ಸಹೋದ್ಯೋಗಿಗಳ ಕೊಂದು ಆತ್ಮಹತ್ಯೆ ಮಾಡಿಕೊಂಡ ಮಾಗಡಿ ಯೋಧ

By Kannadaprabha News  |  First Published Jan 15, 2020, 10:54 AM IST

ರಾಮನಗರದ ಮಾಗಡಿಯ ಯೋಧರೋರ್ವರು ತಮ್ಮ ಸಹೋದ್ಯೋಗಿಗಳೊಂದಿಗೆ ನಡೆದ ಮಾತಿನ ಚಕಮಕಿ ವೇಳೆ ಇಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿ ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 


ರಾಮನಗರ [ಜ.15]: ಜಮ್ಮುವಿನ ಉಧಂಪುರ ಸಮೀಪದ ಸೇನಾ ಶಿಬಿರದಲ್ಲಿ ರಾಮನಗರ ಜಿಲ್ಲೆ ಮಾಗಡಿಯ ಯೋಧನೊಬ್ಬ ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿ ಹತ್ಯೆಗೈದು, ಬಳಿಕ ತಾನೂ ಗುಂಡುಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ನಡೆದಿದೆ.

ಮಾಗಡಿ ಪಟ್ಟಣದ ಹೊಂಬಾಳಮ್ಮನಪೇಟೆಯ ಪಾಪಣ್ಣನವರ ಪುತ್ರ ವೆಂಕಟ ನರಸಿಂಹಮೂರ್ತಿ (29) ಆತ್ಮಹತ್ಯೆ ಮಾಡಿಕೊಂಡ ಯೋಧ. ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್‌ಎಫ್‌)ಯಲ್ಲಿ ಸೇವೆ ಸಲ್ಲಿಸುತ್ತಿದ್ದ ನರಸಿಂಹಮೂರ್ತಿ ಅವರು ಸಹೋದ್ಯೋಗಿಗಳ ಜತೆಗಿನ ವಾಗ್ವಾದದ ವೇಳೆ ಈ ಕೃತ್ಯ ಎಸಗಿದ್ದಾರೆ. 

Tap to resize

Latest Videos

ಸಂಸತ್ ಆದೇಶಕ್ಕಾಗಿ ಕಾಯುತ್ತಿದ್ದೇವೆ: ಸೇನಾ ಮುಖ್ಯಸ್ಥರ ಸ್ಫೋಟಕ ಹೇಳಿಕೆ!

ಮೂರ್ತಿ ಮತ್ತು ಅವರ ಸಹೋದ್ಯೋಗಿಗಳ ಮಧ್ಯೆ ಸಂಜೆ ಮಾತಿನ ಚಕಮಕಿ ನೆಡದಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ವಾಗ್ವಾದ ವಿಕೋಪಕ್ಕೆ ತಿರುಗಿದಾಗ ಮೂರ್ತಿ ಅವರು ಸಹೋದ್ಯೋಗಿಗಳಾದ ಮೊಹಮ್ಮದ್‌ ತಸ್ಲೀಮ್‌ ಮತ್ತು ಸಂಜಯ್‌ ಠಾಕ್ರೆ ಮೇಲೆ ಗುಂಡು ಹಾರಿಸಿದ್ದಾರೆ.

ಭಾರತ ಗಡಿಯಲ್ಲಿ ಕತ್ತರಿಸಲಾಗದ ಸ್ಟೀಲ್‌ ಬೇಲಿ!...

ನಂತರ ತಾವು ಅದೇ ರೈಫಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯಲ್ಲಿ ತಸ್ಲೀಮ್‌ ಸ್ಥಳದಲ್ಲೇ ಮೃತಪಟ್ಟರೆ, ಠಾಕ್ರೆ ಗಂಭೀರ ಗಾಯಗೊಂಡಿದ್ದಾರೆ.

click me!