ಬೀದರ್‌ನಲ್ಲಿ ಹಾಡಹಗಲೇ ಎಸ್‌ಬಿಐ ಬ್ಯಾಂಕ್ ಎದುರು ಎಟಿಎಂಗೆ ಹಣ ತುಂಬುವ ವಾಹನದ ಮೇಲೆ ದಾಳಿ ನಡೆಸಿ ಓರ್ವನ ಹತ್ಯೆ, ಇನ್ನೊಬ್ಬನ ಸ್ಥಿತಿ ಚಿಂತಾಜನಕ. ಎಟಿಎಂ ಏಜೆನ್ಸಿಗಳು ಜಾಗೃತೆ ವಹಿಸದ ಕಾರಣ ಈ ರೀತಿಯ ಘಟನೆ ನಡೆಯುತ್ತದೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ.
ಬೆಂಗಳೂರು (ಜ.16): ಬೀದರ್‌ನಲ್ಲಿ ಹಾಡಹಗಲೇ ಎಸ್‌ಬಿಐ ಬ್ಯಾಂಕ್‌ನ ಎದುರುಗಡೆ ಎಟಿಎಂಗೆ ಹಣ ತುಂಬುವ ಸಿಎಂಎಸ್ ಏಜೆನ್ಸಿಯ ವಾಹನದ ಮೇಲೆ ದಾಳಿ ನಡೆಸಿ ಓರ್ವನ ಹತ್ಯೆಯಾಗಿದೆ. ಇನ್ನೊಬ್ಬನ ಸ್ಥಿತಿ ಚಿಂತಾಜನಕವಾಗಿದೆ. ಇಬ್ಬರು ದುಷ್ಕರ್ಮಿಗಳು ಕೈಯಲ್ಲಿ ಗನ್ ಹಿಡಿದುಕೊಂಡು ದಾಳಿ ಮಾಡಿರುವ ಸಿಸಿಟಿವಿ ವಿಡಿಯೋ ಹಾಗೂ ಪ್ರತ್ಯಕ್ಷದರ್ಶಿಗಳ ವಿಡಿಯೋ ವೈರಲ್ ಆಗಿದೆ. ಈ ಬಗ್ಗೆ ಮಾತನಾಡಿರುವ ಗೃಹ ಸಚಿವ ಡಾ.ಜಿ ಪರಮೇಶ್ವರ್, ಎಟಿಎಂ ಏಜೆನ್ಸಿಗಳು ಜಾಗೃತೆ ವಹಿಸದ ಕಾರಣ ಈ ರೀತಿಯ ಘಟನೆ ನಡೆಯುತ್ತದೆ ಎಂದು ಹೇಳಿದ್ದಾರೆ. ಇಂತಹ ಘಟನೆ ಆದಾಗ ಸಮಾಜಕ್ಕೆ ಕೆಟ್ಟ ಮೆಸೇಜ್ ಹೋಗುತ್ತದೆ. ಎಟಿಎಂ ಏಜೆನ್ಸಿ ಅವರೂ ಕೂಡ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕಿತ್ತು ಎಂದು ಹೇಳಿದ್ದಾರೆ.
ಬೀದರ್ ಘಟನೆಯ ಕುರಿತು ಇನ್ನಷ್ಟು ಮಾಹಿತಿ ಪಡೆಯಬೇಕಿದೆ ಎಂದು ವಿಧಾನಸೌಧದಲ್ಲಿ ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ. ಘಟನೆಯ ಬಗ್ಗೆ ನಾನಿನ್ನೂ ಮಾಹಿತಿ ಪಡೆದುಕೊಳ್ಳಬೇಕು ಎಂದು ಹೇಳಿದ್ದಾರೆ. ಘಟನೆ ನಡೆದು ಗಂಟೆಗಳಾದ್ರೂ ರಾಜ್ಯದ ಗೃಹ ಸಚಿವರಿಗೆ ಇದರ ಬಗ್ಗೆ ಮಾಹಿತಿಯೇ ಇರಲಿಲ್ಲವೇ ಎನ್ನುವ ಪ್ರಶ್ನೆ ಸಾರ್ವಜನಿಕರಿಗೆ ಬಂದಿದೆ.
ಸರ್ಕಾರದ ಭಯವಿಲ್ಲ, ಪೊಲೀಸರ ಕ್ಯಾರೇ ಇಲ್ಲ; ರಾಜಾರೋಷವಾಗಿ ಕೊಲೆ ಮಾಡಿ 93 ಲಕ್ಷ ATM ಹಣ ಹೊತ್ತೊಯ್ದ ಖದೀಮರು!
ಎಟಿಎಂಗಳಿಗೆ ಅನೇಕ ಗೈಡ್‌ಲೈನ್ಸ್ ಕೊಟ್ಟಿರುತ್ತೇವೆ. ಅದನ್ನು ಫಾಲೋ ಮಾಡಿಲ್ವಾ? ಲ್ಯಾಪ್ಸ್ ಆಗಿದ್ಯಾ ಅನ್ನೋ ಮಾಹಿತಿ ತೆಗೆದುಕೊಳ್ಳಬೇಕಿದೆ. ಎಸ್‌ಪಿಗೆ ತನಿಖೆ ಮಾಡಲು ಹೇಳಿದ್ದೇನೆ. ಪೂರ್ತಿ ಮಾಹಿತಿ ತೆಗೆದುಕೊಂಡು ಇದರ ಬಗ್ಗೆ ಮಾತನಾಡುತ್ತೇನೆ ಎಂದು ಗೃಹ ಸಚಿವರು ಹೇಳಿದ್ದಾರೆ.
Bidar: ಎಟಿಎಂಗೆ ಹಣ ಹಾಕಲು ಬಂದಾಗ ಸಿಬ್ಬಂದಿ ಮೇಲೆ ಗುಂಡಿನ ದಾಳಿ, ವ್ಯಕ್ತಿ ಸಾವು!
ಬೀದರ್ ನಲ್ಲಿ ಹಾಡಹಗಲೇ ಕೊಲೆ, ದರೋಡೆ ಪ್ರಕರಣದಲ್ಲಿ ಮೃತಪಟ್ಟ ಗಿರಿ ವೆಂಕಟೇಶ್ ಮನೆಗೆ ನಾಳೆ ಉಸ್ತುವಾರಿ ಸಚಿವರು ಭೇಟಿ ನೀಡಲಿದ್ದಾರೆ. ನಾಳೆ ಗಿರಿ ವೆಂಕಟೇಶ್ ಮನೆಗೆ ಭೇಟಿ ನೀಡಿ ಸಂತ್ರಸ್ತ ಕುಟುಂಬಕ್ಕೆ ಸಚಿವ ಈಶ್ವರ್ ಖಂಡ್ರೆ ಸಾಂತ್ವನ ಹೇಳಲಿದ್ದಾರೆ. ಘಟನೆ ಬಗ್ಗೆ ಅಘಾತವ್ಯಕ್ತಪಡಿರುವ ಈಶ್ವರ್ ಖಂಡ್ರೆ, ಕೂಡಲೇ ಆರೋಪಿಗಳ ಬಂಧಿಸಲು ತುರ್ತು ಕ್ರಮಕ್ಕೆ ಸೂಚನೆ ನೀಡಿದ್ದಾರೆ. ಭಧ್ರತಾ ಸಿಬ್ಬಂದಿ ನಿಯೋಜಸಬೇಕಿತ್ತು, ಲೋಪದೋಷಗಳ ಕುರಿತು ತನಿಖೆ ನಡೆಸಲಾಗುವುದು. ಮೃತ ಕುಟುಂಬಸ್ಥರ ಜೊತೆ ಸರ್ಕಾರ ಇದೆ ಎಂದು ಭರವಸೆ ನೀಡಿದ್ದಾರೆ.