ಜಮ್ಮು ಕಾಶ್ಮೀರದಲ್ಲಿರುವ ಎಲ್ಲರನ್ನು ಒದ್ದು ಪಾಕಿಸ್ತಾನಕ್ಕೆ ಕಳಿಸಿ: ಪ್ರಮೋದ್ ಮುತಾಲಿಕ್

By Girish Goudar  |  First Published Jul 19, 2024, 7:55 PM IST

ಜಮ್ಮು ಕಾಶ್ಮೀರದಲ್ಲಿ ಮೊದಲಿನ ದಸ್ಥಿತಿಯೇ ಬರಲಾರಂಭಿಸಿದೆ. ಕಾಶ್ಮೀರದಲ್ಲಿ ಸೈನಿಕರ ಹತ್ಯೆ ನಡೀತಿದೆ. ಹಿಂದೆ ಕಾಂಗ್ರೆಸ್ ಅಧಿಕಾರದ ಇದ್ದಾಗ ನಡೆಯುತ್ತಿದ್ದ ರೀತಿಯಲ್ಲಿ ಭಯೋತ್ಪಾದನೆ ನಡೆಯುತ್ತಿದೆ. ಕಳೆದ ಒಂದೇ ತಿಂಗಳಲ್ಲಿ 50 ಸೈನಿಕರ ಹತ್ಯೆಯಾಗಿದೆ. ಇದು ಆತಂಕಕಾರಿ ವಿಚಾರವಾಗಿದೆ: ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ 


ಹುಬ್ಬಳ್ಳಿ(ಜು.19):  ಶ್ರೀರಾಮಸೇನೆ ಸಂಘಟನೆ ಮುಖಂಡರ ಫೇಸ್‌ಬುಕ್‌ ಬ್ಲಾಕ್ ಪ್ರಕರಣಕ್ಕೆ ಸಂಬಂಧಿಸಿದಂತೆ  ಮುಖಂಡರು ಪೊಲೀಸರ ಮೊರೆ ಹೋಗಿದ್ದಾರೆ. ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಪೊಲೀಸ್ ಆಯುಕ್ತ ಶಶಿಕುಮಾರ್ ಅವರಿಗೆ ದೂರು ನೀಡಿದ್ದಾರೆ. 

ಕಳೆದ 15 ದಿನದಿಂದ ನಮ್ಮ ಫೇಸ್‌ಬುಕ್‌ ಅಕೌಂಟ್‌ಗಳು ಬ್ಲಾಕ್ ಆಗಿವೆ. ತಾಂತ್ರಿಕ ಕಾರಣದಿಂದ ಹೀಗಾಗಿದೆ ಅಂತ ಸುಮ್ಮನಿದ್ದೆವು. ಆದರೆ ಇದರ ಹಿಂದೆ ಪಿತೂರಿ ನಡೆದಿರುವ ಗುಮಾನಿ ಇದೆ. ಲವ್ ಜಿಹಾದ್ ವಿರುದ್ಧ ನಾವು ಹೋರಾಟ ಮಾಡಿದ್ದರ ಹಿನ್ನೆಲೆಯಲ್ಲಿ ಈ ರೀತಿ ಮಾಡಿರಬಹುದು. ಭಟ್ಕಳ ಮಂಗಳೂರು ಮತ್ತು ಹೊರದೇಶಗಳಿಂದ ಕೆಲ ಮುಸ್ಲಿಂ ಕಿಡಿಗೇಡಿಗಳು ಮಾಡಿದ್ದಾರೆ. ಇದೂ ಒಂದು ರೀತಿಯಲ್ಲಿ ಜಿಹಾದ್ ಪ್ರಕ್ರಿಯೆಯಾಗಿದೆ. ನಾವು ನ್ಯಾಯಾಲಯಕ್ಕೆ ಹೋಗಲು ಸಿದ್ಧ ಎಂದು ದೂರು ಕೊಟ್ಟ ನಂತರ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ. 

Tap to resize

Latest Videos

ಹಿಂದೂ ಹುಡುಗಿಯರೇ ನಿಮಗೆ ಪ್ರಜ್ಞೆ ಇಲ್ಲವಾ? ಪ್ರಮೋದ್ ಮುತಾಲಿಕ್ ಕೆಂಡಾಮಂಡಲ

ಜಮ್ಮು ಕಾಶ್ಮೀರದಲ್ಲಿ ಇದ್ದ ಎಲ್ಲರನ್ನು ಒದ್ದು ಪಾಕಿಸ್ತಾನಕ್ಕೆ ಕಳಿಸಬೇಕು

ಜಮ್ಮು ಕಾಶ್ಮೀರದಲ್ಲಿ ಮೊದಲಿನ ದಸ್ಥಿತಿಯೇ ಬರಲಾರಂಭಿಸಿದೆ. ಕಾಶ್ಮೀರದಲ್ಲಿ ಸೈನಿಕರ ಹತ್ಯೆ ನಡೀತಿದೆ. ಹಿಂದೆ ಕಾಂಗ್ರೆಸ್ ಅಧಿಕಾರದ ಇದ್ದಾಗ ನಡೆಯುತ್ತಿದ್ದ ರೀತಿಯಲ್ಲಿ ಭಯೋತ್ಪಾದನೆ ನಡೆಯುತ್ತಿದೆ. ಕಳೆದ ಒಂದೇ ತಿಂಗಳಲ್ಲಿ 50 ಸೈನಿಕರ ಹತ್ಯೆಯಾಗಿದೆ. ಇದು ಆತಂಕಕಾರಿ ವಿಚಾರವಾಗಿದೆ. ಜಮ್ಮು ಕಾಶ್ಮೀರದಲ್ಲಿ ಇದ್ದವರನ್ನು ಒದ್ದು ಪಾಕಿಸ್ತಾನಕ್ಕೆ ಕಳಿಸಬೇಕು. ಈ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಯೇ ಸಿಕ್ಕಿಹಾಕಿಕೊಂಡಿದ್ದಾನೆ. ಜಮ್ಮು ಕಾಶ್ಮೀರದಲ್ಲಿ ಮನೆ ಮನೆಯಲ್ಲಿಯೂ ಭಯೋತ್ಪಾದಕರಿದ್ದಾರೆ. ಇದನ್ನು ಪ್ರಧಾನಿಗಳು ಗಂಭೀರವಾಗಿ ತೆಗೆದುಕೊಳ್ಳಬಹುದು ಎಂದು ಮುತಾಲಿಕ್‌ ಆಗ್ರಹಿಸಿದ್ದಾರೆ. 

ಜನಸಂಖ್ಯೆ ಹೆಚ್ಚಿಸುವ ಲವ್ ಜಿಹಾದ್‌ಗೆ ಒಪ್ಪದ ನೇಹಾಳನ್ನು ಫಯಾಜ್ ಕೊಂದಿದ್ದಾನೆ; ಪ್ರಮೋದ್ ಮುತಾಲಿಕ್ ಆರೋಪ

ಕರ್ನಾಟಕದಲ್ಲಿ ಹಿಂದೂ ವಿರೋಧಿ ಸರ್ಕಾರವಿದೆ. ಹೀಗಾಗಿ ಮಾಲ್‌ನಲ್ಲಿ ರೈತನನ್ನು ಬಿಟ್ಟುಕೊಳ್ಳಲಾಗಿಲ್ಲ. ರಾಜ್ಯ ಸರ್ಕಾರಕ್ಕೆ ಸಲಹೆ ಕೊಡುವವರು ಎಲ್ಲರೂ ನಾಸ್ತಿಕವಾದಿಗಳಾಗಿದ್ದಾರೆ. ಸರ್ಕಾರದ ಈ ರೀತಿಯ ಧೋರಣೆ ಬಹಳ ದಿನ ನಡೆಯಲ್ಲ. ಬೆಂಗಳೂರು ಸಿಟಿ ನಡೆಯುತ್ತಿರುವುದೇ ಸಾಮಾನ್ಯ ರೈತ ದುಡಿಮೆಯಿಂದ. ಬಟ್ಟೆಯ ಮೂಲಕ ಅಳೆಯುವಂಥದ್ದು ಅತ್ಯಂತ ಮೂರ್ಖತನ. ಜಿಟಿ ಮಾಲ್ ನ್ನು ಸಂಪೂರ್ಣವಾಗಿ ಬಂದ್ ಮಾಡಿಸಬೇಕು. ಅನ್ನದಾತನಿಗೆ ಅಪಮಾನ ಮಾಡುವರ ಮೇಲೆ ನಿರ್ದಾಕ್ಷಿಣ್ಯ ಕ್ರಮವಾಗಬೇಕು ಎಂದು ತಿಳಿಸಿದ್ದಾರೆ. 

ಕರ್ನಾಟಕದಲ್ಲಿ ಸಂಪೂರ್ಣ ಭ್ರಷ್ಟ ವ್ಯವಸ್ಥೆ ಬಂದಿದೆ. ರಕ್ತದಲ್ಲಿಯೇ ಭ್ರಷ್ಟಾಚಾರ ಹೊಕ್ಕಿದೆ. ವಾಲ್ಮೀಕಿ ನಿಗಮದ 187 ಕೋಟಿ ತಿಂದು ಹಾಕಲಾಗಿದೆ. ಭ್ರಷ್ಟಾಚಾರ ಮಾಡಿದವರಿಗೆ ವಾಲ್ಮೀಕಿಯ ಶಾಪ ತಟ್ಟುತ್ತೆ. ವಾಲ್ಮೀಕಿ ನಿಗಮದ ಹಗರಣದ ತನಿಖೆಗೆ ಸಮಿತಿ ನೇಮಕಕ್ಕೆ ಕಿಡಿ ಕಾರಿದ ಮುತಾಲಿಕ್‌ ಹೀಗೆ ಸಮಿತಿಗಳನ್ನು ಮಾಡೋ ನಾಟಕ ಮಾಡುತ್ತೆ. ನೇಹಾ ಹಿರೇಮಠ ಹತ್ಯೆ ಪ್ರಕರಣದಲ್ಲಿಯೂ ಇದೇ ರೀತಿ ಮಾಡಲಾಯಿತು. ಕೇವಲ ಒಬ್ಬನೇ ಆರೋಪಿಯನ್ನು ಬಂಧಿಸಿ ತನಿಖೆ ಪೂರ್ಣಗೊಳಿಸಲಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕೆಂಡ ಕಾರಿದ್ದಾರೆ. 

click me!