದ ಆರ್ಥಿಕ ವರ್ಷದಲ್ಲಿ 100 ಕೋಟಿ ರೂ ವಹಿವಾಟು ನಡೆಸಿದ್ದು ಜನರಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.