ಹೆತ್ತ ತಾಯಿಯೇ ಮಗುವನ್ನು ನೀರಿನಲ್ಲಿ ಮುಳುಗಿಸಿ ಕೊಂದು ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. 10 ತಿಂಗಳ ಹೆಣ್ಣು ಮಗುವಿಗೆ ನೀರಿನ ಟಬ್ ನಲ್ಲಿ ಮುಳುಗಿಸಿ ಹತ್ಯೆ ಮಾಡಲಾಗಿದೆ.
ಚಿತ್ರದುರ್ಗ(ಫೆ.25): ಹೆತ್ತ ತಾಯಿಯೇ ಮಗುವನ್ನು ನೀರಿನಲ್ಲಿ ಮುಳುಗಿಸಿ ಕೊಂದು ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. 10 ತಿಂಗಳ ಹೆಣ್ಣು ಮಗುವಿಗೆ ನೀರಿನ ಟಬ್ ನಲ್ಲಿ ಮುಳುಗಿಸಿ ಹತ್ಯೆ ಮಾಡಲಾಗಿದೆ.
ಐನಳ್ಳಿಯಲ್ಲಿ ಮಗುವನ್ನು ನೀರಲ್ಲಿ ಮುಳುಗಿಸಿ ತಾಯಿ ನೇಣಿಗೆ ಶರಣಾಗಿದ್ದು, ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಐನಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. 10 ತಿಂಗಳ ಹೆಣ್ಣು ಮಗುವನ್ನು ನೀರಿನ ಟಬ್ ನಲ್ಲಿ ಮುಳುಗಿಸಿ ಹತ್ಯೆ ಮಾಡಲಾಗಿದೆ.
ಫೋಟೋಗ್ರಾಫರ್‌ಗಳೇ ಹುಷಾರ್..! ಫೋಟೋಶೂಟ್ ಅಂತ ಕರೆಸಿ ಹೀಗೆ ಮಾಡ್ತಾರೆ
ಮಗು ಸಾವಿನ ಬಳಿಕ ತಾಯಿ ಆಶಾಬಾಯಿ(24) ನೇಣಿಗೆ ಶರಣಾಗಿದ್ದಾರೆ. ಹೆರಿಗೆ ಬಳಿಕ ಆಶಾಬಾಯಿ ನೋವಿನಿಂದ ಬಳಲುತ್ತಿದ್ದರು. ನೋವು, ಅನಾರೋಗ್ಯ ಕಾರಣ ಆತ್ಮಹತ್ಯೆ ನಿರ್ಧಾರ ಮಾಡಿರುವುದಾಗಿ ಎಂದು ಡೆತ್ ನೋಟ್ ಬರೆದಿದ್ದಾರೆ.
ಮಗು ಅನಾಥ ಆಗುತ್ತದೆಂಬ ಕಾರಣಕ್ಕೆ ಮಗುವಿನ ಹತ್ಯೆ ಮಾಡಲಾಗಿದೆ ಎನ್ನಲಾಗಿದ್ದು, ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಗು ಸಾಯಿಸಿ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೊಳಲ್ಕೆರೆ ಲಂಬಾಣಿಹಟ್ಟಿಯ ಹೇಮಂತ್ ಜತೆ ಎರಡು ವರ್ಷದ ಹಿಂದ ಆಶಾ ಪ್ರೇಮ ವಿವಾಹ ಆಗಿದ್ದರು. ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.