ತಾಲೂಕಿನ ರೈತರ ಜೀವನಾಡಿಯಾದ ರೇಷ್ಮೆ ಕೃಷಿ. ಆದರೆ ರೇಷ್ಮೆ ಗೂಡಿನ ಬೆಲೆ ಕುಸಿತದಿಂದಾಗಿ ರೇಷ್ಮೆ ಬೆಲೆಗಾರ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರದ ಬೆಂಬಲ ಬೆಲೆ ನಿರೀಕ್ಷೆಯಲ್ಲಿದ್ದಾನೆ. ತಾಲೂಕಿನ ರೈತರು ಹೈನುಗಾರಿಕೆ ಮತ್ತು ರೇಷ್ಮೆ ಕೃಷಿಯನ್ನೇ ಹೆಚ್ಚಾಗಿ ಅವಲಂಬಿತರಾಗಿದ್ದಾರೆ.
ರಮೇಶ್ ಕೆ.
ಬಂಗಾರಪೇಟೆ (ಜೂ.01): ತಾಲೂಕಿನ ರೈತರ ಜೀವನಾಡಿಯಾದ ರೇಷ್ಮೆ ಕೃಷಿ. ಆದರೆ ರೇಷ್ಮೆ ಗೂಡಿನ ಬೆಲೆ ಕುಸಿತದಿಂದಾಗಿ ರೇಷ್ಮೆ ಬೆಲೆಗಾರ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರದ ಬೆಂಬಲ ಬೆಲೆ ನಿರೀಕ್ಷೆಯಲ್ಲಿದ್ದಾನೆ. ತಾಲೂಕಿನ ರೈತರು ಹೈನುಗಾರಿಕೆ ಮತ್ತು ರೇಷ್ಮೆ ಕೃಷಿಯನ್ನೇ ಹೆಚ್ಚಾಗಿ ಅವಲಂಬಿತರಾಗಿದ್ದಾರೆ. ಕಳೆದ ಹಲವು ವಾರಗಳಿಂದ ಮಾರುಕಟ್ಟೆಯಲ್ಲಿ ಸತತವಾಗಿ ರೇಷ್ಮೆ ಗೂಡಿನ ಬೆಲೆ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ನೂರಾರು ಕುಟುಂಬಗಳು ಬೀದಿಗೆ ಬೀಳುವಾಂತಾಗಿದೆ.
ತಾಲೂಕಿನ 3 ಸಾವಿರ ಹೆಕ್ಟರ್‌ನಲ್ಲಿ ಕೃಷಿ: ತಾಲೂಕಿನಲ್ಲಿ ಸುಮಾರು 3000 ಹೆಕ್ಟರ್ ಪ್ರದೇಶದಲ್ಲಿ ರೈತರು ಹಿಪ್ಪುನೇರಳೆಯನ್ನು ಬೆಳೆದಿದ್ದು, ಸುಮಾರು 2500 ಸಾವಿರಕ್ಕೂ ಹೆಚ್ಚಿನ ರೈತರು ರೇಷ್ಮೆಯನ್ನು ಮುಖ್ಯ ಕಸುಬಾಗಿಸಿಕೊಂಡು ಅದನ್ನು ಬೆಳೆಯುವುದರ ಮೂಲಕ ಜೀವನವನ್ನು ನಿರ್ವಹಿಸುತ್ತಿದ್ದಾರೆ. ತಾಲ್ಲೂಕಿನಿಂದ ಪ್ರತಿ ತಿಂಗಳು 50 ರಿಂದ 60 ಟನ್ ಬೈವೋಲ್ಟಿನ್ ತಳಿಯ ರೇಷ್ಮೆ ಗೂಡುಗಳನ್ನು ಉತ್ಪಾದನೆ ಮಾಡುತ್ತಿದ್ದು, ಜಿಲ್ಲೆಯಲ್ಲಿಯೇ ಹೆಚ್ಚು ಬೈವೊಲ್ಟಿನ್ ತಳಿಯನ್ನು ಬೆಳೆಯುವ ತಾಲೂಕು ಎಂಬ ಖ್ಯಾತಿಯನ್ನು ಬಂಗಾರಪೇಟೆ ಹೊಂದಿದೆ.
ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸವಾಲುಗಳಿವೆ: ಸಚಿವ ಮಧು ಬಂಗಾರಪ್ಪ
ಆದರೆ ಕೋಲಾರ ಸೇರಿದಂತೆ ಹಲವು ಮಾರುಕಟ್ಟೆಗಳಲ್ಲಿ ರೇಷ್ಮೆ ಬೆಲೆ ಕುಸಿತಗೊಂಡಿರುವ ಕಾರಣ ರೈತರಲ್ಲಿ ನಿರಾಸೆ ಉಂಟು ಮಾಡಿದೆ. ಈಗ ಪ್ರತಿ ಕೆಜಿಗೆ ಕನಿಷ್ಠ 270ರಿಂದ ಗರಿಷ್ಟ450 ರೂಗಳವರೆಗೂ ಮಾರಾಟವಾಗುತ್ತಿದೆ. ಈ ಹಿಂದೆ 550 ರಿಂದ 750 ರು.ಗಳವರೆಗೂ ಮಾರಾಟವಾಗುತ್ತಿತ್ತು. ರೇಷ್ಮೆ ಗೂಡಿನ ಬೆಲೆ ಕುಸಿತದಿಂದ ರೈತರು ಕಂಗಾಲಾಗಿರುವ ಸಮಯದಲ್ಲಿ 100 ಮೊಟ್ಟೆಯ ಸುಮಾರು 600 ರಿಂದ 1200 ರೂಗೆ ಮಾರಾಟವಾಗುತ್ತಿದೆ. ರೇಷ್ಮೆ ಚಾಕಿ ಹುಳದ 100 ಮೊಟ್ಟೆಗೆ 4500 ಯಿಂದ 5000ರವರೆಗೂ ಮಾರಾಟವಾಗುತ್ತಿದ್ದು, ಬೆಲೆ ಏರಿಕೆಯಿಂದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ರೇಷ್ಮೆ ನೂಲು ಖರೀದಿ ಕುಸಿತ: ಮಾರುಕಟ್ಟೆಯಲ್ಲಿ ರೇಷ್ಮೆ ನೂಲಿನ ಖರೀದಿ ಕಡಿಮೆಯಾಗಿ ಅದರ ಬೆಲೆಯೂ ಸಹ ಕುಂಠಿತಗೊಂಡಿದೆ. ಇದರ ನಡುವೆ ಆಂದ್ರ ಮತ್ತು ತಮಿಳುನಾಡಿನಿಂದ ರೇಷ್ಮೆ ಗೂಡು ಮಾರುಕಟ್ಟೆಗೆ ಲಗ್ಗೆ ಇಟ್ಟಿರುವುದರಿಂದ ಅವಕ ಹೆಚ್ಚಾಗಿರುವುದು ಸಹ ಬೆಲೆ ಕುಸಿತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಒಂದು ಎಕರೆ ಹಿಪ್ಪನೇರಳೆ ಸೊಪ್ಪು ಈ ಹಿಂದೆ 10 ರಿಂದ 15 ಸಾವಿರಕ್ಕೆ ಮಾರಾಟವಾಗುತ್ತಿದ್ದು, ಕಳೆದ ಕೆಲವು ವಾರಗಳಿಂದ ರೇಷ್ಮೆ ಗೂಡಿನ ಬೆಲೆಯ ಸತತ ಕುಸಿತದಿಂದ ಕೇವಲ 4 ರಿಂದ 5 ಸಾವಿರಕ್ಕೆ ಮಾರಾಟವಾಗುತ್ತಿದೆ. ಇದನ್ನು ಗಮನಿಸಿದ ಹಲವು ರೈತರು ಹಿಪುತ್ರ್ಪನೇರಳೆಯನ್ನು ತೆಗೆದು ಬೇರೊಂದು ಬೆಳೆಯನ್ನು ಬೆಳೆಯುವ ಆಲೋಚನೆಯಲ್ಲಿದ್ದಾರೆ.
ಗ್ಯಾರಂಟಿಗಾಗಿ ಪಿಎಚ್‌ಎಚ್ ಕಾರ್ಡ್ ಹೊಂದುವ ಬಯಕೆ: ಆನ್‌ಲೈನ್ ಪೋರ್ಟಲ್ ಸ್ಥಗಿತ
ರೀಲರ್‌ಗಳ ಖಾತೆಯಲ್ಲಿ ಹಣವಿದ್ದರೆ ಮಾತ್ರ ಗೂಡು ಖರೀದಿಗೆ ಅವಕಾಶವಿರುತ್ತದೆ. ಚುನಾವಣೆಯ ಸಂದರ್ಭದಲ್ಲಿ ರೀಲರ್‌ಗಳಿಗೆ ಹಣಕಾಸಿನ ಸಮಸ್ಯೆ ಉಂಟಾಗಿ ರೇಷ್ಮೆ ವಹಿವಾಟು ನಡೆಯಲಿಲ್ಲ. ಮುಂದಿನ ದಿನಗಳಲ್ಲಿ ಬೆಲೆ ಏರಿಕೆ ಕಾಣುವ ಸಾಧ್ಯತೆ ಇದೆ. ರೇಷ್ಮೆ ಚಾಕಿ ಹುಳದ ಬೆಲೆ ಏರಿಕೆ ಸಂಬಂಧಪಟ್ಟಂತೆ ಸಾಕಿ ಸಾಕಾಣಿಕೆ ಕೇಂದ್ರದವರೊಟ್ಟಿಗೆ ಚರ್ಚಿಸಲಾಗುತ್ತದೆ.
- ಕಾಳಪ್ಪ , ಉಪ ನಿದೇರ್ಶಕ, ರೇಷ್ಮೆ ಇಲಾಖೆ, ಕೋಲಾರ