ಗರ್ಭಿಣಿಯರೇ, ಬಾಣಂತಿಯರೇ ಹುಷಾರ್, ಕೇಂದ್ರ-ರಾಜ್ಯ ಸರ್ಕಾರದ ಹೆಸರಲ್ಲಿ ನಡೆಯುತ್ತಿದೆ ವಂಚನೆ!

By Santosh Naik  |  First Published Oct 5, 2024, 10:05 AM IST

ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯ ಹೆಸರು ಹೇಳಿ ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ವಂಚನೆ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದು, ಸೈಬರ್‌ ಕ್ರಿಮಿನಲ್‌ಗಳು ಯೋಜನೆಗಳ ಹೆಸರನ್ನೇ ಬಳಸಿಕೊಂಡು ವಂಚನೆ ಮಾಡುತ್ತಿದ್ದಾರೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.


ಬೆಳಗಾವಿ (ಅ.5): ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯ ಹೆಸರು ಹೇಳಿ ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ವಂಚನೆ ಮಾಡುತ್ತಿರುವ ಪ್ರಕರಣಗಳ ಬಗ್ಗೆ ವರದಿಯಾಗಿದೆ. ಇದರ ಬೆನ್ನಲ್ಲಿಯೇ ಪೊಲೀಸರು ಗರ್ಭಿಣಿಯರು ಹಾಗೂ ಬಾಣಂತಿಯರು ಇಂಥ ಪ್ರಯತ್ನಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸಲಹೆ ನೀಡಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಹಲವು ಯೋಜನೆಗಳನ್ನು ನೀಡಿವೆ. ಇಂಥ  ಯೋಜನೆಗಳ ಹೆಸರನ್ನೇ ಟಾರ್ಗೆಟ್‌ ಮಾಡಿಕೊಂಡು ಸೈಬರ್‌ ಕ್ರಿಮಿನಲ್‌ಗಳು ವಂಚನೆ ಮಾಡುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಗರ್ಭಿಣಿ, ಬಾಣಂತಿಯನ್ನೇ ಸೈಬರ್ ವಂಚಕರು ಟಾರ್ಗೆಟ್‌ ಮಾಡುತ್ತಿದ್ದಾರೆ ಎನ್ನುವ ಅಂಶ ಬೆಳಕಿಗೆ ಬಂದಿದೆ.

ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ ಹೆಸರು ಬಳಸಿ ವಂಚನೆ ಮಾಡಲಾಗುತ್ತಿದೆ. ನಿಮ್ಮ ಖಾತೆಗೆ ಈ ಯೋಜನೆಯಡಿ ಹಣ ಬರುತ್ತೆ ಎಂದು ದೂರವಾಣಿ ಕರೆ ಮಾಡುವ ಸೈಬರ್‌ ಕ್ರಿಮಿನಲ್‌ಗಳು, ನಿಮ್ಮ ವಾಟ್ಸಪ್‌ಗೆ ಒಂದು ಲಿಂಕ್ ಕಳಿಸಿದ್ದೇವೆ, ಅದರ ಮೇಲೆ ಕ್ಲಿಕ್ ಮಾಡಿ ಒಟಿಪಿ ಹೇಳಿ ಅಂತಾ ತಿಳಿಸುತ್ತಿದ್ದಾರೆ.

ಬುಡಕಟ್ಟು ಜನರ ಸಬಲೀಕರಣಕ್ಕೆ 24000 ಕೋಟಿ ವೆಚ್ಚದ ಬೃಹತ್ ಯೋಜನೆಗೆ ನಾಳೆ ಪ್ರಧಾನಿ ಚಾಲನೆ

ಹಾಗೇನಾದರೂ ಲಿಂಕ್ ಕ್ಲಿಕ್ ಮಾಡಿ ಒಟಿಪಿ ಹೇಳುತ್ತಿದ್ದಂತೆ ಗರ್ಭಿಣಿಯರ ಖಾತೆಯಲ್ಲಿನ ಹಣ ಮಾಯವಾಗುತ್ತಿದೆ. ಕಳೆದ ಎರಡು ದಿನಗಳಲ್ಲಿ ಬೆಳಗಾವಿ ಸಿಇಎನ್ ಠಾಣೆಗೆ ಐವರು ಗರ್ಭಿಣಿಯರು ಈ ಬಗ್ಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಸಿಪಿಐ ಬಿ.ಆರ್.ಗಡ್ಡೇಕರ್ & ಟೀಮ್ ಈ ಬಗ್ಗೆ ತನಿಖೆ ಮಾಡುತ್ತಿದೆ.

Latest Videos

ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯಡಿ ಕರ್ನಾಟಕಕ್ಕೆ 615 ಕೋಟಿ ರೂ ಬಿಡುಗಡೆ!

click me!