ರಾಯಚೂರು ಜಿಲ್ಲೆಗೆ ಕಾಡುತ್ತಿದೆ ಅಪೌಷ್ಟಿಕತೆ, ಅವಧಿಗೂ ಮುನ್ನವೇ ಶೇ.3ರಷ್ಟು ಗರ್ಭಿಣಿಯರ ಹೆರಿಗೆ

By Suvarna NewsFirst Published Apr 30, 2022, 7:55 PM IST
Highlights

* ರಾಯಚೂರು ಜಿಲ್ಲೆಗೆ ಕಾಡುತ್ತಿದೆ ಅಪೌಷ್ಟಿಕತೆ!
* ಅವಧಿಗೂ ಮುನ್ನವೇ ಶೇ.3ರಷ್ಟು ಗರ್ಭಿಣಿಯರ ಹೆರಿಗೆ!
 * ಸರ್ಕಾರ ಎಷ್ಟೇ ಯೋಜನೆಗಳು ತಂದರೂ ಪ್ರಯೋಜನೆ ಇಲ್ಲ

ವರದಿ : ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್

ರಾಯಚೂರು, (ಏ.30):
ರಾಯಚೂರು ಜಿಲ್ಲೆಯಲ್ಲಿ ಬೆಳೆದ ಭತ್ತ ಇಡೀ ರಾಜ್ಯ ಮತ್ತು ದೇಶದ ನಾನಾ ಮೂಲೆಗಳಿಗೆ ಸರಬರಾಜು ಆಗುತ್ತೆ, ಆದ್ರೆ ಈ ಜಿಲ್ಲೆಯಲ್ಲಿ ಮಾತ್ರ ಅಪೌಷ್ಟಿಕತೆ ತಾಂಡವಾಡುತ್ತಿದೆ. ಸರ್ಕಾರ ಎಷ್ಟೇ ಯೋಜನೆಗಳು ತಂದರೂ ಸಹ ಫಲಾನುಭವಿಗಳಿಗೆ  ಮುಟ್ಟದೇ ಅವಧಿಗೂ ಮುನ್ನವೇ ಹೆರಿಗೆಗಳು ಆಗುತ್ತಿವೆ. 

ಇನ್ನೂ ಜಿಲ್ಲೆಯಲ್ಲಿ ನವಜಾತ ಶಿಶುಗಳಲ್ಲಿ ಮತ್ತು ಗರ್ಭಿಣಿಯರಲ್ಲಿ ಅಪೌಷ್ಟಿಕತೆ ಹೆಚ್ಚಾಗಿ ಕಾಡುತ್ತಿದೆ. ಅದರಲ್ಲೂ ಗ್ರಾಮೀಣ ಪ್ರದೇಶದ ಮಹಿಳೆಯರಲ್ಲಿ ಅಪೌಷ್ಟಿಕತೆ ಪ್ರಮಾಣ ಹೆಚ್ಚಾಗಿದ್ದು, ಮಹಿಳೆಯರಲ್ಲಿ ಅಪೌಷ್ಟಿಕತೆ ದೂರು ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಆರೋಗ್ಯ ಸೌಕರ್ಯಗಳು ನೀಡಿದ್ರೂ ಸಹ ಸೂಕ್ತ ಸಮಯಕ್ಕೆ ಫಲಾನುಭವಿಗಳಿಗೆ ಮುಟ್ಟದೇ ಇರುವುದರಿಂದ ಅವಧಿಗೂ ಮುನ್ನವೇ ಹೆರಿಗೆಗಳು ಆಗುತ್ತಿವೆ. ಬಹುತೇಕ ಹೆರಿಗೆಗಳು ಮನೆಯಲ್ಲಿಯೇ ಆಗುತ್ತಿರುವ ವರದಿಗಳು ಈಗ ಬಹಿರಂಗಗೊಂಡಿವೆ. 

ದೇಶದ 9.2 ಲಕ್ಷ ಮಕ್ಕಳಲ್ಲಿ ತೀವ್ರ ಸ್ವರೂಪದ ಅಪೌಷ್ಟಿಕತೆ!

ಜಿಲ್ಲೆಯಲ್ಲಿ ಶೇ. 3ರಷ್ಟು ಅವಧಿಗೂ ಮುನ್ನವೇ ಹೆರಿಗೆ!

ರಾಜ್ಯದ ಹಿಂದೂಳಿದ ಜಿಲ್ಲೆಗಳಾದ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳನ್ನು ಮಹಾತ್ವಾಕಾಂಕ್ಷಿ ಜಿಲ್ಲೆಗಳು ಎಂದು ಗುರುತಿಸಿ ಈ ಜಿಲ್ಲೆಗಳಲ್ಲಿ ಶತಮಾನದಿಂದ ಕಾಡುತ್ತಿರುವ ಅಪೌಷ್ಡಿಕತೆ ಪ್ರಮಾಣ ಕಡಿಮೆ ಮಾಡಲು ಕೇಂದ್ರ ಸರ್ಕಾರ ವಿಶೇಷ ಕಾಳಜಿವಹಿಸಿದೆ. ಅಷ್ಟೇ ಅಲ್ಲದೆ ಆರೋಗ್ಯ ಇಲಾಖೆ ಅಪೌಷ್ಡಿಕತೆ ದೂರ ಮಾಡಲು ಶ್ರಮಿಸುತ್ತಿದೆ. ಆದ್ರೂ ಕೂಡ ಅಪೌಷ್ಡಿಕತೆ ಪ್ರಮಾಣ ಕಡಿಮೆ ಆಗದೇ ಅವಧಿಗೂ ಮುನ್ನವೇ ಹೆರಿಗೆಗಳು ಆಗುತ್ತಿವೆ. ಕಳೆದ ವರ್ಷದ ಅಂಕಿ ಸಂಖ್ಯೆಗಳು ಆತಂಕಕಾರಿ ರೀತಿಯಲ್ಲಿ ಈ ಸಮಸ್ಯೆ ಬಯಲುಗೊಳಿಸಿದ್ದು, ಸರಕಾರಕ್ಕೆ ಎಚ್ಚರಿಕೆ ಕರೆಗಂಟೆ ಮೊಳಗಿಸಿವೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೂಲಕ ಕಟ್ಟಕಡೆ ವ್ಯಕ್ತಿಗೂ ಆರೋಗ್ಯ ಸೇವೆಗಳು ದೊರೆಯುವಂತೆ ಮಾಡುತ್ತಿರುವ ಪ್ರಯತ್ನಗಳು ಅಲ್ಲಿಲ್ಲಿ ಕೈ ಕೊಡುತ್ತಿವೆ. ಅಷ್ಟೇ ಅಲ್ಲ ಆರೋಗ್ಯ ಸಂಬಂಧಿ ಜಾಗೃತಿ ಕೊರತೆಯಿಂದ ಜಿಲ್ಲೆಯಲ್ಲಿ ಕಳೆದ ವರ್ಷ ಶೇ.3ರಷ್ಟು ಗರ್ಭಿಣಿಯರಿಗೆ ನಿಗದಿಗೂ ಮೊದಲೇ ಹೆರಿಗೆ ಆಗುತ್ತಿವೆ ಎಂಬ ಮಾಹಿತಿ ಖುದ್ದು ಜಿಲ್ಲಾ ಪಂಚಾಯತ್ ಸಿಇಒ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯವರಿಗೆ ತಿಳಿಸಿದ್ರು.

2 ಲಕ್ಷ ರೂಪಾಯಿ ವೇತನ ನೀಡಿದ್ರೂ ತಜ್ಞ ವೈದ್ಯರು ಸಿಗಲ್ಲ!

ಇನ್ನೂ ಜಿಲ್ಲಾ ಆರೋಗ್ಯ ಇಲಾಖೆ ಪ್ರಕಾರ ಕಳೆದ 2022ರಲ್ಲಿ ಜಿಲ್ಲೆಯಲ್ಲಿ 37,861 ಗರ್ಭಿಣಿಯರು ಮಕ್ಕಳಿಗೆ ಜನ್ಮ ನೀಡಿದ್ದು, ಅವರಲ್ಲಿ 749 ಮಕ್ಕಳು 37 ವಾರಗಳಿಗಿಂತ ಕಡಿಮೆ ಅವಧಿಯಲ್ಲಿ ಜನಿಸಿವೆ. ದೇವದುರ್ಗದಲ್ಲಿ 142, ಲಿಂಗಸುಗೂರು ತಾಲೂಕಿನಲ್ಲಿ 126, ಮಾನ್ವಿ ತಾಲೂಕಿನಲ್ಲಿ 38, ಸಿಂಧನೂರು ತಾಲೂಕಿನಲ್ಲಿ 62, ರಾಯಚೂರು ತಾಲೂಕಿನಲ್ಲಿ ಅತೀ ಹೆಚ್ಚು 381 ಮಕ್ಕಳು ಅವಧಿಗೂ ಮುನ್ನವೇ ಜನ್ಮ ತಾಳಿರುವುದನ್ನು ಇಲಾಖೆ ಖಚಿತಪಡಿಸಿದೆ. ಇತ್ತ ಆರೋಗ್ಯ ಇಲಾಖೆಯಲ್ಲಿಯೂ ಹತ್ತಾರು ನ್ಯೂನತೆ ಇದ್ದು, ತಜ್ಞ ವೈದ್ಯರಿಗೆ 2 ಲಕ್ಷವರೆಗೂ ವೇತನ ನೀಡಿದ್ರೂ ಸಹ ಸೇವೆಗೆ ಬರುತ್ತಿಲ್ಲವೆಂದು ರಾಯಚೂರು ನಗರದ ಶಾಸಕ ಹಾಗೂ ರಾಯಚೂರು ಜಿಲ್ಲಾಧಿಕಾರಿ ತಮ್ಮ ಅಸಹಾಯಕತೆಯನ್ನ ಸಭೆಯಲ್ಲಿ ಹೇಳಿಕೊಂಡರು..

ಒಟ್ಟಿನಲ್ಲಿ ರಾಯಚೂರು ಜಿಲ್ಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಹತ್ತಾರು ಯೋಜನೆಗಳು ಜಾರಿಗೆ ತಂದರೂ ಸಹ ಸೂಕ್ತ ಫಲಾನುಭವಿಗಳಿಗೆ ಯೋಜನೆಗಳು ಮುಟ್ಟದೇ ಇರುವರಿಂದ ಸರ್ಕಾರದ ಯೋಜನೆಗಳು ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತೆ ಆಗುತ್ತಿದೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಇನ್ನೂ ಮುಂದೆ ಆದ್ರೂ ಸರ್ಕಾರದ ಯೋಜನೆಗಳು ಫಲಾನುಭವಿಗಳಿಗೆ ಮುಟ್ಟಿಸಿ ಜಿಲ್ಲೆಗೆ ಅಂಟಿಕೊಂಡಿರುವ ಅಪೌಷ್ಡಿಕತೆ ದೂರ ಮಾಡಬೇಕಾಗಿದೆ.

click me!