ಗೋ ಹತ್ಯೆ ನಿಷೇಧ ಕಾಯ್ದೆ ವಾಪಸಾತಿಗೆ ಶ್ರೀರಾಮಸೇನೆ ವಿರೋಧ

By Kannadaprabha News  |  First Published Jun 7, 2023, 5:25 AM IST

ಗೋ ಹತ್ಯೆ ನಿಷೇಧ ಕಾಯ್ದೆ ಪುನರ್‌ ಪರಿಶೀಲಿಸಲು ಸೂಚನೆ ನೀಡಿರುವ ಪಶು ಸಂಗೋಪನಾ ಇಲಾಖೆ ಸಚಿವರ ಹೇಳಿಕೆ ಖಂಡಿಸಿ ಹುಬ್ಬಳ್ಳಿ-ಧಾರವಾಡ ಜಿಲ್ಲಾ ಶ್ರೀ ರಾಮ ಸೇನಾ ವತಿಯಿಂದ ಪಾಂಜಾರಪೋಳ ಹತ್ತಿರವಿರುವ ಶ್ರೀರಾಮಸೇನಾ ಗೋ ಶಾಲೆಯಲ್ಲಿ ಗೋವಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪ್ರತಿಭಟನೆ ನಡೆಸಲಾಯಿತು.


ಹುಬ್ಬಳ್ಳಿ (ಜೂ.7) ಗೋ ಹತ್ಯೆ ನಿಷೇಧ ಕಾಯ್ದೆ ಪುನರ್‌ ಪರಿಶೀಲಿಸಲು ಸೂಚನೆ ನೀಡಿರುವ ಪಶು ಸಂಗೋಪನಾ ಇಲಾಖೆ ಸಚಿವರ ಹೇಳಿಕೆ ಖಂಡಿಸಿ ಹುಬ್ಬಳ್ಳಿ-ಧಾರವಾಡ ಜಿಲ್ಲಾ ಶ್ರೀ ರಾಮ ಸೇನಾ ವತಿಯಿಂದ ಪಾಂಜಾರಪೋಳ ಹತ್ತಿರವಿರುವ ಶ್ರೀರಾಮಸೇನಾ ಗೋ ಶಾಲೆಯಲ್ಲಿ ಗೋವಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪ್ರತಿಭಟನೆ ನಡೆಸಲಾಯಿತು.

ಈ ಹಿಂದೆ ಬಿಜೆಪಿ ಸರ್ಕಾರ ಗೋವುಗಳ ರಕ್ಷಣೆಗಾಗಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸುವ ಮೂಲಕ ಗೋವುಗಳ ರಕ್ಷಣೆಗೆ ಮುಂದಾಗಿತ್ತು. ಆದರೆ, ಇಂದಿನ ಕಾಂಗ್ರೆಸ್‌ ಸರ್ಕಾರ ರಾಜಕೀಯ ಉದ್ದೇಶದಿಂದ ಇದನ್ನು ಪುನರ್‌ ಪರಿಶೀಲಿಸುವ ನೆಪದಲ್ಲಿ ಕಾಯ್ದೆ ತೆಗೆದುಹಾಕುವ ಹುನ್ನಾರ ನಡೆಸಿರುವುದು ಖಂಡನಾರ್ಹ. ಯಾವುದೇ ಕಾರಣಕ್ಕೂ ಈ ಕಾಯ್ದೆ ರದ್ದುಗೊಳಿಸದಂತೆ ಎಚ್ಚರಿಕೆ ನೀಡಿದರು.

Tap to resize

Latest Videos

ಈ ವೇಳೆ ಶ್ರೀಸತ್ಯ ಪ್ರಮೋದ ಆಚಾರ್ಯ, ಶ್ರೀರಾಮಸೇನೆಯ ಜಿಲ್ಲಾಧ್ಯಕ್ಷ ಅನ್ನಪ್ಪ ದಿವಟಗಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಂಜು ಕಾಟಕರ, ತಾಲೂಕು ಅಧ್ಯಕ್ಷ ಬಸು ದುರ್ಗದ, ನಗರ ಪ್ರಮುಖ ಪ್ರವೀಣ ಮಾಳದಕರ ಸೇರಿದಂತೆ ಕಾರ್ಯಕರ್ತರು ಇದ್ದರು.

ಗೋವಧೆಗೆ ಕಾನೂನಿನಲ್ಲಿ ಅವಕಾಶ ಬೇಡ: ಕರಾವಳಿ ಯತಿಗಳ ಆಗ್ರಹ

ಗೋ ಹತ್ಯೆ ನಿಷೇಧ ಕಾಯ್ದೆ ಬದಲಾವಣೆ ಸಲ್ಲದು: ಶಾಸಕ ಮಹೇಶ್‌ ಟೆಂಗಿನಕಾಯಿ

ಹುಬ್ಬಳ್ಳಿ: ರಾಜ್ಯದ ಪಶು ಸಂಗೋಪನಾ ಸಚಿವರು ಗೋ ಹತ್ಯೆ ನಿಷೇಧ ಕಾನೂನು ಪುನರ್‌ ಪರಿಶೀಲನೆ ವಿಷಯ ಉಲ್ಲೇಖಿಸಿರುವುದು ಖಂಡನಾರ್ಹ. ಯಾವುದೇ ಕಾರಣಕ್ಕೂ ಈ ಕಾಯ್ದೆ ಬದಲಾವಣೆ ಮಾಡಬೇಡಿ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಸಚಿವರು ಗೋವಿಗೆ ಒಂದು ಕಾನೂನು ಎಮ್ಮೆಗೆ ಒಂದು ಕಾನೂನು ಎಂದು ಮಾತನಾಡಿದ್ದಾರೆ. ಪಶು ಸಂಗೋಪನಾ ಸಚಿವರು ತಮ್ಮ ಮನೆಯ ಗೃಹ ಪ್ರವೇಶಕ್ಕೆ ಗೋವಿಗೆ ಮೊದಲು ಪ್ರವೇಶ ಮಾಡುತ್ತಾರೋ ಅಥವಾ ಎಮ್ಮೆ, ಕೋಣ ಪ್ರವೇಶ ಮಾಡುತ್ತಾರೋ ಎಂಬುದನ್ನು ತಿಳಿಸಲಿ. ಗೋವಿಗೆ ಭಾರತದಲ್ಲಿ ತನ್ನದೇ ಆದ ಸ್ಥಾನಮಾನವಿದೆ. ಪೂಜ್ಯ ಭಾವನೆಯಿಂದ ನಾವು ಕಾಣುತ್ತೇವೆ. ಕೋಟ್ಯಂತರ ದೇವತೆಗಳು ಗೋವಿನಲ್ಲಿದೆ ಎಂಬ ವಿಶ್ವಾಸ ನಮಗಿದೆ. ಹಾಗಾಗಿ ಸಚಿವರು ಇಂತಹ ಹೇಳಿಕೆ ನೀಡುವುದನ್ನು ನಿಲ್ಲಿಸಲಿ ಎಂದರು.

ಕಾಂಗ್ರೆಸ್‌ ಸರ್ಕಾರ ನೀಡಿರುವ ಗ್ಯಾರಂಟಿಗಳ ಬಗ್ಗೆ ಜನ ಪ್ರಶ್ನೆ ಮಾಡುತ್ತಿದ್ದಾರೆ. ಅದನ್ನು ಮರೆಮಾಚಲು ಇಂತಹ ಹೇಳಿಕೆ ಕೊಟ್ಟು ಕಾಂಗ್ರೆಸ್‌ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಯಾವುದೇ ಕಾರಣಕ್ಕೂ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಬದಲಾವಣೆ ಮಾಡಬಾರದು ಎಂದರು.

 

ಕರ್ನಾಟಕದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ವಾಪಸ್‌?

ಗ್ಯಾರಂಟಿ ಯೋಜನೆಯಲ್ಲಿ ತಾರತಮ್ಯ:

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೂ ಬರವುದಕ್ಕೂ ಮೊದಲು ಸಿದ್ದರಾಮಯ್ಯಗೂ ಫ್ರೀ, ಡಿಕೆಶಿಗೂ ಫ್ರೀ ಎಂದು ಹೇಳಿದ್ದರು ಈಗ ಯಾಕೆ ತಾರತಮ್ಯ. ನೀವು ನೀಡಿದ್ದ ಗ್ಯಾರಂಟಿ ಯೋಜನೆಯ ಆಶ್ವಾಸನೆಗಳನ್ನು ಯಾವುದೇ ಷರತ್ತು ವಿಧಿಸದೇ ಜಾರಿಗೊಳಿಸಿ. ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಅಂದುಕೊಂಡು ಈ ಗ್ಯಾರಂಟಿ ಯೋಜನೆ ಹೇಳಿದ್ದರು. ಆದರೆ, ಜನತೆ ಇವರ ಗ್ಯಾರಂಟಿ ಯೋಜನೆ ನಂಬಿ ಸ್ಪಷ್ಟವಾದ ಬಹುಮತ ಕೊಟ್ಟಿದ್ದಾರೆ. ಎಲ್ಲರಿಗೂ ಉಚಿತ ವಿದ್ಯುತ್‌ ನೀಡುವುದಾಗಿ ಹೇಳಿದ್ದರು. ಆದರೆ, ಈಗ ಅದಕ್ಕೂ ಹಲವು ಷರತ್ತುಗಳನ್ನು ವಿಧಿಸಿದ್ದಾರೆ. ಒಂದೆಡೆ ವಿದ್ಯುತ್‌ ದರ ಏರಿಕೆ ಮಾಡಲಾಗಿದೆ. ಐದಾರು ತಿಂಗಳಲ್ಲಿ ಕಾಂಗ್ರೆಸ್‌ ನೀಡಿದ ಗ್ಯಾರಂಟಿ ಸ್ಕೀಮ್‌ ಬೋಗಸ್‌ ಆಗಲಿವೆ ಎಂದು ಜನರೇ ಮಾತನಾಡುತ್ತಿದ್ದಾರೆ ಎಂದರು.

click me!