* ಹತ್ಯೆಯಾದವನ ಹೆಸರಲ್ಲಿ ರಚನೆ ಆಗಲಿದೆ ಟ್ರಸ್ಟ್
* ಯುಗಾದಿಯ ಹೊಸ ಸಂವತ್ಸರಕ್ಕೆ ನವ ಮನ್ವಂತರ
* ಹಿಂದೂ ಸಮಾಜ ನೀಡಿದ್ದನ್ನು ಮರಳಿ ಹಿಂದೂ ಸಮಾಜಕ್ಕೆ?
ವರದಿ ರಾಜೇಶ್ ಕಾಮತ್, ಏಷ್ಯಾನೆಟ್ ಸುವರ್ಣ ನ್ಯೂಸ್, ಶಿವಮೊಗ್ಗ
ಶಿವಮೊಗ್ಗ(ಮಾ.31): ಇಡಿ ದೇಶದ ಗಮನ ಸೆಳೆದಿದ್ದ ಶಿವಮೊಗ್ಗದ(Shivamogga) ಹಿಂದೂಪರ ಸಂಘಟನೆಯ ಕಾರ್ಯಕರ್ತ ಹರ್ಷನ ಹತ್ಯೆ(Harsha Murder) ಪ್ರಕರಣ ಇದೀಗ ಎನ್ಐಎ(NIA) ತನಿಖೆಗೆ ವಹಿಸಲಾಗಿದೆ. ಇದರಿಂದಾಗಿ ಹರ್ಷನ ಹತ್ಯೆಗೆ ನ್ಯಾಯ ಸಿಗುವ ಭರವಸೆ ವ್ಯಕ್ತ ಪಡಿಸಿದ್ದ ಹರ್ಷನ ಕುಟುಂಬಸ್ಥರು ಇದೀಗ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.
ಹತ್ಯೆಯಾದ ಹರ್ಷನ ಹೆಸರಲ್ಲಿ ನಡೆಯಲಿದೆಯಾ ಸಮಾಜ ಸೇವೆಗೆ(Social Service) ಚಾಲನೆ ನೀಡಲು ಹರ್ಷನ ಹೆಸರಲ್ಲೇ ಟ್ರಸ್ಟ್ ಒಂದನ್ನು ರಚನೆ ಆಗಲಿದೆ. ಯುಗಾದಿಯ ಹೊಸ ಸಂವತ್ಸರಕ್ಕೆ ನವ ಮನ್ವಂತರದ ಮುನ್ನುಡಿ ಬರೆಯಲಿದ್ದಾರೆ. ಸಮಾಜದಿಂದ ಬಂದಿದ್ದು ಸಮಾಜಕ್ಕೆ ಮುಡಿಪಾಗಿಡಲು, ಹಿಂದೂ(Hindu) ಸಮಾಜ ನೀಡಿದ್ದನ್ನು ಮರಳಿ ಹಿಂದೂ ಸಮಾಜಕ್ಕೆ ಮರಳಿಸಲು ಸಿದ್ದತೆ ನಡೆದಿದೆ. ಸಮಾಜದಿಂದ ಪಡೆದಿದ್ದನ್ನು ಸಮಾಜದ ಸದ್ಬಳಕೆಗೆ ವಿನಿಯೋಗಿಸಲು ಯುಗಾದಿಯಂದು(Yugadi) ಮಹತ್ವದ ನಿರ್ಧಾರವನ್ನು ಹತ್ಯೆಯಾದ ಹಿಂದೂ ಹರ್ಷನ ಕುಟುಂಬ ಪ್ರಕಟಿಸಲಿದೆ. ಈ ಮೂಲಕ ದಾನಿಗಳು ನೀಡಿದ ಹಣದ ಸದ್ಬಳಕೆಯ ನಿರ್ಧಾರ ಕೈಗೊಂಡಿದ್ದು, ಹರ್ಷನ ಹೆಸರಿನಲ್ಲಿಯೇ ಏಜುಕೇಶನಲ್ ಅಂಡ್ ಚಾರಿಟೇಬಲ್ ಟ್ರಸ್ಟ್(Educational and Charitable Trust) ಸ್ಥಾಪನೆ ಆಗಲಿದೆ.
Bengaluru: ಎನ್‌ಐಎ ಬೆಂಗಳೂರು ಘಟಕ ಕಾರ್ಯಾರಂಭ: ಹರ್ಷ ಕೊಲೆ ತನಿಖೆ ಮೊದಲ ಕೇಸ್
ಹರ್ಷ ಟ್ರಸ್ಟ್ ಮೂಲಕ ಸಮಾಜ ಸೇವೆಯನ್ನು ಮಾಡುವ ಮೂಲಕ ಬಡ ಮಕ್ಕಳ ವಿದ್ಯಾಭ್ಯಾಸ(Study ಮತ್ತು ಸಂಕಷ್ಟಕ್ಕೆ ಸಿಲುಕಿದವರಿಗೆ ನೆರವು ನೀಡಲು ಚಿಂತನೆ ನಡೆದಿದೆ. ಯುಗಾದಿ ಹಬ್ಬದ ಮರುದಿನ 9 ಸದಸ್ಯರ ಟ್ರಸ್ಟ್ ಗೆ ಚಾಲನೆ ಸಿಗಲಿದ್ದು ಹರ್ಷನ ಅಕ್ಕಂದಿರು, ಸ್ನೇಹಿತರು, ಸಂಘ ಪರಿವಾರದ ಪ್ರಮುಖರು ಟ್ರಸ್ಟ್ ನಲ್ಲಿರಲಿದ್ದಾರೆ. ಮೂಲಗಳ ಪ್ರಕಾರ ಟ್ರಸ್ಟ್ ನಲ್ಲಿ ಹರ್ಷನ ಅಕ್ಕಂದಿರಾದ ಅಶ್ವಿನಿ, ರಜನಿ, ಹರ್ಷನ ಸ್ನೇಹಿತರಾದ ಸಚಿನ್, ಪುರುಷೋತ್ತಮ, ಸಚಿವ ಕೆಎಸ್ಇ ಪುತ್ರ ಕೆ.ಇ.ಕಾಂತೇಶ್, ಚಾರ್ಟರ್ಡ್ ಅಕೌಂಟೆಂಟ್ ಒಬ್ಬರು ಹಾಗೂ ಸಂಘ ಪರಿವಾರಕ್ಕೆ ಸೇರಿದ ಮೂವರು ಇರಲಿದ್ದಾರೆ.
ಈಗಾಗಲೇ ಹರ್ಷನ ಕುಟುಂಬಕ್ಕೆ ಚೆಕ್ ಹಾಗೂ ನಗದು ಮೂಲಕ ತಲುಪಿದ ಸುಮಾರು 2 ಕೋಟಿ 30 ಲಕ್ಷ ರೂಪಾಯಿ ನಷ್ಟು ಆರ್ಥಿಕ ನೆರವು ಬಂದಿದೆ. ಹರ್ಷನ ಕುಟುಂಬಕ್ಕೆ ಅಗತ್ಯವಿರುವ ಹಣ ಬಿಟ್ಟು ಉಳಿದ ಹಣ ಹರ್ಷ ಟ್ರಸ್ಟ್ ಮೂಲಕ ಸದ್ವಿನಿಯೋಗ ಮಾಡಲು ನಿರ್ಧರಿಸಲಾಗಿದೆ. ಟ್ರಸ್ಟ್ 9 ಸದಸ್ಯರ ತಂಡದಿಂದ ಸಮಾಜಮುಖಿ ಕಾರ್ಯ ನಡೆಯಲಿದೆ. ಮತಾಂಧರ ಕುಕೃತ್ಯಕ್ಕೆ ಬಲಿಯಾದ ಹರ್ಷನ ಕುಟುಂಬಕ್ಕೆ ಮಿಡಿದ ಹೃದಯಗಳು ಹರ್ಷನ ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಆದರೆ ಅ ಕುಟುಂಬದ ಜೊತೆಗೆ ನಿಲ್ಲುವುದು ನಮ್ಮ ಕರ್ತವ್ಯ ಎಂದು ಅಭಿಯಾನ ನಡೆಸಿದ್ದರು. ಈ ಅಭಿಯಾನದ ಹಿನ್ನೆಲೆಯಲ್ಲಿ ಕೋಟಿಗಟ್ಟಲೇ ಆರ್ಥಿಕ ನೆರವಿನ ಮಹಾಪೂರ ಹರಿದು ಬಂದಿತ್ತು. ಹರ್ಷನ ತಾಯಿ ಪದ್ಮ ರವರ ಬ್ಯಾಂಕ್ಜ ಖಾತೆಗೆ ಹರಿದು ಆರ್ಥಿಕ ನೆರವಿನ ಮಹಾಪೂರ ಹರಿದು ಬಂದಿತ್ತು. ಹೀಗೆ ಸಮಾಜದ ವತಿಯಿಂದ ಪಡೆದಿದ್ದು ಸಮಾಜಕ್ಕೆ ಹರ್ಷನ ಹೆಸರಿನ ಟ್ರಸ್ಟ್ ವಿನಿಯೋಗ ಮಾಡಲಿದೆ.
'ಗಾಂಧಿ ಕೊಲೆಗಾರ ಗೋಡ್ಸೆಯಲ್ಲಿ ದೇಶಭಕ್ತಿ ಕಾಣುವ ವ್ಯಕ್ತಿಯ ಸಾವಿಗೆ ಸರ್ಕಾರ 25 ಲಕ್ಷ'
2015 ರಲ್ಲಿ ಶಿವಮೊಗ್ಗದಲ್ಲಿ ಕೋಮು ದ್ವೇಷಕ್ಕೆ ಬಲಿಯಾದ ವಿಶ್ವನಾಥ ಶೆಟ್ಟಿ ಕುಟುಂಬಕ್ಕೂ ಹರ್ಷ ಟ್ರಸ್ಟ್ ನೆರವು ನೀಡಲಿದೆ. ಮೃತ ವಿಶ್ವನಾಥ ಶೆಟ್ಟಿಯ ಮಗನ ವಿದ್ಯಾಭ್ಯಾಸಕ್ಕೆ ನೆರವು ನೀಡುವ ಚಿಂತನೆ ನಡೆಸಿದೆ. ಈ ಮೂಲಕ ಹಿಂದೂ ಹರ್ಷ ಟ್ರಸ್ಟ್ ನ ಸಮಾಜಮುಖಿ ಕಾರ್ಯಕ್ಕೆ ಚಾಲನೆ ಸಿಗಲಿದೆ.
ಹರ್ಷನ ಅಕ್ಕಂದಿರು, ಸ್ನೇಹಿತರು, ಸಂಘ ಪರಿವಾರದ ಪ್ರಮುಖರು ಇರುವ ಟ್ರಸ್ಟ್
ಟ್ರಸ್ಟ್‌ನಲ್ಲಿ ಹರ್ಷನ ಅಕ್ಕಂದಿರಾದ ಅಶ್ವಿನಿ, ರಜನಿ, ಹರ್ಷನ ಸ್ನೇಹಿತರಾದ ಸಚಿನ್, ಪುರುಷೋತ್ತಮ, ಸಚಿವ ಕೆಎಸ್ಇ ಪುತ್ರ ಕೆ.ಇ.ಕಾಂತೇಶ್, ಚಾರ್ಟರ್ಡ್ ಅಕೌಂಟೆಂಟ್ ಒಬ್ಬರು ಹಾಗೂ ಪರಿವಾರದ ಮೂವರು ಇರುವ ಸಾಧ್ಯತೆ ಇದೆ.