ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಾ ಸಹೋದ್ಯೋಗಿ ಪ್ರೀತಿಸಿ ಅಂತರ್ಜಾತಿ ಮದುವೆಯಾಗಿದ್ದ ದಲಿತ ಯುವತಿ ಗಂಡನ ಮನೆಗೆ ಹೋಗುವ ಮೊದಲೇ ಭೀಕರವಾಗಿ ಹತ್ಯೆಯಾಗಿದ್ದಾಳೆ.
ಶಿವಮೊಗ್ಗ (ಜು.23): ಫೈನಾನ್ಸ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಾ ಅಲ್ಲಿಯೇ ಕೆಲಸ ಮಾಡುತ್ತಿದ್ದ ಯುವಕನನ್ನು ಪ್ರೀತಿಸಿ ಅಂತರ್ಜಾತಿ ವಿವಾಹ ಮಾಡಿಕೊಂಡಿದ್ದ ಯುವತಿ, ಗಂಡನ ಮನೆಗೆ ಹೋಗುವ ಮಾರ್ಗದಲ್ಲಿಯೇ ಭೀಕರವಾಗಿ ಹತ್ಯೆಯಾಗಿದ್ದಾಳೆ.
ಚಿಕ್ಕಮಗಳೂರಿನ ಕೊಪ್ಪದ ದಲಿತ ಯುವತಿಯ ಪ್ರೇಮ ಪ್ರಕರಣ ಕೊಲೆಯಲ್ಲಿ ಅಂತ್ಯವಾಗಿದೆ. ಪ್ರೀತಿಸಿ ಓಡಿಹೋಗಿ ಮದುವೆಯಾಗಿದ್ದ ಯುವತಿ ಶವವಾಗಿ ಪತ್ತೆಯಾಗಿದ್ದಾಳೆ. ಮೃತ ಯುವತಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಪಟ್ಟಣದ ಸೌಮ್ಯ. ಕೊಪ್ಪ ಪಟ್ಟಣದ ಖಾಸಗಿ ಫೈನಾನ್ಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಸೌಮ್ಯ, ಅಲ್ಲಿಯೇ ಕೆಲಸ ಮಾಡುತ್ತಿದ್ದ ಸಾಗರ ಮೂಲದ ಸೃಜನ್ ಅಲಿಯಾಸ್ ಲೋಕೇಶ್ ಎಂಬಾತನನ್ನು ಪ್ರೀತಿ ಮಾಡಿದ್ದಳು. ಇಬ್ಬರೂ ಪರಸ್ಪರ ಪ್ರೀತಿ ಮಾಡಿದ್ದರಿಂದ ಇಬ್ಬರೂ ಮನೆಯವರ ವಿರೋಧದ ನಡುವೆಯೂ ಊರು ಬಿಟ್ಟು ಓಡಿ ಹೋಗಿ ಅಂತರ್ಜಾತಿ ಮದುವೆ ಮಾಡಿಕೊಂಡಿದ್ದರು.
undefined
ಶಿವಮೊಗ್ಗದಲ್ಲಿ ಶಾಲಾ ಗೋಡೆ ಕುಸಿತ; ಶಿಕ್ಷಣ ಸಚಿವ ಮಧು ಬಂಗಾರಪ್ಪ ತವರಲ್ಲೇ ವಿದ್ಯಾರ್ಥಿಗಳ ಪ್ರಾಣಕ್ಕೆ ಕಂಟಕ
ಮದುವೆಯಾದ ನಂತರ ಸೃಜನ್ ಹಾಗೂ ಸೌಮ್ಯಾ ಕೊಪ್ಪ ಪಟ್ಟಣದಲ್ಲಿಯೇ ವಾಸ ಮಾಡುತ್ತಿದ್ದರು. ಆಗ, ಯುವತಿ ತನ್ನನ್ನು ಸಾಗರದಲ್ಲಿರುವ ನಿಮ್ಮ ಮನೆಗೆ ಕರೆದೊಯ್ಯುವಂತೆ ಪತಿ ಸೃಜನ್‌ನನ್ನು ಕೇಳಿದ್ದಾಳೆ. ಆದರೆ, ಅಂತರ್ಆಜಿ ಮದುವೆ ಮಾಡಿಕೊಂಡಿದ್ದರಿಂದ ಮನೆಯಲ್ಲಿ ಸೇರಿಸುವುದಿಲ್ಲ ಎಂದು ಹೇಳಿದ್ದಾನೆ. ಆದರೂ ಕೇಳದೇ ಬಲವಂತ ಮಾಡಿ ನಾನು ನಿಮ್ಮ ಮನೆಗೆ ಬರಲೇಬೇಕು ಎಂದು ಜಗಳವನ್ನೂ ಆರಂಭಿಸಿದ್ದಾಳೆ. ಈ ಜಗಳದ ಬೆನ್ನಲ್ಲಿಯೇ ಗಂಡ ಸೃಜನ್ ತನ್ನ ಪತ್ನಿ ಸೌಮ್ಯಳನ್ನು ಈಗ ನೀನು ನಿನ್ನ ತಾಯಿಯ ಮನೆಗೆ ಹೋಗು. ನಮ್ಮ ಮನೆಯಲ್ಲಿ ಎಲ್ಲರನ್ನೂ ಒಪ್ಪಿಸಿ ಮನೆಗೆ ಕರೆದುಕೊಂಡು ಹೋಗುವುದಾಗಿ ಭರವಸೆ ನೀಡಿದ್ದಾನೆ.
ಆದರೆ, ಗಂಡನ ಮಾತನ್ನು ಕೇಳದ ಸೌಮ್ಯಾ ನಾನು ನಿನ್ನನ್ನು ಬಿಟ್ಟು ತಾಯಿ ಮನೆಗೆ ಹೋಗುವುದಿಲ್ಲ. ಬಂದರೆ ನಿಮ್ಮ ಮನೆಗೆ ಬರುತ್ತೇನೆ ಎಂದು ಹಠ ಮಾಡಿದ್ದಾಳೆ. ಇದೇ ವಿಚಾರವಾಗಿ ಸೌಮ್ಯಾ ಊರಿಗೆ ಹೊರಟಿದ್ದ ತನ್ನ ಗಂಡ ಸೃಜನ್ ಜೋರಾಗಿ ಗಲಾಟೆ ಮಾಡಿದ್ದಾಳೆ. ಈ ವೇಳೆ ಇಬ್ಬರ ನಡುವಿನ ಕಲಹ ತಾರಕಕ್ಕೇರಿದೆ. ಇದಾದ ನಂತರ ಆಯ್ತು ನಿನ್ನನ್ನು ನಮ್ಮೂರಿಗೆ ಕರೆದುಕೊಂಡು ಹೋಗುತ್ತೇನೆ ಎಂದು ಯುವತಿ ಸೌಮ್ಯಳನ್ನು ಪತಿ ಸೃಜನ್ ತನ್ನೊಂದಿಗೆ ಸಾಗರಕ್ಕೆ ಕರೆದುಕೊಂಡು ಹೊರಟಿದ್ದಾನೆ. ಈ ವೇಳೆ ದಾರಿಯಲ್ಲಿ ಹೆಂಡತಿ ಸೌಮ್ಯಳನ್ನು ಮನವೊಲಿಸಲು ಪ್ರಯತ್ನ ಮಾಡಿದ್ದಾನೆ. ಆಗಲೂ ದಾರಿ ಮಧ್ಯದಲ್ಲಿ ಅವರಿಬ್ಬರ ನಡುವೆ ಗಲಾಟೆಯಾಗಿದೆ.
2024ರಲ್ಲಿ ರಿಲೀಸ್ ಆಗಿ ಕನ್ನಡ ಚಿತ್ರರಂಗದ ಮರ್ಯಾದೆ ಉಳಿಸಲಿವೆಯೇ ಈ ಪ್ಯಾನ್ ಇಂಡಿಯಾ ಸಿನಿಮಾಗಳು?
ಇನ್ನು ದಾರಿಯಲ್ಲಿ ಯಾರೂ ಇಲ್ಲದ ವೇಳೆ ಗಲಾಟೆ ತಾರಕ್ಕೇರಿದ್ದರಿಂದ ಸೃಜನ್ ಸಿಟ್ಟಿನಿಂದ ತನ್ನ ಹೆಂಡತಿ ಮೇಲೆ ಜೋರಾಗಿ ಹಲ್ಲೆ ಮಾಡಿದ್ದಾನೆ. ಇದರಿಂದ ಗಂಭೀರ ಗಾಯಗೊಂದ ಯುವತಿ ಸೌಮ್ಯಾ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ. ಕಳೆದ ಕೆಲ ದಿನಗಳ ಹಿಂದೆ ಕೊಪ್ಪ ಪೊಲೀಸ್ ಠಾಣೆಯಲ್ಲಿ ಯುವತಿಯ ಪೋಷಕರು ನಾಪತ್ತೆ ಆಗಿರುವ ಬಗ್ಗೆ ಮಿಸ್ಸಿಂಗ್ ಕೇಸ್ ದಾಖಲಿಸಿದ್ದಾರೆ. ಈ ಪ್ರಕರಣ ಬೆನ್ನು ಹತ್ತಿದ ಕೊಪ್ಪ ಪೊಲೀಸರು ಕೊನೆಗೆ ಸೃಜನನ್ನು ವಿಚಾರಣೆಗೊಳಪಡಿಸಿದಾಗ ಆತ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.
ಯುವತಿಯನ್ನ ಕೊಂದು ಆಕೆಯನ್ನು ಆನಂದಪುರದ ಮುಂಬಾಳು ಸಮೀಪ ಮಣ್ಣಿನಲ್ಲಿ ಹೂತು ಹಾಕಿರುವ ವಿಚಾರ ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದಾನೆ. ಇನ್ನು ಮಣ್ಣಿನಲ್ಲು ಹೂತಿರುಬ ಸೌಮ್ಯಳ ಮೃತದೇಹವನ್ನು ನಾಳೆ ತಹಸೀಲ್ದಾರ್ ಸಮ್ಮುಖದಲ್ಲಿ ಪೊಲೀಸರು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಿದ್ದಾರೆ. ಈ ಸಂಬಂಧ ಬಿಎನ್‌ಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಾಗರ ಉಪ ವಿಭಾಗದ ಪೊಲೀಸರು ನೆರೆಯ ಜಿಲ್ಲೆ ಕೊಪ್ಪ ಪೊಲೀಸರಿಗೆ ಸಹಕಾರ ನೀಡುತ್ತಿದ್ದಾರೆ.