Praveen Nettaru Murder Case: ಬಾಳೆಹೊನ್ನೂರು ಪಟ್ಟಣ ಬಂದ್ 

By Ravi Nayak  |  First Published Jul 29, 2022, 3:53 PM IST
  • ಪ್ರವೀಣ್ ಹತ್ಯೆ ಹಿನ್ನೆಲೆ ಬಾಳೆಹೊನ್ನೂರು ಪಟ್ಟಣ ಬಂದ್ 
  • ಹಿಂದೂಪರ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ
  • ಮಾನವ ಸರಪಳಿ ನಿರ್ಮಿಸಿ ಸರ್ಕಾರದ ವಿರುದ್ದ ಆಕ್ರೋಶ
  • ಅಂಗಡಿಮುಂಗಟ್ಟು ಬಂದ್ ಮಾಡಿ ಬೆಂಬಲ 
  • ಪ್ರತಿಭಟನೆಯಲ್ಲಿ ನೂರಾರು ಕಾರ್ಯಕರ್ತರು ಭಾಗಿ

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು

ಚಿಕ್ಕಮಗಳೂರು (ಜು.29) : ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಮಲೆನಾಡಿನಲ್ಲಿ ಆಕ್ರೋಶದ ಕಿಚ್ಚು ಜೋರಾಗಿದೆ.ಮಲೆನಾಡಿನಲ್ಲಿ ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರು ರಾಜೀನಾಮೆ ಸಲ್ಲಿಸಿದ್ರೆ ಮತ್ತೊಂದಡೆ ಸೂಕ್ತ ನ್ಯಾಯಾಕ್ಕೆ ಆಗ್ರಹಿಸಿ ಪ್ರತಿಭಟನೆ, ಬಂದ್  ಬಿಸಿ ಜೋರಾಗಿದೆ. 

Tap to resize

Latest Videos

ಬಾಳೆಹೊನ್ನೂರು ಪಟ್ಟಣ ಬಂದ್ :

ಬಿಜೆಪಿ ಯುವ ಮೋರ್ಚಾ(BJP Yuva Morcha) ಮುಖಂಡ ಬೆಳ್ಳಾರೆಯ ಪ್ರವೀಣ್ ನೆಟ್ಟಾರು(Praveen Nettaru) ಹತ್ಯೆಯನ್ನು ಖಂಡಿಸಿ ಚಿಕ್ಕಮಗಳೂರು(Chikkamagaluru) ಜಿಲ್ಲೆಯ ಎನ್ ಆರ್ ಪುರ(N.R.Pura) ತಾಲ್ಲೂಕಿನ ಬಾಳೆಹೊನ್ನೂರಿನ‌ ಪಟ್ಟಣ ಸಂಪೂರ್ಣವಾಗಿ ಬಂದ್ ಆಗಿದೆ.  ಬಿಜೆಪಿ ಯುವಮೋರ್ಚಾ ಪ್ರವೀಣ್ ಹತ್ಯೆಯನ್ನು ಖಂಡಿಸಿ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ. ಬಾಳೆಹೊನ್ನೂರು ಪಟ್ಟಣ ಬೆಳಿಗ್ಗೆ 6 ಗಂಟೆಯಿಂದ ಸಂಜೆವರೆಗೆ ಪೂರ್ಣಪ್ರಮಾಣದಲ್ಲಿ ಸ್ತಬ್ಧವಾಗಲಿದೆ. ಅಂಗಡಿ ಮುಂಗಟ್ಟುಗಳನ್ನು ಮುಚ್ಚುವ ಮೂಲಕ ಮಾಲೀಕರು ಬಂದ್ ಗೆ ಸಹಕರಿಸಿದರು. ಹಾಲು, ಔಷಧಿ ಅಂಗಡಿಗಳನ್ನು ಹೊರತು ಪಡಿಸಿದರೆ ಉಳಿದ ಅಂಗಡಿಗಳ ಬಾಗಿಲು ಮುಚ್ಚಲಾಗಿತ್ತು.ಖಾಸಗಿ ಬಸ್ ಗಳು ಮತ್ತು ಆಟೋ ರಿಕ್ಷಾಗಳು ರಸ್ತೆಗಿಳಿಯಲಿಲ್ಲ, ಬಂದ್ ವಿಷಯ ತಿಳಿಯದವರು  ಪಟ್ಟಣಕ್ಕೆ ಆಗಮಿಸಿದವರು, ಪ್ರಯಾಣಕ್ಕೆ ಪರದಾಡಬೇಕಾಯಿತು. ವಿವಿಧ ವಸ್ತುಗಳನ್ನು ಖರೀದಿಸಲಾಗದೆ ಬಂದ ದಾರಿಗೆ ಸುಂಕವಿಲ್ಲದಂತೆ ಮನೆದಾರಿ ತುಳಿಯಬೇಕಾಯಿತು.

ವೀಣ್ ಹತ್ಯೆಗೆ ಭುಗಿಲೆದ್ದ ಆಕ್ರೋಶ: ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಅಲ್ಲಲ್ಲಿ ಭಾರೀ ಪ್ರತಿಭಟನೆ

ಹತ್ಯೆ ಖಂಡಿಸಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ :

ಮಂಗಳೂರು ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಹತ್ಯೆಯನ್ನು ಖಂಡಿಸಿ ಬಾಳೆಹೊನ್ನೂರು ಪಟ್ಟಣದ ಮುಖ್ಯ ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ  ನಡೆಸಲಾಯಿತು. ತದನಂತರ ಜೆಸಿ ಸರ್ಕಲ್ ನಲ್ಲಿ ಮಾನವ ಸರಪಳಿ ನಿರ್ಮಿಸಿ ಸರ್ಕಾರದ ವಿರುದ್ದ  ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಹತ್ಯೆ ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಹಿಂದೂಗಳನ್ನು ರಕ್ಷಣೆ ಮಾಡುವವರು ಯಾರು?:

ಪ್ರವೀಣ್ ಹತ್ಯೆ: ಕೇರಳದ ಮತೀಯ ಸಂಘಟನೆಗಳಿಗೆ ಸ್ಥಳೀಯರ ಸಾಥ್...?

ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತಾಡಿದ ಬಜರಂಗದಳದ(Bajarangadala) ಜಿಲ್ಲಾ ಸಂಚಾಲಕ ಶಶಾಂಕ್ ಹೇರೂರು(Shashank Herooru)
ಹಿಂದೂಗಳು ಒಗ್ಗೂಡದಿದ್ದರೆ ಮುಂದಿನ ದಿನಗಳಲ್ಲಿ ಉಳಿಗಾಲವಿಲ್ಲವೆಂದು ಎಚ್ಚರಿಸಿ, ಬಿಜೆಪಿ ಆಡಳಿತದಲ್ಲೇ ಪಕ್ಷದ ಕಾರ್ಯಕರ್ತರಿಗೆ ಈ ಗತಿ ಬಂದಿದೆ ಎಂದು ಹೇಳಿದರು.ಮುಂದಿನ ದಿನಗಳಲ್ಲಿ ಇಂತಹ ಕೃತ್ಯಕ್ಕೆ ಇತಿಶ್ರೀ ಹಾಡಲು ರಾಜ್ಯ ಸರ್ಕಾರ ಅಗತ್ಯ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ, ಹರ್ಷನ ಕೊಲೆ ಆರೋಪಿಗಳ ಕಾರಾಗೃಹದಲ್ಲಿ ರಾಜಾತಿಥ್ಯ ಸ್ವೀಕರಿಸುತ್ತಿದ್ದಾರೆಂದು ಆರೋಪಿಸಿದರು. ಜಿಹಾದಿಗಳ ಮನಸ್ಥಿತಿಯಿಂದ ಹಿಂದುಗಳ ಸರಣಿ ಹತ್ಯಾಗುತ್ತಿದೆ. ಅಭಿವೃದ್ಧಿಯನ್ನು ಯಾರು ಬೇಕಾದರೂ ಮಾಡುತ್ತಾರೆ ಆದರೆ ಹಿಂದೂಗಳನ್ನು ರಕ್ಷಣೆ ಮಾಡುವವರು ಯಾರು, ಪ್ರವೀಣ್ ಹತ್ಯೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದ್ದು ಎಂದು ಟೀಕೆಸಿದರು.

click me!